ಲಂಡನ್‌ನಲ್ಲಿ ಯುಕೆ ಪಾರ್ಲಿಮೆಂಟ್ ಹೌಸ್ ಆಫ್ ಲಾರ್ಡ್ಸ್ ಶುಕ್ರವಾರ (ಸೆಪ್ಟೆಂಬರ್ 13) ಆಯೋಜಿಸಿದ್ದ ಭವ್ಯ ಸಮಾರಂಭದಲ್ಲಿ ಮೈ ಹೋಮ್ ಕನ್ಸ್ಟ್ರಕ್ಷನ್ ಪ್ರೈವೇಟ್ ಲಿಮಿಟೆಡ್‌ನ ಕಾರ್ಯನಿರ್ವಾಹಕ ಉಪಾಧ್ಯಕ್ಷ (Executive Vice Chairman) ರಾಮು ರಾವ್ ಜುಪಾಲಿ ಪ್ರತಿಷ್ಠಿತ ‘‘ಗ್ಲೋಬಲ್ ಸೇಫ್ಟಿ ಸಮ್ಮಿಟ್ (GSS) 2024’’ ಪ್ರಶಸ್ತಿ ಸ್ವೀಕರಿಸಿದರು. ಈ ಸಮಾರಂಭದ ಜತೆ ಇಎಸ್ಜಿ ಸಮ್ಮೇಳನವನ್ನು ಸಹ ಆಯೋಜಿಸಲಾಗಿದ್ದು, ವಿವಿಧ ವಿಭಾಗಗಳಲ್ಲಿ ಅಂತರರಾಷ್ಟ್ರೀಯ ಸುರಕ್ಷತಾ ಪ್ರಶಸ್ತಿಗಳನ್ನು ನೀಡಲಾಯಿತು.
ಇಂಟರ್ನ್ಯಾಷನಲ್ ಸಸ್ಟೈನೆಬಿಲಿಟಿ ಲೀಡರ್ (ನಿರ್ಮಾಣ ವಲಯ) ಪ್ರಶಸ್ತಿಯನ್ನು ಮೈ ಹೋಮ್ ಕನ್ಸ್ಟ್ರಕ್ಷನ್ ಪ್ರೈವೇಟ್ ಲಿಮಿಟೆಡ್‌ನ ಕಾರ್ಯನಿರ್ವಾಹಕ ಉಪಾಧ್ಯಕ್ಷ ರಾಮು ರಾವ್ ಜುಪಾಲಿ ಸ್ವೀಕರಿಸಿದರು. ಈ ಗೌರವದೊಂದಿಗೆ ಮೈ ಹೋಮ್ ಗ್ರೂಪ್ ಮತ್ತೊಂದು ಮೈಲಿಗಲ್ಲು ಸಾಧಿಸಿದಂತಾಗಿದೆ. ಈ ಗೌರವದೊಂದಿಗೆ, ಕಂಪನಿಯು ಮತ್ತೊಮ್ಮೆ ಅಂತರರಾಷ್ಟ್ರೀಯ ಮನ್ನಣೆಯನ್ನು ಪಡೆದುಕೊಂಡಿದೆ. ಪ್ರಸ್ತಕ ಕಾಲಘಟ್ಟದಲ್ಲಿ ಮೈ ಹೋಮ್ ಗ್ರೂಪ್ ಅನೇಕ ಕ್ಷೇತ್ರಗಳಲ್ಲಿ ಟ್ರೆಂಡ್ ಸೆಟ್ಟರ್ ಆಗಿ ಗುರುತಿಸಿಕೊಂಡಿದೆ.
ಹೆಚ್ಚುವರಿಯಾಗಿ, ಮೈ ಹೋಮ್ ಗ್ರೂಪ್‌ನ ಹೆಲ್ತ್ ಸೇಫ್ಟಿ ಎನ್ವಿರಾನ್‌ಮೆಂಟ್‌ನ ಮುಖ್ಯಸ್ಥ ಡಿ.ಭಾಸ್ಕರ್ ರಾಜು ಅವರು ಅಂತಾರಾಷ್ಟ್ರೀಯ ಅತ್ಯುತ್ತಮ ಎಚ್‌ಎಸ್‌ಇ ಮ್ಯಾನೇಜರ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಮೈ ಹೋಮ್ ಕನ್ಸ್ಟ್ರಕ್ಷನ್ ಪ್ರೈವೇಟ್ ಲಿಮಿಟೆಡ್ ಕಳೆದ ಮೂರು ವರ್ಷಗಳಿಂದ ನಿರಂತರವಾಗಿ ಪ್ರತಿಷ್ಠಿತ ಅಂತರಾಷ್ಟ್ರೀಯ ಪ್ರಶಸ್ತಿಗಳಿಗೆ ಭಾಜನವಾಗುತ್ತಿದೆ. ಪರಿಸರ, ಆರೋಗ್ಯ, ಸುರಕ್ಷತೆ, ಕಾರ್ಪೊರೇಟ್ ಮತ್ತು ಸಾಮಾಜಿಕ ಜವಾಬ್ದಾರಿಗಳು ಇತ್ಯಾದಿ ಕ್ಷೇತ್ರಗಳಲ್ಲಿನ ಸಾಧನೆಗಳನ್ನು ಗುರುತಿಸಿ ಗ್ಲೋಬಲ್ ಸೇಫ್ಟಿ ಸಮ್ಮಿಟ್ ಪ್ರಶಸ್ತಿ ನೀಡಲಾಗುತ್ತಿದೆ.
ಗ್ಲೋಬಲ್ ಸೇಫ್ಟಿ ಶೃಂಗಸಭೆ (GSS) ಫೈರ್ ಅಂಡ್ ಸೇಫ್ಟಿ ಫೋರಮ್ ಆಯೋಜಿಸುವ ವಾರ್ಷಿಕ ಕಾರ್ಯಕ್ರಮವಾಗಿದೆ. ಇದನ್ನು 2009 ರಲ್ಲಿ ಆರಂಭಿಸಲಾಯಿತು. ಇದು ಭಾರತದ ಮೊದಲ ಅಂತಾರಾಷ್ಟ್ರೀಯ ಪ್ರಮಾಣೀಕರಣ ಮತ್ತು ಮೌಲ್ಯಮಾಪನ ಸಂಸ್ಥೆಯಾಗಿದೆ. ಇದು ಯುನೈಟೆಡ್ ಸ್ಟೇಟ್ಸ್ನ ಅಮೇರಿಕನ್ ನ್ಯಾಷನಲ್ ಸ್ಟ್ಯಾಂಡರ್ಡ್ಸ್ ಇನ್ಸ್ಟಿಟ್ಯೂಟ್ ಪ್ರಕಾರ ಪ್ರಮಾಣೀಕರಣ ಮಾರ್ಗಸೂಚಿಗಳನ್ನು ಸಿದ್ಧಪಡಿಸುತ್ತದೆ. ಫೈರ್ ಅಂಡ್ ಸೇಫ್ಟಿ ಫೋರಮ್ ಯುನೈಟೆಡ್ ನೇಷನ್ಸ್ ಗ್ಲೋಬಲ್ ಕಾಂಪ್ಯಾಕ್ಟ್ ನ್ಯೂಯಾರ್ಕ್ (UNGCN) ನೊಂದಿಗೆ ಸಂಬಂಧ ಹೊಂದಿದೆ. ಈ ನೆಟ್‌ವರ್ಕ್ ಯುಎನ್‌ಜಿಸಿಎನ್‌ಐ ಹೆಸರಿನಲ್ಲಿ ಭಾರತದಲ್ಲಿ ಸಕ್ರಿಯವಾಗಿದೆ.
2014 ರಿಂದ, ಪ್ರತಿ ವರ್ಷ ಜಿಎಸ್ಎಸ್ ನವದೆಹಲಿಯಲ್ಲಿ 1000 ಕ್ಕೂ ಹೆಚ್ಚು ಸುರಕ್ಷತಾ ವೃತ್ತಿಪರರು, 40 ಕ್ಕೂ ಹೆಚ್ಚು ಪ್ರಸಿದ್ಧ ಭಾಷಣಕಾರರು ಮತ್ತು 30 ಕ್ಕೂ ಹೆಚ್ಚು ಉದ್ಯಮ ಪ್ರಶಸ್ತಿ ವಿಜೇತರನ್ನೊಳಗೊಂಡು ಕಾರ್ಯಕ್ರಮ ಆಯೋಜಿಸುತ್ತದೆ. ಕೋವಿಡ್ ಸಾಂಕ್ರಾಮಿಕ ರೋಗದಿಂದಾಗಿ, ಜಿಎಸ್ಎಸ್ 2020 ಅನ್ನು ಯುಎನ್‌ಜಿಸಿಎನ್‌ಐ ಸಹಭಾಗಿತ್ವದಲ್ಲಿ ವರ್ಚುವಲ್ ಆಗಿ ಆಯೋಜಿಸಲಾಗಿತ್ತು. ಪ್ರಶಸ್ತಿ ವಿಜೇತರ ಪಟ್ಟಿಯನ್ನು ಫೋರ್ಬ್ಸ್ ಮ್ಯಾಗಜೀನ್‌ನ ಭಾರತೀಯ ಪೋರ್ಟಲ್‌ನಲ್ಲಿಯೂ ಪ್ರಕಟಿಸಲಾಗಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:29 pm, Sat, 14 September 24