ವಿರೋಧ ಪಕ್ಷದ 12 ಸಂಸದರ ವಿರುದ್ಧ ವಿಶೇಷ ಹಕ್ಕು ಉಲ್ಲಂಘನೆ ನೋಟಿಸ್‌ಗೆ ಜಗದೀಪ್ ಧನ್ಖರ್ ಒತ್ತಾಯ

Jagdeep Dhankar ಸದಸ್ಯ ಸಂಜಯ್ ಸಿಂಗ್ ಅವರು ನಿಯಮ 267 ರ ಅಡಿಯಲ್ಲಿ ಒಂದೇ ರೀತಿಯ ಸೂಚನೆಗಳನ್ನು ಪುನರಾವರ್ತಿತವಾಗಿ ಸಲ್ಲಿಸುವ ಮೂಲಕ ಅಧ್ಯಕ್ಷರ ನಿರ್ದೇಶನಗಳನ್ನು ಪಾಲಿಸದ ಕಾರಣದಿಂದ ಉಂಟಾದ ವಿಶೇಷ ಹಕ್ಕು ಉಲ್ಲಂಘನೆಯ ಪ್ರಶ್ನೆಯನ್ನು ರಾಜ್ಯಸಭೆಯ ಅಧ್ಯಕ್ಷರು ಉಲ್ಲೇಖಿಸಿದ್ದಾರೆ ಎಂದು ಸದಸ್ಯರಿಗೆ ತಿಳಿಸಲಾಗಿದೆ.

ವಿರೋಧ ಪಕ್ಷದ 12 ಸಂಸದರ ವಿರುದ್ಧ ವಿಶೇಷ ಹಕ್ಕು ಉಲ್ಲಂಘನೆ ನೋಟಿಸ್‌ಗೆ ಜಗದೀಪ್ ಧನ್ಖರ್ ಒತ್ತಾಯ
ಜಗದೀಪ್ ಧನ್ಖರ್
Follow us
ರಶ್ಮಿ ಕಲ್ಲಕಟ್ಟ
|

Updated on:Feb 21, 2023 | 1:52 PM

ದೆಹಲಿ: ಇಡೀ ಬಜೆಟ್ ಅಧಿವೇಶನಕ್ಕೆ ಕಾಂಗ್ರೆಸ್ ಸಂಸದ ರಜನಿ ಪಾಟೀಲ್ ಅವರನ್ನು ಅಮಾನತುಗೊಳಿಸಿದ ನಂತರ ರಾಜ್ಯಸಭೆಯಲ್ಲಿ (Rajya Sabha) ಅಶಿಸ್ತಿನ ಸಂಸದರ ವಿರುದ್ಧ ಕ್ರಮವನ್ನು ಮುಂದುವರೆಸಿದ ಉಪರಾಷ್ಟ್ರಪತಿ ಜಗದೀಪ್ ಧನ್ಖರ್ (Jagdeep Dhankar) ಪ್ರತಿಪಕ್ಷದ 12 ಸಂಸದರ  ನಡತೆ ಪರಿಶೀಲಿಸಲು ವಿಶೇಷಾಧಿಕಾರ ಸಮಿತಿಗೆ ಒಪ್ಪಿಗೆ ನೀಡಿದ್ದಾರೆ.ರಾಜ್ಯಸಭಾ ಸದಸ್ಯರು ರಾಜ್ಯಸಭಾ ನಿಯಮಗಳು ಮತ್ತು ಶಿಷ್ಟಾಚಾರಗಳನ್ನು ಉಲ್ಲಂಘಿಸಿ ರಾಜ್ಯಸಭಾ ಸಂಸದರು ಪದೇ ಪದೇ ಪರಿಷತ್ತಿನ ಅಂಗಣದಲ್ಲಿ ಘೋಷಣೆ ಕೂಗುತ್ತಾ ಪ್ರದರ್ಶಿಸಿದ ಅಸಭ್ಯ ವರ್ತನೆಯಿಂದ ಉಂಟಾದ ವಿಶೇಷ ಹಕ್ಕು ಉಲ್ಲಂಘನೆಯ ಪ್ರಶ್ನೆಯನ್ನು ರಾಜ್ಯಸಭಾ ಅಧ್ಯಕ್ಷರು ಉಲ್ಲೇಖಿಸಿದ್ದಾರೆ ಎಂದು ಸದಸ್ಯರಿಗೆ ತಿಳಿಸಲಾಗಿದೆ. ಘೋಷಣೆಗಳ ಕೂಗುವುದು ಸತತವಾಗಿ ಉದ್ದೇಶಪೂರ್ವಕವಾಗಿ ಪರಿಷತ್ತಿನ ಕಾರ್ಯಚಟುವಟಿಕೆಗಳಿಗೆ ಅಡ್ಡಿಪಡಿಸುವುದು ಪರಿಷತ್ತಿನ ಅಧಿವೇಶನಗಳನ್ನು ಪದೇ ಪದೇ ಮುಂದೂಡುವಂತೆ ಅಧ್ಯಕ್ಷರನ್ನು ಒತ್ತಾಯಿಸುವುದು, ಕೌನ್ಸಿಲ್ ಆಫ್ ಸ್ಟೇಟ್ಸ್ (ರಾಜ್ಯಸಭೆ) ಕಾರ್ಯವಿಧಾನ ಮತ್ತು ವ್ಯವಹಾರದ ನಿಯಮಗಳ ನಿಯಮ 203 ರ ಅಡಿಯಲ್ಲಿ ಪರೀಕ್ಷೆ, ತನಿಖೆ ಮತ್ತು ವರದಿಗಾಗಿ ವಿಶೇಷಾಧಿಕಾರಗಳ ಸಮಿತಿಗೆ ವಹಿಸಲಾಗಿದೆ ಎಂದು ರಾಜ್ಯಸಭಾ ಬುಲೆಟಿನ್ ಹೇಳಿದೆ.

ರಾಜ್ಯಸಭಾ ಸಂಸದರ ಹೆಸರುಗಳು ನಿರ್ದಿಷ್ಟವಾಗಿ ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಾರ್ಟಿ (ಎಎಪಿ) ಯವರನ್ನು ಒಳಗೊಂಡಿವೆ. ಇದರಲ್ಲಿ 12 ಸಂಸದರೆಂದರೆ ಸಂಜಯ್ ಸಿಂಗ್, ಶಕ್ತಿಸಿನ್ಹ್ ಗೋಹಿಲ್, ಸುಶೀಲ್ ಕುಮಾರ್ ಗುಪ್ತಾ, ಸಂದೀಪ್ ಕುಮಾರ್ ಪಾಠಕ್, ನರನ್‌ಭಾಯ್ ಜೆ ರಥ್ವಾ, ಸೈಯದ್ ನಾಸಿರ್ ಹುಸೇನ್, ಕುಮಾರ್ ಕೇತ್ಕರ್, ಇಮ್ರಾನ್ ಪ್ರತಾಪ್‌ಗರ್ಹಿ, ಎಲ್ ಹನುಮಂತಯ್ಯ, ಫುಲೋ ದೇವಿ ನೇತಮ್, ಜೆಬಿ ಮಾಥರ್ ಹಿಶಾಮ್ ಮತ್ತು ರಂಜೀತ್ ರಂಜನ್.

ಇದನ್ನೂ ಓದಿ: ಹೈದರಾಬಾದ್‌ನಲ್ಲಿ 4 ವರ್ಷದ ಬಾಲಕನನ್ನು ಹತ್ಯೆಗೈದ ಬೀದಿ ನಾಯಿಗಳು, ಘಟನೆ ಸಿಸಿಟಿವಿಯಲ್ಲಿ ಸೆರೆ

ಇದರ ಜೊತೆಗೆ, ಅದಾನಿ ಸ್ಟಾಕ್ ಸಮಸ್ಯೆಯ ಬಗ್ಗೆ ಚರ್ಚಿಸಲು ಸಂಸತ್ತಿನಲ್ಲಿ ಶೂನ್ಯ ವೇಳೆಯನ್ನು ಅಮಾನತುಗೊಳಿಸುವಂತೆ ಪದೇ ಪದೇ ನೋಟಿಸ್ ಸಲ್ಲಿಸಿದ್ದಕ್ಕಾಗಿ ಎಎಪಿ ರಾಜ್ಯಸಭಾ ಸಂಸದ ಸಂಜಯ್ ಸಿಂಗ್ ವಿರುದ್ಧ ಮತ್ತೊಂದು ವಿಶೇಷ ಹಕ್ಕು ನೋಟಿಸ್ ಬಂದಿದೆ.  ಅಧಿವೇಶನದ ಮೊದಲ ಭಾಗದಲ್ಲಿ ರಾಜ್ಯಸಭಾ ಅಧ್ಯಕ್ಷರು ಒಂದೇ ರೀತಿಯ ಸೂಚನೆಗಳನ್ನು ನೀಡಿದ್ದಕ್ಕಾಗಿ ಸಂಜಯ್ ಸಿಂಗ್ ಅವರನ್ನು ತರಾಟೆಗೆ ತೆಗೆದುಕೊಂಡರು.

ಸದಸ್ಯ ಸಂಜಯ್ ಸಿಂಗ್ ಅವರು ನಿಯಮ 267 ರ ಅಡಿಯಲ್ಲಿ ಒಂದೇ ರೀತಿಯ ಸೂಚನೆಗಳನ್ನು ಪುನರಾವರ್ತಿತವಾಗಿ ಸಲ್ಲಿಸುವ ಮೂಲಕ ಅಧ್ಯಕ್ಷರ ನಿರ್ದೇಶನಗಳನ್ನು ಪಾಲಿಸದ ಕಾರಣದಿಂದ ಉಂಟಾದ ವಿಶೇಷ ಹಕ್ಕು ಉಲ್ಲಂಘನೆಯ ಪ್ರಶ್ನೆಯನ್ನು ರಾಜ್ಯಸಭೆಯ ಅಧ್ಯಕ್ಷರು ಉಲ್ಲೇಖಿಸಿದ್ದಾರೆ ಎಂದು ಸದಸ್ಯರಿಗೆ ತಿಳಿಸಲಾಗಿದೆ.

ಅದಾನಿ  ವಿಷಯದ ತನಿಖೆಗೆ ಜಂಟಿ ಸಂಸದೀಯ ಸಮಿತಿ (ಜೆಪಿಸಿ) ಗೆ ವಿರೋಧ ಪಕ್ಷಗಳು ಒತ್ತಾಯಿಸುವುದರೊಂದಿಗೆ, ಸಂಸತ್ತಿನ ಮೇಲ್ಮನೆ ಇತ್ತೀಚೆಗೆ ಮುಕ್ತಾಯಗೊಂಡ ಬಜೆಟ್ ಅಧಿವೇಶನದ ಮೊದಲಾರ್ಧದಲ್ಲಿ ಭಾರಿ ಕೋಲಾಹಲವುಂಟಾಗಿದೆ.ರಾಷ್ಟ್ರಪತಿ ಭಾಷಣಕ್ಕೆ ವಂದನಾ ನಿರ್ಣಯದ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣಕ್ಕೆ ವಿಪಕ್ಷಗಳು ಗದ್ದಲವುಂಟು ಮಾಡಿವೆ.

ಪ್ರತಿಪಕ್ಷದ ಸದಸ್ಯರಿಗೆ ಪದೇ ಪದೇ ಎಚ್ಚರಿಕೆ ನೀಡಿದ ನಂತರ, ರಾಜ್ಯಸಭಾ ಅಧ್ಯಕ್ಷರು ಗದ್ದಲದ ವಿಡಿಯೊಗಳನ್ನು ರೆಕಾರ್ಡ್ ಮಾಡಿದ್ದಕ್ಕಾಗಿ ಕಾಂಗ್ರೆಸ್ ಸಂಸದೆ ರಜನಿ ಪಾಟೀಲ್ ಅವರನ್ನು ಅಮಾನತುಗೊಳಿಸಿದರು. ವಿರಾಮದ ನಂತರ, ಬಜೆಟ್ ಅಧಿವೇಶನದ ಎರಡನೇ ಭಾಗವು ಮಾರ್ಚ್ 13 ರಂದು ಪುನರಾರಂಭವಾಗಲಿದ್ದು ಏಪ್ರಿಲ್ 6 ರವರೆಗೆ ಮುಂದುವರಿಯುತ್ತದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:49 pm, Tue, 21 February 23

ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ
ಆಸ್ಟ್ರೇಲಿಯನ್ನರ ಮುಂದೆ ಪುಷ್ಪ ಸ್ಟೈಲ್​ನಲ್ಲಿ ಸಂಭ್ರಮಿಸಿದ ನಿತೀಶ್ ಕುಮಾರ್
ಆಸ್ಟ್ರೇಲಿಯನ್ನರ ಮುಂದೆ ಪುಷ್ಪ ಸ್ಟೈಲ್​ನಲ್ಲಿ ಸಂಭ್ರಮಿಸಿದ ನಿತೀಶ್ ಕುಮಾರ್
ಎಂಟು ಮಂದಿ ನಾಮಿನೇಟ್; ಈ ಸ್ಪರ್ಧಿ ಮನೆಯಿಂದ ಔಟ್ ಆಗೋದು ಪಕ್ಕಾ?
ಎಂಟು ಮಂದಿ ನಾಮಿನೇಟ್; ಈ ಸ್ಪರ್ಧಿ ಮನೆಯಿಂದ ಔಟ್ ಆಗೋದು ಪಕ್ಕಾ?