International Women’s Day 2021: ‘ಸವಾಲಿಗೆ ಸಿದ್ಧ ನಾವು..’ – ಮಹಿಳಾ ದಿನಾಚರಣೆಯ ಈ ಘೋಷವಾಕ್ಯಕ್ಕೆ ಒಪ್ಪಿಗೆಯಿದ್ದರೆ ಕೈ ಎತ್ತಿ !

Women's Day 2021 ಥೀಮ್​ Choose to challenge. ಈ ಅಭಿಯಾನ ಸೋಷಿಯಲ್ ಮೀಡಿಯಾಗಳಲ್ಲಿ ಈಗಾಗಲೇ ಪ್ರಾರಂಭಗೊಂಡಿದ್ದು ನೀವೂ ಕೈ ಜೋಡಿಸಿ. ಸವಾಲನ್ನು ಸ್ವೀಕರಿಸಲು ಸಿದ್ಧರಿದ್ದೇವೆ-ಬದ್ಧರಿದ್ದೇವೆ ಎಂಬ ಭಾವವನ್ನು ಹೊಮ್ಮಿಸುವಂತೆ, ನಿಮ್ಮ ಒಂದು ಕೈ ಎತ್ತಿ ಫೋಟೋ ತೆಗೆದುಕೊಳ್ಳಿ. ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ #Choosetochallenge ಮತ್ತು #IWD2021 ಹ್ಯಾಷ್​ಟ್ಯಾಗ್​ ಮೂಲಕ ಪೋಸ್ಟ್ ಮಾಡಿ.

International Women's Day 2021: ‘ಸವಾಲಿಗೆ ಸಿದ್ಧ ನಾವು..' - ಮಹಿಳಾ ದಿನಾಚರಣೆಯ ಈ ಘೋಷವಾಕ್ಯಕ್ಕೆ ಒಪ್ಪಿಗೆಯಿದ್ದರೆ ಕೈ ಎತ್ತಿ !
Choose To Challengeಗೆ ಕೈ ಜೋಡಿಸಿದ ನಟಿ ಸಮಂತಾ ಅಕ್ಕಿನೇನಿ
Follow us
Lakshmi Hegde
|

Updated on: Mar 07, 2021 | 3:55 PM

ನಾಳೆ (March 8)ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ (International Women’s Day 2021).. ಪ್ರತಿವರ್ಷ ಮಾರ್ಚ್​ 8ರಂದು ವಿಶ್ವದಾದ್ಯಂತ ಮಹಿಳಾ ದಿನಾಚರಣೆಯ ಸಂಭ್ರಮ..ಈ ದಿನ ಕೇವಲ ಪರಸ್ಪರ ಶುಭ ಹಾರೈಸಿಕೊಳ್ಳಲಷ್ಟೇ ಸೀಮಿತವಲ್ಲ. ಬದಲಿಗೆ ಸ್ತ್ರೀ ಹಕ್ಕು, ಸಮಾನತೆ, ಇತಿಹಾಸ, ಸಾಧನೆಗಳ ಮೇಲೆ ಬೆಳಕು ಚೆಲ್ಲುತ್ತದೆ. ಶತಮಾನಗಳಿಂದಲೂ ಸ್ತ್ರೀ ಸಮಾನತೆಯನ್ನೇ ಸಾರುತ್ತಿರುವ ಮಹಿಳಾ ದಿನಾಚರಣೆಗೆ ಪ್ರತಿವರ್ಷವೂ ಒಂದು ಘೋಷವಾಕ್ಯ (ಥೀಮ್​)ಇರುತ್ತದೆ. ಹಾಗೇ ಈ ವರ್ಷ ಮಹಿಳಾ ದಿನಾಚರಣೆಯನ್ನು Choose to challenge ಎಂಬ ವಿಶೇಷ ಥೀಮ್​​ನೊಂದಿಗೆ ಆಚರಿಸಲಾಗುತ್ತಿದೆ… ಸೋಷಿಯಲ್ ಮೀಡಿಯಾಗಳಲ್ಲಿ ಈಗಾಗಲೇ #Choosetochallenge ನಡಿ ಸಾಧಕ ಮಹಿಳೆಯರ ಪರಿಚಯ, ಮಹಿಳೆಯರ ಗೌರವ, ರಕ್ಷಣೆಗೆ ಸಂಬಂಧಪಟ್ಟ ಪೋಸ್ಟ್​​ಗಳನ್ನೂ ಹಾಕಲಾಗುತ್ತಿದೆ.

ಸವಾಲುಗಳುಳ್ಳ, ಸ್ಪರ್ಧಾತ್ಮಕ ಜಗತ್ತು ಸದಾ ಎಚ್ಚರವಾಗಿರುತ್ತದೆ ಎಂಬ ಮಾತಿದೆ. ಮಹಿಳೆಯರು, ಪುರುಷರು ಎಂಬ ಭೇದವಿಲ್ಲದೆ ಪ್ರತಿಯೊಬ್ಬರೂ ವೈಯಕ್ತಿಕವಾಗಿ ನಮ್ಮ ಕಾರ್ಯಗಳು, ಆಲೋಚನೆಗಳು, ವರ್ತನೆಗೆ ನಾವೇ ಜವಾಬ್ದಾರರಾಗಿ ಇರುತ್ತೇವೆ. ಅದರಾಚೆಗೆ ಮಹಿಳೆಯರು ಸವಾಲುಗಳನ್ನು ಆಯ್ಕೆ ಮಾಡಿಕೊಳ್ಳಬೇಕು..ಹಿಂಜರಿಯಬಾರದು. ಈ ಮೂಲಕ ಲಿಂಗ ಅಸಮಾನತೆ, ಪಕ್ಷಪಾತವನ್ನು ತೊಡೆದುಹಾಕಬೇಕು. ಜಗತ್ತಿನಾದ್ಯಂತ ಸಾಧಕ ಮಹಿಳೆಯರ ಬಗ್ಗೆ ಹೆಚ್ಚೆಚ್ಚು ತಿಳಿಯಬೇಕು. ಅವರ ಸಾಧನೆಯನ್ನು ಸಂಭ್ರಮಿಸಬೇಕು. ಸ್ಪರ್ಧಾತ್ಮಕ ಜಗತ್ತಿನಲ್ಲಿ ಹೆಜ್ಜೆಹೆಜ್ಜೆಗೂ ಎದುರಾಗುವ ಸವಾಲುಗಳನ್ನು ಮಹಿಳೆ ಆಯ್ಕೆ ಮಾಡಿಕೊಳ್ಳಬೇಕು ಎಂಬುದೇ ಈ ಥೀಮ್​​ನ ಆಶಯ. ಹಾಗೇ ಈ ಮಹಿಳಾ ದಿನಾಚರಣೆಯ ಥೀಮ್​​ನ್ನು ಸ್ವಾಗತಿಸುವವರು, ನಾನು ಸವಾಲನ್ನು ಸ್ವೀಕರಿಸಲು ಸಿದ್ಧನಿದ್ದೇನೆ ಎಂಬ ಭಾವದಲ್ಲಿ ಒಂದು ಕೈ ಎತ್ತಿದ ಫೋಟೋವನ್ನು Choosetochallenge ಹ್ಯಾಷ್​ಟ್ಯಾಗ್ ಮೂಲಕ ಸೋಷಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಿಕೊಳ್ಳಬಹುದಾಗಿದೆ.

Choose To Challenge Women's Day

ಈ ಬಾರಿ ಮಹಿಳಾ ದಿನಾಚರಣೆಯನ್ನು ಹೇಗೆ ಆಚರಿಸಬಹುದು? 2021ರ ಮಹಿಳಾ ದಿನಾಚರಣೆ ಥೀಮ್​ Choose to challenge. ಈ ಅಭಿಯಾನ ಸೋಷಿಯಲ್ ಮೀಡಿಯಾಗಳಲ್ಲಿ ಈಗಾಗಲೇ ಪ್ರಾರಂಭಗೊಂಡಿದ್ದು ನೀವೂ ಕೈ ಜೋಡಿಸಿ. ಸವಾಲನ್ನು ಸ್ವೀಕರಿಸಲು ಸಿದ್ಧರಿದ್ದೇವೆ-ಬದ್ಧರಿದ್ದೇವೆ ಎಂಬ ಭಾವವನ್ನು ಹೊಮ್ಮಿಸುವಂತೆ, ನಿಮ್ಮ ಒಂದು ಕೈ ಎತ್ತಿ ಫೋಟೋ ತೆಗೆದುಕೊಳ್ಳಿ. ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ #Choosetochallenge ಮತ್ತು #IWD2021 ಹ್ಯಾಷ್​ಟ್ಯಾಗ್​ ಮೂಲಕ ಪೋಸ್ಟ್ ಮಾಡಿ. ನೀವು ಒಂದು ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರೆ, ಇಡೀ ತಂಡವನ್ನೂ ಇದರಲ್ಲಿ ಪಾಲ್ಗೊಳ್ಳುವಂತೆ ಮೂಡಿ. ಹಾಗೇ ಅಸಮಾನತೆಗೆ ನಾವು ಸವಾಲೆಸೆಯುತ್ತೇವೆ.. ಅದ್ಯಾವುದೇ ಸವಾಲು ಬಂದರೂ ನಾವು ಎದುರಿಸಲು ಸಿದ್ಧರಿದ್ದೇವೆ ಎಂಬುದನ್ನು ತೋರಿಸಿ.

ನಟಿ ಸಮಂತಾ ಅಕ್ಕಿನೇನಿ ಅವರು ಈಗಾಗಲೇ ತಮ್ಮ ಇನ್ಸ್ಟಾಗ್ರಾಂನಲ್ಲಿ ಫೋಟೋವನ್ನು ಹಾಕುವ ಮೂಲಕ Choose to challenge ಅಭಿಯಾನಕ್ಕೆ ಕೈ ಜೋಡಿಸಿದ್ದಾರೆ. ಹಾಗೇ, ನಾವು ಎಲ್ಲಿದ್ದೇವೆ, ನಮ್ಮ ಮೌಲ್ಯ ಏನು ಎಂಬುದನ್ನು ಅರ್ಥ ಮಾಡಿಕೊಳ್ಳುವ ಸಮಯ ಇದು. ನಮಗೆ ಅರ್ಹತೆ ಇಲ್ಲ ಎಂದು ಯಾವ ವಿಚಾರದಲ್ಲೂ ನಾವು ಭಾವಿಸಬಾರದು. ಈ ಅಂತಾರಾಷ್ಟ್ರೀಯ ಮಹಿಳಾದಿನಾಚರಣೆಯಂದು ನನ್ನ ಮೇಲೆ ನಾನು ಹೆಚ್ಚೆಚ್ಚು ನಂಬಿಕೆ ಇಡುವ ಸವಾಲಿಗೆ ಒಳಪಡುತ್ತೇನೆ. ನೀವೂ ಅದನ್ನು ಮಾಡಿ. ಸಬಲೀಕರಣವೆಂಬುದು ನಮ್ಮಿಂದಲೇ ಶುರುವಾಗಬೇಕು. ನಾನು ಸವಾಲನ್ನು ಆಯ್ಕೆ ಮಾಡಿಕೊಳ್ಳುತ್ತೇನೆ.. ನೀವು? ಎಂದು ಕೇಳಿದ್ದಾರೆ.

ನಿಮ್ಮ ಕೆಲಸದ ಸ್ಥಳದಲ್ಲಿ ಲಿಂಗ ಸಮಾನತೆ ಬಗ್ಗೆ ಅರಿವು ಮೂಡಿಸಿ ಕೊವಿಡ್​-19 ಬಿಕ್ಕಟ್ಟಿನ ಕಾರಣ ಮಹಿಳೆಯರು ತಮ್ಮ ಕೆಲಸದ ಸ್ಥಳಗಳಲ್ಲಿ ಹೊಸ ಸವಾಲನ್ನು ಎದುರಿಸುವಂತಾಗಿದೆ. ಬಹುತೇಕ ಸಂಸ್ಥೆಗಳು ಆರ್ಥಿಕ ಸಮಸ್ಯೆಯಿಂದ ಉದ್ಯೋಗಿಗಳನ್ನು ವಜಾಗೊಳಿಸಬೇಕಾದ ಸಂದರ್ಭ ಬಂದಾಗ ಮಹಿಳೆಯರನ್ನೇ ಟಾರ್ಗೆಟ್ ಮಾಡುತ್ತಿವೆ ಎಂಬುದನ್ನು ಸಮೀಕ್ಷೆಯೊಂದು ಬಹಿರಂಗಪಡಿಸಿದೆ. ಅದರಲ್ಲೂ ಶಿಶುಪಾಲನೆಗಾಗಿ ರಜೆ ತೆಗೆದುಕೊಳ್ಳುವವರು, ಮನೆಯ ಜವಾಬ್ದಾರಿ ಹೆಚ್ಚಿರುವ ಮಹಿಳೆಯರು ಕೆಲಸ ಕಳೆದುಕೊಂಡಿದ್ದಾರೆ. ಹೀಗಾಗಿ ಕೆಲಸದ ಜಾಗದಲ್ಲಿ ಅಂಥ ಸಂದರ್ಭ ಬಂದಾಗ ನೀವು ನಿಮಗೇ ವಕೀಲರಾಗಿ. ನಿಮ್ಮ ಬಗ್ಗೆ ವಾದಿಸಿಕೊಳ್ಳಿ. ಈ ಮೂಲಕ ಲಿಂಗ ಸಮಾನತೆಯನ್ನು ಎತ್ತಿ ಹಿಡಿಯಿರಿ. ಈ ಮಹಿಳಾ ದಿನಾಚರಣೆಯಂದು, ನೀವು ಕೆಲಸ ಮಾಡುತ್ತಿರುವ ಕಂಪನಿಯ ನೀತಿಯನ್ನು ಪರಿಶೀಲಿಸಿಕೊಳ್ಳಿ. ಈಗಿರುವ ನಿಯಮಗಳಲ್ಲಿ ಲಿಂಗ ಭೇದ, ಪಕ್ಷಪಾತ ಕಾಣಿಸುತ್ತಿದ್ದರೆ ಅದನ್ನು ನಿಮ್ಮ ಮುಖ್ಯಸ್ಥರೊಟ್ಟಿಗೆ ಮಾತನಾಡಿ ಸರಿಪಡಿಸಿಕೊಳ್ಳಿ. ನಿಮ್ಮ ನ್ಯಾಯವನ್ನು ನೀವು ಪಡೆದುಕೊಳ್ಳಿ.

ನಿಮ್ಮ ಸುತ್ತಮುತ್ತಲಿರುವ ಮಹಿಳೆಯರೊಂದಿಗೆ ಒಂದು ಕಾಫಿ ಡೇಟ್​ ಫಿಕ್ಸ್​ ಮಾಡಿ ನೀವುನೀವೇ ನಾಲ್ಕಾರು ಜನ ಮಹಿಳೆಯರು ಕುಳಿತು ಸವಾಲುಗಳ ಸ್ವೀಕಾರ ಮತ್ತು ಅಸಮಾನತೆಗೆ ಚಾಲೆಂಜ್ ಮಾಡುವುದು ಹೇಗೆಂಬ ವಿಚಾರಗಳನ್ನು ಚರ್ಚಿಸಿ. ಈ ಬಗ್ಗೆ ಸರಳವಾದ ಮಾತುಕತೆ ಇದೆಲಿ. ನಿಮ್ಮ ನಿಮ್ಮ ವೃತ್ತಿ ಜೀವನ, ಅನುಭವ, ಕೆಲಸದ ಸ್ಥಳದಲ್ಲಿ ಆಗುತ್ತಿರುವ ಪಕ್ಷಪಾತ, ನಿಮ್ಮಲ್ಲಿನ ನಾಯಕತ್ವ, ಸ್ವಯಂ ಕಾಳಜಿಯ ಬಗ್ಗೆ ಮುಕ್ತವಾಗಿ ಮಾತನಾಡಿ. ಅಂದರೆ ಕೆಲಸದ ಸ್ಥಳದಲ್ಲಿ ಎದುರಾಗುತ್ತಿರುವ ಕಷ್ಟವನ್ನು ಹೇಗೆ ಎದುರಿಸುತ್ತಿದ್ದೀರಿ? ದಿನದಿನವೂ ಹೆಚ್ಚುತ್ತಿರುವ ಸ್ಪರ್ಧೆಗೆ ಹೇಗೆ ತೆರೆದುಕೊಳ್ಳುತ್ತಿದ್ದೀರಿ? ವೃತ್ತಿ ಜೀವನ ಮತ್ತು ವೈಯಕ್ತಿಕ ಬದುಕನ್ನು ಹೇಗೆ ನಿಭಾಯಿಸಿಕೊಳ್ಳುತ್ತಿದ್ದೀರಿ? ಎಂಬಿತ್ಯಾದಿ ಪ್ರಶ್ನೆಗಳನ್ನು ನಿಮ್ಮನಿಮ್ಮೊಳಗೇ ಕೇಳಿಕೊಳ್ಳಿ. ಹೀಗೆ ಒಬ್ಬೊಬ್ಬರಿಂದ ಬರುವ ಒಂದೊಂದು ವಿಧದ ಉತ್ತರ ನಿಮಗೂ ಹೆಲ್ಪ್​ ಆಗಬಹುದು. ನಿಮ್ಮ ಶೈಲಿ ಇನ್ನೊಬ್ಬರಿಗೆ ಮಾದರಿಯಾಗಬಹುದು. ಇದನ್ನು ನೀವು ಭೇಟಿಯಾಗಿಯೇ ಮಾಡಬೇಕು ಎಂದೇನಿಲ್ಲ. ಅದರ ಬದಲು ವರ್ಚ್ಯುವಲ್​ ಆಗಿ ಕೂಡ ಮಾಡಬಹದು. ಇನ್ನುಳಿದಂತೆ ಸಹೋದ್ಯೋಗಿಗಳೊಂದಿಗೆ ಸೇರಿ ಬುಕ್ ಕ್ಲಬ್​ ಪ್ರಾರಂಭಿಸಬಹುದು, ಯಾವುದಾದರೂ ಚಾರಿಟಿ ಸಂಸ್ಥೆಗೆ ಕೈಲಾದಷ್ಟು ದಾನ ಮಾಡಬಹುದು, ಸಿನಿಮಾ ಪ್ರದರ್ಶನ ಅಯೋಜಿಸಿ, ನಿಮ್ಮ ಆಪ್ತರನ್ನ ಕರೆಸಬಹುದು..ಅಥವಾ ಸಾಧಕ ಮಹಿಳೆಯರ ಬಗ್ಗೆ ಪರಿಚಯ ಕಾರ್ಯಕ್ರಮ ಹಮ್ಮಿಕೊಳ್ಳಬಹದು.

ಶತಮಾನದ ಆಚರಣೆ ಇದು ಮಹಿಳಾ ದಿನಾಚರಣೆ ಇತ್ತೀಚಿನ ವರ್ಷಗಳಲ್ಲಿ ಶುರುವಾಗಿದ್ದಲ್ಲ. ಇದಕ್ಕೆ ಶತಮಾನಗಳ ಇತಿಹಾಸವಿದೆ. ಮೊಟ್ಟಮೊದಲು ಮಹಿಳಾ ದಿನಾಚರಣೆಯನ್ನು ನ್ಯೂಯಾರ್ಕ್​​ನಲ್ಲಿ 1909ರ ಫೆ.28ರಂದು ಆಚರಿಸಲಾಯಿತು. 1857ರ ಮಾರ್ಚ್​ 8ರಂದು ನ್ಯೂಯಾರ್ಕ್​ನಲ್ಲಿ ನಡೆದ ಗಾರ್ಮೆಂಟ್​ನ ಮಹಿಳಾ ಕಾರ್ಮಿಕರ ಪ್ರತಿಭಟನೆಯನ್ನು ಸ್ಮರಿಸಲು ಅಮೆರಿಕ ರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಫೆ.28ರಂದು ಆಚರಿಸಿತು ಎಂದು ಹೇಳಲಾಗುತ್ತದೆ. ಅದಾದ ಬಳಿಕ 1910ರಲ್ಲಿ ಡೆನ್ಮಾರ್ಕ್​ನ ಕೋಪನ್​ಹೇಗನ್​​ನಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಸೋಷಿಯಲಿಸ್ಟ್​ ಮಹಿಳಾ ಸಮ್ಮೇಳನದಲ್ಲಿ ಜರ್ಮನ್​ ಮಾರ್ಕ್ಸ್​ವಾದಿ, ಕಮ್ಯುನಿಸ್ಟ್ ಕಾರ್ಯಕರ್ತೆ ಹಾಗೂ ಮಹಿಳಾ ಹಕ್ಕುಗಳ ಪರ ವಕೀಲೆಯಾಗಿದ್ದ ಕ್ಲಾರಾ ಜಟ್ಕಿನ್, ಮಹಿಳಾ ದಿನಾಚರಣೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾರ್ಚ್ 8ರಂದು ಪ್ರತಿವರ್ಷ ಆಚರಿಸಬೇಕು ಎಂಬ ಪ್ರಸ್ತಾಪವನ್ನು ಮುಂದಿಟ್ಟರು. ಹಾಗೇ ಈ ಸಮ್ಮೇಳನದಲ್ಲಿ ಮಹಿಳೆಯರ ಸಮಾನತೆ, ಹೆರಿಗೆ ಭತ್ಯೆ, ಸೌಕರ್ಯದ ಬಗ್ಗೆಯೂ ಚರ್ಚೆಯಾಯಿತು. ನಂತರ 1911ರಲ್ಲಿ, ಪ್ರತಿವರ್ಷ ಮಾರ್ಚ್​ 8ರಂದು ಮಹಿಳಾ ದಿನಾಚರಣೆ ಆಚರಿಸುವ ಸಂಬಂಧ ಎಲ್ಲ ರಾಷ್ಟ್ರಗಳ ಮಹಿಳಾ ಪ್ರತಿನಿಧಿಗಳೂ ಸಮ್ಮತಿ ಸೂಚಿಸಿದರು. ಅಂದಿನಿಂದಲೂ ಮಹಿಳಾ ದಿನಾಚರಣೆಯನ್ನು, ಸ್ತ್ರೀಯರ ಸಮಾನತೆ, ಶೋಷಣೆಯ ವಿರುದ್ಧ ಪ್ರತಿಭಟನೆ, ಲೈಂಗಿಕ ದೌರ್ಜನ್ಯದ ವಿರುದ್ಧ ಹೋರಾಟ, ಲಿಂಗಭೇದ ವಿರೋಧದಂತ ಆಶಯಗಳನ್ನು ಇಟ್ಟುಕೊಂಡೇ ಆಚರಿಸಿಕೊಂಡು ಬರಲಾಗುತ್ತಿದೆ.

ಇದನ್ನೂ ಓದಿ: Women’s Day 2021: ಕೊರೊನಾ ಸೋಂಕು ವಿಜಯಪುರಕ್ಕೆ ಕಾಲಿಡುವುದಕ್ಕೂ ಮೊದಲೇ ಹೋರಾಟಕ್ಕೆ ಸಜ್ಜಾಗಿದ್ದರು ಡಾ.ಚೆನ್ನಮ್ಮಾ ಕಟ್ಟಿ..

Women’s Day Special: ಕೊರೊನಾ ಸೋಂಕಿತ ಗರ್ಭಿಣಿಯರ ಪಾಲಿಗೆ ಆಪದ್ಬಾಂಧವರಾಗಿದ್ದರು ವೈದ್ಯೆ ಶಾರದಾ; 220ಕ್ಕೂ ಹೆಚ್ಚು ಸುಸೂತ್ರ ಹೆರಿಗೆ

ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್