ಗುದನಾಳದಲ್ಲಿ ಚಿನ್ನವನ್ನಿಟ್ಟುಕೊಂಡು ಬಂದರೂ ಪಾರಾಗಲು ಸಾಧ್ಯವಾಗಲಿಲ್ಲ; ವ್ಯಕ್ತಿ ಅರೆಸ್ಟ್​, 810 ಗ್ರಾಂ ಬಂಗಾರ ವಶ

| Updated By: Lakshmi Hegde

Updated on: Jul 21, 2021 | 1:26 PM

ಗುದನಾಳದಲ್ಲಿ ಚಿನ್ನ ಇಟ್ಟು ಸ್ಮಗ್ಲಿಂಗ್ ಮಾಡುವ ಪ್ರಕರಣಗಳು ಇತ್ತೀಚೆಗೆ ತುಂಬ ಏರಿಕೆಯಾಗುತ್ತಿವೆ. ಡಿಸೆಂಬರ್​ನಲ್ಲಿ ದುಬೈನಿಂದ ಬಂದ ಇಬ್ಬರು ಹೀಗೆ ಗುದನಾಳದಲ್ಲಿ ಚಿನ್ನದ ಪೇಸ್ಟ್ ತಂದಿದ್ದರು.

ಗುದನಾಳದಲ್ಲಿ ಚಿನ್ನವನ್ನಿಟ್ಟುಕೊಂಡು ಬಂದರೂ ಪಾರಾಗಲು ಸಾಧ್ಯವಾಗಲಿಲ್ಲ; ವ್ಯಕ್ತಿ ಅರೆಸ್ಟ್​, 810 ಗ್ರಾಂ ಬಂಗಾರ ವಶ
ವಶಪಡಿಸಿಕೊಳ್ಳಲಾದ ಚಿನ್ನದ ಬಂಡಲ್​ಗಳು
Follow us on

ದುಬೈನಿಂದ ಚೆನ್ನೈಗೆ ತೆರಳುತ್ತಿದ್ದ ವ್ಯಕ್ತಿಯೊಬ್ಬ ತನ್ನ ಗುದನಾಳದಲ್ಲಿ 40 ಲಕ್ಷ ರೂ. ಮೌಲ್ಯದ 810 ಗ್ರಾಂ ಚಿನ್ನವನ್ನು ಸಾಗಿಸಲು ಪ್ರಯತ್ನಿಸಿ ಏರ್​ಪೋರ್ಟ್​ನ ಕಸ್ಟಮ್​ ಅಧಿಕಾರಿಗಳ ಬಳಿ ಸಿಕ್ಕಿಬಿದ್ದಿದ್ದಾನೆ. ದುಬೈನಿಂದ ಚೆನ್ನೈಗೆ ಪ್ರಯಾಣ ಮಾಡುತ್ತಿರುವ ವ್ಯಕ್ತಿಯೊಬ್ಬ ಚಿನ್ನವನ್ನು ಸ್ಮಗ್ಲಿಂಗ್ ಮಾಡುತ್ತಿದ್ದಾನೆ ಎಂದು ಕೇಂದ್ರೀಯ ಕಂದಾಯ ತನಿಖಾ ವಿಭಾಗಕ್ಕೆ ಮಾಹಿತಿ ಬಂದಿತ್ತು. ಹಾಗಾಗಿ ಚೆನ್ನೈ ಏರ್​ಪೋರ್ಟ್​​ನಲ್ಲಿ ಅಧಿಕಾರಿಗಳು ಪ್ರತಿಯೊಬ್ಬ ಪ್ರಯಾಣಿಕನನ್ನು ತಪಾಸಣೆಗೆ ಒಡ್ಡುತ್ತಿದ್ದರು.

ಕಸ್ಟಮ್ಸ್ ಅಧಿಕಾರಿಗಳ ಬಳಿ ಈತ ಸಿಕ್ಕಿಬಿದ್ದಿದ್ದಾನೆ. ಈತ ಗುದನಾಳದಲ್ಲಿ ಕೊಂಡೊಯ್ಯುತ್ತಿದ್ದ 24 ಕ್ಯಾರೆಟ್​ ಚಿನ್ನದ ಬೆಲೆ 40.35 ಲಕ್ಷ ಎಂದು ಏರ್​ಪೋರ್ಟ್ ಅಧಿಕಾರಿಗಳು ಮಾಹಿತಿ ನೀಡಿದ್ದು, ಸದ್ಯ ಆತ ಬಂಧಿತನಾಗಿದ್ದಾನೆ. ಇವನ ಗುದನಾಳದಿಂದ ಒಟ್ಟು 948 ಗ್ರಾಂ.ತೂಕದ 4 ಬಂಡಲ್​ಗಳಷ್ಟು ಗೋಲ್ಡ್ ಪೇಸ್ಟ್​ನ್ನು ಹೊರತೆಗೆಯಲಾಗಿದ್ದು, ಅದರಲ್ಲಿ 810 ಗ್ರಾಂ. 24 ಕ್ಯಾರೆಟ್​ ಚಿನ್ನವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಇನ್ನೂ ತನಿಖೆ ನಡೆಯುತ್ತಿದೆ.

ಗುದನಾಳದಲ್ಲಿ ಚಿನ್ನ ಇಟ್ಟು ಸ್ಮಗ್ಲಿಂಗ್ ಮಾಡುವ ಪ್ರಕರಣಗಳು ಇತ್ತೀಚೆಗೆ ತುಂಬ ಏರಿಕೆಯಾಗುತ್ತಿವೆ. ಡಿಸೆಂಬರ್​ನಲ್ಲಿ ದುಬೈನಿಂದ ಬಂದ ಇಬ್ಬರು ಹೀಗೆ ಗುದನಾಳದಲ್ಲಿ ಚಿನ್ನದ ಪೇಸ್ಟ್ ತಂದಿದ್ದರು. ಅವರಿಂದ 35.5 ಲಕ್ಷ ರೂ.ಮೌಲ್ಯದ 706 ಗ್ರಾಂ ಚಿನ್ನವನ್ನು ವಶಪಡಿಸಿಕೊಳ್ಳಲಾಗಿತ್ತು. ಹಾಗೇ, ಜನವರಿಯಲ್ಲೂ 17 ಮಂದಿ ಹೀಗೆ ಮಾಡಿದ್ದರು. ಈ ಎಲ್ಲರಿಂದ ಒಟ್ಟಾರೆ 3.93 ಕೋಟಿ ರೂ.ಬೆಲೆಯ ಚಿನ್ನವನ್ನು ಕಸ್ಟಮ್ಸ್​ ಅಧಿಕಾರಿಗಳು ವಶಪಡಿಸಿಕೊಂಡಿದ್ದರು.

ಇದನ್ನೂ ಓದಿ: Rashmika Mandanna: ಸೆಟ್ಟೇರಿತು ರಶ್ಮಿಕಾರ ಹೊಸ ತೆಲುಗು ಚಿತ್ರ; ತೆರೆ ಹಂಚಿಕೊಳ್ಳಲಿದ್ದಾರೆ ತೆಲುಗಿನ ಈ ಖ್ಯಾತ ನಟ!

Gold worth over 40 lakh Rupees has been seized from a man In Chennai