ಮುಂದಿನ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯನ್ನು ಸೋಲಿಸಬಹುದೇ?; ರಾಹುಲ್ ಗಾಂಧಿ ಉತ್ತರ ಹೀಗಿದೆ
Rahul Gandhi ಫ್ಯಾಸಿಸಂ ಈಗಾಗಲೇ ಇದೆ. ಪ್ರಜಾಸತ್ತಾತ್ಮಕ ರಚನೆಗಳು ಕುಸಿಯುತ್ತವೆ. ಸಂಸತ್ತು ಇನ್ನು ಕೆಲಸ ಮಾಡುತ್ತಿಲ್ಲ. ನನಗೆ ಎರಡು ವರ್ಷಗಳಿಂದ ಮಾತನಾಡಲು ಸಾಧ್ಯವಾಗಲಿಲ್ಲ, ನಾನು ಮಾತನಾಡಿದ ತಕ್ಷಣ ಅವರು ನನ್ನ ಮೈಕ್ರೊಫೋನ್ ಅನ್ನು ತೆಗೆದುಹಾಕುತ್ತಾರೆ ಎಂದು ರಾಹುಲ್ ಹೇಳಿದ್ದಾರೆ.
ಇಟಲಿಯ ದಿನಪತ್ರಿಕೆ ಕೊರಿಯೆರೆ ಡೆಲ್ಲಾ ಸೆರಾಗೆ ನೀಡಿದ ಅಪರೂಪದ ಸಂದರ್ಶನದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi)ಅವರು ‘ಭಾರತ್ ಜೋಡೋ ಯಾತ್ರೆ’ (Bharat Jodo Yatra)ಸಂದರ್ಭದಲ್ಲಿ ತಮ್ಮ ಅನುಭವ, ಮುಂದಿನ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯನ್ನು(Narendra Modi) ಹೇಗೆ ಸೋಲಿಸಬಹುದು ಎಂಬುದರ ಬಗ್ಗೆ,ಅಜ್ಜಿ ಇಂದಿರಾ ಗಾಂಧಿ ಮತ್ತು ತಂದೆ ರಾಜೀವ್ ಗಾಂಧಿ ಅವರೊಂದಿಗಿನ ಸಿಹಿ ನೆನಪುಗಳನ್ನು ಮತ್ತು 52 ವರ್ಷ ವಯಸ್ಸಿನಲ್ಲೂ ತಾವು ಯಾಕೆ ಒಂಟಿ ಎಂಬುದರ ಬಗ್ಗೆ ವಿವರಿಸಿದ್ದಾರೆ.
ಯಾತ್ರೆಯನ್ನು ಪೂರ್ಣಗೊಳಿಸಿದ ನಂತರ ತಾನು ಏನೇನು ಕಲಿತಿದ್ದೇನೆ ಎಂಬುದನ್ನು ವಿವರಿಸಿದ ರಾಹುಲ್, ಈ ಪ್ರಯಾಣವು ಒಂದು ‘ತಪಸ್ಯ’ (ತ್ಯಾಗ) ದಂತಿದೆ ಎಂದು ಹೇಳಿದ್ದಾರೆ. ಪ್ರತಿಯೊಬ್ಬರ ಮಿತಿಗಳು, ನನ್ನನ್ನೂ ಒಳಗೊಂಡಂತೆ, ನಾವು ಯೋಚಿಸುವುದಕ್ಕಿಂತ ದೂರವಿದೆ. ಪ್ರಪಂಚದ ಅತ್ಯಂತ ಹಳೆಯ ಭಾಷೆಯಾದ ಸಂಸ್ಕೃತದಲ್ಲಿ ತಪಸ್ಯ ಎಂಬ ಪದವಿದೆ, ಇದು ಪಾಶ್ಚಾತ್ಯ ಮನಸ್ಸಿಗೆ ಅರ್ಥಮಾಡಿಕೊಳ್ಳಲು ಕಷ್ಟಕರ. ಯಾರೋ ಅದನ್ನು “ತ್ಯಾಗ”, “ತಾಳ್ಮೆ” ಎಂದು ಅನುವಾದಿಸುತ್ತಾರೆ, ಆದರೆ ಅರ್ಥ ಬೇರೆ, ಚೈತನ್ಯ ಉತ್ಪಾದಿಸುವುದು ಎಂದು. ಈ ಪಾದಯಾತ್ರೆ ಚೈತನ್ಯವವನ್ನು ಹುಟ್ಟುಹಾಕುವ ಕ್ರಿಯೆಯಾಗಿದೆ. ಇದು ನಿಮ್ಮನ್ನು ನಿಮ್ಮೊಳಗೆ ನೋಡುವಂತೆ ಮಾಡುತ್ತದೆ, ಭಾರತೀಯರ ಅಸಾಧಾರಣ ಸ್ಥಿತಿಸ್ಥಾಪಕತ್ವವನ್ನು ನೀವು ಅರ್ಥಮಾಡಿಕೊಳ್ಳುವಂತೆ ಮಾಡುತ್ತದೆ.
ಹಿಂದೂಗಳು ಮತ್ತು ಮುಸ್ಲಿಮರ ನಡುವೆ ಧ್ರುವೀಕರಣ ಅಸ್ತಿತ್ವದಲ್ಲಿದೆಯೇ ಎಂಬ ಪ್ರಶ್ನೆಗೆ, ರಾಹುಲ್, ಅದು ಇದೆ, ಆದರೆ ಸರ್ಕಾರದ ಅಧೀನದಲ್ಲಿ ಮಾಧ್ಯಮಗಳು ಬಿಂಬಿಸುವಷ್ಟು ಪರಿಸ್ಥಿತಿಗಳು ಭೀಕರವಾಗಿಲ್ಲ. ಇದು ‘ಬಡತನ, ಅನಕ್ಷರತೆ, ಹಣದುಬ್ಬರ, ಉದ್ಯಮಿಗಳು ಮತ್ತು ಭೂರಹಿತ ರೈತರ ಕೋವಿಡ್ ನಂತರದ ಬಿಕ್ಕಟ್ಟು’ ಮುಂತಾದ ಹೆಚ್ಚು ಭಯಾನಕ ನೈಜ ಸಮಸ್ಯೆಗಳಿಂದ ಜನರನ್ನು ಬೇರೆಡೆಗೆ ಸೆಳೆಯುವ ಸಾಧನವಾಗಿದೆ.
ಫ್ಯಾಸಿಸಂ ಈಗಾಗಲೇ ಇದೆ. ಪ್ರಜಾಸತ್ತಾತ್ಮಕ ರಚನೆಗಳು ಕುಸಿಯುತ್ತವೆ. ಸಂಸತ್ತು ಇನ್ನು ಕೆಲಸ ಮಾಡುತ್ತಿಲ್ಲ. ನನಗೆ ಎರಡು ವರ್ಷಗಳಿಂದ ಮಾತನಾಡಲು ಸಾಧ್ಯವಾಗಲಿಲ್ಲ, ನಾನು ಮಾತನಾಡಿದ ತಕ್ಷಣ ಅವರು ನನ್ನ ಮೈಕ್ರೊಫೋನ್ ಅನ್ನು ತೆಗೆದುಹಾಕುತ್ತಾರೆ. ಅಧಿಕಾರದ ಸಮತೋಲನವು ಆಫ್ ಆಗಿದೆ. ನ್ಯಾಯ ಸ್ವತಂತ್ರವಲ್ಲ. ಕೇಂದ್ರೀಕರಣವು ಸಂಪೂರ್ಣವಾಗಿದೆ. ಪತ್ರಿಕಾ ಮಾಧ್ಯಮವು ಇನ್ನು ಮುಂದೆ ಮುಕ್ತವಾಗಿಲ್ಲ ಎಂದಿದ್ದಾರೆ.
ಇದನ್ನೂ ಓದಿ: Turkey Earthquake: ನೀವು ನಮ್ಮ ಹೆಮ್ಮೆ: ಆಪರೇಷನ್ ದೋಸ್ತ್ನಲ್ಲಿ ಭಾಗಿಯಾದ NDRF ತಂಡವನ್ನು ಶ್ಲಾಘಿಸಿದ ಪ್ರಧಾನಿ ಮೋದಿ
ಮುಂದಿನ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸೋಲಿಸಲು ಸಾಧ್ಯವೇ ಎಂಬ ಪ್ರಶ್ನೆಗೆ ಉತ್ತರಿಸಿದ ರಾಹುಲ್, ಪ್ರತಿಪಕ್ಷಗಳ ಒಗ್ಗಟ್ಟಿನ ಮೇಲೆ ವಿಶ್ವಾಸ ವ್ಯಕ್ತಪಡಿಸಿದ್ದು ಪ್ರತಿಪಕ್ಷಗಳು ಒಗ್ಗೂಡಿದರೆ ಬಿಜೆಪಿ ಶೇ 100 ಸೋಲುತ್ತದೆ ಎಂದು ಹೇಳಿದ್ದಾರೆ. ಪ್ರಧಾನಿ ಮೋದಿಯನ್ನು ಸೋಲಿಸಬಹುದು ಎಂಬುದು ಖಚಿತ. ನೀವು ವಿರೋಧದ ದೃಷ್ಟಿಯಲ್ಲಿ ಹೇಳಿದರೆ ಬಲ ಅಥವಾ ಎಡ ಅಲ್ಲ. ಶಾಂತಿ ಮತ್ತು ಒಕ್ಕೂಟ ಪರ್ಯಾಯವನ್ನು ನೀಡುವ ಮೂಲಕ ಫ್ಯಾಸಿಸಂ ಅನ್ನು ಸೋಲಿಸಲಾಗುತ್ತದೆ. ಭಾರತದ ಎರಡು ದೃಷ್ಟಿಕೋನಗಳು ಮತದಾನದಲ್ಲಿ ಪರಸ್ಪರ ಮುಖಾಮುಖಿಗೊಂಡರೆ, ನಾವು ಮೇಲುಗೈ ಸಾಧಿಸಲು ಸಾಧ್ಯವಾಗುತ್ತದೆ.
ಆದಾಗ್ಯೂ, ರಷ್ಯಾ-ಉಕ್ರೇನ್ ಯುದ್ಧದ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡದ ರಾಹುಲ್, ಇದು ವಿದೇಶಾಂಗ ನೀತಿ ವಿಷಯವಾಗಿದೆ ಆದರೆ ‘ಶಾಂತಿಯುತ ಪರಿಹಾರಗಳ ಬಗ್ಗೆ ಯೋಚಿಸಬೇಕು ಎಂದಿದ್ದಾರೆ.ಭಾರತ-ಚೀನಾ ಸಂಬಂಧಗಳು ಹೇಗಿರಬೇಕು ಎಂಬುದರ ಕುರಿತು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ ರಾಹುಲ್, “ಶಾಂತಿಯುತ ಪೈಪೋಟಿ ಇರಬೇಕು. ಕೈಗಾರಿಕಾ ಮಟ್ಟದಲ್ಲಿ, ವಿಶೇಷವಾಗಿ ಕಡಿಮೆ-ಮೌಲ್ಯ-ವರ್ಧಿತ ಉತ್ಪಾದನೆಯಲ್ಲಿ ಪಶ್ಚಿಮವು ಚೀನಾದೊಂದಿಗೆ ಸ್ಪರ್ಧಾತ್ಮಕವಾಗಿರಬಹುದು ಎಂದು ನಾನು ಭಾವಿಸುವುದಿಲ್ಲ. ಭಾರತಕ್ಕೆ ಇದು ಸಾಧ್ಯ. ಜನರು ಮತ್ತೆ ಯಥಾಸ್ಥಿತಿಗೆ ಬರಲು ಹೀಗೆ ಮಾಡಬೇಕು.
ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರೊಂದಿಗಿನ ಸಂಬಂಧದ ಬಗ್ಗೆ ರಾಹುಲ್‌ಗೆ ಕೇಳಿದಾಗ, ನನಗೆ ಅವರ ಬಗ್ಗೆ ಹೆಚ್ಚು ಗೊತ್ತಿಲ್ಲ. ಆದರೆ ಅವರನ್ನು ನನ್ನ ‘ಮಾರ್ಗದರ್ಶಿ’ ಎಂದು ಪರಿಗಣಿಸಿರುವುದಾಗಿ ಹೇಳಿದ್ದಾರೆ. ಅಜ್ಜಿ ಇಂದಿರಾಗಾಂಧಿಯ ಬಗ್ಗೆ ಕೇಳಿದಾಗ ಆಕೆಯ ನೆಚ್ಚಿನ ವ್ಯಕ್ತಿ ನಾನು ಎಂಬುದೇ ಹೆಮ್ಮೆ ಎಂದಿದ್ದಾರೆ.
ಅಜ್ಜಿಯೊಂದಿಗ ದೃಢವಾದ ಬಾಂಧವ್ಯದ ಕಥೆಯನ್ನು ಹಂಚಿಕೊಂಡ ರಾಹುಲ್, “ನಾನು ಪಾಲಕ್ ಮತ್ತು ಬಟಾಣಿಗಳನ್ನು ದ್ವೇಷಿಸುತ್ತಿದ್ದೆ” ಆದರೆ ನನ್ನ ತಂದೆ ರಾಜೀವ್ ಕಟ್ಟುನಿಟ್ಟು. ಬಡಿಸಿದ ಅನ್ನವನ್ನು ಅಗುಳೂ ಬಿಡದೆ ಖಾಲಿ ಮಾಡುವಂತೆ ಹೇಳುತ್ತಿದ್ದರು. ಆಗ ನನ್ನ ಅಜ್ಜಿ ಪತ್ರಿಕೆ ತೆರೆದು ರಾಹುಲ್, ಇದು ಓದು ಎಂದು ನನಗೆ ಹೇಳುತ್ತಿದ್ದರು. ನಾನು ನನ್ನ ತಟ್ಟೆಯಲ್ಲಿದ್ದ ಪಾಲಕ್ ಅಥವಾ ಬಟಾಣಿಯನ್ನು ಅವರ ಪ್ಲೇಟ್ ಗೆ ಹಾಕಲು ಇದ್ದ ಸೂಚನೆ ಅದಾಗಿತ್ತು. ನನ್ನ ಅಜ್ಜಿ ಕೊಲೆಯಾಗುತ್ತಾರೆ ಎಂಬುದು ಆಕೆಗೆ ಗೊತ್ತಿತ್ತು. ಹಾಗೊಂದು ದಿನ ಬಂದರೆ ಅಳಬಾರದು, ಅತ್ತರೂ ಎಲ್ಲರ ಮುಂದೆ ಅಳಬಾರದು ಎಂದು ಆಕೆ ಹೇಳಿದ್ದರು.
ಅಪ್ಪ ರಾಜೀವ್ ಗಾಂಧಿ ಅವರ ನಿಧನವು ಹತ್ತಿರದಲ್ಲಿದೆ ಎಂದು ತಿಳಿದಿತ್ತು. “ತಮಿಳು ಹುಲಿಗಳು ಅವರನ್ನು ಕೊಲ್ಲುತ್ತಾರೆ ಎಂದು ಅವರಿಗೆ ತಿಳಿದಿದೆಯೇ ಎಂದು ನನಗೆ ತಿಳಿದಿಲ್ಲ. ಆದರೆ ಇತರ ಶಕ್ತಿಗಳು ತಮ್ಮನ್ನು ಮುಗಿಸಲಿವೆ ಎಂಬುದು ಅವರಿಗೆ ಗೊತ್ತಿತ್ತು ಎಂದಿದ್ದಾರೆ ರಾಹುಲ್. ನನಗೆ ಜೀವ ಭಯವಿದೆ ಎಂಬ ಹೇಳಿಕೆಯನ್ನು ತಿರಸ್ಕರಿಸಿದ ರಾಹುಲ್, ‘ಇದು ಭಯದ ವಿಷಯವಲ್ಲ. ನಾನು ಏನು ಮಾಡಬೇಕೋ ಅದನ್ನು ಮಾಡುತ್ತೇನೆ.’
ನನಗೆ ಮಕ್ಕಳೆಂದರೆ ಇಷ್ಟ. ನಾನು ಯಾಕೆ 52 ವರ್ಷ ಆಗಿದ್ದರೂ ಅವಿವಾಹಿತನಾಗಿದ್ದೇನೆ ಎಂಬುದು ಗೊತ್ತಿಲ್ಲ. ನೀವು ಯಾಕೆ ಇನ್ನೂ ಸಿಂಗಲ್ ಆಗಿದ್ದೀರಿ ಎಂದು ಕೇಳಿದಾಗ ಸುಮಾರು ಕೆಲಸ ಮಾಡಲಿಕ್ಕ ಇದೆ ಎಂದು ರಾಹುಲ್ ಉತ್ತರಿಸಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ