Operation Dost: ನಮ್ಮದು ‘ವಸುದೈವ ಕುಟುಂಬಕಂ’ ನೀತಿ, ಕಷ್ಟದಲ್ಲಿರುವವರಿಗೆ ಸಹಾಯ ಮಾಡುವುದು ಧರ್ಮ: ಎಸ್ ಜೈಶಂಕರ್

ಭಾರತವು 'ಆಪರೇಷನ್ ದೋಸ್ತ್' ಅಡಿಯಲ್ಲಿ ಟರ್ಕಿಗೆ ಪಾರುಗಾಣಿಕಾ ತಂಡಗಳನ್ನು ಕಳುಹಿಸುತ್ತಿದೆ ವಿದೇಶಾಂಗ ಸಚಿವ ಎಸ್ ಜೈಶಂಕರ್ ಹೇಳಿದ್ದಾರೆ. ಆಪರೇಷನ್ ದೋಸ್ತ್” ಅಡಿಯಲ್ಲಿ ಭೂಕಂಪ ಪೀಡಿತ ಟರ್ಕಿ ಮತ್ತು ಸಿರಿಯಾಕ್ಕೆ ಭಾರತವು ಕ್ಷೇತ್ರ ಆಸ್ಪತ್ರೆ, ಔಷಧಗಳು, ರಕ್ಷಣಾ ತಂಡಗಳನ್ನು ಕಳುಹಿಸುತ್ತಿದೆ ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ಬುಧವಾರ ಟ್ವೀಟ್ ಮಾಡಿದ್ದಾರೆ.

Operation Dost: ನಮ್ಮದು 'ವಸುದೈವ ಕುಟುಂಬಕಂ' ನೀತಿ, ಕಷ್ಟದಲ್ಲಿರುವವರಿಗೆ ಸಹಾಯ ಮಾಡುವುದು ಧರ್ಮ: ಎಸ್ ಜೈಶಂಕರ್
Operation Dost
Follow us
TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on:Feb 08, 2023 | 3:02 PM

ದೆಹಲಿ: ಭಾರತವು ‘ಆಪರೇಷನ್ ದೋಸ್ತ್(Operation Dost) ಅಡಿಯಲ್ಲಿ ಟರ್ಕಿಗೆ ಪಾರುಗಾಣಿಕಾ ತಂಡಗಳನ್ನು ಕಳುಹಿಸುತ್ತಿದೆ ವಿದೇಶಾಂಗ ಸಚಿವ ಎಸ್ ಜೈಶಂಕರ್ ಹೇಳಿದ್ದಾರೆ. ಆಪರೇಷನ್ ದೋಸ್ತ್” ಅಡಿಯಲ್ಲಿ ಭೂಕಂಪ ಪೀಡಿತ ಟರ್ಕಿ ಮತ್ತು ಸಿರಿಯಾಕ್ಕೆ ಭಾರತವು ಕ್ಷೇತ್ರ ಆಸ್ಪತ್ರೆ, ಔಷಧಗಳು, ರಕ್ಷಣಾ ತಂಡಗಳನ್ನು ಕಳುಹಿಸುತ್ತಿದೆ ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ಬುಧವಾರ ಟ್ವೀಟ್ ಮಾಡಿದ್ದಾರೆ.

ದಕ್ಷಿಣ ಟರ್ಕಿ ಮತ್ತು ಸಿರಿಯಾದಲ್ಲಿ ಸಂಭವಿಸಿದ ವಿನಾಶಕಾರಿ ಭೂಕಂಪದ ಸಾವಿನ ಸಂಖ್ಯೆ ಬುಧವಾರ 9,500ಕ್ಕೆ ಏರಿಕೆಯಾಗಿದೆ, ಈಗಾಗಲೇ ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿರುವವರನ್ನು ಹೊರ ತೆಗೆಯಲಾಗುತ್ತಿದೆ. ಚಳಿಯಲ್ಲಿ ಈ ಅನೇಕರು ಸಾವನ್ನಪ್ಪಿದ್ದಾರೆ,. ಇನ್ನೂ ಕೆಲವು ಕಡೆ ದೊಡ್ಡ ದೊಡ್ಡ ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿರುವ ಕಾರಣ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ. ಇನ್ನೂ ಕೂಡ ಸಾವಿನ ಸಂಖ್ಯೆ ಗಣನೀಯವಾಗಿ ಹೆಚ್ಚಾಗುವ ಸಾಧ್ಯತೆಯಿದೆ. ಸಾವಿರಾರು ಮಕ್ಕಳು ಸಾವನ್ನಪ್ಪಿರಬಹುದು ಎಂದು ವಿಶ್ವಸಂಸ್ಥೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಟರ್ಕಿ ಅಧ್ಯಕ್ಷ ತಯ್ಯಿಪ್ ಎರ್ಡೊಗನ್ 10 ಪ್ರಾಂತ್ಯಗಳಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಿದರು. ಆದರೆ ಹಲವಾರು ಹಾನಿಗೊಳಗಾದ ಟರ್ಕಿಶ್ ನಗರಗಳಲ್ಲಿನ ನಿವಾಸಿಗಳು 1999 ರಿಂದ ಟರ್ಕಿಯಲ್ಲಿ ಸಂಭವಿಸಿದ ಮಾರಣಾಂತಿಕ ಭೂಕಂಪಕ್ಕೆ ಅಲ್ಲಿನ ಅಧಿಕಾರಿಗಳು ಮಾಡಿದ ಅವೈಜ್ಞಾನಿಕ ಕೆಲಸವೇ ಕಾರಣ ಎಂದು ಹೇಳಿದ್ದಾರೆ..

ಪ್ರತಿದಿನ ನಾವು ಭೌಗೋಳಿಕ ರಾಜಕೀಯ ಪರಿಸ್ಥಿತಿಗಳಲ್ಲಿ ಏರಿಳಿತಗಳನ್ನು ನೋಡುತ್ತೇವೆ ಆದರೆ ಭಾರತವು ಜಗತ್ತಿನ ದೇಶಗಳೊಂದಿಗೆ ಸ್ಥಿರ ಸಂಬಂಧವನ್ನು ಹೊಂದಿದೆ. ನಮ್ಮ ‘ವಸುದೈವ ಕುಟುಂಬಕಂ’ ನೀತಿಯ ಪ್ರಕಾರ ಭಾರತವು ಮಾನವೀಯತೆಗಾಗಿ ಶಾಶ್ವತವಾಗಿ ನಿಂತಿದೆ, ಎಂದು ಜೈಶಂಕರ್ ಇಂದು ಸುದ್ದಿ ಸಂಸ್ಥೆ ANI ಯೊಂದಿಗೆ ಟರ್ಕಿಯ ಬೆಂಬಲದ ಬಗ್ಗೆ ಕೇಳಿದಾಗ ಹೇಳಿದರು. ಟರ್ಕಿಯ ಭೂಕಂಪದ ಸಂತ್ರಸ್ತರಿಗೆ ಪರಿಹಾರ ನೆರವು ಸಾಗಿಸುವ ಭಾರತೀಯ ವಾಯುಪಡೆಯ ನಾಲ್ಕನೇ C17 ವಿಮಾನವು ಇಂದು ಅದಾನದಲ್ಲಿ ಬಂದಿಳಿಯಿತು.

Published On - 2:25 pm, Wed, 8 February 23