Gujarat Accident: ಬೈಕ್​ಗೆ ಕಾರು ಡಿಕ್ಕಿ ಹೊಡೆದು ಸವಾರನನ್ನು 12 ಕಿ.ಮೀ ಎಳೆದೊಯ್ದ ಪ್ರಕರಣ, ಆರೋಪಿಯ ಬಂಧನ

| Updated By: Digi Tech Desk

Updated on: Jan 27, 2023 | 12:03 PM

ರಭಸವಾಗಿ ಬಂದ ಕಾರೊಂದು ಬೈಕ್​ಗೆ ಡಿಕ್ಕಿ ಹೊಡೆದು ಸವಾರನನ್ನು 12 ಕಿ.ಮೀ ದೂರದವರೆಗೆ ಎಳೆದೊಯ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

Gujarat Accident: ಬೈಕ್​ಗೆ ಕಾರು ಡಿಕ್ಕಿ ಹೊಡೆದು ಸವಾರನನ್ನು 12 ಕಿ.ಮೀ ಎಳೆದೊಯ್ದ ಪ್ರಕರಣ, ಆರೋಪಿಯ ಬಂಧನ
ಬಂಧನ
Follow us on

ರಭಸವಾಗಿ ಬಂದ ಕಾರೊಂದು ಬೈಕ್​ಗೆ ಡಿಕ್ಕಿ ಹೊಡೆದು ಸವಾರನನ್ನು 12 ಕಿ.ಮೀ ದೂರದವರೆಗೆ ಎಳೆದೊಯ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಬೈಕ್ ಸವಾರ ಕೊನೆಯುಸಿರೆಳೆದಿದ್ದರು. ಜನವರಿ 18 ರ ರಾತ್ರಿ ಕಡೋದರಾ-ಬಾರ್ಡೋಲಿ ರಸ್ತೆಯಲ್ಲಿ ಹಿಟ್ ಅಂಡ್ ರನ್ ಪ್ರಕರಣ ಸಂಭವಿಸಿತ್ತು. ಮೃತರನ್ನು ಸಾಗರ್ ಪಾಟೀಲ್ ಎಂದು ಗುರುತಿಸಲಾಗಿದೆ, ಹೆಂಡತಿಯನ್ನು ಹಿಂದಿನ ಸೀಟಿನಲ್ಲಿ ಕೂರಿಸಿಕೊಂಡು ಬೈಕ್ ಚಲಾಯಿಸುತ್ತಿದ್ದರು ಎಂದು ಹೇಳಲಾಗಿದೆ.

ವೇಗವಾಗಿ ಹೋಗುತ್ತಿದ್ದ ಕಾರಿನ ವಿಡಿಯೋವನ್ನು ವ್ಯಕ್ತಿಯೊಬ್ಬರು ರೆಕಾರ್ಡ್​ ಮಾಡಿದ್ದು, ಇದು ವಾಹನವನ್ನು ಗುರುತಿಸಲು ಪೊಲೀಸರಿಗೆ ಸಹಾಯ ಮಾಡಿತು. ಚಾಲಕನನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಪೊಲೀಸರು ಹೇಳಿದ್ದರು.

ಮತ್ತಷ್ಟು ಓದಿ: ಮಂಡ್ಯ: ಎರಡು ಕಾರುಗಳ ನಡುವೆ ಭೀಕರ ಅಪಘಾತ: ನಾಲ್ವರ ಸಾವು

ಡಿಸೆಂಬರ್ 18 ರಂದು ಸೂರತ್‌ನ ಹೊರವಲಯದಲ್ಲಿರುವ ಪಲ್ಸಾನಾದಲ್ಲಿ ಈ ದುರ್ಘಟನೆ ನಡೆದಿದ್ದು, ಆರೋಪಿಯನ್ನು ಬಿರೇನ್ ಲಾಡುಮೋರ್ ಅಹಿರ್ ಎಂದು ಗುರುತಿಸಲಾಗಿದೆ, ಅವರು ನಿರ್ಮಾಣ ಉದ್ಯಮಿ ಮತ್ತು ರೆಸ್ಟೋರೆಂಟ್‌ನವರು ಎಂದು ಸೂರತ್ ಗ್ರಾಮಾಂತರ ಪೊಲೀಸ್ ಉಪಾಧೀಕ್ಷಕ ಎಸ್‌ಎನ್ ರಾಥೋಡ್ ಪಿಟಿಐಗೆ ತಿಳಿಸಿದ್ದಾರೆ.

ಮುಂಬೈ ಮತ್ತು ರಾಜಸ್ಥಾನದಲ್ಲಿ ತಲೆಮರೆಸಿಕೊಂಡಿದ್ದ ವಾಹನದ ಮಾಲೀಕನನ್ನು ಗುಜರಾತ್‌ನ ಸೂರತ್ ಪೊಲೀಸರು ಗುರುವಾರ ಬಂಧಿಸಿದ್ದಾರೆ.
ಗಾಯಗೊಂಡವರನ್ನು ಸೂರತ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಪಘಾತ ಸಂಭವಿಸಿದ ಸ್ಥಳದಿಂದ ಸುಮಾರು 12 ಕಿಲೋಮೀಟರ್ ದೂರದಲ್ಲಿರುವ ಪ್ರದೇಶದಲ್ಲಿ ಮೃತದೇಹ ಪತ್ತೆಯಾಗಿತ್ತು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Published On - 10:24 am, Fri, 27 January 23