Bengaluru Accident: ಕ್ರಿಸ್ಮಸ್ ಆಚರಣೆಗೆಂದು ಚರ್ಚ್ಗೆ ತೆರಳುತ್ತಿದ್ದಾಗ ಅಪಘಾತ; ಯುವಕ ಸಾವು
ಗೋಪಾಲಗೌಡ ಜಂಕ್ಷನ್ ಬಳಿ ವೇಗವಾಗಿ ಬಂದು ನಿಯಂತ್ರಣ ತಪ್ಪಿ ಫುಟ್ ಪಾತ್ ಗೋಡೆಗೆ ಬೈಕ್ ಗುದ್ದಿದೆ. ಈ ಪರಿಣಾಮ ಬೈಕ್ ಚಲಾಯಿಸುತ್ತಿದ್ದ ಅಲೆಕ್ಸ್ ತಲೆಗೆ ತೀವ್ರ ಪೆಟ್ಟು ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಬೆಂಗಳೂರು: ಕ್ರಿಸ್ಮಸ್(Christmas) ಹಿನ್ನೆಲೆ ದೇವರ ಪ್ರಾರ್ಥನೆ ಸಲ್ಲಿಸಲು ಚರ್ಚ್ಗೆ ತೆರಳುತ್ತಿದ್ದ ವೇಳೆ ಭೀಕರ ಅಪಘಾತ(Accident) ಸಂಭವಿಸಿ ಯುವಕ ಸ್ಥಳದಲ್ಲೇ ಮೃತಪಟ್ಟ ಘಟನೆ ಬೆಂಗಳೂರಿನ ಗೋಪಾಲಗೌಡ ಜಂಕ್ಷನ್ ಬಳಿ ನಡೆದಿದೆ. ಹಬ್ಬದ ಸಂಭ್ರಮದಲ್ಲಿದ್ದ ಯುವಕ ಆಲೆಕ್ಸ್ (25) ಗೋಪಾಲಗೌಡ ಜಂಕ್ಷನ್ ಬಳಿಯ ರಸ್ತೆ ಬದಿಯಲ್ಲಿರುವ ಪುಟ್ ಪಾತ್ ತಡೆಗೋಡೆಗೆ ಬೈಕ್ ಡಿಕ್ಕಿ ಹೊಡೆದು, ನಿಯಂತ್ರಣ ತಪ್ಪಿ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಹಿಂಬದಿ ಕುಳಿತಿದ್ದ ಸತೀಶ್ ಎಂಬಾತನಿಗೆ ಗಂಭೀರ ಗಾಯಗಳಾಗಿವೆ.
ಕ್ರಿಸ್ಮಸ್ ಹಿನ್ನೆಲೆ ಬೆಳಗಿನ ಜಾವ ಸುಮಾರು 3.30ರ ಸುಮಾರಿಗೆ ಆಲೆಕ್ಸ್ ಮತ್ತು ಸತೀಶ್ ರಿಜಸ್ಟರ್ ನಂಬರ್ ಸಹ ಹಾಕದ ಹೊಸ ಬೈಕ್ನಲ್ಲಿ ಸೆಂಟ್ ಪ್ಯಾಟ್ರಿಕ ಬೆಸಲಿಕಾ ಚರ್ಚ್ಗೆ ತೆರಳುತ್ತಿದ್ದರು. ಈ ವೇಳೆ ಗೋಪಾಲಗೌಡ ಜಂಕ್ಷನ್ ಬಳಿ ವೇಗವಾಗಿ ಬಂದು ನಿಯಂತ್ರಣ ತಪ್ಪಿ ಫುಟ್ ಪಾತ್ ಗೋಡೆಗೆ ಬೈಕ್ ಗುದ್ದಿದೆ. ಈ ಪರಿಣಾಮ ಬೈಕ್ ಚಲಾಯಿಸುತ್ತಿದ್ದ ಅಲೆಕ್ಸ್ ತಲೆಗೆ ತೀವ್ರ ಪೆಟ್ಟು ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದು ಹಿಂಬದಿ ಸವಾರ ಸತೀಶ್ನಿಗೆ ಗಾಯಗಳಾಗಿವೆ. ಗಾಯಾಳುಗೆ ಬೌರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಕಬ್ಬನ್ ಪಾರ್ಕ್ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಮೇಕಪ್ಗೆ ಹಣ ಕೊಡದ ಪತಿಯೇ ಬೇಡವೆಂದು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ಪತ್ನಿ
ಲವ್ ಜಿಹಾದ್ ತೆಡೆಯಲು ಯುವತಿಯರಿಗೆ ಕ್ಲಾಸ್
ನಮ್ಮಯ ಹಕ್ಕಿ ಕಳ್ಕೊಂಡ್ಬಿಟ್ಟೆ ನಿಮ್ಮಯ ಹಕ್ಕಿ ಕಾಪಾಡ್ಕೊಳ್ಳಿ ಎನ್ನುವ ಸಂದೇಶದೊಂದಿಗೆ ಬೆಂಗಳೂರಿನಲ್ಲಿ ಲವ್ ಜಿಹಾದ್ ತಡೆಯಲು ಯುವತಿಯರಿಗೆ ಎಕ್ಸಿಬಿಷನ್ ಆಯೋಜನೆ ಮಾಡಲಾಗಿದೆ. ರಾಜ್ಯದಲ್ಲಿ ದಿನದಿಂದ ದಿನಕ್ಕೆ ಲವ್ ಜಿಹಾದ್ ಪ್ರಕರಣಗಳು ಹೆಚ್ಚಾಗುತ್ತಿವೆ. ಸಾವಿರಾರು ಹಿಂದೂ ಯುವತಿಯರು ಲವ್ ಜಿಹಾದ್ ಬಲೆಗೆ ಬಿದ್ದು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇದನ್ನು ತಡೆಗಟ್ಟಲು ಹಿಂದೂಪರ ಸಂಘಟನೆಗಳು ಮುಂದಾಗಿದ್ದು ಸೋದರಿ ನಿವೇದಿತಾ ಪ್ರತಿಷ್ಠಾನದಿಂದ ವಿಶೇಷ ಕ್ಲಾಸ್ ಆರಂಭಿಸಿದ್ದಾರೆ. ಬಸವನಗುಡಿಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ನಲ್ಲಿ ಜಾಗೃತಿಯ ಪಾಠ ನಡೆಯುತ್ತಿದೆ. ಮುಸ್ಲಿಂ ಯುವಕರ ಜಿಹಾದ್ ನಿಂದ ಹೇಗೆ ತಪ್ಪಿಸಿಕೊಳ್ಳುವುದು ಎಂಬುದರ ಬಗ್ಗೆ ಯುವತಿಯರಿಗೆ ಜಾಗೃತಿ ಮೂಡಿಸಲಾಗುತ್ತಿದೆ. ಕ್ರೌರ್ಯದಲ್ಲಿ ಎಂಡ್ ಆದಾ ನಿಜ ಘಟನೆಗಳ ಬಗ್ಗೆ ತಿಳಿಸುವ ಮೂಲಕ, ಲವ್ ಜಿಹಾದ್ ಹೆಸ್ರಲ್ಲಿ ಮದುವೆಯಾಗುವ ಮುಸ್ಲಿಂ ಹುಡುಗರ ಕ್ರೂರತೆ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ದೇಶದಾದ್ಯಂತ ನಡೆದ ಲವ್ ಜಿಹಾದ್ಗಳ ಆರಂಭ ಹಾಗೂ ಅತ್ಯಂತ ಬಗ್ಗೆ ತಿಳುವಳಿಕೆ ನೀಡಲಾಗುತ್ತಿದೆ. ಕಾರ್ಯಕ್ರಮದಲ್ಲಿ ಚಿಂತಕ ಚಕ್ರವರ್ತಿ ಸೂಲಿಬೆಲೆ, ಹಿಂದೂ ಜನ ಜಾಗೃತಿಯ ಮೋಹನ್ ಗೌಡ ಹಾಗೂ ರಣರಾಗಿಣಿ ಬ್ರಿಗೇಡ್ ನ ಭವ್ಯ ಗೌಡ, ಹಾಗೂ ಪ್ರಶಾಂತ್ ಸಂಬರ್ಗಿ ಸೇರಿದಂತೆ ಹಲವಾರು ಯುವತಿಯರು ಭಾಗಿಯಾಗಲಿದ್ದಾರೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 12:10 pm, Sun, 25 December 22