ನೀನೇ ಯಾಕೆ ಫ್ರೆಂಡ್ಗೆ ದಿನಾ ಲಿಫ್ಟ್ ಕೊಡ್ಬೇಕು ಎಂದು ತಾಯಿ ಕೇಳಿದ್ದಕ್ಕೆ ಬಾಲಕಿ ಆತ್ಮಹತ್ಯೆ
ಸ್ನೇಹಿತನಿಗೆ ಪ್ರತಿ ದಿನವೂ ನೀನೇ ಏಕೆ ಲಿಫ್ಟ್ ಕೊಡಬೇಕು ಎಂದು ಕೇಳಿದ್ದಕ್ಕೆ 17 ವರ್ಷದ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗುಜರಾತ್ನಲ್ಲಿ ನಡೆದಿದೆ. 11 ನೇ ತರಗತಿಯ ವಿದ್ಯಾರ್ಥಿನಿ ತನ್ನ ತಮ್ಮನೊಂದಿಗೆ ಮನೆಯಲ್ಲಿ ಒಬ್ಬಂಟಿಯಾಗಿದ್ದಾಗ ಈ ಘಟನೆ ನಡೆದಿದೆ. ಎರಡು ದಿನಗಳ ಹಿಂದೆ, ತನ್ನ ಮಗಳು ದಿನ ಸ್ನೇಹಿತನಿಗೆ ಲಿಫ್ಟ್ ನೀಡುವುದನ್ನು ತಾಯಿ ವಿರೋಧಿಸಿದ್ದರು. ಫ್ರೆಂಡ್ ತನ್ನ ಮಗಳನ್ನು ಅವಲಂಬಿಸುವ ಬದಲು ಸ್ವಂತ ವಾಹನವನ್ನು ಏಕೆ ಬಳಸಬಾರದು ಎಂದು ತಾಯಿ ಪ್ರಶ್ನಿಸಿದ್ದರು.

ವಡೋದರಾ, ಏಪ್ರಿಲ್ 06: ಇತ್ತೀಚಿನ ದಿನಗಳಲ್ಲಿ ಸಣ್ಣ ಪುಟ್ಟ ವಿಷಯಗಳಿಗೂ ಮಕ್ಕಳು ತಪ್ಪು ನಿರ್ಧಾರ ತೆಗೆದುಕೊಂಡುಬಿಡುತ್ತಾರೆ. ಪೋಷಕರಾಗಲೀ ಅಥವಾ ಶಿಕ್ಷಕರಾಗಲೀ ಏನು ಹೇಳುತ್ತಿದ್ದಾರೆ ಎಂದು ಕೇಳುವ ವ್ಯವಧಾನವೂ ಇಲ್ಲವಾಗಿದೆ. ನಿನ್ನ ಫ್ರೆಂಡ್(Friend)ಗೆ ಯಾಕೆ ದಿನಾ ನೀನೇ ಲಿಫ್ಟ್ ಕೊಡಬೇಕು ಅವರ ಮನೆಯಲ್ಲಿ ವಾಹನ ಇಲ್ಲವೇ ಎಂದು ಪ್ರಶ್ನಿಸಿದ್ದಕ್ಕೆ 17 ವರ್ಷದ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗುಜರಾತ್ನ ವಡೋದರಾದಲ್ಲಿ ನಡೆದಿದೆ.
ಮೊದಲೆಲ್ಲಾ ತರಗತಿಯಲ್ಲಿ ಫೇಲ್ ಆದರೆ ಮನೆಯಲ್ಲಿ ಏನೆನ್ನುತ್ತಾರೋ ಎನ್ನುವ ಆಲೋಚನೆಯಲ್ಲಿ ತಿಳಿಯದೇ ಮಕ್ಕಳು ಆತ್ಮಹತ್ಯೆಂತಹ ದಾರಿ ತುಳಿದುಬಿಡುತ್ತಿದ್ದರು. ಆದರೆ ಈಗ ಮೊಬೈಲ್, ಟಿವಿ ಯಾಕೆ ನೋಡ್ತೀಯಾ , ಫ್ರೆಂಡ್ ಜತೆ ಯಾಕೆ ಮಾತಾಡ್ತೀಯಾ ಹೀಗೆ ಸಣ್ಣ ಪುಟ್ಟ ಪ್ರಶ್ನೆಗಳನ್ನು ಪೋಷಕರು ಕೇಳಿದರೂ ಅದನ್ನು ಕೇಳುವ ಶಾಂತ ಸ್ವಭಾವ ಮಕ್ಕಳಿಗಿಲ್ಲವಾಗಿದೆ.
11 ನೇ ತರಗತಿಯ ವಿದ್ಯಾರ್ಥಿನಿ ತನ್ನ ತಮ್ಮನೊಂದಿಗೆ ಮನೆಯಲ್ಲಿ ಒಬ್ಬಂಟಿಯಾಗಿದ್ದಾಗ ಈ ಘಟನೆ ನಡೆದಿದೆ. ಎರಡು ದಿನಗಳ ಹಿಂದೆ, ತನ್ನ ಮಗಳು ದಿನ ಸ್ನೇಹಿತನಿಗೆ ಲಿಫ್ಟ್ ನೀಡುವುದನ್ನು ತಾಯಿ ವಿರೋಧಿಸಿದ್ದರು. ಫ್ರೆಂಡ್ ತನ್ನ ಮಗಳನ್ನು ಅವಲಂಬಿಸುವ ಬದಲು ಸ್ವಂತ ವಾಹನವನ್ನು ಏಕೆ ಬಳಸಬಾರದು ಎಂದು ತಾಯಿ ಪ್ರಶ್ನಿಸಿದ್ದರು.
ಬಾಲಕಿಯ ತಾಯಿ ಗಂಡ ತೋರಿಕೊಂಡಿದ್ದು, ಮನೆಯ ಜವಾಬ್ದಾರಿ ಸಂಪೂರ್ಣವಾಗಿ ಆಕೆಯ ಮೇಲಿದೆ. ಅವರು ನಾಲ್ಕೈದು ಮನೆ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದಾರೆ.ಕೆಲಸದಿಂದ ಮನೆಗೆ ಹಿಂದಿರುಗಿದಾಗ ಮಗಳು ನೇಣು ಬಿಗಿದಿರುವುದನ್ನು ಕಂಡು ಅಧಿಕಾರಿಗಳಿಗೆ ಮಾಹಿತಿ ನೀಡಿದರು.ಪೊಲೀಸರು ಸ್ಥಳಕ್ಕೆ ಆಗಮಿಸಿ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದರು.
ಮತ್ತಷ್ಟು ಓದಿ: ಪಂಜಾಬ್: ಮಾಲ್ನ 4ನೇ ಮಹಡಿಯಿಂದ ಹಾರಿ ಬಾಲಕ ಆತ್ಮಹತ್ಯೆ
ಸ್ಥಳದಿಂದ ಆಕೆಯ ತಾಯಿಗೆ ಬರೆದಿರುವ ಆತ್ಮಹತ್ಯೆ ಪತ್ರ ಪತ್ತೆಯಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಮೃತ ಬಾಲಕಿ ತನ್ನ ತಾಯಿಗೆ ಪತ್ರ ಬರೆದು, “ಅಮ್ಮಾ, ನಿಮ್ಮ ಮಗಳು ನಿಮ್ಮ ನಿಯಂತ್ರಣದಲ್ಲಿಲ್ಲ. ಎಲ್ಲರೂ ಸಂತೋಷವಾಗಿರಬೇಕು. ನಾನು ಹೋಗುತ್ತಿದ್ದೇನೆ ಎಂದು ಬರೆದಿದ್ದಾಳೆ. ಎರಡು ದಿನಗಳ ಹಿಂದೆ ಮಗಳು ಆಗಾಗಾ ಸ್ನೇಹಿತನೊಂದಿಗೆ ಓಡಾಡುತ್ತಿರುವುದಕ್ಕೆ ಗದರಿಸಿದ್ದಾಗಿ ತಾಯಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಆಕಸ್ಮಿಕ ಸಾವಿನ ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ