ಮಾಜಿ ಸಚಿವ ರಾಮ್ ವಿಲಾಸ್ ಪಾಸ್ವಾನ್​​ಗೆ ನೀಡಲಾದ ಬಂಗಲೆಯಿಂದ ಮಗ ಚಿರಾಗ್ ಪಾಸ್ವಾನ್​​ನ್ನು ತೆರವು ಮಾಡಿಸಲು ತಂಡ ಕಳುಹಿಸಿದ ಸರ್ಕಾರ

| Updated By: ರಶ್ಮಿ ಕಲ್ಲಕಟ್ಟ

Updated on: Mar 30, 2022 | 7:01 PM

ಈ ಬಂಗಲೆಯನ್ನು ಚಿರಾಗ್ ಅವರ ತಂದೆ ಮತ್ತು ಮಾಜಿ ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ ಅವರಿಗೆ ನೀಡಲಾಯಿತು. ಕಳೆದ ವರ್ಷ ಆಗಸ್ಟ್‌ನಲ್ಲಿ ಇದನ್ನು ಒಡಿಶಾದ ಬಿಜೆಪಿ ರಾಜ್ಯಸಭಾ ಸಂಸದರೂ ಆಗಿರುವ ಕೇಂದ್ರ ರೈಲ್ವೆ ಮತ್ತು ಐಟಿ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ನೀಡಲಾಯಿತು.

ಮಾಜಿ ಸಚಿವ ರಾಮ್ ವಿಲಾಸ್ ಪಾಸ್ವಾನ್​​ಗೆ ನೀಡಲಾದ ಬಂಗಲೆಯಿಂದ ಮಗ ಚಿರಾಗ್ ಪಾಸ್ವಾನ್​​ನ್ನು ತೆರವು ಮಾಡಿಸಲು ತಂಡ ಕಳುಹಿಸಿದ ಸರ್ಕಾರ
ಚಿರಾಗ್ ಪಾಸ್ವಾನ್
Follow us on

ದೆಹಲಿ:   ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ ಡೈರೆಕ್ಟರೇಟ್ ಆಫ್ ಎಸ್ಟೇಟ್ (DoE), ಲೋಕ ಜನಶಕ್ತಿ ಪಕ್ಷದ (LJP) ಅಧ್ಯಕ್ಷ ಚಿರಾಗ್ ಪಾಸ್ವಾನ್  (Chirag Paswan) ಅವರು ಆಕ್ರಮಿಸಿಕೊಂಡಿರುವ ಬಂಗಲೆಯನ್ನು ತೆರವು ಮಾಡಲು ಬುಧವಾರ ಅಧಿಕಾರಿಗಳ ತಂಡವನ್ನು ನವದೆಹಲಿಯ 12 ಜನಪಥ್‌ಗೆ ಕಳುಹಿಸಿದೆ. ಕಳೆದ ವರ್ಷ ತೆರವು ಆದೇಶ ಹೊರಡಿಸಿದ ನಂತರ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ಮೂಲಗಳ ಪ್ರಕಾರ ಬಿಜೆಪಿ ಲೋಕಸಭಾ ಸಂಸದ ರಾಮ್ ಶಂಕರ್ ಕಥೇರಿಯಾ ಅವರನ್ನು 7 ಮೋತಿ ಲಾಲ್ ನೆಹರು ಮತ್ತು ಬಿಜೆಪಿ ಸಚಿವ ಪಿ ಸಿ ಸಾರಂಗಿ ಅವರನ್ನು 10 ಪಂಡಿತ್ ಪಂತ್ ಮಾರ್ಗದಿಂದ ತೆಗೆದುಹಾಕಿರುವ ಎಸ್ಟೇಟ್ ನಿರ್ದೇಶಕರಿಂದ ಮೂರು ದಿನಗಳಲ್ಲಿ ಇದು ಮೂರನೇ ತೆರವು ಕಾರ್ಯ ಆಗಿದೆ. ಅಧಿಕಾರಿಯೊಬ್ಬರು ತೆರವು ಮಾಡುವುದಕ್ಕಾಗಿ ನೋಟಿಸ್‌ಗಳನ್ನು ಅನುಸರಿಸಿ ತಂಡವನ್ನು ಕಳುಹಿಸುವುದು ನಿಯಮಿತ ಕಾರ್ಯವಿಧಾನವಾಗಿದೆ. ಚಿರಾಗ್ ಪಾಸ್ವಾನ್ ಅವರಿಗೆ ಮಂಜೂರಾಗಿರುವ ಸಂಸದರ ಫ್ಲಾಟ್‌ನಲ್ಲಿ ಈಗಾಗಲೇ ವಾಸವಿದ್ದು, 12 ಜನಪಥ್ ಈಗಾಗಲೇ ಮಂಜೂರು ಮಾಡಿರುವುದರಿಂದ ಕಳೆದ ವರ್ಷ ತೆರವು ಮಾಡಬೇಕಿತ್ತು. ಮೂರು ದಿನಗಳಲ್ಲಿ ಇದು ಮೂರನೇ ತೆರವು ಆಗಿದ್ದು, ಬಂಗಲೆಗಳ ನಿವಾಸಿಗಳು ಸಂಸದರ ಫ್ಲ್ಯಾಟ್‌ಗಳಿಗೆ ತೆರಳಲಿದ್ದಾರೆ.

ಈ ಬಂಗಲೆಯನ್ನು ಚಿರಾಗ್ ಅವರ ತಂದೆ ಮತ್ತು ಮಾಜಿ ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ ಅವರಿಗೆ ನೀಡಲಾಯಿತು. ಕಳೆದ ವರ್ಷ ಆಗಸ್ಟ್‌ನಲ್ಲಿ ಇದನ್ನು ಒಡಿಶಾದ ಬಿಜೆಪಿ ರಾಜ್ಯಸಭಾ ಸಂಸದರೂ ಆಗಿರುವ ಕೇಂದ್ರ ರೈಲ್ವೆ ಮತ್ತು ಐಟಿ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ನೀಡಲಾಯಿತು. ಆಗಸ್ಟ್ 2021 ರಲ್ಲಿ, ಕೇಂದ್ರವು ಲೋಕಸಭೆಯ ಸಂಸದ ಚಿರಾಗ್ ಪಾಸ್ವಾನ್ ಮತ್ತು 12 ಜನಪಥ್ ಬಂಗಲೆಯ ಇತರ ನಿವಾಸಿಗಳಿಗೆ ವಸತಿ ತೆರವು ಮಾಡಲು ಸೂಚನೆ ನೀಡಿತ್ತು.

ಬಂಗಲೆಯು ಲೋಕ ಜನಶಕ್ತಿ ಪಕ್ಷದ (ಎಲ್‌ಜೆಪಿ) ಅಧಿಕೃತ ವಿಳಾಸವಾಗಿತ್ತು, ಅದು ನಿಯಮಿತವಾಗಿ ತನ್ನ ಸಾಂಸ್ಥಿಕ ಸಭೆಗಳನ್ನು ಮತ್ತು ಇತರ ಸಂಬಂಧಿತ ಕಾರ್ಯಕ್ರಮಗಳನ್ನು ಅಲ್ಲಿ ನಡೆಸುತ್ತಿತ್ತು. ರಾಮ್ ವಿಲಾಸ್ ಪಾಸ್ವಾನ್ ಅವರು ಅಕ್ಟೋಬರ್ 2020 ರಲ್ಲಿ ನಿಧನರಾಗುವವರೆಗೆ ಸುಮಾರು ಮೂರು ದಶಕಗಳ ಕಾಲ ಬಂಗಲೆಯಲ್ಲಿ ಇದ್ದರು.

ಈ ಬಂಗಲೆಯನ್ನು ಕೇಂದ್ರ ಸಚಿವರಿಗೆ ಮೀಸಲಿಡಲಾಗಿದ್ದು, ಸರ್ಕಾರಿ ವಸತಿ ಗೃಹದ ನಿವಾಸಿಗಳು ಅದನ್ನು ಖಾಲಿ ಮಾಡುವಂತೆ ತಿಳಿಸಲಾಗಿದೆ ಎಂದು ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ: ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್​ ಮನೆಯೆದುರು ಬಿಜೆಪಿ ಬೆಂಬಲಿಗರ ಪ್ರತಿಭಟನೆ; ತೇಜಸ್ವಿ ಸೂರ್ಯ ಮುಂದಾಳತ್ವ, ಗೇಟ್ ಧ್ವಂಸ