ಬಾಡಿಗೆ ತಾಯ್ತನದ ಮೂಲಕ ಮಗುವನ್ನು ಪಡೆಯುವ ಮಹಿಳೆಗೆ 6 ತಿಂಗಳ ಹೆರಿಗೆ ರಜೆ
ಬಾಡಿಗೆ ತಾಯ್ತನದ ಮೂಲಕ ಮಗುವನ್ನು ಪಡೆದರೂ ಅವರಿಗೆ 6 ತಿಂಗಳುಗಳ ಹೆರಿಗೆ ರಜೆ ನೀಡಲಾಗುತ್ತದೆ. ಒಂದೊಮ್ಮೆ ರಜೆ ಪಡೆಯುವ ಮಹಿಳೆ ಕೇಂದ್ರ ಸರ್ಕಾರಿ ನೌಕರರಾಗಿದ್ದರೆ 180 ದಿನ ಅಂದರೆ, 6 ತಿಂಗಳು ರಜೆ ಪಡೆಯುವ ಅವಕಾಶವನ್ನು ಕೇಂದ್ರ ಸರ್ಕಾರ ನೀಡಿದೆ.
ಇನ್ಮುಂದೆ ಬಾಡಿಗೆ ತಾಯ್ತನದ ಮೂಲಕ ಮಗುವನ್ನು ಪಡೆಯುವ ಮಹಿಳೆಗೂ 6 ತಿಂಗಳುಗಳ ಹೆರಿಗೆ ರಜೆ(Maternity Leave) ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಒಂದೊಮ್ಮೆ ರಜೆ ಪಡೆಯುವ ಮಹಿಳೆ ಕೇಂದ್ರ ಸರ್ಕಾರಿ ನೌಕರರಾಗಿದ್ದರೆ 180 ದಿನ ಅಂದರೆ, 6 ತಿಂಗಳು ರಜೆ ಪಡೆಯುವ ಅವಕಾಶವನ್ನು ಕೇಂದ್ರ ಸರ್ಕಾರ ಕಲ್ಪಿಸಿದೆ.
ಕೇಂದ್ರ ಸರ್ಕಾರವು 50 ವರ್ಷಗಳ ಹಿಂದಿನ ನಿಯಮಕ್ಕೆ ತಿದ್ದುಪಡಿ ಘೋಷಿಸಿದೆ. ಮಹಿಳಾ ಸರ್ಕಾರಿ ನೌಕರರು 180 ದಿನಗಳ ಹೆರಿಗೆ ರಜೆ ತೆಗೆದುಕೊಳ್ಳಬಹುದು. ಕೇಂದ್ರ ನಾಗರಿಕ ಸೇವೆಗಳ (ರಜೆ) ನಿಯಮಗಳು, 1972 ರಲ್ಲಿ ಮಾಡಲಾದ ಬದಲಾವಣೆಗಳ ಪ್ರಕಾರ, ಪಾಲನಾ ತಾಯಿ (ಬಾಡಿಗೆಯ ಮೂಲಕ ಜನಿಸಿದ ಮಗುವನ್ನು ಪಡೆದಿರುವ ತಾಯಿ) ಪಾಲಕ ತಂದೆ ಹೆರಿಗೆಯಾಗಿ 6 ತಿಂಗಳೊಳಗೆ 15 ದಿನಗಳ ಪಿತೃತ್ವ ರಜೆಯನ್ನೂ ಕೂಡ ಪಡೆಯಬಹುದು.
ಬಾಡಿಗೆ ತಾಯ್ತನದ ಮೂಲಕ ಮಗು ಜನಿಸಿದರೆ ಮಹಿಳಾ ಸರ್ಕಾರಿ ಉದ್ಯೋಗಿಗಳಿಗೆ ಹೆರಿಗೆ ರಜೆ ನೀಡಬೇಕೆಂಬ ನಿಯಮವಿರಲಿಲ್ಲ.
ಬಾಡಿಗೆ ತಾಯ್ತನ ಎಂದರೇನು? ಮಕ್ಕಳಾಗದ ದಂಪತಿಗಾಗಿ ಬೇರೊಬ್ಬ ಮಹಿಳೆ ಗರ್ಭ ಧರಿಸಿ, ಮಕ್ಕಳಾಗದವರಿಗೆ ಮಗುವನ್ನು ಹೆತ್ತುಕೊಡುವ ಪ್ರಕ್ರಿಯೆಯನ್ನೇ ಬಾಡಿಗೆ ತಾಯ್ತನ ಎಂದು ಕರೆಯುತ್ತಾರೆ. ಬಾಡಿಗೆ ತಾಯಿಯ ಅಂಡಾಣು, ಮಗುವನ್ನು ಪಡೆಯಲು ಬಯಸಿದ ವ್ಯಕ್ತಿ ಅಥವಾ ವೀರ್ಯ ದಾನಿಯಿಂದ ಪಡೆದ ವೀರ್ಯವನ್ನು ಬಳಸಿ ಮಗುವನ್ನು ಪಡೆಯುತ್ತಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ