Enemy properties: ಶತ್ರುವಿಗೆ ಸೇರಿದ ಆಸ್ತಿಯಿಂದ ಸರ್ಕಾರಕ್ಕೆ 3,400 ಕೋಟಿ ರೂ ಗಳಿಕೆ, ಕರ್ನಾಟಕದಲ್ಲಿಯೂ ಇದೆ 24 ಶತ್ರು ಆಸ್ತಿಗಳು
ಸರ್ಕಾರವು ಜನವರಿಯಲ್ಲಿ ಖಜಾನೆಯಲ್ಲಿದ್ದ ಶತ್ರು ಲೆಕ್ಕದ 1699.79 ಗ್ರಾಂ ಚಿನ್ನಾಭರಣವನ್ನು 49,14,071 ರೂ ಮತ್ತು 28.896 ಕಿಲೋ ಗ್ರಾಂ ಬೆಳ್ಳಿ ಆಭರಣಗಳನ್ನು 10,92,175 ರೂ.ಗಳಿಗೆ ಮಾರಾಟ ಮಾಡಿದೆ
ಭಾರತ ಸರ್ಕಾರವು 2018 ರಿಂದ 2022 ರವರೆಗೆ ಶತ್ರು ಆಸ್ತಿಗಳ ವಿಲೇವಾರಿಯಿಂದ (Enemy properties) 3,400 ಕೋಟಿ ರೂಪಾಯಿಗಳನ್ನು ಗಳಿಸಿದೆ ಎಂದು ವರದಿಯೊಂದು ತಿಳಿಸಿದೆ. ದೇಶ ವಿಭಜನೆಯ (partition) ಬಳಿಕ ದೇಶವನ್ನು ತೊರೆದ ಮತ್ತು 1962 ಹಾಗೂ 1965 ರ ಯುದ್ಧದ ನಂತರ ಭಾರತವನ್ನು ತೊರೆದ ನಂತರ ಪಾಕಿಸ್ತಾನ (Pakistan) ಮತ್ತು ಚೀನಾದ (China) ಪೌರತ್ವವನ್ನು (citizenship) ಪಡೆದ ಜನರು ಭಾರತದಲ್ಲಿ ಬಿಟ್ಟುಹೋದ ಆಸ್ತಿಗಳನ್ನು ಶತ್ರು ಆಸ್ತಿಗಳು ಎಂದು ವರ್ಗೀಕರಿಸಲಾಗಿದೆ.
ಭಾರತದ ಶತ್ರು ಆಸ್ತಿಯ ಕಸ್ಟೋಡಿಯನ್ (CEPI) ಒಟ್ಟು 3,407.98 ಕೋಟಿ ರೂ. ಆಸ್ತಿ ಗಳಿಸಿದೆ. 2018-19, 2019-20, 2020-21 ಮತ್ತು 2021-22 ಅವಧಿಯಲ್ಲಿ ಶತ್ರು ಆಸ್ತಿಗಳ 152 ಕಂಪನಿಗಳ 7,52,83,287 ಷೇರುಗಳಿಂದ 2,708.9 ಕೋಟಿ ರೂ ಮೌಲ್ಯದ್ದು ಮತ್ತು 699.08 ಕೋಟಿ ಆದಾಯದ ರಸೀದಿಗಳನ್ನು ಗಳಿಸಲಾಗಿದೆ ಎಂದು ಗೃಹ ಸಚಿವಾಲಯದ (MHA) ಅಧಿಕಾರಿಯೊಬ್ಬರು PTI ಗೆ ತಿಳಿಸಿದ್ದಾರೆ.
ಅಲ್ಲದೆ, ಸರ್ಕಾರವು ಜನವರಿಯಲ್ಲಿ ಖಜಾನೆಯಲ್ಲಿದ್ದ ಶತ್ರು ಲೆಕ್ಕದ 1699.79 ಗ್ರಾಂ ಚಿನ್ನಾಭರಣವನ್ನು 49,14,071 ರೂ ಮತ್ತು 28.896 ಕಿಲೋ ಗ್ರಾಂ ಬೆಳ್ಳಿ ಆಭರಣಗಳನ್ನು 10,92,175 ರೂ.ಗಳಿಗೆ ಮಾರಾಟ ಮಾಡಿದೆ ಎಂದು ಅವರು ಹೇಳಿದರು. ಆದರೆ, ಸರ್ಕಾರ ಇದುವರೆಗೆ ಯಾವುದೇ ಸ್ಥಿರ ಶತ್ರು ಆಸ್ತಿಯನ್ನು ಮಾರಾಟ (immovable enemy properties) ಮಾಡಿಲ್ಲ.
ವರದಿಯ ಪ್ರಕಾರ, ಪಾಕಿಸ್ತಾನ ಮತ್ತು ಚೀನಾದ ಪೌರತ್ವವನ್ನು ಪಡೆದ ಜನರು ಒಟ್ಟು 12,611 ಸಂಸ್ಥೆಗಳು ಅಥವಾ ಶತ್ರು ಆಸ್ತಿಯನ್ನು ಬಿಟ್ಟು ಹೋಗಿದ್ದಾರೆ. ಈ 12,611 ಆಸ್ತಿಗಳಲ್ಲಿ 12,485 ಪಾಕಿಸ್ತಾನಿ ಪ್ರಜೆಗಳಿಗೆ ಮತ್ತು 126 ಚೀನಾದ ಪ್ರಜೆಗಳಿಗೆ ಸಂಬಂಧಿಸಿದೆ ಎಂದು ಇನ್ನೊಬ್ಬ ಅಧಿಕಾರಿ ತಿಳಿಸಿದ್ದಾರೆ. ಶತ್ರು ಆಸ್ತಿಗಳನ್ನು CEPI ಯೊಂದಿಗೆ ನಿಯೋಜಿಸಲಾಗಿದೆ. ಇದು ಶತ್ರು ಆಸ್ತಿ ಕಾಯಿದೆ ಅಡಿಯಲ್ಲಿ (Enemy Property Act) ರಚಿಸಲಾಗಿದೆ.
ಏತನ್ಮಧ್ಯೆ, ಶತ್ರು ಆಸ್ತಿಗಳ ಪರಿಣಾಮಕಾರಿ ಸಂರಕ್ಷಣೆ, ನಿರ್ವಹಣೆ ಮತ್ತು ತ್ವರಿತ ವಿಲೇವಾರಿಗಾಗಿ ಶತ್ರು ಆಸ್ತಿ ಮಾಹಿತಿ ವ್ಯವಸ್ಥೆಯನ್ನು (Enemy Property Information System) ಅಭಿವೃದ್ಧಿಪಡಿಸಲಾಗಿದೆ. ಈ ವಿಷಯದೊಂದಿಗೆ ವ್ಯವಹರಿಸುವ ಎಲ್ಲಾ ಮಧ್ಯಸ್ಥಗಾರರಿಗೆ ಈ ಕುರಿತಾದ ಮಾಹಿತಿ ಲಭ್ಯವಿದೆ. ಈ ವ್ಯವಸ್ಥೆಯು ಶತ್ರು ಆಸ್ತಿಯ ಗುರುತಿಸುವಿಕೆ ಮತ್ತು ಹಸ್ತಾಂತರವನ್ನು ತ್ವರಿತಗೊಳಿಸುವ ಗುರಿಯನ್ನು ಹೊಂದಿದೆ.
ಸ್ಥಿರ ಶತ್ರು ಆಸ್ತಿಗಳ ಪ್ರಸ್ತುತ ಸ್ಥಿತಿಯನ್ನು ಖಚಿತಪಡಿಸಿಕೊಳ್ಳಲು, ಸಂಬಂಧಿಸಿದ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಇತ್ತೀಚಿನ ಸಮೀಕ್ಷೆ ಮತ್ತು ಮೌಲ್ಯಮಾಪನ ವರದಿಯನ್ನು ಕೇಳಲಾಗಿದೆ.
ಕರ್ನಾಟಕದಲ್ಲಿಯೂ ಇವೆ 24 ಶತ್ರು ಆಸ್ತಿಗಳು
ಪ್ರಕ್ರಿಯೆಯನ್ನು ತ್ವರಿತಗೊಳಿಸಲು, ಮೇಲಿನ ವಿಷಯವನ್ನು ಸಮನ್ವಯಗೊಳಿಸಲು ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ. ಗೃಹ ಸಚಿವಾಲಯವು ಈ ವಿಷಯನ್ನು ನೋಡಲ್ ಅಧಿಕಾರಿಗಳು ಮತ್ತು ಜಿಲ್ಲಾ ಮ್ಯಾಜಿಸ್ಟ್ರೇಟ್‌ಗಳು ಅಥವಾ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಗಳೊಂದಿಗೆ ಪಡೆದುಕೊಳ್ಳುತ್ತಿದೆ ಎಂದು ಆ ಅಧಿಕಾರಿ ಹೇಳಿದರು.
ಅತಿ ಹೆಚ್ಚು ಶತ್ರು ಆಸ್ತಿಗಳು ಉತ್ತರ ಪ್ರದೇಶದಲ್ಲಿ (6,255) ನಂತರ ಪಶ್ಚಿಮ ಬಂಗಾಳ (4,088), ದೆಹಲಿ (659) ನಲ್ಲಿ ಇವೆ. ಗೋವಾ (295), ಮಹಾರಾಷ್ಟ್ರ (208), ತೆಲಂಗಾಣ (158). ಗುಜರಾತ್ (151). ತ್ರಿಪುರಾ (105), ಬಿಲಾರ್ (94), ಮಧ್ಯಪ್ರದೇಶ (94), ಛತ್ತೀಸ್‌ಗಢ (78) ಮತ್ತು ಹರಿಯಾಣ (71 ಆಸ್ತಿ) ರಾಜ್ಯಗಳಲ್ಲಿಯೂ ಈ ಆಸ್ತಿಪಾಸ್ತಿಗಳಿವೆ.
ಕೇರಳದಲ್ಲಿ 71 ಶತ್ರು ಆಸ್ತಿಗಳಿವೆ. ಉತ್ತರಾಖಂಡದಲ್ಲಿ 69, ತಮಿಳುನಾಡಿನಲ್ಲಿ 67, ಮೇಘಾಲಯದಲ್ಲಿ 57, ಅಸ್ಸಾಂನಲ್ಲಿ 29, ಕರ್ನಾಟಕದಲ್ಲಿ 24, ರಾಜಸ್ಥಾನದಲ್ಲಿ 22, ಜಾರ್ಖಂಡ್‌ನಲ್ಲಿ 10, ದಮನ್ ಮತ್ತು ದಿಯುನಲ್ಲಿ ನಾಲ್ಕು ಮತ್ತು ಆಂಧ್ರಪ್ರದೇಶ ಮತ್ತು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ತಲಾ ಒಂದು ಆಸ್ತಿ ಇದೆ. ಕಾನೂನಿನ ಪ್ರಕಾರ, ಶತ್ರು ಆಸ್ತಿಯು ಶತ್ರುವೇ ಹೊಂದಿರುವ, ಶತ್ರು ವಿಷಯದ ಅಥವಾ ಶತ್ರು ಸಂಸ್ಥೆಗೆ ಸೇರಿದ ಯಾವುದೇ ಆಸ್ತಿಯನ್ನು ಸೂಚಿಸುತ್ತದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:07 pm, Tue, 21 February 23