ಹಿಂದೂ ಆಧ್ಯಾತ್ಮಿಕ ಗುರುಗಳ ಭಾಷಣ ಬಹಿಷ್ಕರಿಸಲು ಕೇರಳ ವಿದ್ಯುತ್ ಮಂಡಳಿ ನೌಕರರ ನಿರ್ಧಾರ
ನಿರ್ದಿಷ್ಟ ನಂಬಿಕೆಯನ್ನು ಅನುಸರಿಸುವ ಆಧ್ಯಾತ್ಮಿಕ ಗುರುಗಳನ್ನು ಕೆಎಸ್‌ಇಬಿಯಂತಹ ಸಾರ್ವಜನಿಕ ವಲಯದ ಸಂಸ್ಥೆಗೆ ಆಹ್ವಾನಿಸುವುದು ಸೂಕ್ತವಲ್ಲ ಎಂದು ನೌಕರರ ಸಂಘ ಹೇಳಿದೆ.
ಕೇರಳ ರಾಜ್ಯ ವಿದ್ಯುಚ್ಛಕ್ತಿ ಮಂಡಳಿ (KSEB) ಆಡಳಿತವು “ತನ್ನ ಉದ್ಯೋಗಿಗಳ ಒತ್ತಡವನ್ನು ಕಡಿಮೆ ಮಾಡಲು” ಆಯೋಜಿಸಿದ್ದ ಕಾರ್ಯಕ್ರಮವ ಈಗ ಒತ್ತಡ ತಂದೊಡ್ಡುವ ಕಾರ್ಯದಂತಾಗಿದೆ. ಗುರುವಾರ ನಿಗದಿಯಾಗಿದ್ದ ‘ಒತ್ತಡ ಮುಕ್ತ ಜೀವನ ಮತ್ತು ಯೋಗ ವಿಜ್ಞಾನದ ಮೂಲಕ ಪರಿಪೂರ್ಣ ಕೆಲಸ’ ಎಂಬ ವಿಷಯದ ಕುರಿತು ಆಧ್ಯಾತ್ಮಿಕ ನಾಯಕ ಶ್ರೀ ಎಂ ಅವರ ಭಾಷಣವನ್ನು ಬಹಿಷ್ಕರಿಸಲು ನೌಕರರ ವೇದಿಕೆಯ ಒಂದು ವಿಭಾಗವು ನಿರ್ಧರಿಸಿದೆ. ನಿರ್ದಿಷ್ಟ ನಂಬಿಕೆಯನ್ನು ಅನುಸರಿಸುವ ಆಧ್ಯಾತ್ಮಿಕ ಗುರುಗಳನ್ನು ಕೆಎಸ್‌ಇಬಿಯಂತಹ ಸಾರ್ವಜನಿಕ ವಲಯದ ಸಂಸ್ಥೆಗೆ ಆಹ್ವಾನಿಸುವುದು ಸೂಕ್ತವಲ್ಲ ಎಂದು ನೌಕರರ ಸಂಘ ಹೇಳಿದೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ (Pinarayi Vijayan) ಅಂದೊಮ್ಮೆ ಶ್ರೀ ಎಂ ಅವರನ್ನು ಒಂದು ನಿರ್ದಿಷ್ಟ ಗುಂಪಿನ ಪರವಾಗಿ ನಿಲ್ಲದ ‘ಜಾತ್ಯತೀತ ಆಧ್ಯಾತ್ಮಿಕ ನಾಯಕ’ ಎಂದು ಬಣ್ಣಿಸಿದ್ದರು. ವಾಸ್ತವವಾಗಿ, ಕಳೆದ ವರ್ಷ ಇಬ್ಬರ ನಡುವೆ ರಾಜಕೀಯ ಹಿಂಸಾಚಾರ ಉಲ್ಬಣಗೊಂಡಾಗ ಸಿಪಿಐ(ಎಂ) ಮತ್ತು ಆರ್‌ಎಸ್‌ಎಸ್ ನಡುವಿನ ಶಾಂತಿ ಮಾತುಕತೆಯ ಮಧ್ಯವರ್ತಿ ಶ್ರೀ ಎಂ ಆಗಿದ್ದರು. ಬುಧವಾರ ತರಾತುರಿಯಲ್ಲಿ ಕರೆಯಲಾದ ಆನ್‌ಲೈನ್ ಸಭೆಯ ನಂತರ, ಸಿಐಟಿಯುಗೆ ಸಂಯೋಜಿತವಾಗಿರುವ ಕೆಎಸ್‌ಇಬಿ ವರ್ಕರ್ಸ್ ಅಸೋಸಿಯೇಷನ್ ವಿವಿಧ ಧಾರ್ಮಿಕ ನಂಬಿಕೆಗಳ ನೌಕರರು ಕೆಲಸ ಮಾಡುತ್ತಿರುವ ಸರ್ಕಾರಿ ಸಂಸ್ಥೆಗೆ ಆಧ್ಯಾತ್ಮಿಕ ಗುರುಗಳನ್ನು ಆಹ್ವಾನಿಸುವ ಕ್ರಮವನ್ನು ವಿರೋಧಿಸಿ ಹೇಳಿಕೆಯನ್ನು ನೀಡಿತು. ನೌಕರರ ಪ್ರತಿಭಟನೆಯ ನಂತರ ಈ ಹಿಂದೆಯೂ ಇದೇ ಕ್ರಮದಿಂದ ಆಡಳಿತ ಮಂಡಳಿ ಹಿಂದೆ ಸರಿದಿತ್ತು ಎಂದು ಅವರು ಹೇಳಿದ್ದಾರೆ. ಏಕಪಕ್ಷೀಯ ನಿರ್ಧಾರವನ್ನು ಹಿಂಪಡೆಯುವಂತೆ ಕೆಎಸ್‌ಇಬಿ ಆಡಳಿತ ಮಂಡಳಿಗೆ ಸೂಚಿಸಿದೆ. ಇಲ್ಲದಿದ್ದರೆ, ನಾವು ಕಾರ್ಯಕ್ರಮವನ್ನು ಅನ್ನು ಬಹಿಷ್ಕರಿಸುತ್ತೇವೆ ಎಂದು ಕೆಎಸ್ ಇಬಿಡಬ್ಲ್ಯುಎ (KSEBWA) ಹೇಳಿಕೆಯಲ್ಲಿ ತಿಳಿಸಿದೆ.
ಇಲ್ಲಿಯವರೆಗೆ KSEBWA ಮಾತ್ರ ಈ ವಿಷಯದ ಬಗ್ಗೆ ಸಾರ್ವಜನಿಕ ಹೇಳಿಕೆಯನ್ನು ನೀಡಿದೆ. ಕೊನೆ ಗಳಿಗೆಯಲ್ಲಿ ಮಾತ್ರ ಈ ನಿರ್ಧಾರದ ಬಗ್ಗೆ ತಿಳಿಸಲಾಗಿದ್ದು, ಮೊದಲು ಸಭೆ ನಡೆಸಿ ತೀರ್ಮಾನ ಕೈಗೊಳ್ಳುವ ಅಗತ್ಯವಿದೆ ಎಂದು ಸಂಘದ ಇತರೆ ಪ್ರತಿನಿಧಿಗಳು ತಿಳಿಸಿದ್ದಾರೆ.
ಯೂನಿಯನ್ ಸದಸ್ಯರೊಬ್ಬರು ನ್ಯೂಸ್ 9 ಗೆ ಶ್ರೀ ಎಂ ಬಗ್ಗೆ ಯಾವುದೇ ಅಭ್ಯಂತರವಿಲ್ಲ. “ಅವರು ಸಮಾಜಕ್ಕಾಗಿ ಮಾಡುತ್ತಿರುವ ಕೆಲಸವನ್ನು ನಾವು ಗೌರವಿಸುತ್ತೇವೆ ಎಂದಿದ್ದಾರೆ. ಆದರೆ ಆಡಳಿತವು ನಮ್ಮೊಂದಿಗೆ ಸಮಾಲೋಚಿಸದೆ ಇಂತಹ ಏಕಪಕ್ಷೀಯ ನಿರ್ಧಾರಗಳನ್ನು ತೆಗೆದುಕೊಳ್ಳಬಾರದು. ಒಂದು ವಿಭಾಗವು ಆಧ್ಯಾತ್ಮಿಕ ನಾಯಕರ ಪರವಾಗಿ ಒಲವು ತೋರಿದರೆ ನಿರ್ದಿಷ್ಟ ಸಮುದಾಯದ ಇತರರಿಗೂ ಬಾಗಿಲು ತೆರೆಯಬೇಕು. ಅದು ಅಂತಿಮವಾಗಿ ಬಿರುಕುಗಳನ್ನು ಸೃಷ್ಟಿಸುತ್ತದೆ. ಈ ಹಿಂದೆ ಮಹಿಳಾ ಉದ್ಯೋಗಿಗಳಿಗೆ ತರಗತಿ ನಡೆಸಲು ಇನ್ನೊಂದು ಆಧ್ಯಾತ್ಮಿಕ ಸಂಸ್ಥೆ ‘ಬ್ರಹ್ಮ ಕುಮಾರೀಸ್’ ಅನ್ನು ಆಹ್ವಾನಿಸಲು ಆಡಳಿತ ಮಂಡಳಿ ನಿರ್ಧಾರ ಕೈಗೊಂಡಿತ್ತು. ಪ್ರತಿಭಟನೆಯ ನಂತರ ಅದನ್ನು ಹಿಂಪಡೆಯಲಾಯಿತು. ಅವರು ಉದ್ಯೋಗಿಗಳಲ್ಲಿನ ಒತ್ತಡದ ಸಮಸ್ಯೆಯನ್ನು ಪರಿಹರಿಸಲು ಬಯಸಿದರೆ, ಅವರು ವೈಜ್ಞಾನಿಕ ರೀತಿಯಲ್ಲಿ ಹೋಗಬೇಕು ಮತ್ತು ವೈದ್ಯರು ಮತ್ತು ಮನಶ್ಶಾಸ್ತ್ರಜ್ಞರನ್ನು ಆಹ್ವಾನಿಸಬೇಕು ಎಂದು ಅವರು ಹೇಳಿದರು. ಈ ಬಗ್ಗೆ ಪ್ರತಿಕ್ರಿಯಿಸಲು ಕೆಎಸ್‌ಇಬಿ ಅಧ್ಯಕ್ಷ ಬಿ ಅಶೋಕ್ ಸಿಗಲಿಲ್ಲ.