Turkey Earthquake: ಟರ್ಕಿ-ಸಿರಿಯಾ ಗಡಿಯಲ್ಲಿ ಮತ್ತೆ 2 ಪ್ರಬಲ ಭೂಕಂಪ: 3 ಮಂದಿ ಸಾವು, 200ಕ್ಕೂ ಅಧಿಕ ಜನರಿಗೆ ಗಾಯ
ಈಗಾಗಲೇ ಟರ್ಕಿ-ಸಿರಿಯಾದಲ್ಲಿ ಸಂಭವಿಸಿದ 3 ಭೂಕಂಪದಿಂದಾಗಿ 45 ಸಾವಿರಕ್ಕೂ ಅಧಿಕ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ, ರಕ್ಷಣಾ ಕಾರ್ಯ ಇನ್ನೂ ಪ್ರಗತಿಯಲ್ಲಿದೆ.
ಈಗಾಗಲೇ ಟರ್ಕಿ-ಸಿರಿಯಾದಲ್ಲಿ ಸಂಭವಿಸಿದ 3 ಭೂಕಂಪದಿಂದಾಗಿ 45 ಸಾವಿರಕ್ಕೂ ಅಧಿಕ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ, ರಕ್ಷಣಾ ಕಾರ್ಯ ಇನ್ನೂ ಪ್ರಗತಿಯಲ್ಲಿದೆ. ಇಂತಃ ಪರಿಸ್ಥಿತಿಯಲ್ಲಿ ಟರ್ಕಿ-ಸಿರಿಯಾ ಗಡಿಯಲ್ಲಿ 6.4 ಹಾಗೂ 5.8 ತೀವ್ರತೆಯ 2 ಭೂಕಂಪಗಳು ಸಂಭವಿಸಿದ್ದು, 3 ಮಂದಿ ಮೃತಪಟ್ಟಿದ್ದು, 200ಕ್ಕೂ ಅಧಿಕ ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಟರ್ಕಿಯ ದಕ್ಷಿಣ ಹಟೇ ಪ್ರಾಂತ್ಯದಲ್ಲಿ ಎರಡು ಭೂಕಂಪಗಳು ಸಂಭವಿಸಿ ಕನಿಷ್ಠ 3 ಜನರು ಸಾವನ್ನಪ್ಪಿದ್ದಾರೆ ಮತ್ತು 213 ಜನರು ಗಾಯಗೊಂಡಿದ್ದಾರೆ ಎಂದು ಟರ್ಕಿಯ ಆಂತರಿಕ ಸಚಿವ ಸುಲೇಮಾನ್ ಸೊಯ್ಲು ಅವರನ್ನು ಉಲ್ಲೇಖಿಸಿ ಅನಾಡೋಲು ಏಜೆನ್ಸಿ ವರದಿ ಮಾಡಿದೆ.
ಫೆಬ್ರವರಿ 6 ರ ಮುಂಜಾನೆ ಟರ್ಕಿಯ ಆಗ್ನೇಯ ಕಹ್ರಮನ್ಮರಸ್ ಪ್ರಾಂತ್ಯದಲ್ಲಿ 7.8 ತೀವ್ರತೆಯ ಭೂಕಂಪ ಸಂಭವಿಸಿದ ನಂತರ, ಟರ್ಕಿ ಮತ್ತು ನೆರೆಯ ಸಿರಿಯಾದಲ್ಲಿ ಚಪ್ಪಟೆಯಾದ ಕಟ್ಟಡಗಳ ಅವಶೇಷಗಳ ಅಡಿಯಲ್ಲಿ 40 ಸಾವಿರಕ್ಕೂ ಅಧಿಕ ಮಂದಿ ಸಿಲುಕಿದ್ದರು.
ಮತ್ತಷ್ಟು ಓದಿ: Turkey Earthquake: ಟರ್ಕಿಯಲ್ಲಿ 4 ಭೂಕಂಪ: ಅವಶೇಷಗಳಡಿ 1,80,000 ಮಂದಿ ಸಿಲುಕಿರುವ ಶಂಕೆ, ಎಲ್ಲರೂ ಮೃತಪಟ್ಟಿರುವ ಸಾಧ್ಯತೆ
ಟರ್ಕಿ ಮತ್ತು ಸಿರಿಯಾಗಳಲ್ಲಿ ಸಂಭವಿಸಿದ ಭೀಕರ ಭೂಕಂಪದಲ್ಲಿ ಈವರೆಗೆ ಮೃತಪಟ್ಟವರ ಸಂಖ್ಯೆ 46,002ಕ್ಕೆ ಏರಿಕೆಯಾಗಿದೆ. ಈ ಪೈಕಿ ಟರ್ಕಿಯಲ್ಲಿ 40,402 ಹಾಗೂ ಸಿರಿಯಾದಲ್ಲಿ 5,800 ಜನ ಸಾವನ್ನಪ್ಪಿದ್ದಾರೆ. ಅಲ್ಲದೇ ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆಗಳಿದೆ. 7.8 ತೀವ್ರತೆಯ ಭೂಕಂಪಕ್ಕೆ ಟರ್ಕಿಯಲ್ಲಿ 5 ಲಕ್ಷ ಕಟ್ಟಡಗಳು ನೆಲಸಮವಾಗಿದ್ದು, ಸಾಕಷ್ಟು ಮಂದಿ ಕಾಣೆಯಾಗಿದ್ದಾರೆ ಎನ್ನಲಾಗಿದೆ. ಈ ನಡುವೆ ಉರುಳಿದ ಕಟ್ಟಡಗಳ ಅಡಿಯಿಂದ ಜನರ ರಕ್ಷಣಾ ಕಾರ್ಯಚರಣೆ ಭಾನುವಾರ ಬಹುತೇಕ ಅಂತ್ಯಗೊಂಡಿತ್ತು.
Another #video showing the moment of the #earthquake that occurred today in #Hatay, #Turkey, recorded by the front #camera of a #car in the city of #Antakya. #TurkeyEarthquake pic.twitter.com/XBXcpS8v9g
— ?? ?? Turkey Türkiye (@HispanatoliaEN) February 20, 2023
ಈ ನಡುವೆ ಟರ್ಕಿಗೆ ರಕ್ಷಣಾ ಕಾರ್ಯಾಚರಣೆಗೆ ತೆರಳಿದ್ದ ಎನ್‌ಡಿಆರ್‌ಎಫ್‌ನ ಮೂರೂ ತಂಡಗಳು ತಮ್ಮ ಕಾರ್ಯಾಚರಣೆ ಮುಗಿಸಿ ಭಾನುವಾರ ಭಾರತಕ್ಕೆ ಮರಳಿತ್ತು.
ರಕ್ಷಣಾ ಕಾರ್ಯಾಚರಣೆಗಳು ಮುಂದುವರೆದಂತೆ, ಭೂಕಂಪ ಪೀಡಿತ ಪ್ರದೇಶಗಳಲ್ಲಿ ಸೋಂಕಿನ ಸಂಭವನೀಯ ಹರಡುವಿಕೆಯ ಬಗ್ಗೆ ಕಳವಳಗಳು ಹೆಚ್ಚುತ್ತಿವೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:08 am, Tue, 21 February 23