Women’s Day Google Doodle: ಇಂದಿನ ಅಂತಾರಾಷ್ಟ್ರೀಯ ಮಹಿಳಾದಿನಾಚರಣೆಯಂದು ಗೂಗಲ್ ತನ್ನ ಡೂಡಲ್ ಮೂಲಕ ವಿಭಿನ್ನವಾಗಿ ಮಹಿಳೆಯರಿಗೆ ಗೌರವ ಸಲ್ಲಿಸಿದೆ. ಪುರುಷರಿಗಷ್ಟೇ ಸೀಮಿತ ಎಂದುಕೊಂಡಿದ್ದ ಕ್ಷೇತ್ರಗಳಲ್ಲಿ ಒಂದೊಂದೇ ಮಹಿಳಾ ಹೆಜ್ಜೆಗಳು ಮೂಡಿದ ಕ್ಷಣವನ್ನು ಡೂಡಲ್ ಉಲ್ಲೇಖಿಸಿದೆ. ಅಂದರೆ ವಿಶ್ವದ ಇತಿಹಾಸದಲ್ಲಿ ಪ್ರತಿ ಕ್ಷೇತ್ರದಲ್ಲಿ ಮಹಿಳೆಯರು ಪ್ರಥಮಗಳನ್ನು ಸಾಧಿಸಿದ್ದನ್ನು ಒಂದು ಚಿಕ್ಕ ವಿಡಿಯೋದಲ್ಲಿ ಹಿಡಿದಿಟ್ಟಿದೆ.
ಡೂಡಲ್ನ ವಿಡಿಯೋದಲ್ಲಿ ಮಹಿಳೆಯರ ಕೈ ಮಾತ್ರ ತೋರಿಸಲಾಗಿದೆ.. ಅಂದರೆ ಶಿಕ್ಷಣ, ವಿಜ್ಞಾನ, ವೈದ್ಯಕೀಯ ಕ್ಷೇತ್ರ, ಗಗನಯಾನ, ಇಂಜಿನಿಯರಿಂಗ, ಇತರ ಹೋರಾಟ, ಕಲೆ.. ಸೇರಿ ವಿವಿಧ ಕ್ಷೇತ್ರಗಳಲ್ಲಿ ಮೊದಲ ಬಾರಿಗೆ ಮಹಿಳೆಯರ ಪ್ರವೇಶವನ್ನು ವಿಶಿಷ್ಟವಾಗಿ ರೂಪಿಸಲಾಗಿದೆ. ಈ ಬಗ್ಗೆ ಟ್ವೀಟ್ ಮಾಡಿಕೊಂಡಿರುವ ಗೂಗಲ್ ಡೂಡಲ್, ಇಂದು ವಿಶ್ವದ ಅನೇಕ ಕ್ಷೇತ್ರಗಳಲ್ಲಿ ಮಹಿಳೆಯರು ಸಕ್ರಿಯರಾಗಿದ್ದಾರೆ. ಈ ವಿಭಾಗಗಳಿಗೆ ಮಹಿಳೆಯರಿಗೂ ಪ್ರವೇಶ ಇದೆ ಎಂದು ಬಾಗಿಲು ತೆರೆದು ತೋರಿಸಿದವರು ತಲೆಮಾರುಗಳ ಹಿಂದಿನ ಪ್ರಥಮ ಸಾಧಕ ಮಹಿಳೆಯರು. ಇಂದು ಗೂಗಲ್ ಡೂಡಲ್ನಲ್ಲಿ ಒಂದು ಚಿಕ್ಕ ವಿಡಿಯೋ ಮೂಲಕ ಅವರಿಗೆಲ್ಲ ಗೌರವ ಸಲ್ಲಿಸಲಾಗುತ್ತಿದೆ ಎಂದು ಬರೆದುಕೊಂಡಿದೆ. ಅದರಲ್ಲಿ ಮಹಿಳೆಯರನ್ನು S(Heroes) ಎಂದು ಉಲ್ಲೇಖಿಸಿದ್ದು ವಿಶೇಷ.
ಎಲ್ಲ ಕ್ಷೇತ್ರಗಳ ಮೊದಲುಗಳು ಇಂದು ಅಸಂಖ್ಯಾತ ಮಹಿಳೆಯ ಸಾಧನೆಗೆ ಬುನಾದಿಯಾಗಿವೆ. ಅದೆಷ್ಟೋ ವಿಭಾಗಗಳಲ್ಲಿ ಮಹಿಳೆಯರ ಪಾಲಿಗೆ ಗಾಜಿನ ಬಾಗಿಲುಗಳಿದ್ದವು. ಅಲ್ಲಿ ಮೊದಲು ಪ್ರವೇಶಿಸಿದ ಮಹಿಳೆಯರು ಆ ಗಾಜನ್ನು ಒಡೆದಿದ್ದಾರೆ. ಎಲ್ಲರಿಗೂ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಶುಭಾಶಯಗಳು ಎಂದು ಗೂಗಲ್ ತನ್ನ ಡೂಡಲ್ ಮೂಲಕ ತಿಳಿಸಿದೆ.
ಮಹಿಳಾ ದಿನಾಚರಣೆಯನ್ನು 1911ರಿಂದ ಆಚರಿಸಿಕೊಂಡು ಬರಲಾಗಿದ್ದು, ಮಹಿಳಾ ಸಮಾನತೆ, ಹಕ್ಕು ರಕ್ಷಣೆಗಳೇ ಮುಖ್ಯ ಆಶಯ. ಈ ಬಾರಿ Choose to Challenge ಎಂಬ ಥೀಮ್ನೊಂದಿಗೆ ಮಹಿಳಾ ದಿನಾಚರಣೆಯನ್ನು ಆಚರಿಸಲಾಗುತ್ತಿದ್ದು, ಮಹಿಳೆಯರು ಸವಾಲುಗಳನ್ನು ಸ್ವೀಕರಿಸಲು ಮತ್ತು ಸವಾಲು ಹಾಕಲು ಸದಾ ಸಿದ್ಧರಿರಬೇಕು ಎಂಬ ಕಾರಣಕ್ಕೆ ಈ ಘೋಷವಾಕ್ಯವನ್ನು ನೀಡಲಾಗಿದೆ.
Happy International Women’s Day! #IWD2021
Today’s video #GoogleDoodle highlights a handful of historical firsts accomplished by women around the world ???
Scientists, gold medalists, & more—Here’s to those who opened doors & created a lasting legacy→ https://t.co/b86UdKYq94 pic.twitter.com/PyyXFfuC7J
— Google Doodles (@GoogleDoodles) March 8, 2021
ಇದನ್ನೂ ಓದಿ: ಮಹಿಳಾ ದಿನಾಚರಣೆ 2021: ಬೆಳಕು ಹರಿಯದ ಮುಂಜಾನೆಯಲ್ಲಿ ಹೆರಿಗೆ ನೋವಿನಿಂದ ಒದ್ದಾಡುತ್ತಿದ್ದ ಗರ್ಭಿಣಿಗೆ ಆಸರೆಯಾದ ಆಟೋ ಚಾಲಕಿ…
Published On - 11:49 am, Mon, 8 March 21