Video: ಮದುವೆ ಮನೆಗೆ ಬೆಂಕಿ ಬಿದ್ದು ಹೊತ್ತಿ ಉರಿಯುತ್ತಿದ್ದರೂ ಸ್ವಲ್ಪವೂ ತಲೆಕೆಡಿಸಿಕೊಳ್ಳದೆ ಊಟ ಮಾಡುತ್ತಲೇ ಇದ್ದ ಅತಿಥಿಗಳು !

| Updated By: Lakshmi Hegde

Updated on: Nov 30, 2021 | 9:57 AM

ಅದೊಂದು ಮದುವೆ ಮನೆ. ಹಾಕಿದ್ದ ಪೆಂಡಾಲ್​​ಗೆ ಬೆಂಕಿ ಹೊತ್ತಿಕೊಂಡು ಉರಿಯುತ್ತಿದೆ. ಆದರೆ ಅಲ್ಲಿಯೇ ಸ್ವಲ್ಪದೂರದಲ್ಲಿ ಕುಳಿತ ಇಬ್ಬರು ಹಿಂದಿರುಗಿ ಬೆಂಕಿಯನ್ನು ನೋಡನೋಡುತ್ತ ಗಡದ್ದಾಗಿ ಊಟ ಮಾಡುತ್ತಿದ್ದಾರೆ.

Video: ಮದುವೆ ಮನೆಗೆ ಬೆಂಕಿ ಬಿದ್ದು ಹೊತ್ತಿ ಉರಿಯುತ್ತಿದ್ದರೂ ಸ್ವಲ್ಪವೂ ತಲೆಕೆಡಿಸಿಕೊಳ್ಳದೆ ಊಟ ಮಾಡುತ್ತಲೇ ಇದ್ದ ಅತಿಥಿಗಳು !
ಹೊತ್ತಿ ಉರಿಯುತ್ತಿರುವ ಮದುವೆ ಮನೆ
Follow us on

ಚಿಂತೆಯಿಲ್ಲದವನಿಗೆ ಸಂತೆಯಲ್ಲೂ ನಿದ್ದೆಯಂತೆ ! ಹೀಗೊಂದು ಮಾತು ಕೇಳಿರುತ್ತೇವೆ. ಆದರೆ ಇಲ್ಲಿ ತುಸು ವಿಭಿನ್ನ..ಮದುವೆ ಮನೆಗೆ ಬೆಂಕಿ ಬಿದ್ದು, ಧಗಧಗನೇ ಹೊತ್ತು ಉರಿಯುತ್ತಿದ್ದರೂ ಅಲ್ಲಿಯೇ ಸ್ವಲ್ಪ ದೂರದಲ್ಲಿ ಕುಳಿತ ಅತಿಥಿಗಳು ಸ್ವಲ್ಪೂ ಚಿಂತೆ ಮಾಡದೆ ಕುಳಿತು ಊಟ ಮಾಡಿದ ವಿಡಿಯೋ ಇದೀಗ ಇಂಟರ್​ನೆಟ್​​ನಲ್ಲಿ ಸಿಕ್ಕಾಪಟೆ ಸದ್ದು ಮಾಡುತ್ತಿದೆ. ಅಂದಹಾಗೆ ಈ ಘಟನೆ ನಡೆದದ್ದು ಮಹಾರಾಷ್ಟ್ರದ ಥಾಣೆ ಭಿವಂಡಿಯಲ್ಲಿ.  

ಅದೊಂದು ಮದುವೆ ಮನೆ. ಹಾಕಿದ್ದ ಪೆಂಡಾಲ್​​ಗೆ ಬೆಂಕಿ ಹೊತ್ತಿಕೊಂಡು ಉರಿಯುತ್ತಿದೆ. ಆದರೆ ಅಲ್ಲಿಯೇ ಸ್ವಲ್ಪದೂರದಲ್ಲಿ ಕುಳಿತ ಇಬ್ಬರು ಹಿಂದಿರುಗಿ ಬೆಂಕಿಯನ್ನು ನೋಡನೋಡುತ್ತ ಗಡದ್ದಾಗಿ ಊಟ ಮಾಡುತ್ತಿದ್ದಾರೆ. ಅಲ್ಲಿ, ಬೆಂಕಿ ಬಳಿ ಅನೇಕರು ಕೂಗುತ್ತ, ಅದನ್ನು ನಂದಿಸಲು ಅತ್ತಿಂದಿತ್ತ ಓಡಾಡುತ್ತಿರುವುದೂ ವಿಡಿಯೋದಲ್ಲಿ ಕಾಣಿಸುತ್ತದೆ. ಇದು ಅನ್ಸಾರಿ ಮದುವೆ ಹಾಲ್​​ನಲ್ಲಿ ನಡೆದ ಘಟನೆ. ಭಾನುವಾರ ಸಂಜೆ ಅಲ್ಲಿ ಮದುವೆ ಸಂಭ್ರಮ ಇತ್ತು. ಆದರೆ ವಿಪರೀತ ಪಟಾಕಿ ಹೊಡೆದಿದ್ದರಿಂದ ಬೆಂಕಿ ಬಿದ್ದಿದೆ ಎಂದು ಹೇಳಲಾಗಿದೆ.  ಆರು ಬೈಕ್​ಗಳು, ಹಲವು ಕುರ್ಚಿಗಳು ಬೆಂಕಿಗೆ ಆಹುತಿಯಾಗಿವೆ. ಮದುವೆಗಾಗಿ ಮಾಡಲಾಗಿದ್ದ ಅಲಂಕಾರ ಪೂರ್ತಿ ಸರ್ವನಾಶವಾಗಿದೆ. ನಂತರ ನಾಲ್ಕು ಅಗ್ನಿಶಾಮಕ ದಳಗಳು ಸ್ಥಳಕ್ಕೆ ಭೇಟಿಕೊಟ್ಟು ಬೆಂಕಿ ನಂದಿಸಿವೆ.ಅದೃಷ್ಟವಶಾತ್ ಯಾರಿಗೂ ಗಾಯವಾಗಲಿ, ಪ್ರಾಣಹಾನಿಯಾಗಲಿ ಆಗಿಲ್ಲ.

ಇದನ್ನೂ ಓದಿ: Yoga Asanas: ಆರೋಗ್ಯಕರ ಜೀವನ ಶೈಲಿಗಾಗಿ ಈ ಕೆಲವು ಯೋಗ ಆಸನಗಳನ್ನು ಪ್ರತಿನಿತ್ಯ ಮಾಡಿ

Published On - 9:54 am, Tue, 30 November 21