ಗುಜರಾತ್: ಹಾಡಹಗಲೇ ರಸ್ತೆಯಲ್ಲಿ ಬಾಲಕಿಗೆ ವೃದ್ಧನಿಂದ ಲೈಂಗಿಕ ಕಿರುಕುಳ

ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ ಅಪ್ರಾಪ್ತ ಬಾಲಕಿಯರ ಮೇಲಿನ ಲೈಂಗಿಕ ದೌರ್ಜನ್ಯದ ಪ್ರಕರಣಗಳು ಹೆಚ್ಚಾಗುತ್ತಿವೆ. ಗುಜರಾತ್​ನ ಜಾಮ್ನಗರದಲ್ಲಿ ಹಾಡಹಗಲೇ ವೃದ್ಧನೊಬ್ಬ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಘಟನೆ ಸೆಪ್ಟೆಂಬರ್ 23, ಗುರುವಾರ ಸಂಜೆ 4. 30 ರ ಸುಮಾರಿಗೆ ಜಾಮ್‌ನಗರದ ಅಪ್ನಾ ಬಜಾರ್ ಪ್ರದೇಶದ ಬಳಿ ನಡೆದಿದೆ ಎಂದು ವರದಿಯಾಗಿದೆ.

ಗುಜರಾತ್: ಹಾಡಹಗಲೇ ರಸ್ತೆಯಲ್ಲಿ ಬಾಲಕಿಗೆ ವೃದ್ಧನಿಂದ ಲೈಂಗಿಕ ಕಿರುಕುಳ
ಗುಜರಾತ್ ಬಾಲಕಿ

Updated on: Oct 26, 2025 | 1:35 PM

ಜಾಮ್ನಗರ, ಅಕ್ಟೋಬರ್ 26: ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ ಅಪ್ರಾಪ್ತ ಬಾಲಕಿಯರ ಮೇಲಿನ ಲೈಂಗಿಕ ದೌರ್ಜನ್ಯದ ಪ್ರಕರಣಗಳು ಹೆಚ್ಚಾಗುತ್ತಿವೆ. ಗುಜರಾತ್​ನ ಜಾಮ್ನಗರದಲ್ಲಿ ಹಾಡಹಗಲೇ ವೃದ್ಧನೊಬ್ಬ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಘಟನೆ ಸೆಪ್ಟೆಂಬರ್ 23, ಗುರುವಾರ ಸಂಜೆ 4. 30 ರ ಸುಮಾರಿಗೆ ಜಾಮ್‌ನಗರದ ಅಪ್ನಾ ಬಜಾರ್ ಪ್ರದೇಶದ ಬಳಿ ನಡೆದಿದೆ ಎಂದು ವರದಿಯಾಗಿದೆ.

ವರದಿಗಳ ಪ್ರಕಾರ ಅಲ್ಲ ಆಡವಾಡುತ್ತಾ ಕೆಲವು ಮಕ್ಕಳನ್ನು ಕರೆದು ಮೊದಲು ಬಾಲಕಿಯೊಬ್ಬಳಿಗೆ ಮುತ್ತು ಕೊಟ್ಟಿದ್ದಾನೆ. ಬಳಿಕ ಆಕೆಯನ್ನು ತೊಡೆಯ ಮೇಲೆ ಕೂರಿಸಿಕೊಂಡು ಅನುಚಿತವಾಗಿ ವರ್ತಿಸಿದ್ದಾನೆ. ಇಡೀ ಘಟನೆ ಹತ್ತಿರದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಆ ವ್ಯಕ್ತಿ ಮಗುವಿನೊಂದಿಗೆ ಅಸಭ್ಯವಾಗಿ ವರ್ತಿಸುತ್ತಿರುವುದು ದೃಶ್ಯಾವಳಿಯಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ.

ಆ ವ್ಯಕ್ತಿಯ ಅಶ್ಲೀಲ ವರ್ತನೆಯನ್ನು ಗಮನಿಸಿದ ಸ್ಥಳದಲ್ಲಿದ್ದ ಮತ್ತೊಂದು ಮಗು ಬಾಲಕಿಯನ್ನು ದೂರ ಎಳೆಯಲು ಪ್ರಯತ್ನಿಸಿತು. ನಂತರ, ಯುವಕನೊಬ್ಬ ಮಧ್ಯಪ್ರವೇಶಿಸಿ, ವೃದ್ಧನಿಂದ ಬಾಲಕಿಯನ್ನು ರಕ್ಷಿಸಿದ್ದಾರೆ. ನಾಚಿಕೆಗೇಡಿನ ಕೃತ್ಯ ಎಸಗಿದ ನಂತರ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ.

ಮತ್ತಷ್ಟು ಓದಿ: ಬೆಂಗಳೂರಿನ ಪಿಜಿಯಲ್ಲಿ ಮಲಗಿದ್ದ ಯುವತಿಗೆ ಲೈಂಗಿಕ ದೌರ್ಜನ್ಯ; ಹಲ್ಲೆ ಮಾಡಿ ದುಡ್ಡಿನೊಂದಿಗೆ ಆರೋಪಿ ಪರಾರಿ

ಈ ವೈರಲ್ ವಿಡಿಯೋ ಸಾರ್ವಜನಿಕರಲ್ಲಿ ವ್ಯಾಪಕ ಆಕ್ರೋಶವನ್ನು ಹುಟ್ಟುಹಾಕಿದೆ, ವಿಶೇಷವಾಗಿ ಇಂತಹ ಘಟನೆ ಸಾರ್ವಜನಿಕ ರಸ್ತೆಯಲ್ಲಿ ನಡೆದಾಗಿನಿಂದ ಅನೇಕರು ನಗರದ ಸುರಕ್ಷತೆ ಮತ್ತು ಪೊಲೀಸ್ ವ್ಯವಸ್ಥೆಯನ್ನು ಪ್ರಶ್ನಿಸುತ್ತಿದ್ದಾರೆ.

ವಿಡಿಯೋ

ವೈರಲ್ ಆದ ವಿಡಿಯೋಗೆ ಪ್ರತಿಕ್ರಿಯಿಸಿದ ಒಬ್ಬ ಬಳಕೆದಾರರು, ಆ ವ್ಯಕ್ತಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ