ಸತತ ಇಳಿಕೆ ಬೆನ್ನಲ್ಲೇ ಅಲ್ಪ ಏರಿಕೆ ಕಂಡ ಚಿನ್ನದ ದರ; ಇಲ್ಲಿದೆ ಇಂದಿನ ದರಪಟ್ಟಿ

ಚಿನ್ನದ ಜೊತೆ ಇಳಿಕೆ ಹಾದಿ ಹಿಡಿದಿದ್ದ ಬೆಳ್ಳಿ ಬೆಲೆ ಕೂಡ ಮಂಗಳವಾರ ಭಾರೀ ಏರಿಕೆ ಕಂಡಿದೆ. ಕೆಜಿ ಬೆಳ್ಳಿ ಬೆಲೆ 1700 ರೂಪಾಯಿ ಜಿಗಿತ ಕಂಡು 60300 ರೂಪಾಯಿ ಆಗಿದೆ.

ಸತತ ಇಳಿಕೆ ಬೆನ್ನಲ್ಲೇ ಅಲ್ಪ ಏರಿಕೆ ಕಂಡ ಚಿನ್ನದ ದರ; ಇಲ್ಲಿದೆ ಇಂದಿನ ದರಪಟ್ಟಿ
ಸಾಂದರ್ಭಿಕ ಚಿತ್ರ
Edited By:

Updated on: Dec 02, 2020 | 12:24 PM

ಬೆಂಗಳೂರು: ಕಳೆದ ಮೂರು ವಾರಗಳಿಂದ ಸತತ ಇಳಿಕೆ ಕಾಣುತ್ತಿರುವ ಚಿನ್ನದ ಬೆಲೆ ಈ ವಾರದ ಆರಂಭದಲ್ಲೂ ಕುಸಿತ ಕಂಡಿತ್ತು. ಆದರೆ, ಮಂಗಳವಾರ ಚಿನ್ನದ ಬೆಲೆ ಅಲ್ಪ ಮಾತ್ರ ಏರಿಕೆ ಕಂಡಿದೆ.

ಕೊರೋನಾ ವೈರಸ್​ ಭಾರತಕ್ಕೆ ಕಾಲಿಟ್ಟ ನಂತರದಲ್ಲಿ ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆ ಕಂಡಿತ್ತು. ಜನರು ಬೇರೆ ಯಾವುದೇ ಕ್ಷೇತ್ರಗಳಲ್ಲಿ ಹೂಡಿಕೆ ಮಾಡಲು ಅವಕಾಶ ಇರದ ಕಾರಣ ಚಿನ್ನದ ಮೇಲೆ ಹೂಡಿಕೆ ಮಾಡಿದ್ದು ಇದಕ್ಕೆ ಕಾರಣವಿರಬಹುದು ಎಂದು ವಿಶ್ಲೇಷಿಸಲಾಗಿತ್ತು. ಈಗ ಸುಮಾರು ಎಂಟು ತಿಂಗಳ ನಂತರದಲ್ಲಿ ಚಿನ್ನದ ದರ ಇಳಿಕೆ ಹಾದಿ ಹಿಡಿದಿದೆ.

ಬೆಂಗಳೂರಿನಲ್ಲಿ ಡಿಸೆಂಬರ್ 1ರಂದು ಆಭರಣ ಚಿನ್ನ 10 ಗ್ರಾಂಗೆ 200 ರೂಪಾಯಿ ಏರಿಕೆ ಕಂಡು ₹44,900 ರೂಪಾಯಿ ಆಗಿದೆ. ಇನ್ನು, ಶುದ್ಧ ಚಿನ್ನ 10 ಗ್ರಾಂಗೆ 200 ರೂಪಾಯಿ ಏರಿಕೆ ಕಾಣುವ ಮೂಲಕ 48,980 ರೂಪಾಯಿ ಆಗಿದೆ.

ಚಿನ್ನದ ಜೊತೆ ಇಳಿಕೆ ಹಾದಿ ಹಿಡಿದಿದ್ದ ಬೆಳ್ಳಿ ಬೆಲೆ ಕೂಡ ಮಂಗಳವಾರ ಭಾರೀ ಏರಿಕೆ ಕಂಡಿದೆ. ಕೆಜಿ ಬೆಳ್ಳಿ ಬೆಲೆ 1700 ರೂಪಾಯಿ ಜಿಗಿತ ಕಂಡು 60300 ರೂಪಾಯಿ ಆಗಿದೆ.

ಭಾರತದಲ್ಲಿ ಹಬ್ಬದ ಸಮಯದಲ್ಲಿ ಚಿನ್ನ ಖರೀದಿ ಜೋರಾಗಿರುತ್ತದೆ. ಇದೇ ಕಾರಣಕ್ಕೆ ಬೇಡಿಕೆ ಹೆಚ್ಚಾಗಿ, ಆಭರಣದ ದರ ಕೂಡ ಏರಿಕೆ ಕಾಣುವುದು ವಾಡಿಕೆ. ಆದರೆ, ಈ ಬಾರಿ ದೀಪಾವಳಿಯಂದು ಗ್ರಾಹಕರಿಗೆ ಖುಷಿ ಸುದ್ದಿ ಸಿಕ್ಕಿತ್ತು. ದೀಪಾವಳಿ ಹಬ್ಬದ ಸಯಮದಲ್ಲೂ ಚಿನ್ನದ ದರ ಇಳಿಕೆ ಕಂಡಿತ್ತು.

ಸಾಕಷ್ಟು ಅಂಶಗಳು ಚಿನ್ನದ ಬೆಲೆಯನ್ನು ನಿರ್ಧಾರ ಮಾಡುತ್ತವೆ. ಅಂತಾರಾಷ್ಟ್ರೀಯ ಮಾರುಕಟ್ಟೆ ಬೆಲೆ, ಚಿನ್ನದ ಮಾರುಕಟ್ಟೆ, ವ್ಯಾಪಾರ ಯುದ್ಧ, ಡಾಲರ್​ ಮೌಲ್ಯ ಸೇರಿ ಸಾಕಷ್ಟು ವಿಚಾರಗಳು ಚಿನ್ನದ ಬೆಲೆಯ ಏರಿಳಿತಕ್ಕೆ ನೇರ ಕಾರಣವಾಗುತ್ತವೆ. ಕೊರೋನಾ ವೈರಸ್​ ಬಂದ ಸಂದರ್ಭದಲ್ಲಿ ಜನರಿಗೆ ಹೂಡಿಕೆ ಮಾಡಲು ಯಾವುದೇ ಕ್ಷೇತ್ರಗಳು ಸಿಕ್ಕಿರಲಿಲ್ಲ. ಹೀಗಾಗಿ, ಚಿನ್ನದ ಮೇಲೆ ಹೂಡಿಕೆ ಮಾಡಲು ಮುಂದಾಗಿದ್ದರು. ಇದರಿಂದ ಸಹಜವಾಗಿಯೇ ಚಿನ್ನದ ದರದಲ್ಲಿ ಏರಿಕೆ ಕಂಡಿತ್ತು.

ಇದನ್ನೂ ಓದಿ: ಚಿನ್ನ ಖರೀದಿ ಮಾಡೋರಿಗೆ ಗುಡ್ ನ್ಯೂಸ್; ಐತಿಹಾಸಿಕ ಕುಸಿತ ಕಂಡ ಆಭರಣ ಬೆಲೆ