AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

10 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಮಾಡಿ ಗುಪ್ತಾಂಗಕ್ಕೆ ರಾಡ್ ಹಾಕಿ ಚಿತ್ರಹಿಂಸೆ ಕೊಟ್ಟ ಪಾಪಿ

ಹತ್ತು ವರ್ಷದ ಬಾಲಕಿ ಮೇಲೆ ವ್ಯಕ್ತಿಯೊಬ್ಬ ಅತ್ಯಾಚಾರ ಮಾಡಿ ಗುಪ್ತಾಂಗಕ್ಕೆ ರಾಡ್ ಹಾಕಿ ಚಿತ್ರಹಿಂಸೆ ಕೊಟ್ಟಿರುವ ಘಟನೆ ಗುಜರಾತ್​ನಲ್ಲಿ ನಡೆದಿದೆ. ಗುಜರಾತ್​ನ ಭರೂಚ್​ನಲ್ಲಿ ಈ ಘಟನೆ ನಡೆದಿದೆ, 36 ವರ್ಷದ ವ್ಯಕ್ತಿಯೊಬ್ಬ ಬಾಲಕಿಯನ್ನು ಅಪಹರಿಸಿ ಅತ್ಯಾಚಾರವೆಸಗಿದ್ದಾನೆ. ಆತ ಜಾರ್ಖಂಡ್​ ಮೂಲದವನಾಗಿದ್ದು ಪೊಲೀಸರು ಬಂಧಿಸಿದ್ದಾರೆ..ಆರೋಪಿಯು ಸಂತ್ರಸ್ತೆಯ ತಂದೆಯೊಂದಿಗೆ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದ.

10 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಮಾಡಿ ಗುಪ್ತಾಂಗಕ್ಕೆ ರಾಡ್ ಹಾಕಿ ಚಿತ್ರಹಿಂಸೆ ಕೊಟ್ಟ ಪಾಪಿ
ಸಾಂದರ್ಭಿಕ ಚಿತ್ರImage Credit source: Hindustan Times
ನಯನಾ ರಾಜೀವ್
|

Updated on: Dec 19, 2024 | 10:08 AM

Share

ಹತ್ತು ವರ್ಷದ ಬಾಲಕಿ ಮೇಲೆ ವ್ಯಕ್ತಿಯೊಬ್ಬ ಅತ್ಯಾಚಾರ ಮಾಡಿ ಗುಪ್ತಾಂಗಕ್ಕೆ ರಾಡ್ ಹಾಕಿ ಚಿತ್ರಹಿಂಸೆ ಕೊಟ್ಟಿರುವ ಘಟನೆ ಗುಜರಾತ್​ನಲ್ಲಿ ನಡೆದಿದೆ. ಗುಜರಾತ್​ನ ಭರೂಚ್​ನಲ್ಲಿ ಈ ಘಟನೆ ನಡೆದಿದೆ, 36 ವರ್ಷದ ವ್ಯಕ್ತಿಯೊಬ್ಬ ಬಾಲಕಿಯನ್ನು ಅಪಹರಿಸಿ ಅತ್ಯಾಚಾರವೆಸಗಿದ್ದಾನೆ. ಆತ ಜಾರ್ಖಂಡ್​ ಮೂಲದವನಾಗಿದ್ದು ಪೊಲೀಸರು ಬಂಧಿಸಿದ್ದಾರೆ.

ಆರೋಪಿಯು ಸಂತ್ರಸ್ತೆಯ ತಂದೆಯೊಂದಿಗೆ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದ.ಭರೂಚ್‌ನ ಝಗರಿಯಾ ಕೈಗಾರಿಕಾ ಪ್ರದೇಶದಲ್ಲಿ ಸೋಮವಾರ ಈ ಘಟನೆ ನಡೆದಿದೆ. ಬಾಲಕಿಯನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತು, ಗಾಯದಿಂದಾಗಿ ಪರಿಸ್ಥಿತಿ ಹದಗೆಟ್ಟಿತ್ತು ಕೂಡಲೇ ಶಸ್ತ್ರಚಿಕಿತ್ಸೆ ಮಾಡಬೇಕಾಯಿತು.

ಸಂತ್ರಸ್ತೆಯನ್ನು ವಡೋದರಾದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಎನ್​ಡಿಟಿವಿ ವರದಿ ಪ್ರಕಾರ ವಿಜಯ್ ಪಾಸ್ವಾನ್ ಎಂಬ ವ್ಯಕ್ತಿ ಅಪಾಯಕ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದಾನೆ ಮತ್ತು ಆಕೆಯ ಖಾಸಗಿ ಅಂಗಕ್ಕೆ ಕಬ್ಬಿಣದ ರಾಡ್ ಹಾಕಿ ದುಷ್ಕೃತ್ಯ ಮೆರೆದಿದ್ದಾನೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಮಯೂರ್ ಚಾವ್ಡಾ ಹೇಳಿದ್ದಾರೆ.

ಮತ್ತಷ್ಟು ಓದಿ: ಬಾಲಕಿ ಮೇಲೆ ಅತ್ಯಾಚಾರ: ಸಹಾಯ ಮಾಡಿದ್ದ ಆರೋಪಿ ಸ್ನೇಹಿತನಿಗೂ ಶಿಕ್ಷೆ ವಿಧಿಸಿದ ಕೋರ್ಟ್​

ಮತ್ತೊಂದು ಘಟನೆ

ಜಾಮೀನಿನ ಮೇಲೆ ಹೊರ ಬಂದು ಬಾಲಕಿಯನ್ನು ಕೊಂದು ತುಂಡರಿಸಿದ ಆರೋಪಿ

ವ್ಯಕ್ತಿಯೊಬ್ಬ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಜೈಲು ಪಾಲಾಗಿದ್ದ, ಜಾಮೀನಿನ ಮೇಲೆ ಹೊರಬಂದು ಆಕೆಯನ್ನು ಕೊಲೆ ಮಾಡಿ ದೇಹವನ್ನು ತುಂಡರಿಸಿ ಎಲ್ಲೆಡೆ ಎಸೆದಿರುವ ಘಟನೆ ಒಡಿಶಾದಲ್ಲಿ ನಡೆದಿದೆ. ಒಡಿಶಾದ ಸುಂದರ್‌ಗಢ್ ಜಿಲ್ಲೆಯಲ್ಲಿ ಘಟನೆ ನಡೆದಿದೆ. ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದ ಆರೋಪಿ ಕುನು ಕಿಸಾನ್ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ.ಶಿಕ್ಷೆ ತಪ್ಪಿಸಲು ಆಕೆಯನ್ನು ಕೊಲ್ಲಲು ಸಂಚು ರೂಪಿಸಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಬಾಲಕಿಯನ್ನು ಜಾರ್ಸುಗುಡಾದಿಂದ ಅಪಹರಿಸಿ ರೂರ್ಕೆಲಾದಲ್ಲಿ ಕೊಲೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆಕೆ ಕಾಣೆಯಾಗಿರುವ ಕುರಿತು ಪ್ರಕರಣ ದಾಖಲಿಸಲಾಗಿತ್ತು, ಮೊದಲು ಆರೋಪಿಯ ಮೇಲೆ ಅನುಮಾನ ಬಂದಿತ್ತು, ಆಗ ಎಲ್ಲೆಲ್ಲಿ ಸಿಸಿಟಿವಿ ಇದೆಯೋ ಅಲ್ಲೆಲ್ಲಾ ಪರಿಶೀಲಿಸಿದಾಗ ಆರೋಪಿ ಹಾಗೂ ಬಾಲಕಿ ಒಟ್ಟಿಗೆ ಇರುವುದು ಕಂಡುಬಂದಿತ್ತು.

ಕಿಸಾನ್ ನಂತರ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದ. ಆರಂಭದಲ್ಲಿ ದೇಹವನ್ನು ಬ್ರಹ್ಮಿಣಿ ನದಿಗೆ ಎಸೆದಿರುವುದಾಗಿ ಹೇಳಿಕೊಂಡಿದ್ದ. ನಂತರ ಹನುಮಾನ್ ಬಾಟಿಕಾ-ತಾರಕೇರಾ ಅಣೆಕಟ್ಟಿನ ಬಳಿ ಕೆಸರು ತುಂಬಿದ ಪ್ರದೇಶದ ಕೆಲವು ಭಾಗಗಳಲ್ಲಿ ಇಟ್ಟಿರುವುದಾಗಿ ಒಪ್ಪಿಕೊಂಡಿದ್ದ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ