12 ಕ್ಲಾಸ್ನಲ್ಲಿ ನೂರಕ್ಕೆ ನೂರು! ಆದರೂ ಇತಿಹಾಸ ಓದಬೇಕಂತೆ, ಅದೂ ಯಾವ ಇತಿಹಾಸ..!?
ಈ ಬಾಲಕಿ ದಿವ್ಯಾಂಶಿ ಜೈನ್ ಅಂತಾ! ಊರು ಲಖ್ನೋ.. ಈ ಬಾರಿಯ CBSE 12ನೇ ತರಗತಿಯಲ್ಲಿ ಶೇ. 100 ಅಂಕ ಗಳಿಸಿ, ದಿವ್ಯ ಫಲಿತಾಂಶ ಗಳಿಸಿದ್ದಾಳೆ. ಆದರೆ ಈಕೆಗೊಂದು ದಿವ್ಯ ಕನಸು ಇದೆ. 10 ಮತ್ತು 12ನೇ ಕ್ಲಾಸಿನಲ್ಲಿ ಅತ್ಯುತ್ತಮ ಅಂಕ ಪಡೆಯುವ ಮಕ್ಕಳನ್ನು ಮುಂದೆ ಏನಾಗಬೇಕು? ಏನು ಓದಬೇಕು ಅಂದ್ಕೊಂಡಿದ್ದೀಯಾ ಅಂತಾ ಕೇಳಿದರೆ ಅಯ್ಯೋ ಇಷ್ಟು ಮಾರ್ಕ್ಸ್ ತಗೊಂಡಿದ್ದೀವಿ, ವೇಸ್ಟ್ ಮಾಡೋಕ್ಕೆ ಆಗುತ್ತಾ? ನಾವು ಓದೋದೆ ಇಂಜಿನಿಯರಿಂಗ್, ಡಾಕ್ಟರು ಅದೂ ಇದೂ ಅಂತಾ ಸಿದ್ಧ ಉತ್ತರ […]
ಈ ಬಾಲಕಿ ದಿವ್ಯಾಂಶಿ ಜೈನ್ ಅಂತಾ! ಊರು ಲಖ್ನೋ.. ಈ ಬಾರಿಯ CBSE 12ನೇ ತರಗತಿಯಲ್ಲಿ ಶೇ. 100 ಅಂಕ ಗಳಿಸಿ, ದಿವ್ಯ ಫಲಿತಾಂಶ ಗಳಿಸಿದ್ದಾಳೆ. ಆದರೆ ಈಕೆಗೊಂದು ದಿವ್ಯ ಕನಸು ಇದೆ. 10 ಮತ್ತು 12ನೇ ಕ್ಲಾಸಿನಲ್ಲಿ ಅತ್ಯುತ್ತಮ ಅಂಕ ಪಡೆಯುವ ಮಕ್ಕಳನ್ನು ಮುಂದೆ ಏನಾಗಬೇಕು? ಏನು ಓದಬೇಕು ಅಂದ್ಕೊಂಡಿದ್ದೀಯಾ ಅಂತಾ ಕೇಳಿದರೆ ಅಯ್ಯೋ ಇಷ್ಟು ಮಾರ್ಕ್ಸ್ ತಗೊಂಡಿದ್ದೀವಿ, ವೇಸ್ಟ್ ಮಾಡೋಕ್ಕೆ ಆಗುತ್ತಾ? ನಾವು ಓದೋದೆ ಇಂಜಿನಿಯರಿಂಗ್, ಡಾಕ್ಟರು ಅದೂ ಇದೂ ಅಂತಾ ಸಿದ್ಧ ಉತ್ತರ ಕೊಡುತ್ತಾರೆ.
ದಿವ್ಯ-ಭವ್ಯ ಭಾರತ ಇತಿಹಾಸದ ತಾಕತ್ತು, ಅಂತಃಸತ್ವ ಆದ್ರೆ ಈ ದಿವ್ಯಾಂಶಿ ಜೈನ್ ಮಾತ್ರ.. ಇಲ್ಲ ನನಗೊಂದು ದಿವ್ಯ ಕನಸಿದೆ.. ಇತಿಹಾಸ ನನ್ನ ಆಸಕ್ತಿಯ ವಿಷಯ. ನಾನು ಇತಿಹಾಸವನ್ನೇ ಓದುತ್ತೇನೆ ಅನ್ನುತ್ತಾರೆ. ಆಯ್ತು ಯಾವ ಇತಿಹಾಸವಮ್ಮಾ ಅಂತಾ ಕೆಣಕುತ್ತಾ ಕೇಳಿದರೆ ನಮ್ಮದೇ ಇತಿಹಾಸ, ನಮ್ಮ ಭವ್ಯ ಭಾರತದ ದಿವ್ಯ ಇತಿಹಾಸವನ್ನೇ ಓದುತ್ತೇನೆ ಎನ್ನುತ್ತಾರೆ ದಿವ್ಯಾಂಶಿ! ಭಾರತದ ಗತ ವೈಭವದ ಮಹಿಮೆ ಅಂದ್ರೆ ಇದು, ಭಾರತದ ಇತಿಹಾಸ-ಸಂಸ್ಕೃತಿಯ ಮಹಿಮೆ ಅಂದ್ರೆ ಇದು ಅಲ್ವಾ? ಈ ದಿವ್ಯಾಂಶಿಗೆ ಆಲ್ ದಿ ಬೆಸ್ಟ್ ಹೇಳೋಣ..
Geography ಪರೀಕ್ಷೆ ಬರೆಯಬೇಕಿತ್ತು.. ನಮ್ಮ ದಿವ್ಯಾಂಶಿ ಅನುಕ್ಷಣವೂ ಗಮನವಿಟ್ಟು ವ್ಯಾಸಂಗ ಮಾಡುತ್ತಿದ್ದಳು. ಪುಸ್ತಕಗಳೇ ಅವಳ ಸಂಘವಾಗಿತ್ತು. ನಾವೆಲ್ಲ ಅವಳಿಗೆ ಸಪೋರ್ಟೀವ್ ಆಗಿದ್ದೆವು. ಅವಳು ಕಾಲೇಜಿಗೆ ಪ್ರಥಮ ಸ್ಥಾನ ಗಳಿಸ್ತಾಳೆ ಅಂದ್ಕೊಂಡಿದ್ದೆವು. ಆದ್ರೆ ಅವಳು 600ಕ್ಕೆ 600 ಬಾಚಿಕೊಂಡು ಇಡೀ ದೇಶಕ್ಕೆ ಮೊದಲ ಸ್ಥಾನ ಗಳಿಸಿದ್ದಾಳೆ. ಅವಳ ಬಗ್ಗೆ ನಮಗೆ ನಿಜಕ್ಕೂ ಹೆಮ್ಮೆ ಅನಿಸುತ್ತದೆ. ಆದ್ರೆ ಅವಳು ಅವಳ ಆಸಕ್ತಿ ತಕ್ಕ ಹಾಗೆ ಭೂಗೋಳ ಶಾಸ್ತ್ರ ಪರೀಕ್ಷೆಯನ್ನೂ ಬರೆಯಬೇಕಿತ್ತು. ಆದ್ರೆ ಹಾಳು ಕೊರೊನಾ ಬಂದು Geography ಪರೀಕ್ಷೆಯನ್ನೇ ರದ್ದುಗೊಳಿಸಿದರು ಎಂದು ತುಸು ಪೆಚ್ಚು ಮೋರೆ ಹಾಕಿಕೊಂಡು ತಮ್ಮ ಮಗಳತ್ತ ಪ್ರೀತಿ ಅಭಿಮಾನದ ನೋಟ ಬೀರುತ್ತಾರೆ ಅವರ ತಾಯಿ!
Published On - 8:54 am, Tue, 14 July 20