ಭಾರತ ಚಿನ್ನದ ಗಣಿಯಂತೆ, ಇಲ್ಲಿಯೇ ಹಸಿರು ಇಂಧನದ ಮೇಲೆ ಹೂಡಿಕೆ ಮಾಡಿ: ಪ್ರಧಾನಿ ಮೋದಿ ಆಹ್ವಾನ

|

Updated on: Feb 23, 2023 | 12:19 PM

ಭಾರತ ಒಂದು ಚಿನ್ನದ ಗಣಿ ಇದ್ದಂತೆ, ಇಲ್ಲಿಯೇ ಹಸಿರು ಇಂಧನ ಕ್ಷೇತ್ರದ ಮೇಲೆ ಹೂಡಿಕೆ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಹೂಡಿಕೆದಾರರನ್ನು ಆಹ್ವಾನಿಸಿದ್ದಾರೆ.

ಭಾರತ ಚಿನ್ನದ ಗಣಿಯಂತೆ, ಇಲ್ಲಿಯೇ ಹಸಿರು ಇಂಧನದ ಮೇಲೆ ಹೂಡಿಕೆ ಮಾಡಿ: ಪ್ರಧಾನಿ ಮೋದಿ ಆಹ್ವಾನ
ನರೇಂದ್ರ ಮೋದಿ
Follow us on

ಭಾರತ ಒಂದು ಚಿನ್ನದ ಗಣಿ ಇದ್ದಂತೆ, ಇಲ್ಲಿಯೇ ಹಸಿರು ಇಂಧನ ಕ್ಷೇತ್ರದ ಮೇಲೆ ಹೂಡಿಕೆ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಹೂಡಿಕೆದಾರರನ್ನು ಆಹ್ವಾನಿಸಿದ್ದಾರೆ. ಹಸಿರು ಶಕ್ತಿಯಲ್ಲಿ ಭಾರತವು ಪ್ರಮುಖ ಪಾತ್ರ ವಹಿಸುತ್ತದೆ, ಭಾರತದಲ್ಲಿ ಹೂಡಿಕೆ ಮಾಡಲು ಎಲ್ಲಾ ಪಾಲುದಾರರನ್ನು ಆಹ್ವಾನಿಸುತ್ತೇನೆ ಎಂದರು. ದೇಶದಲ್ಲಿ ಸೌರ, ಪವನ ಶಕ್ತಿ ಮತ್ತು ಜೈವಿಕ ಅನಿಲದಂತಹ ನವೀಕರಿಸಬಹುದಾದ ಶಕ್ತಿಯ ಸಾಮರ್ಥ್ಯವು ಚಿನ್ನದ ಗಣಿಗಿಂತ ಕಡಿಮೆಯಿಲ್ಲ.

ಎಥೆನಾಲ್ ಮಿಶ್ರಣ, ಪಿಎಂ ಕುಸುಮ್ ಯೋಜನೆ, ಸೌರ ಉತ್ಪಾದನೆಯ ಉತ್ತೇಜನ, ಮೇಲ್ಛಾವಣಿ ಸೌರ ಯೋಜನೆ, ಕಲ್ಲಿದ್ದಲು ಅನಿಲೀಕರಣ, ಇವಿ ಬ್ಯಾಟರಿ ಸಂಗ್ರಹಣೆ ಸೇರಿದಂತೆ ಹಸಿರು ಅಭಿವೃದ್ಧಿಗೆ ಹಲವಾರು ಯೋಜನೆಗಳನ್ನು ರೂಪಸಿಲಾಗಿದೆ ಎಂದು ಪ್ರಧಾನಿ ಹೇಳಿದರು.

ಭಾರತವು ವಾರ್ಷಿಕವಾಗಿ 5 ಮಿಲಿಯನ್ ಟನ್ ಹಸಿರು ಹೈಡ್ರೋಜನ್ ಉತ್ಪಾದನೆಯ ಗುರಿಯನ್ನು ಹೊಂದಿದೆ, ಖಾಸಗಿ ವಲಯಕ್ಕೆ 19,000 ಕೋಟಿ ರೂಪಾಯಿ ಪ್ರೋತ್ಸಾಹಕವನ್ನು ಒದಗಿಸಲಾಗಿದೆ ಎಂದು ಹೇಳಿದರು. ಸರ್ಕಾರವು ಜೈವಿಕ ಇಂಧನದ ಮೇಲೆ ಹೆಚ್ಚು ಗಮನಹರಿಸಿದೆ ಮತ್ತು ಇದು ಹೂಡಿಕೆದಾರರಿಗೆ ಸಾಕಷ್ಟು ಅವಕಾಶವನ್ನು ಒದಗಿಸುತ್ತದೆ ಎಂದು ಅವರು ಹೇಳಿದರು.

ಮತ್ತಷ್ಟು ಓದಿ: PM Kisan Yojana: ಬೆಳಗಾವಿಯಲ್ಲಿ ಪ್ರಧಾನಿ ಮೋದಿಯಿಂದ ರೈತರ ಖಾತೆಗೆ ಕಿಸಾನ್ ಸಮ್ಮಾನ್ ನಿಧಿ 13ನೇ ಕಂತು ವಿತರಣೆ: ಸಚಿವೆ ಶೋಭಾ ಕರಂದ್ಲಾಜೆ ಪ್ರಕಟ

ನಾವು 40 ಪ್ರತಿಶತ ಪಳೆಯುಳಿಕೆ ರಹಿತ ಇಂಧನದಲ್ಲಿ 9 ವರ್ಷಗಳ ಹಿಂದಿನ ಗುರಿಯನ್ನು ಸಾಧಿಸಿದ್ದೇವೆ ಎಂದು ಹೇಳಿದರು. ಭಾರತವು ಬ್ಯಾಟರಿ ಶೇಖರಣಾ ಸಾಮರ್ಥ್ಯವನ್ನು 125 ಗಿಗಾ-ವ್ಯಾಟ್ಸ್ ಗಂಟೆಗೆ ಹೆಚ್ಚಿಸಬೇಕಾಗಿದೆ ಎಂದರು.

15 ವರ್ಷಕ್ಕಿಂತ ಹಳೆಯದಾದ ಸುಮಾರು 300,000 ಸರ್ಕಾರಿ ವಾಹನಗಳನ್ನು ರದ್ದುಗೊಳಿಸಲಾಗುವುದು, 2023 ರ ಕೇಂದ್ರ ಬಜೆಟ್‌ನಲ್ಲಿ ವಾಹನ ಸ್ಕ್ರ್ಯಾಪಿಂಗ್‌ಗೆ 3,000 ಕೋಟಿ ರೂ.ಗಳನ್ನು ನಿಗದಿಪಡಿಸಲಾಗಿದೆ ಎಂದು ಅವರು ಹೇಳಿದರು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ