ದೆಹಲಿ: ಪ್ರಧಾನಿ ಮೋದಿ ಡಿಜಿಟಲ್ ಇಂಡಿಯಾ ಅಭಿಯಾನ ಶುರು ಮಾಡುವ ಮೂಲಕ ದೇಶದ ಎಲ್ಲಾ ಕ್ಷೇತ್ರಗಳಲ್ಲಿ ಡಿಜಿಟಲೀಕರಣಕ್ಕೆ ಒತ್ತು ನೀಡಲಾಯಿತು. ಇದೀಗ, ಗೂಗಲ್ ಸಂಸ್ಥೆಯು ಸಹ ಈ ಅಭೀಯಾನದಲ್ಲಿ ಕೈಜೋಡಿಸಲು ಮುಂದಾಗಿದೆ.
ಗೂಗಲ್ ಸಂಸ್ಥೆಯ CEO ಸುಂದರ್ ಪಿಚೈ ತಮ್ಮ ಕಂಪನಿಯ ವತಿಯಿಂದ ಮುಂದಿನ 5-7 ವರ್ಷದಲ್ಲಿ ಬರೋಬ್ಬರಿ ಒಂದು ಬಿಲಿಯನ್ ಡಾಲರ್ ಅಥವಾ 75,000 ಕೋಟಿ ರೂಪಾಯಿ ಹೂಡಿಕೆ ಮಾಡುವುದಾಗಿ ಘೋಷಿಸಿದ್ದಾರೆ.
ಪ್ರಧಾನಿ ಮೋದಿ ಜೊತೆ ವಿಡಿಯೋ ಕಾನ್ಫರೆನ್ಸ್ ನಡೆಸಿದ ಸುಂದರ್ ಪಿಚೈ ತಮ್ಮ ಸಂಸ್ಥೆ ವತಿಯಿಂದ ಪ್ರಾರಂಭಿಸಿರುವ ಗೂಗಲ್ ಫಾರ್ ಇಂಡಿಯಾ ಡಿಜಿಟೈಸೇಷನ್ ಫಂಡ್ ಮೂಲಕ ಹೂಡಿಕೆ ಮಾಡಲು ಮುಂದಾಗಿದ್ದಾರೆ. ಈ ಬೃಹತ್ ಮೊತ್ತ ಭಾರತದಲ್ಲಿ ಡಿಜಿಟಲೀಕರಣವನ್ನು Next Level ಗೆ ಕೊಂಡೊಯ್ಯಲು ಸಹಕಾರಿ ಆಗಲಿದೆ ಎಂಬುದು ತಜ್ಞರ ಅಭಿಪ್ರಾಯ.
Published On - 5:25 pm, Mon, 13 July 20