ಪ್ರತಿಪಕ್ಷಗಳನ್ನು ವಿಭಜಿಸಲು ಕೇಂದ್ರ ಸರ್ಕಾರದ ಪ್ರಯತ್ನ ವಿಫಲವಾಗಿದೆ: ಟಿಎಂಸಿ

| Updated By: ರಶ್ಮಿ ಕಲ್ಲಕಟ್ಟ

Updated on: Aug 04, 2021 | 9:43 PM

ರಾಜ್ಯಸಭಾ ಅಧ್ಯಕ್ಷ ಎಂ ವೆಂಕಯ್ಯ ನಾಯ್ಡು ಅವರು ಪೆಗಾಸಸ್ ಗೂಢಚರ್ಯೆ ವಿಚಾರವಾಗಿ ಇತರ ವಿರೋಧ ಪಕ್ಷದ ಸಂಸದರ ಜೊತೆ ಪ್ರತಿಭಟನೆ ನಡೆಸುತ್ತಿರುವಾಗ ಆರು ಟಿಎಂಸಿ ಸಂಸದರು ಪ್ಲೆಕಾರ್ಡ್‌ಗಳನ್ನು ಹಿಡಿದು ಪ್ರತಿಭಟಿಸಿದ್ದಕ್ಕಾಗಿ ಅಮಾನತುಗೊಳಿಸಿದರು.

ಪ್ರತಿಪಕ್ಷಗಳನ್ನು ವಿಭಜಿಸಲು ಕೇಂದ್ರ ಸರ್ಕಾರದ ಪ್ರಯತ್ನ ವಿಫಲವಾಗಿದೆ: ಟಿಎಂಸಿ
ಅಭಿಷೇಕ್ ಬ್ಯಾನರ್ಜಿ
Follow us on

ಕೊಲ್ಕತ್ತಾ: ರಾಜ್ಯಸಭೆಯಲ್ಲಿ ಪಕ್ಷದ ಆರು ಸಂಸದರನ್ನು ಅಮಾನತುಗೊಳಿಸಿದ ನಂತರ ಟಿಎಂಸಿ ಬುಧವಾರ ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತು. ಪೆಗಾಸಸ್ ಬೇಹುಗಾರಿಕೆ ವಿಷಯವನ್ನು ತಳ್ಳಿ ಮತ್ತು ಕೃಷಿ ಕಾನೂನುಗಳ ಮೇಲೆ ಚರ್ಚೆಯನ್ನು ಅನುಮತಿಸುವ ಮೂಲಕ ಕೇಂದ್ರ ಸರ್ಕಾರ  ಪ್ರತಿಪಕ್ಷಗಳನ್ನು ವಿಭಜಿಸಲು ಪ್ರಯತ್ನಿಸುತ್ತಿದೆ ಟಿಎಂಸಿ ಆರೋಪಿಸಿದೆ.

ಸ್ಪೈವೇರ್ ವಿಚಾರದಲ್ಲಿ ಸರ್ಕಾರವನ್ನು ಮೂಲೆಗುಂಪು ಮಾಡುವ ಪ್ರಯತ್ನದಲ್ಲಿ ಪ್ರತಿಪಕ್ಷಗಳು ಒಗ್ಗಟ್ಟಾಗಿ ನಿಂತಿವೆ ಎಂದು ಅದು ಪ್ರತಿಪಾದಿಸಿದೆ.

ರಾಜ್ಯಸಭಾ ಅಧ್ಯಕ್ಷ ಎಂ. ವೆಂಕಯ್ಯ ನಾಯ್ಡು ಅವರು ಪೆಗಾಸಸ್ ಗೂಢಚರ್ಯೆ ವಿಚಾರವಾಗಿ ಇತರ ವಿರೋಧ ಪಕ್ಷದ ಸಂಸದರ ಜೊತೆ ಪ್ರತಿಭಟನೆ ನಡೆಸುತ್ತಿರುವಾಗ ಆರು ಟಿಎಂಸಿ ಸಂಸದರು ಪ್ಲೆಕಾರ್ಡ್‌ಗಳನ್ನು ಹಿಡಿದು ಪ್ರತಿಭಟಿಸಿದ್ದಕ್ಕಾಗಿ ಅಮಾನತುಗೊಳಿಸಿದರು.

ಅವರು ಸಂಸದರನ್ನು ಹೆಸರಿಸದಿದ್ದರೂ, ಸಂಸತ್ತಿನ ಬುಲೆಟಿನ್ ನಲ್ಲಿ ಆರು ಜನ ಸಂಸದರನ್ನು ಡೋಲಾ ಸೇನ್, ಎಂಡಿ. ನಾದಿಮುಲ್ ಹಕ್, ಅಬಿರ್ ರಂಜನ್ ಬಿಸ್ವಾಸ್, ಶಾಂತಾ ಛೆಟ್ರಿ, ಅರ್ಪಿತಾ ಘೋಷ್ ಮತ್ತು ಮೌಸಮ್ ನೂರ್ ಎಂದು ಗುರುತಿಸಲಾಗಿದೆ.

ಅದೇ ಸಮಯದಲ್ಲಿ, ಸಮಾಜವಾದಿ ಪಕ್ಷದ ರಾಮಗೋಪಾಲ್ ಯಾದವ್, ಸಿಪಿಐ (ಎಂ) ನ ಎಳಮರ ಕರೀಂ ಮತ್ತು ಎಎಪಿಯ ಸುಶೀಲ್ ಗುಪ್ತಾ ಅವರ ರೈತರ ಸಮಸ್ಯೆಯ ಚರ್ಚೆಯ ನೋಟಿಸ್‌ಗಳನ್ನು ರಾಜ್ಯಸಭೆಯಲ್ಲಿ ಸ್ವೀಕರಿಸಲಾಯಿತು.

ಸಂಸದರು ಅಮಾನತುಗೊಂಡ ನಂತರ ವಿರೋಧ ಪಕ್ಷದ ನಾಯಕರು ಸಂಸತ್ತಿನಲ್ಲಿ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಕಚೇರಿಯಲ್ಲಿ ಭೇಟಿಯಾದರು ಎಂದು ಮೂಲಗಳು ಹೇಳಿರುವುದಾಗಿ ದಿ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.

ಅರ್ಧ ಗಂಟೆಗೂ ಹೆಚ್ಚು ಕಾಲ ನಡೆದ ಸಭೆಯಲ್ಲಿ ಪಕ್ಷಗಳು ಪೆಗಾಸಸ್, ಕೃಷಿ ಕಾನೂನುಗಳು ಮತ್ತು ಇತರ ವಿಷಯಗಳ ಕುರಿತು ಉಭಯ ಸದನಗಳಲ್ಲಿ ಮಾಡಿದ ಬೇಡಿಕೆಗಳ ಮೇಲೆ ತಮ್ಮ ನಿಲುವಿಗೆ ಬದ್ಧವಾಗಿರಲು ನಿರ್ಧರಿಸಿದವು. ಸಭೆಯಲ್ಲಿ ಎನ್​​ಸಿಪಿಯ ಶರದ್ ಪವಾರ್, ಕಾಂಗ್ರೆಸ್ ಮುಖಂಡರಾದ ಅಧೀರ್ ರಂಜನ್ ಚೌಧರಿ ಮತ್ತು ಜೈರಾಮ್ ರಮೇಶ್, ಡಿಎಂಕೆಯ ಟಿಆರ್ ಬಾಲು ಮತ್ತು ತಿರುಚಿ ಶಿವ, ಮತ್ತು ಟಿಎಂಸಿಯ ಡೆರೆಕ್ ಒಬ್ರೇನ್ ಮತ್ತು ಕಲ್ಯಾಣ್ ಬ್ಯಾನರ್ಜಿ ಭಾಗವಹಿಸಿದ್ದರು.

“ನಮ್ಮಲ್ಲಿ ಯಾರೂ ನಮ್ಮ ನಿಲುವನ್ನು ಬದಲಾಯಿಸುವುದಿಲ್ಲ ಮತ್ತು ನಾವು ಎತ್ತಲು ನಿರ್ಧರಿಸಿದ ವಿಷಯಗಳಿಗೆ ನಾವು ಬದ್ಧರಾಗಿದ್ದೇವೆ” ಎಂದು ಮೂಲವೊಂದನ್ನು ಉಲ್ಲೇಖಿಸಿದ ಪವಾರ್ ಸಭೆಯಲ್ಲಿ ಹೇಳಿದಾಗ ಬಾಲು “ನಮ್ಮೆಲ್ಲರ ಸಹಮತವಿದೆ”ಎಂದು ಹೇಳಿದ್ದಾರೆ.

ಮೂಲಗಳ ಪ್ರಕಾರ ಡಿಎಂಕೆಯ ಶಿವ ಮತ್ತು ಆರ್‌ಜೆಡಿಯ ಮನೋಜ್ ಝಾ ಅವರು ಎಲ್ಲಾ ವಿರೋಧ ಪಕ್ಷದ ಸಂಸದರು ಒಗ್ಗಟ್ಟಾಗಿದ್ದಾರೆ ಮತ್ತು ಸರ್ಕಾರವು “ಎಲ್ಲರನ್ನೂ ಅಮಾನತುಗೊಳಿಸಲು ಪ್ರಯತ್ನಿಸಬಹುದು ” ಎಂದು ಹೇಳಿದರು.

ನಮ್ಮ ಸಂಸದರ ಮೇಲಿನ ದಮನವು ಬಿಜೆಪಿ 4 ರ 56 ಇಂಚಿನ ಗಾಡ್ ಫಾದರ್ ಸೋಲನ್ನು ಒಪ್ಪಿಕೊಂಡಿದೆ ಎಂದು ಸ್ಪಷ್ಟವಾಗಿ ಸೂಚಿಸುತ್ತದೆ! ನೀವು ನಮ್ಮನ್ನು ಅಮಾನತುಗೊಳಿಸಬಹುದು ಆದರೆ ನೀವು ನಮ್ಮ ಬಾಯ್ಮುಚ್ಚಿಸಲು ಸಾಧ್ಯವಿಲ್ಲ! ನಮ್ಮ ಜನರಿಗಾಗಿ ಹೋರಾಡಲು ಮತ್ತು ಸತ್ಯಕ್ಕಾಗಿ ಹೋರಾಡಲು ನಾವು ಇಂಚಿಂಚೂ ಅಲುಗಾಡುವುದಿಲ್ಲ. ನಮ್ಮ ರಕ್ತದ ಕೊನೆಯ ಹನಿ ತನಕ ಎಂದು ಟಿಎಂಸಿ ಸಂಸದ ಮತ್ತು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಟ್ವೀಟ್ ಮಾಡಿದ್ದಾರೆ.


ಸಭೆಯಲ್ಲಿ ಹಾಜರಿದ್ದ ಎಲ್ಲ ವಿರೋಧ ಪಕ್ಷದ ಸದಸ್ಯರು ಸದನದ ಅಂಗಳಕ್ಕಿಳಿದು ಪ್ರತಿಭಟನೆ ಮಾಡಬೇಕೆಂದು ತೀರ್ಮಾನಿಸಲಾಯಿತು. ಸಭೆಯ ನಂತರ ರಾಜ್ಯಸಭೆ ಕಲಾಪ ಮತ್ತೆ ಮುಂದುವರಿದಾಗ ಕಾಂಗ್ರೆಸ್‌ನ ದಿಗ್ವಿಜಯ್ ಸಿಂಗ್ ಅವರಂತಹ ಹಿರಿಯ ನಾಯಕರು ಪೋಸ್ಟರ್‌ಗಳನ್ನು ಹೊತ್ತುಕೊಂಡು ಸದನದ ಅಂಗಳಕ್ಕೆ ನುಗ್ಗಿದರು.
“ಹತಾಶ ಬಿಜೆಪಿ ಸಂಸತ್ತಿನಲ್ಲಿ ವಿರೋಧ ಪಕ್ಷವನ್ನು ವಿಭಜಿಸಲು ಪ್ರಯತ್ನಿಸುತ್ತಿದೆ ಒಳ್ಳೆಯ ಪ್ರಯತ್ನ. ಆದರೆ ನೀವು ವಿಫಲರಾಗಿದ್ದೀರಿ ಎಂದು ಓಬ್ರೇನ್ ಟ್ವೀಟ್ ಮಾಡಿದ್ದಾರೆ.

ವಿರೋಧ ಪಕ್ಷಗಳು ಕೃಷಿ ಕಾನೂನುಗಳನ್ನು ರದ್ದುಗೊಳಿಸುವುದು, ಬೆಲೆ ಏರಿಕೆ, ಉದ್ಯೋಗಗಳು, ಹಣದುಬ್ಬರ, ಆರ್ಥಿಕತೆ ಕುರಿತು ಚರ್ಚೆಗೆ ಒತ್ತಾಯಿಸಿವೆ. ಅದೇ ವೇಳೆ ಪ್ರಧಾನಿ ಮತ್ತು ಗೃಹ ಸಚಿವರ ಸಮ್ಮುಖದಲ್ಲಿ ಉಭಯ ಸದನಗಳಲ್ಲಿ ಪೆಗಾಸಸ್ ಚರ್ಚೆ ಮಾಡಬೇಕೆಂದು ವಿಪಕ್ಷ ಕೋರಿದೆ.

ಪ್ರತಿಪಕ್ಷದ ಪಕ್ಷದ ನಾಯಕರೊಬ್ಬರು ಸಂಸತ್ತಿನಲ್ಲಿ ಮಂಡಿಸಿದ ಮಸೂದೆಗಳ ಚರ್ಚೆಯಲ್ಲಿ ಭಾಗವಹಿಸುವಾಗ ಈ ವಿಷಯಗಳನ್ನು ಪ್ರಸ್ತಾಪಿಸುತ್ತಾರೆ ಎಂದು ಹೇಳಿದರು. “ಮಸೂದೆಗಳ ಮೇಲಿನ ಚರ್ಚೆಗಳು ಅಷ್ಟೇನೂ ನಡೆಯುತ್ತಿಲ್ಲವಾದರೂ, ನಮಗೆ ಅವಕಾಶ ಸಿಕ್ಕಿದಾಗಲೆಲ್ಲ ಸಮಸ್ಯೆಗಳನ್ನು ಹೈಲೈಟ್ ಮಾಡಲು ನಾವು ಅವಕಾಶವನ್ನು ಬಳಸುತ್ತೇವೆ” ಎಂದು ನಾಯಕರೊಬ್ಬರು ಹೇಳಿದ್ದಾರೆ.

ಇದನ್ನೂ ಓದಿ: ಅತ್ಯಾಚಾರ ಸಂತ್ರಸ್ತೆಯ ಪೋಷಕರ ಫೋಟೊ ಶೇರ್ ಮಾಡಿದ ರಾಹುಲ್ ವಿರುದ್ಧ ಕ್ರಮಕ್ಕೆ ಎನ್​​​ಸಿಪಿಸಿಆರ್ ಒತ್ತಾಯ 

ಇದನ್ನೂ ಓದಿ: ಸಿಎಂ ಬೊಮ್ಮಾಯಿಗೆ ಎದುರಾಗಲಿದೆ ಚುನಾವಣೆ ಸವಾಲು; ಪಾಲಿಕೆ, ನಗರಸಭೆಗಳಿಗೆ ಚುನಾವಣೆ ಘೋಷಿಸಿ ಎಂದ ಹೈಕೋರ್ಟ್

(Government was trying to divide the Opposition alleges TMC after suspension the partys six MPs)