Narendra Modi: ಭಾರತ ಸಿಂಗಾಪುರ್ ಮಧ್ಯೆ ರಿಯಲ್ ಟೈಮ್ ಪೇಮೆಂಟ್ ಸಿಸ್ಟಂ ಹೊಂದಾಣಿಕೆ
UPI and PayNow: ಭಾರತದ ಯುಪಿಐ ಮತ್ತು ಸಿಂಗಾಪುರದ ಪೇನೌ ಎಂಬ ಎರಡು ಪೇಮೆಂಟ್ ವ್ಯವಸ್ಥೆಗಳ ಮಧ್ಯೆ ಹೊಂದಾಣಿಕೆಯ ಹೊಸ ವ್ಯವಸ್ಥೆ ತರಲಾಗಿದೆ. ಇದರಿಂದ ಎರಡೂ ದೇಶಗಳ ಜನರ ಮಧ್ಯೆ ಪೇಮೆಂಟ್ ಸಾಧ್ಯವಾಗಲಿದೆ.
ಭಾರತ ಮತ್ತು ಸಿಂಗಾಪುರ್ ಜನರು ಇನ್ಮುಂದೆ ಪರಸ್ಪರ ಹಣಕಾಸು ವಹಿವಾಟು ಸುಗಮವಾಗಿ ನಡೆಸಲು ಸಾಧ್ಯವಾಗಲಿದೆ. ಭಾರತದ ಯುಪಿಐ ಮತ್ತು ಸಿಂಗಾಪುರದ ಪೇನೌ ವ್ಯವಸ್ಥೆಯನ್ನು ಜೋಡಿಸಲಾಗಿದೆ. ಇದರಿಂದ ಒಂದು ದೇಶದಿಂದ ಇನ್ನೊಂದು ದೇಶಕ್ಕೆ ಜನರು ಈ ಹೊಸ ಹೊಂದಾಣಿಕೆ ವ್ಯವಸ್ಥೆ ಮೂಲಕ ಪಾವತಿ ಮಾಡಬಹುದಾಗಿದೆ. ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ ದಾಸ್ ಮತ್ತು ಸಿಂಗಾಪುರ ಹಣಕಾಸು ಪ್ರಾಧಿಕಾರ (Monetary Authority of Singapore) ನಿರ್ವಾಹಕ ನಿರ್ದೇಶಕ (MD) ರವಿ ಮೆನನ್ ಎರಡೂ ದೇಶಗಳ ಕ್ರಾಸ್ ಬಾರ್ಡರ್ ಕನೆಕ್ಟಿವಿಟಿ ವ್ಯವಸ್ಥೆಯನ್ನು ಅನಾವರಣಗೊಳಿಸಿದರು. ಭಾರತ ಮತ್ತು ಸಿಂಗಾಪುರದ ಪ್ರಧಾನಿಗಳಾದ ನರೇಂದ್ರ ಮೋದಿ ಮತ್ತು ಲೀ ಹ್ಸೀನ್ ಲೂಂಗ್ ಅವರು ವಿಡಿಯೋ ಕಾನ್ಫೆರೆನ್ಸ್ ಮೂಲಕ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಹಣಕಾಸು ತಂತ್ರಜ್ಞಾನ ಕ್ಷೇತ್ರದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ದೇಶಗಳಲ್ಲಿ ಒಂದು. ಭಾರತದ ಡಿಜಿಟಲ್ ಪೇಮೆಂಟ್ ಸೌಕರ್ಯವನ್ನು ಜಾಗತಿಕ ಮಟ್ಟದಲ್ಲಿ ತಲುಪಿಸಲು ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿಯ ನಾಯಕತ್ವ ಕಾರಣವಾಗಿದೆ. ಯುಪಿಐನ ಲಾಭ ಭಾರತಕ್ಕೆ ಮಾತ್ರವಲ್ಲ ಇತರ ದೇಶಗಳಿಗೂ ಸಿಗಲಿ ಎಂಬುದು ಪ್ರಧಾನಿಗಳ ಆಶಯ ಎಂದು ಕೇಂದ್ರ ಹಣಕಾಸು ಸಚಿವಾಲಯ ಇಂದು ಮಂಗಳವಾರ ಪತ್ರಿಕಾ ಹೇಳಿಕೆಯನ್ನೂ ಬಿಡುಗಡೆ ಮಾಡಿದೆ.
PM Narendra Modi and PM of Singapore Lee Hsien Loong witness the launch of UPI-PayNow linkage between the two countries by RBI Governor Shaktikanta Das and Ravi Menon, MD of the Monetary Authority of Singapore, via video conferencing. pic.twitter.com/DnRghV8Eci
— ANI (@ANI) February 21, 2023
ಭಾರತದ ಯುಪಿಐ ಮತ್ತು ಸಿಂಗಾಪುರದ ಪೇನೌ ವ್ಯವಸ್ಥೆಗಳ ಮಧ್ಯೆ ಹೊಂದಾಣಿಕೆ ತಂದಿರುವುದು ಕ್ರಾಸ್ಬಾರ್ಡರ್ ಪೇಮೆಂಟ್ ಸುಲಭವಾಗಲಿದೆ. ಅಂದರೆ ಸಿಂಗಾಪುರದಲ್ಲಿ ಕೆಲಸ ಮಾಡುವ ಭಾರತೀಯ ಮೂಲದ ಜನರು ತಮ್ಮ ಊರಿನ ಜನರೊಂದಿಗೆ ಪೇಮೆಂಟ್ ಮಾಡುವ ಕಾರ್ಯಕ್ಕೆ ಸಹಾಯಕವಾಗಲಿದೆ. ಈ ಮುಂಚೆಯಾದರೆ ಸಿಂಗಾಪುರದಿಂದ ಭಾರತಕ್ಕೆ ಜನರು ಹಣ ಕಳುಹಿಸಬೇಕಾದರೆ ರಿಮಿಟೆನ್ಸ್ ಶುಲ್ಕವಾಗಿ ಸಾಕಷ್ಟು ಹಣ ಕಟ್ಟಬೇಕಿತ್ತು. ಈಗ ಕಡಿಮೆ ವೆಚ್ಚದಲ್ಲಿ ಮನಿ ಟ್ರಾನ್ಸ್ಫರ್ ಮಾಡಬಹುದಾಗಿದೆ.
Published On - 11:35 am, Tue, 21 February 23




