ಮೇಕಪ್​ಗೆ ಹಣ ಕೊಡದ ಪತಿಯೇ ಬೇಡವೆಂದು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ಪತ್ನಿ

ಪತಿ ತನ್ನ ಖರ್ಚುಗಳಿಗೆ ಹಣವನ್ನು ನೀಡುವುದಿಲ್ಲ ಅಥವಾ ಮೇಕಪ್ ವಸ್ತುಗಳನ್ನು ಖರೀದಿಸಲು ಹಣವನ್ನು ನೀಡುವುದಿಲ್ಲ ಎಂದು ಆರೋಪಿಸಿ ಮಹಿಳೆಯೊಬ್ಬರು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.

ಮೇಕಪ್​ಗೆ ಹಣ ಕೊಡದ ಪತಿಯೇ ಬೇಡವೆಂದು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ಪತ್ನಿ
ಮೇಕಪ್​ಗೂ ಹಣ ಕೊಡಲ್ಲ, ಖರ್ಚಿಗೂ ಹಣ ಕೊಡಲ್ಲ; ಇಂತಹ ಪತಿಯೇ ಬೇಡವೆಂದು ಪತ್ನಿಯಿಂದ ವಿಚ್ಛೇದನಕ್ಕೆ ಅರ್ಜಿ
Follow us
| Updated By: Rakesh Nayak Manchi

Updated on:Dec 25, 2022 | 12:09 PM

ಲಖನೌ: ಗಂಡನ ಉದಾಸೀನತೆಯೋ.. ನಿರಾಕರಣೆಯ ಸ್ವಭಾವವೋ.. ಒಟ್ಟಾರೆಯಾಗಿ ಪತಿಯ ನಡೆಯಿಂದ ಅಸಮಾಧಾನಗೊಂಡ ಪತ್ನಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ಪ್ರಸಂಗ ಉತ್ತರ ಪ್ರದೇಶ (Uttara Pradesh)ದ ಅಲಿಗಢದಲ್ಲಿ ನಡೆದಿದೆ. ಪತಿ ತನ್ನ ಖರ್ಚುಗಳಿಗೆ ಹಣವನ್ನು ನೀಡುವುದಿಲ್ಲ, ಮೇಕಪ್ (Make-Up) ವಸ್ತುಗಳನ್ನು ಖರೀದಿಸಲು ಕೂಡ ಹಣವನ್ನು ನೀಡುವುದಿಲ್ಲ ಎಂದು ಆರೋಪಿಸಿ ಸಿವಿಲ್ ಲೈನ್ಸ್ ಪೊಲೀಸ್ ಠಾಣೆ ಪ್ರದೇಶದ ನಿವಾಸಿಯಾಗಿರುವ ಮಹಿಳೆ ಕೌಟುಂಬಿಕ ನ್ಯಾಯಾಲಯಕ್ಕೆ ವಿಚ್ಛೇದನ (Divorce) ಅರ್ಜಿ ಸಲ್ಲಿಸಿದ್ದಾರೆ. ನನ್ನ ನೋಟವು ಉತ್ತಮವಾಗಿಲ್ಲ ಎಂದು ನನ್ನ ಪತಿ ಅವಮಾನಿಸುತ್ತಾರೆ. ನಾನು ಅವನೊಂದಿಗೆ ಇರಲು ಅರ್ಹಳಲ್ಲವಂತೆ, ಹೀಗಾಗಿ ನಾನು ಪತಿಯೊಂದಿಗೆ ವಾಸಿಸಲು ಸಾಧ್ಯವಿಲ್ಲ ಎಂದು ಮಹಿಳೆ ತಮ್ಮ ನೋವು ತೋಡಿಕೊಂಡಿದ್ದಾರೆ.

ತನ್ನ ಖರ್ಚುವೆಚ್ಚಗಳಿಗಾಗಿ ಹಣವನ್ನು ಕೇಳಿದಾಗ ಪತಿ ಹಣವನ್ನು ಪಾವತಿಸುವುದಿಲ್ಲ. ಅಲ್ಲದೆ ತನ್ನ ನೋಟವು ಉತ್ತಮವಾಗಿಲ್ಲ ಎಂದು ನಿತ್ಯ ಹೇಳುತ್ತಿರುವುದಾಗಿ ಮಹಿಳೆ ತನ್ನ ಅರ್ಜಿಯಲ್ಲಿ ಉಲ್ಲೇಖಿಸಿರುವುದಾಗಿ ಕೌಟುಂಬಿಕ ನ್ಯಾಯಾಲಯದಲ್ಲಿ ನೇಮಕಗೊಂಡಿರುವ ಆಪ್ತ ಸಮಾಲೋಚಕ ಯೋಗೇಶ್ ಹೇಳಿದ್ದಾರೆ. ಇದಲ್ಲದೆ, ಮಹಿಳೆ ತನ್ನ ಅತ್ತೆ ಮತ್ತು ಮಾವನ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ.

ಇದನ್ನೂ ಓದಿ: Viral Video: ನಿವೃತ್ತಿಗೂ ಮುನ್ನ ಅಮ್ಮನಿಗೆ ನಮಸ್ಕರಿಸಿದ ಸೇನಾಧಿಕಾರಿ, ಇದು ಭಾರತದ ಸಂಸ್ಕೃತಿ ಎಂದ ಜನ

2015ರಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ದೆಹಲಿ ನಿವಾಸಿಯನ್ನು ಮದುವೆಯಾಗಿದ್ದಾಗಿ ಮಹಿಳೆ ತನ್ನ ಅರ್ಜಿಯಲ್ಲಿ ತಿಳಿಸಿದ್ದಾಳೆ. ಮದುವೆಯ ಆರಂಭದಲ್ಲಿ ಎಲ್ಲವೂ ಚೆನ್ನಾಗಿ ನಡೆಯಿತು. ಆದರೆ ಸ್ವಲ್ಪ ಸಮಯದ ನಂತರ ನನ್ನ ಗಂಡನ ವರ್ತನೆ ಬದಲಾಯಿತು. ಇದಕ್ಕೆ ಅವರ ಪೋಷಕರ ಬೆಂಬಲವೂ ಇದೆ ಎಂದು ಮಹಿಳೆ ಆರೋಪಿಸಿದ್ದಾರೆ.

“ನಾನು ಮೇಕಪ್​​ಗಾಗಿ ಹಣ ಕೇಳಿದಾಗ ಅವರು ನಿರಾಕರಿಸುತ್ತಿದ್ದರು. ನನ್ನ ಖರ್ಚುವೆಚ್ಚಗಳನ್ನು ಸಹ ಪಾವತಿಸಲಿಲ್ಲ. ಅತ್ತೆ ಮತ್ತು ಮಾವ ಕೂಡ ಗಂಡನನ್ನು ಬೆಂಬಲಿಸುತ್ತಾರೆ. ನೀನು ನನ್ನ ಮನೆಯಲ್ಲಿ ವಾಸಿಸಲು ಅರ್ಹಳಲ್ಲ ಅಥವಾ ನೀನು ನನಗೆ ಅರ್ಹಳಲ್ಲ ಎಂದು ಪತಿ ಹೇಳುತ್ತಾನೆ. ನನ್ನ ನೋಟ ಚೆನ್ನಾಗಿಲ್ಲವೆಂದು ಹೇಳುತ್ತಾನೆ. ಆದ್ದರಿಂದ ನಾನು ಪತಿಯೊಂದಿಗೆ ವಾಸಿಸಲು ಸಾಧ್ಯವಿಲ್ಲ. ಒಂದು ದಿನ ಅತ್ತೆ-ಮಾವ ಮತ್ತು ಪತಿ ರಾತ್ರಿ ವೇಳೆ ಬಂದು ಮನೆಯಿಂದ ಹೊರಹಾಕಿದರು. ನಾನು ನಿಮ್ಮ ಮಗಳಂತೆ ಎಂದು ನಾನು ಪರಿಪರಿಯಾಗಿ ಬೇಡಿಕೊಂಡರೂ ಅವರು ನನ್ನ ಮಾತನ್ನು ಕೇಳಲಿಲ್ಲ. ಈ ಬಗ್ಗೆ ನನ್ನ ಹೆತ್ತವರಿಗೆ ತಿಳಿಸಿದಾಗ ಸಹಾಯಕ್ಕೆ ಬರದೆ, ಇದು ಸಣ್ಣ ವಿಷಯ, ಇದೆಲ್ಲವೂ ಪ್ರತಿಯೊಂದು ಮನೆಯಲ್ಲೂ ನಡೆಯುತ್ತದೆ ಎಂದು ಹೇಳಿರುವುದಾಗಿ ಅಳಲು ತೋಡಿಕೊಂಡಿದ್ದಾರೆ.

ಇದನ್ನೂ ಓದಿ: ವೈರಲ್ ವಿಡಿಯೋ: ವಿದ್ಯುತ್ ಕಂಬವೇರಿದ ಪಾಗಲ್ ಪ್ರೇಮಿಯೊಬ್ಬ ಪೂಜಾ ಐ ಲವ್ ಯೂ… ಎಂದು ಕೂಗಿದ!

ತಾನು ಮದುವೆಯಾಗಿ 7 ವರ್ಷಗಳಾಗಿವೆ ಎಂದು ಮಹಿಳೆ ಹೇಳಿಕೊಂಡಿದ್ದಾರೆ. ಆದರೆ ಅವಳು ತಾಯಿಯಾಗಲು ಸಾಧ್ಯವಾಗಲಿಲ್ಲ. ಇದಕ್ಕಾಗಿ ಅವರು ವೈದ್ಯರಿಂದ ಚಿಕಿತ್ಸೆಯನ್ನು ಸಹ ಪಡೆದಿದ್ದಾರೆ. ಚಿಕಿತ್ಸೆಯ ವೆಚ್ಚವನ್ನು ಕೂಡ ಪತಿ ನೀಡಿಲ್ಲ, ಮಹಿಳೆಯ ಸಹೋದರಿ ಭರಿಸಿದರು. ನನಗೆ ಹಣ ನೀಡುವಂತೆ ನಾನು ನನ್ನ ಗಂಡನನ್ನು ಕೇಳಿದಾಗ, ಪತಿ ಅದನ್ನು ಸಾರಾಸಗಟಾಗಿ ನಿರಾಕರಿಸಿ ನನ್ನನ್ನು ಅವಮಾನಿಸಿದರು ಎಂದು ಮಹಿಳೆ ಆರೋಪಿಸಿದ್ದಾರೆ.

ಮತ್ತಷ್ಟು ಟ್ರೆಂಡಿಂಗ್ ಸುದ್ದಿಗಳನ್ನು/ ವಿಡಿಯೋಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

Published On - 12:09 pm, Sun, 25 December 22

ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ