Gujarat Paragliding Accident: ಪ್ಯಾರಾಗ್ಲೈಡಿಂಗ್ ಮಾಡುವ ವೇಳೆ ದಕ್ಷಿಣ ಕೊರಿಯಾದ ವ್ಯಕ್ತಿ ಬಿದ್ದು ಸಾವು

| Updated By: Digi Tech Desk

Updated on: Dec 26, 2022 | 11:24 AM

ದಕ್ಷಿಣ ಕೊರಿಯಾದ ವ್ಯಕ್ತಿಯೊಬ್ಬರು ಗುಜರಾತ್‌ನ ಮೆಹ್ಸಾನಾ ಜಿಲ್ಲೆಯ ಕಡಿ ಬಳಿ ಶನಿವಾರ ಪ್ಯಾರಾಗ್ಲೈಡಿಂಗ್ ಹಾರಾಟ ಮಾಡಿದ್ದಾರೆ. ಹಾರಾಟ ವೇಳೆ ಪ್ಯಾರಾಗ್ಲೈಡಿಂಗ್ ಅಪಘಾತಗೊಂಡ ದಕ್ಷಿಣ ಕೊರಿಯಾದ ವ್ಯಕ್ತಿ ಸಾವನ್ನಪ್ಪಿದ್ದಾರೆ.

Gujarat Paragliding Accident: ಪ್ಯಾರಾಗ್ಲೈಡಿಂಗ್ ಮಾಡುವ ವೇಳೆ ದಕ್ಷಿಣ ಕೊರಿಯಾದ ವ್ಯಕ್ತಿ ಬಿದ್ದು ಸಾವು
Paragliding Accident
Follow us on

ಮೆಹ್ಸಾನಾ: ದಕ್ಷಿಣ ಕೊರಿಯಾದ ವ್ಯಕ್ತಿಯೊಬ್ಬರು ಗುಜರಾತ್‌ನ ಮೆಹ್ಸಾನಾ ಜಿಲ್ಲೆಯ ಕಡಿ ಬಳಿ ಶನಿವಾರ ಪ್ಯಾರಾಗ್ಲೈಡಿಂಗ್ ಹಾರಾಟ ಮಾಡಿದ್ದಾರೆ. ಹಾರಾಟ ವೇಳೆ ಪ್ಯಾರಾಗ್ಲೈಡಿಂಗ್ ಅಪಘಾತಗೊಂಡ ದಕ್ಷಿಣ ಕೊರಿಯಾದ ವ್ಯಕ್ತಿ ಸಾವನ್ನಪ್ಪಿದ್ದಾರೆ. ಸಾವನ್ನಪ್ಪಿರುವ ವ್ಯಕ್ತಿಯನ್ನು ಶಿನ್ ಬೈಯೋನ್ ಮೂನ್ ಎಂದು ಗುರುತಿಸಲಾಗಿದೆ. ಪ್ಯಾರಾಗ್ಲೈಡಿಂಗ್ ಸಮಯದಲ್ಲಿ ಮೇಲಾವರಣ ಸರಿಯಾಗಿ ಓಪನ್ ಆಗಿಲ್ಲ, ಈ ಕಾರಣದಿಂದ 50 ಅಡಿ ಎತ್ತರದಿಂದ ಬಿದ್ದು ಸಾವನ್ನಪ್ಪಿದ್ದಾರೆ.

ಅರೆಪ್ರಜ್ಞಾವಸ್ಥೆಯಲ್ಲಿದ್ದ ಆತನನ್ನು ಸ್ನೇಹಿತರು ಖಾಸಗಿ ಆಸ್ಪತ್ರೆಗೆ ಕರೆದೊಯ್ದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಕಡಿ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ನಿಕುಂಜ್ ಪಟೇಲ್ ಪ್ರಕಾರ, ಶಿನ್ ವಡೋದರಾ ಪ್ರವಾಸದಲ್ಲಿದ್ದರು. ಶಿನ್ ಬೈಯೋನ್ ಮೂನ್ ಮತ್ತು ಅವರ ಕೊರಿಯಾದ ಸ್ನೇಹಿತ ಶನಿವಾರ ಸಂಜೆ ಕಾಡಿ ಪಟ್ಟಣದ ಬಳಿಯ ವಿಸತ್‌ಪುರ ಗ್ರಾಮದಲ್ಲಿ ಪ್ಯಾರಾಗ್ಲೈಡಿಂಗ್‌ ಮಾಡಲು ಇಲ್ಲಿರುವ ತಮ್ಮ ಸ್ನೇಹಿತರನ್ನು ಭೇಟಿ ಮಾಡಿದ್ದಾರೆ. ಶೈನ್ ಮತ್ತು ಅವನ ಸ್ನೇಹಿತ ಪ್ಯಾರಾಗ್ಲೈಡಿಂಗ್ ಮಾಡಿದ್ದಾರೆ ಎಂದು ಹೇಳಲಾಗಿದೆ.

ಈ ಪ್ರಕರಣವನ್ನು ಕಾಡಿ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿದೆ ಮತ್ತು ವಡೋದರಾ ಮತ್ತು ಕೊರಿಯನ್ ರಾಯಭಾರಿ ಕಚೇರಿ ಶಿನ್ ಬೈಯೋನ್ ಮೂನ್ ಅವರ ಕುಟುಂಬಕ್ಕೆ ಮತ್ತು ಸ್ನೇಹಿತರಿಗೆ ಈ ಘಟನೆಯ ಬಗ್ಗೆ ಬಗ್ಗೆ ತಿಳಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ಸೇರಿಸಲಾಗಿದೆ.

ಇದನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:14 am, Mon, 26 December 22