Turkey Earthquake: ನೀವು ನಮ್ಮ ಹೆಮ್ಮೆ: ಆಪರೇಷನ್ ದೋಸ್ತ್ನಲ್ಲಿ ಭಾಗಿಯಾದ NDRF ತಂಡವನ್ನು ಶ್ಲಾಘಿಸಿದ ಪ್ರಧಾನಿ ಮೋದಿ
ಭೂಕಂಪ ಪೀಡಿತ ಟರ್ಕಿಯಲ್ಲಿ ಭಾರತದ ವಿಪತ್ತು ಪರಿಹಾರ ತಂಡಗಳು ನಡೆಸಿದ ಕಾರ್ಯಚರಣೆಗೆ ದೇಶದ ಪ್ರಧಾನಿ ಮೋದಿ ಅವರನ್ನು ಶ್ಲಾಘಿಸಿದ್ದಾರೆ. ಆಪರೇಷನ್ ದೋಸ್ತ್ ಮೂಲಕ ಭೂಕಂಪ ಪೀಡಿತ ಟರ್ಕಿಯಲ್ಲಿ ಪರಿಹಾರ ಕಾರ್ಯವನ್ನು ಭಾರತದ ವಿಪತ್ತು ಪರಿಹಾರ ತಂಡಗಳು ಮಾಡಿತ್ತು.
ಭೂಕಂಪ ಪೀಡಿತ ಟರ್ಕಿಯಲ್ಲಿ (Turkey) ಭಾರತದ ವಿಪತ್ತು ಪರಿಹಾರ ತಂಡಗಳು (NDRF) ನಡೆಸಿದ ಕಾರ್ಯಚರಣೆಗೆ ದೇಶದ ಪ್ರಧಾನಿ ಮೋದಿ ಅವರನ್ನು ಶ್ಲಾಘಿಸಿದ್ದಾರೆ. ಆಪರೇಷನ್ ದೋಸ್ತ್ ಮೂಲಕ ಭೂಕಂಪ ಪೀಡಿತ ಟರ್ಕಿಯಲ್ಲಿ ಪರಿಹಾರ ಕಾರ್ಯವನ್ನು ಭಾರತದ ವಿಪತ್ತು ಪರಿಹಾರ ತಂಡಗಳು ಮಾಡಿತ್ತು. ಈ ಕಾರಣಕ್ಕಾಗಿ ಈ ತಂಡಗಳ ಜೊತೆಗೆ ಪ್ರಧಾನಿ ಮೋದಿ ಸಂವಾದ ನಡೆಸಿದ್ದಾರೆ. ಕಳೆದ ಕೆಲವು ವರ್ಷಗಳಲ್ಲಿ ಭಾರತವು ತನ್ನ ಗುರುತನ್ನು ಕೇವಲ ಸ್ವಾವಲಂಬಿಯಾಗಿತ್ತು ಆದರೆ ನಿಸ್ವಾರ್ಥ ದೇಶವಾಗಿ ಬಲಪಡಿಸಿದೆ ಎಂದು ಹೇಳಿದರು. ಫೆಬ್ರವರಿ 7 ರಂದು ಭೂಕಂಪ ಪೀಡಿತ ದೇಶಕ್ಕೆ ಎಲ್ಲ ರೀತಿಯ ನೆರವು ನೀಡುವಂತೆ ಪ್ರಧಾನಿ ಮೋದಿ ನಿರ್ದೇಶನದ ನಂತರ ಒಟ್ಟು ಮೂರು NDRF ತಂಡಗಳನ್ನು ಕಳುಹಿಸಲಾಗಿದೆ.
ಭೂಕಂಪ ಪೀಡಿತ ಪ್ರದೇಶದಲ್ಲಿರುವ ಜನರಿಗೆ ಉತ್ತಮ ಸೇವೆಗಳನ್ನು ಒದಗಿಸಲು ಭಾರತೀಯ ಸೇನೆಯ ವೈದ್ಯಕೀಯ ತಂಡವನ್ನು ಸಹ ನಿಯೋಜಿಸಲಾಗಿದೆ. ಇದೀಗ ಭೂಕಂಪ ಪೀಡಿತ ಟರ್ಕಿಯಿಂದ ವಾಪಸಾದ ಸಿಬ್ಬಂದಿಯನ್ನು ಉದ್ದೇಶಿಸಿ ಮಾತನಾಡಿದ ಮೋದಿ, ನೀವು ಮಾನವೀಯತೆಗೆ ಉತ್ತಮ ಉದಹಾರಣೆ, ನೀವು ಅದ್ಭುತ ಸೇವೆಯನ್ನು ಮಾಡಿದ್ದೀರಿ ಮತ್ತು ಭಾರತವನ್ನು ಹೆಮ್ಮೆಪಡುವಂತೆ ಮಾಡಿದ್ದೀರಿ ಎಂದು ಹೇಳಿದ್ದಾರೆ.
ನಾವು ಜಗತ್ತನ್ನು ಒಂದು ವಸುದೈವ ಕುಟುಂಬಕಂವೆಂದು ಹೇಳುತ್ತೇವೆ. ಅದರಂತೆ ನಾವು ನಡೆದುಕೊಂಡಿದ್ದೇವೆ, ನಮ್ಮ ಸದಸ್ಯ ರಾಷ್ಟ್ರಗಳು ಕಷ್ಟದಲ್ಲಿರುವಾಗ ನಾವು ಅವರಿಗೆ ತ್ವರಿತವಾಗಿ ಸಹಾಯ ಮಾಡುವುದು ನಮ್ಮ ಕರ್ತವ್ಯವಾಗಿದೆ ಎಂದು ಮೋದಿ ಪರಿಹಾರ ತಂಡಗಳಿಗೆ ಹೇಳಿದರು. ಭಾರತವು ಕಳೆದ ಕೆಲವು ವರ್ಷಗಳಲ್ಲಿ ಸ್ವಾವಲಂಬನೆಯ ದೇಶವಾಗಿ ತನ್ನ ಗುರುತನ್ನು ಬಲಪಡಿಸಿದೆ, ಅದು ನಿಸ್ವಾರ್ಥ ಮತ್ತು ಇತರ ದೇಶಗಳಿಗೆ ಸಹಾಯ ಮಾಡುವ ಕೆಲಸವನ್ನು ಮಾಡಿದೆ ಎಂದು ಹೇಳಿದರು.
ಜಗತ್ತಿನಲ್ಲಿ ಬಿಕ್ಕಟ್ಟು ಎದುರಾದಾಗಲೂ ಭಾರತವು ಮೊದಲ ಪ್ರತಿಸ್ಪಂದಕರಾಗಲು ಯಾವಾಗಲೂ ಸಿದ್ಧವಾಗಿದೆ ಎಂದು ಅವರು ಹೇಳಿದರು. ನಾವು ವಿಶ್ವದ ಅತ್ಯುತ್ತಮ ಪರಿಹಾರ ಮತ್ತು ರಕ್ಷಣಾ ತಂಡವಾಗಿ ಎಂಬ ಹೆಗ್ಗಳಿಕೆ ಪಡೆದಿಕೊಂಡಿದ್ದೇವೆ ಎಂದು ಅವರು ಹೇಳಿದರು. 99 ಸದಸ್ಯರನ್ನು ಒಳಗೊಂಡಿರುವ ತಂಡವು ಹಟೇಯ ಇಸ್ಕೆಂಡರುನ್‌ನಲ್ಲಿ ಸಂಪೂರ್ಣ ಸುಸಜ್ಜಿತ 30 ಹಾಸಿಗೆಗಳ ಫೀಲ್ಡ್ ಹಾಸ್ಪಿಟಲ್ ಅನ್ನು ಯಶಸ್ವಿಯಾಗಿ ನಿರ್ಮಾಣ ಮಾಡಿತ್ತು ಮತ್ತು ಈಗಲ್ಲೂ ಈ ಕಾರ್ಯ ನಡೆಸುತ್ತಿದೆ, ಸುಮಾರು 4,000 ರೋಗಿಗಳಿಗೆ ದಿನಕ್ಕೆ ಚಿಕಿತ್ಸೆ ನೀಡುತ್ತಿದೆ ಎಂದು ಅವರು ಹೇಳಿದರು.
ಇದನ್ನೂ ಓದಿ: ನಮ್ಮದು ‘ವಸುದೈವ ಕುಟುಂಬಕಂ’ ನೀತಿ, ಕಷ್ಟದಲ್ಲಿರುವವರಿಗೆ ಸಹಾಯ ಮಾಡುವುದು ಧರ್ಮ: ಎಸ್ ಜೈಶಂಕರ್
ಆಪರೇಷನ್ ದೋಸ್ತ್ ಅಡಿಯಲ್ಲಿ ಅಂತಿಮ NDRF ತಂಡವು ಟಿರ್ಕಿಗೆ ಸಹಾಯವನ್ನು ಮಾಡಿ ಈಗ ಮತ್ತೆ ಭಾರತಕ್ಕೆ ಮರಳಿದೆ. 151 NDRF ಸಿಬ್ಬಂದಿ ಮತ್ತು ಶ್ವಾನದಳಗಳ 3 ತಂಡಗಳು ಭೂಕಂಪ ಪೀಡಿತ ಟರ್ಕಿಯೆಗೆ ನೆರವು ನೀಡಿವೆ ಎಂದು ಬಾಗ್ಚಿ ಭಾನುವಾರ ಟ್ವಿಟರ್‌ನಲ್ಲಿ ತಿಳಿಸಿದ್ದಾರೆ. ತಂಡಗಳು ನುರ್ಡಾಗ್ ಮತ್ತು ಆಂಟಕ್ಯದ 35 ಸ್ಥಳಗಳಲ್ಲಿ ದೇಹ ಪತ್ತೆ ಸೇರಿದಂತೆ ಹುಡುಕಾಟ, ಪಾರುಗಾಣಿಕಾ ಮತ್ತು ಪರಿಹಾರ ಕಾರ್ಯಾಚರಣೆಗಳನ್ನು ನಿರ್ವಹಿಸಿದವು ಎಂದು ಅವರು ಹೇಳಿದರು.
I will always remember this interaction with those who took part in ‘Operation Dost.’ pic.twitter.com/RYGDuEn6wW
— Narendra Modi (@narendramodi) February 21, 2023
ಆಪರೇಷನ್ ದೋಸ್ತ್ ಎಂದರೇನು?
ತಮ್ಮ ಸದಸ್ಯ ರಾಷ್ಟ್ರಗಳಲ್ಲಿ ಭೂಕಂಪ ಅಥವಾ ಸಂಕಷ್ಟದ ಕಾಲಗಳು ಎದುರಾದಾಗ ಸಹಾಯವನ್ನು ನೀಡುವ ಉದ್ದೇಶದಿಂದ ಭಾರತ ಸೈನ್ಯ ಸೇವೆಗಳು ಅಥವಾ ಸೇನಾ ಪಡೆಗಳು ಕಾರ್ಯಚರಣೆ ನಡೆಸುವ ಮೂಲಕ ಪರಿಹಾರ ಸಹಾಯಗಳನ್ನು ಮಾಡುತ್ತದೆ. ಇದೆ ರೀತಿಯಲ್ಲಿ ಫೆಬ್ರವರಿ 6ರಂದು ಉಭಯ ದೇಶಗಳಾದ ಟರ್ಕಿ ಮತ್ತು ಸಿರಿಯಾದ ವಿವಿಧ ಭಾಗಗಳಲ್ಲಿ 40,000ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು, ಈ ಸಂಕಷ್ಟದ ಕಾಲದಲ್ಲಿ ಭಾರತವು ತನ್ನ ಸದಸ್ಯ ರಾಷ್ಟ್ರಗಳಿಗೆ ಆಪರೇಷನ್ ದೋಸ್ತ್ ಮೂಲಕ ಪರಿಹಾರ ಕಾರ್ಯಗಳನ್ನು ಮಾಡಿತ್ತು.
ಈ ಬಗ್ಗೆ ಟರ್ಕಿ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ, ಟರ್ಕಿಯಲ್ಲಿ ‘ಆಪರೇಷನ್ ದೋಸ್ತ್’ ಅಡಿಯಲ್ಲಿ ನಿಯೋಜಿಸಲಾದ ಭಾರತೀಯ ಸೇನೆಯ ವೈದ್ಯಕೀಯ ತಂಡವು ನಮ್ಮಗೆ ಉತ್ತಮ ಸೇವೆಯನ್ನು ನೀಡಿದೆ ಎಂದು ಹೇಳಿದ್ದಾರೆ.
Published On - 1:33 pm, Tue, 21 February 23