Banjara hills: ಛೇ ಇವನೆಂಥಾ ಮನುಷ್ಯ.. ಮದ್ಯ ಕುಡಿಯುವುದಕ್ಕೆ ಹಣ ಕೊಡಲಿಲ್ಲ ಎಂದು ಮೊಮ್ಮಗನನ್ನೇ ಮಾರಿಬಿಟ್ಟಿದ್ದಾನೆ!

|

Updated on: May 17, 2023 | 2:37 PM

ಮನೆಯಲ್ಲಿ ಮೊಮ್ಮಗು ಸಂಭ್ರಮ, ಕೆಲಸಗಳು ನಡೆಯುತ್ತಿದ್ದಾಗ ಖಲೀಲ್ ಸದ್ದು ಮಾಡದೆ ಮೊಮ್ಮಗನನ್ನು ಎತ್ತಿಕೊಂಡು ಹೊರಹೋಗಿದ್ದಾನೆ. ಕೊನೆಗೆ ಆ ಮಗುವನ್ನು ದಾರಿಯಲ್ಲಿ ಯಾರಿಗೋ ಮಾರಿ ಬಂದ ಹಣದಲ್ಲಿ ಮದ್ಯ ಸೇವಿಸಿದ್ದಾನೆ.

Banjara hills: ಛೇ ಇವನೆಂಥಾ ಮನುಷ್ಯ.. ಮದ್ಯ ಕುಡಿಯುವುದಕ್ಕೆ ಹಣ ಕೊಡಲಿಲ್ಲ ಎಂದು ಮೊಮ್ಮಗನನ್ನೇ ಮಾರಿಬಿಟ್ಟಿದ್ದಾನೆ!
ಕುಡಿಯುವುದಕ್ಕೆ ಹಣ ಕೊಡಲಿಲ್ಲ ಎಂದು ಮೊಮ್ಮಗನನ್ನೇ ಮಾರಿಬಿಟ್ಟಿದ್ದಾನೆ!
Follow us on

ಹೈದರಾಬಾದ್‌ನ ಬಂಜಾರಾ ಹಿಲ್ಸ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಮಾನವೀಯ ಘಟನೆ ನಡೆದಿದೆ. ಕುಡಿತದ ಚಟಕ್ಕೆ ಬಿದ್ದ ವ್ಯಕ್ತಿಯೊಬ್ಬ ತನ್ನ ಮೊಮ್ಮಗನನ್ನೇ ಮದ್ಯಕ್ಕಾಗಿ ಮಾರಾಟ ಮಾಡಿರುವ ಆಘಾತಕಾರಿ ಪ್ರಸಂಗ ನಡೆದಿದೆ. ವಿವರಕ್ಕೆ ಹೋಗುವುದಾದರೆ ಹಕೀಂಪೇಟೆಯಲ್ಲಿ ಖಲೀಲ್ (40) ಎಂಬುವರು ವಾಸವಾಗಿದ್ದಾರೆ. ಕುಡಿತದ ವ್ಯಸನಿಯಾಗಿದ್ದ ಖಲೀಲ್, ಆಗಾಗ ಪತ್ನಿ ಹಾಗೂ ಕುಟುಂಬಸ್ಥರೊಂದಿಗೆ ಜಗಳವಾಡುತ್ತಿದ್ದ. ಸದಾ ಮದ್ಯ ಸೇವಿಸಿ ಸೋಮಾರಿಯಾಗಿ ಓಡಾಡುತ್ತಿದ್ದನಂತೆ. ಕುಟುಂಬ ಸದಸ್ಯರಿಗೆ ಕುಡಿಯಲು ಹಣ ನೀಡುವಂತೆ ಕಿರುಕುಳ ನೀಡುತ್ತಿದ್ದ. ಹಣ ಕೊಡಲು ಒಪ್ಪದಿದ್ದರೆ ಮನೆಯಲ್ಲಿದ್ದ ಸಾಮಾನುಗಳನ್ನು ಮಾರಿ ಮದ್ಯಪಾನ ಮಾಡುತ್ತಿದ್ದ.

ಇದೇ ಸಮಯದಲ್ಲಿ ಖಲೀಲ್ ಮಗಳು ಹೆರಿಗೆಗೆಂದು ತವರಿಗೆ ಬಂದಿದ್ದಳು. ಇತ್ತೀಚೆಗೆ ಗಂಡು ಮಗು ಜನಿಸಿತ್ತು. ಈ ನಡುವೆ ಎರಡು ದಿನಗಳ ಹಿಂದೆ ಹಣದ ವಿಚಾರವಾಗಿ ಖಲೀಲ್ ಮಗಳು, ಮೊಮ್ಮಗನ ಸಮ್ಮುಖದಲ್ಲಿಯೇ ಮನೆಯಲ್ಲಿ ಜಗಳವಾಡಿಕೊಂಡಿದ್ದ. ಕುಟುಂಬದವರು ತಮ್ಮ ಬಳಿ ಹಣವಿಲ್ಲ ಎಂದು ಹೇಳಿದಾಗ ಖಲೀಲ್ ಕೋಪಗೊಂಡಿದ್ದ.

ಮನೆಯಲ್ಲಿ ಮೊಮ್ಮಗು ಸಂಭ್ರಮ, ಕೆಲಸಗಳು ನಡೆಯುತ್ತಿದ್ದಾಗ ಖಲೀಲ್ ಸದ್ದು ಮಾಡದೆ ಮೊಮ್ಮಗನನ್ನು ಎತ್ತಿಕೊಂಡು ಹೊರಹೋಗಿದ್ದಾನೆ. ಕೊನೆಗೆ ಆ ಮಗುವನ್ನು ದಾರಿಯಲ್ಲಿ ಯಾರಿಗೋ ಮಾರಿ ಬಂದ ಹಣದಲ್ಲಿ ಮದ್ಯ ಸೇವಿಸಿದ್ದಾನೆ. ಅದೇ ವೇಳೆ ಮನೆಯಲ್ಲಿದ್ದ ಮಗು ನಾಪತ್ತೆಯಾದ ಕಾರಣ ಕುಟುಂಬಸ್ಥರು ಸುತ್ತಮುತ್ತ ಹುಡುಕಾಡಿದ್ದಾರೆ.

ಎಲ್ಲೂ ಮಗ ಪತ್ತೆಯಾಗದಿದ್ದಾಗ ಖಲೀಲ್ ಪುತ್ರಿ ಪೊಲೀಸರಿಗೆ ದೂರು ನೀಡಿದ್ದಾಳೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದು ಸತ್ಯಾಂಶ ಹೊರಬಿದ್ದಿದೆ. ಖಲೀಲ್ ತನ್ನ ಮೊಮ್ಮಗನನ್ನು ಮಾರಿದ್ದಾಗಿ ಒಪ್ಪಿಕೊಂಡಿದ್ದಾನೆ. ಆತ ಹೇಳಿದ ಮೇಲೆ ಪೊಲೀಸರು ಮಗುವಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಮದ್ಯದ ಹಣಕ್ಕಾಗಿ ತನ್ನ ಮೊಮ್ಮಗನನ್ನೇ ಮಾರಾಟ ಮಾಡಿದ ಖಲೀಲ್ ಮೇಲೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:35 pm, Wed, 17 May 23