ವಿಶ್ವ ಪಾರಂಪರಿಕ ನೀರಾವರಿ ರಚನೆಗಳ ಪಟ್ಟಿಯಲ್ಲಿ ಭಾರತದ 4 ತಾಣಗಳು, ಕರ್ನಾಟಕದ್ದು ಒಂದೂ ಇಲ್ಲ!

ಕೆರೆ ನೀರಾವರಿ ಪದ್ಧತಿಯಲ್ಲಿ ವಿಶ್ವ ವಿಖ್ಯಾತಿ ಪಡೆದಿರುವ ಕರ್ನಾಟಕ ಒಂದೂ ಸ್ಥಳ ಈ ಪಟ್ಟಿಯಲ್ಲಿ ಸ್ಥಾನ ಪಡೆದಿಲ್ಲ ಎಂಬುದು ವಿಪರ್ಯಾಸ.

ವಿಶ್ವ ಪಾರಂಪರಿಕ ನೀರಾವರಿ ರಚನೆಗಳ ಪಟ್ಟಿಯಲ್ಲಿ ಭಾರತದ 4 ತಾಣಗಳು, ಕರ್ನಾಟಕದ್ದು ಒಂದೂ ಇಲ್ಲ!
ಮಹಾರಾಷ್ಟ್ರದ ಸಿಂಧುದುರ್ಗ ಜಿಲ್ಲೆಯಲ್ಲಿರುವ ಸುಮಾರು 500 ವರ್ಷ ಹಳೆಯದಾದ ಧಾಮ್​ಪುರ್ ಜಲಾಶಯ
Follow us
Ghanashyam D M | ಡಿ.ಎಂ.ಘನಶ್ಯಾಮ
| Updated By: ಸಾಧು ಶ್ರೀನಾಥ್​

Updated on:Dec 02, 2020 | 12:18 PM

ಮುಂಬೈ: ಭಾರತದ ನಾಲ್ಕು ನೀರಾವರಿ ರಚನೆಗಳು ವಿಶ್ವ ಪಾರಂಪರಿಕ ನೀರಾವರಿ ರಚನೆಗಳ (World Heritage Irrigation Structure – WHIS) ಪಟ್ಟಿಯಲ್ಲಿ ಸ್ಥಾನಗಿಟ್ಟಿಸಿವೆ. ಕೆರೆ ನೀರಾವರಿ ಪದ್ಧತಿಯಲ್ಲಿ ವಿಶ್ವ ವಿಖ್ಯಾತಿ ಪಡೆದಿರುವ ಕರ್ನಾಟಕದ ಒಂದೂ ಸ್ಥಳ ಈ ಪಟ್ಟಿಯಲ್ಲಿ ಸ್ಥಾನ ಪಡೆದಿಲ್ಲ ಎಂಬುದು ವಿಪರ್ಯಾಸ.

ಆಂಧ್ರ ಪ್ರದೇಶದ ಕಂಬಂ ಕೆರೆ, ಕರ್ನೂಲು- ಕಡಪಾ ನಾಲೆ, ಪೊರುಮಮಿಲ್ಲ ಕೆರೆ (ಅನಂತರಾಜ ಸಾಗರಂ) ಮತ್ತು ಮಹಾರಾಷ್ಟ್ರದ ಸಿಂಧುದುರ್ಗ ಜಿಲ್ಲೆಯ 490 ವರ್ಷ ಹಳೆಯ ಧಾಮಪುರ್ ಜಲಾಶಯಗಳು ಈ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿವೆ. 2018ರಲ್ಲಿ ತೆಲಂಗಾಣದ ಕಾಮರೆಡ್ಡಿ ಜಿಲ್ಲೆಯ ಪೆದ್ದ ಚೆರು ಕೆರೆ ಮತ್ತು ನಿರ್ಮಲ್ ಜಿಲ್ಲೆಯ ಸದರ್‌ಮತ್ ಅಣೆಕಟ್ಟೆ ಈ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿತ್ತು.

ನೀರಾವರಿ, ನೈರ್ಮಲ್ಯ ಮತ್ತು ನೆರೆ ನಿರ್ವಹಣೆ ತಜ್ಞರಿರುವ ಅಂತರಾಷ್ಟ್ರೀಯ ನೀರಾವರಿ ಮತ್ತು ನೈರ್ಮಲ್ಯ ಆಯೋಗವು (ಐಸಿಐಡಿ) ಪ್ರತಿ ವರ್ಷ ಯುನೆಸ್ಕೊ ವಿಶ್ವ ಪಾರಂಪರಿಕ ತಾಣಗಳನ್ನು ಗುರುತಿಸುವ ಮಾದರಿಯಲ್ಲಿಯೇ ನೀರಾವರಿಗಾಗಿ ರೂಪಿಸಿರುವ ರಚನೆಯನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುತ್ತದೆ.

ತಿಂಗಳ ಹಿಂದೆಯೇ ಈ ಬಗ್ಗೆ ನಮಗೆ ಮಾಹಿತಿ ನೀಡಲಾಗಿತ್ತು. ಈ ನೀರಾವರಿ ರಚನೆಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿವೆ ಎಂಬುದು ಭಾರತದ ಪಾಲಿಗೆ ಹೆಮ್ಮೆಯ ವಿಷಯ. ಈ ನೀರಾವರಿ ರಚನೆಗಳ ವಾಸ್ತುಶಿಲ್ಪವನ್ನು ಸೂಕ್ಷ್ಮವಾಗಿ ಗಮನಿಸಿದರೆ, ಈಗ ಚಾಲ್ತಿಯಲ್ಲಿರುವ ತಂತ್ರಜ್ಞಾನಕ್ಕಿಂತಲೂ ಸುಧಾರಿಸಿದ ತಂತ್ರಜ್ಞಾನ ಬಳಕೆಯಾಗಿರುವುದನ್ನು ಗುರುತಿಸಬಹುದು. ಇವುಗಳನ್ನು ಸಂರಕ್ಷಿಸಲು ರಾಜ್ಯ ಸರ್ಕಾರಗಳಿಗೆ ಹೆಚ್ಚು ಉತ್ತೇಜನ ಮತ್ತು ಪ್ರೇರಣೆ ಸಿಗಲಿದೆ ಎಂದು ಕೇಂದ್ರ ಜಲ ಆಯೋಗ (ಸಿಡಬ್ಲ್ಯುಸಿ) ನಿರ್ದೇಶಕ ರಿಷಿ ಶ್ರೀವಾಸ್ತವ ಹೇಳಿದ್ದಾರೆ.

ಚೀನಾದಲ್ಲಿರುವ ನಾಲ್ಕು, ಇರಾನ್‌ನಲ್ಲಿ ಎರಡು ಮತ್ತು ಜಪಾನ್‌ನ ಮೂರು ನೀರಾವರಿ ರಚನೆಗಳಿಗೆ ಈ ಬಾರಿ ಇದೇ ಗೌರವ ಸಂದಿದೆ. ಇಲ್ಲಿಯವರೆಗೆ ಡಬ್ಲ್ಯುಎಚ್‌ಐಎಸ್ ಪಟ್ಟಿಯಲ್ಲಿ ಜಪಾನ್‌ನ 42, ಚೀನಾದ 23 ಮತ್ತು ಭಾರತ, ಇರಾನ್ ಮತ್ತು ಶ್ರೀಲಂಕಾದ ತಲಾ 6 ರಚನೆಗಳು ಸ್ಥಾನ ಪಡೆದುಕೊಂಡಿವೆ.

ಎಲ್ಲ ದೇಶಗಳಲ್ಲಿಯೂ ರಾಷ್ಟ್ರೀಯ ಆಯೋಗವೊಂದಿದ್ದು ಇವು ತಮ್ಮ ತಾಣಗಳ ಬಗ್ಗೆ ಐಸಿಐಡಿಗೆ ಮಾಹಿತಿ ನೀಡುತ್ತವೆ. ಇಲ್ಲಿಂದ ಅಂತರಾಷ್ಟ್ರೀಯ ತೀರ್ಪುಗಾರರಿಗೆ ಶಿಫಾರಸು ಕಳಿಸಲಲಾಗುತ್ತದೆ. 100 ವರ್ಷಗಳ ಹಿಂದೆ ನಿರ್ಮಿಸಿದ, ಈಗಲೂ ಸುಸ್ಥಿತಿಯಲ್ಲಿರುವ ಮತ್ತು ಮೌಲ್ಯಯುತವಾಗಿರುವ ನೀರಾವರಿ ರಚನೆಗಳನ್ನು ಡಬ್ಲ್ಯುಎಚ್‌ಐಎಸ್‌ಗೆ ಪರಿಗಣಿಸಲಾಗುವುದು. ರಾಜ್ಯ ಸರ್ಕಾರ ಪರಿಗಣಿಸಿದ ನಂತರ ಕೇಂದ್ರ ಸರ್ಕಾರದ ಗಮನಕ್ಕೆ ತರಲಾಗುವುದು. ಆಮೇಲೆ ಸಿಡ್ಬ್ಯುಸಿ ಸಮೀಕ್ಷೆ ನಡೆಸಿ ಮಾಹಿತಿಗಳನ್ನು ಪರಿಶೀಲನೆಗೊಳಪಡಿಸುತ್ತದೆ. ದೇಶೀಯ ಸಮಿತಿಯು ಫೋಟೊ ಮತ್ತು ಅಲ್ಲಿನ ವಿಶೇಷತೆಗಳ ಬಗ್ಗೆ ಅಂತಾರಾಷ್ಟ್ರೀಯ ತೀರ್ಪುಗಾರರಿಗೆ ಕಳುಹಿಸಿಕೊಡುತ್ತದೆ ಎಂದು ಶ್ರೀವಾಸ್ತವ ಹೇಳಿದ್ದಾರೆ.

ಧಾಮ್‌ಪುರ್ ಜಲಾಶಯವು ಪ್ರತಿವರ್ಷ 273 ಹೆಕ್ಟರ್ ಭೂಮಿಗೆ ನೀರುಣಿಸುತ್ತದೆ. 64 ಹೊಳೆಗಳು ಇಲ್ಲಿ ಸೇರುತ್ತವೆ. ಕವಡೆವಾಡಿ ಮತ್ತು ಗುರಂವಾಡಿ ಅಣೆಕಟ್ಟಿಗಳಿಂದಲೂ ಈ ಕೆರೆ ನೀರು ಹರಿದುಬರುತ್ತದೆ. ಈ ಜಲಾಶಯವನ್ನು ಧಾಮ್‌ಪುರ್ ಮತ್ತು ಕಾಲ್ಸೆ ಗ್ರಾಮದ ಜನರು 1530ರಲ್ಲಿ ನಿರ್ಮಿಸಿದ್ದರು. ಜಲಾಶಯದ ಆಸುಪಾಸು ಸುಮಾರು 193 ಪುಷ್ಪ ಮತ್ತು 247 ಪ್ರಾಣಿ ಸಂಕುಲಗಳಿವೆ.

ಈ ಜಲಾಶಯ ಅಥವಾ ಅಣೆಕಟ್ಟುಗಳ ಗಾತ್ರವಷ್ಟೇ ಡಬ್ಲ್ಯುಎಚ್‌ಐಎಸ್‌ ಮಾನದಂಡವಾಗಿರುವುದಿಲ್ಲ. ಧಾಮ್‌ಪುರ ಇನ್ನುಳಿದ ಜಲಾಶಯಗಳಿಂದ ಚಿಕ್ಕದಾಗಿದ್ದರೂ ಇದು 500 ವರ್ಷ ಹಳೆಯದ್ದಾಗಿದೆ. ಇಲ್ಲಿ ಬಳಸಿರುವ ತಂತ್ರಜ್ಞಾನವು ವಿಶಿಷ್ಟವಾಗಿದೆ ಎನ್ನುತ್ತಾರೆ ಅವರು.

ಈ ವರ್ಷ ಮತ್ತಷ್ಟು ತಾಣಗಳನ್ನು ನಾಮನಿರ್ದೇಶನ ಮಾಡಲು ಸಿಡಬ್ಲ್ಯುಸಿ ಚಿಂತಿಸಿದೆ. 2021ರ ಹೊತ್ತಿಗೆ ಪುರಾತನ ರಚನೆಗಳನ್ನು ಪತ್ತೆ ಹಚ್ಚುವಂತೆ ನಾವು ಎಲ್ಲ ರಾಜ್ಯದ ಪ್ರಧಾನ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದೇವೆ. ಕೋವಿಡ್ ಕಾರಣದಿಂದ ಈ ವರ್ಷ ಇಡೀ ಪ್ರಕ್ರಿಯೆ ವಿಳಂಬವಾಗಿದೆ. 2021ರಲ್ಲಿ ಕನಿಷ್ಠ 8-10 ನಾಮನಿರ್ದೇಶನಗಳು ಬರಬೇಕು ಎಂದು ನಾವು ಬಯಸುತ್ತೇವೆ. ವರ್ಷದ ಆರಂಭದಲ್ಲಿ ಈ ಮಾಹಿತಿಗಳು ಲಭಿಸಿದರೆ ಅದನ್ನು ಪರಿಶೀಲಿಸಲು ಸಮಯ ಸಿಗುತ್ತದೆ ಎಂದು ಶ್ರೀವಾಸ್ತವ ಹೇಳಿದ್ದಾರೆ.

ಕರ್ನಾಟಕ ಸರ್ಕಾರವೂ ಪ್ರಯತ್ನಿಸಬೇಕು

ಕೆರೆ ನೀರಾವರಿ ಪದ್ಧತಿಗೆ ಕರ್ನಾಟಕ ಹೆಸರುವಾಸಿ. ಕೋಲಾರ ಸೇರಿದಂತೆ ಹಳೇ ಮೈಸೂರು ಭಾಗದ ಹಲವು ಜಿಲ್ಲೆಯಲ್ಲಿ ಕೆರೆಗಳ ಜೋಡಣೆ ನೂರಾರು ವರ್ಷಗಳಿಂದ ಅತ್ಯಂತ ವ್ಯವಸ್ಥಿತವಾಗಿದೆ. ಕೆರೆಗಳು ಮತ್ತು ಕೆರೆ ನೀರಾವರಿ ಪದ್ಧತಿಯ ಭಾಗವಾಗಿರುವ ತೂಬು, ಕಾಲುವೆಗಳ ನಿರ್ವಹಣೆಗೆ ನೀರುಗಂಟಿ ಎಂಬ ಹುದ್ದೆಯೂ ಪರಂಪರಾಗತವಾಗಿ ಚಾಲ್ತಿಗೆ ಬಂದಿದೆ.

ವಿಶ್ವ ಪಾರಂಪರಿಕ ನೀರಾವರಿ ರಚನೆಗಳ ಪಟ್ಟಿಯಲ್ಲಿ ಕರ್ನಾಟಕದಲ್ಲಿರುವ ಈ ವಿಶಿಷ್ಟ ವ್ಯವಸ್ಥೆಗಳು ಸ್ಥಾನಪಡೆಯುವಂತೆ ಮಾಡಲು ರಾಜ್ಯ ಸರ್ಕಾರ ಯತ್ನಿಸಬೇಕು ಎಂಬ ಒತ್ತಾಯ ಇದೀಗ ಕೇಳಿ ಬಂದಿದೆ.

ಕಾವೇರಿ ನದಿಗೆ ಕಟ್ಟಲಾಗಿರುವ ಪುರಾತನ ಅಣೆಕಟ್ಟು ಮತ್ತು ಘಟಪ್ರಭಾದ ದೂಪ್‌ದಾಲ್ ಅಣೆಕಟ್ಟನ್ನು ಡಬ್ಲ್ಯುಎಚ್‌ಐಎಸ್ ಪಟ್ಟಿಗೆ ಸೇರಿಸಲು ಕರ್ನಾಟಕ ಸರ್ಕಾರ ಪ್ರಯತ್ನಿಸಬೇಕು ಎಂದು ಹಲವು ಜಲ ವಿವಾದ ಮೊಕದ್ದಮೆಗಳಲ್ಲಿ ಕರ್ನಾಟಕದ ಪರ ವಾದಿಸಿದ ಹಿರಿಯ ವಕೀಲರಾದ ಮೋಹನ್ ಕಾತರಕಿ ಅಭಿಪ್ರಾಯಪಟ್ಟಿದ್ದಾರೆ.

Published On - 11:52 am, Wed, 2 December 20

ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್