ಗಾಂಧಿ ನಾಡಿನಲ್ಲಿದೆ ಭಾರತದ ಹೈಟೆಕ್ ಗ್ರಾಮ! ಎಸಿ ಶಾಲೆ, ಆಸ್ಪತ್ರೆ, ಹಳ್ಳಿಯಾದ್ಯಂತ ವೈ-ಫೈ, ವಿದೇಶಿಗರು ಕ್ಯೂ ನಿಂತು ನೋಡಲು ಬರುತ್ತಿದ್ದಾರೆ ಈ ಗ್ರಾಮಕ್ಕೆ!

Punsari high tech village: 2006ರಲ್ಲಿ ಹಿಮಾನ್ಶು ಪಟೇಲ್ ಈ ಗ್ರಾಮದ ಸರಪಂಚ್ ಆಗಿದ್ದಾಗ ಇಲ್ಲಿ ಹಲವು ಸಮಸ್ಯೆಗಳಿದ್ದವು. ಹಿಮಾನ್ಶು ಕೇವಲ ಎಂಟು ವರ್ಷಗಳಲ್ಲಿ ಈ ಗ್ರಾಮದ ಮುಖವನ್ನೇ ಬದಲಿಸಿಬಿಟ್ಟಿದ್ದಾರೆ.

ಗಾಂಧಿ ನಾಡಿನಲ್ಲಿದೆ ಭಾರತದ ಹೈಟೆಕ್ ಗ್ರಾಮ! ಎಸಿ ಶಾಲೆ, ಆಸ್ಪತ್ರೆ, ಹಳ್ಳಿಯಾದ್ಯಂತ ವೈ-ಫೈ, ವಿದೇಶಿಗರು ಕ್ಯೂ ನಿಂತು ನೋಡಲು ಬರುತ್ತಿದ್ದಾರೆ ಈ ಗ್ರಾಮಕ್ಕೆ!
ಗಾಂಧಿ ನಾಡಿನಲ್ಲಿದೆ ಭಾರತದ ಹೈಟೆಕ್ ಗ್ರಾಮ!
Follow us
ಸಾಧು ಶ್ರೀನಾಥ್​
|

Updated on:Jun 26, 2023 | 6:42 PM

ಶಾಲೆ, ಕಾಲೇಜು, ವೈ-ಫೈ, ಹೊಸ ತಂತ್ರಜ್ಞಾನ, ಬೀದಿ ದೀಪಗಳು, ನಗರದಲ್ಲಿದ್ದಂತೆ ಎಲ್ಲಾ ಸೌಕರ್ಯಗಳನ್ನು ಹೊಂದಿರುವ ಹಳ್ಳಿಯನ್ನು ಕಲ್ಪಿಸಿಕೊಳ್ಳಿ…  ಮಹಾತ್ಮ ಗಾಂಧಿಜೀ ಅವರೂ ಸಹ ಇಂತಹುದ್ದೇ ಸಾಕಾರಗೊಂಡ ಗ್ರಾಮ ಭಾರತದ ಕನಸು ಕಂಡಿದ್ದರಲ್ಲವೇ!? ಇದೀಗ ಅವರದೇ ನಾಡಿನಲ್ಲಿ ಅಂದರೆ ಗುಜರಾತ್ (Gujarat)ನಲ್ಲಿ ಇಂತಹ ಅದ್ಭುತ ಗ್ರಾಮವೊಂದಿದೆ. ಇದೇನು ಕೇವಲ ಕಲ್ಪನೆಯಾ ಎಂದು ಭಾವಿಸಬೇಡಿ. ಏಕೆಂದರೆ… ನಿಜವಾಗಿಯೂ ಅಂತಹ ಗ್ರಾಮವಿದೆ ನಮ್ಮ ದೇಶದಲ್ಲಿದೆ. ಆ ಗ್ರಾಮದಲ್ಲಿ ನೀವು ಅಂತಹ ಎಲ್ಲಾ ಸೌಲಭ್ಯಗಳನ್ನು ಪಡೆಯುತ್ತೀರಿ. ಈ ಗ್ರಾಮವು ಅನೇಕ ನಗರಗಳಿಗಿಂತ ಹೆಚ್ಚು ಅಭಿವೃದ್ಧಿ ಹೊಂದಿದೆ ಎಂದರೆ ತಪ್ಪೇನೂ ಇಲ್ಲ. ಬರೀ ಅತ್ಯಾಧುನಿಕ ಶಾಲಾ-ಕಾಲೇಜುಗಳಷ್ಟೇ ಅಲ್ಲ. ನಗರಗಳಲ್ಲಿಯೂ ಇಲ್ಲದ ಹಲವಾರು ಸೌಲಭ್ಯಗಳು ಈ ಗ್ರಾಮದಲ್ಲಿವೆ. ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೆ ಎಲ್ಲರಿಗೂ ಇಲ್ಲಿ ಅಗತ್ಯ ವಸ್ತುಗಳು ದೊರೆಯುತ್ತವೆ. ಈ ಗ್ರಾಮದ ಹೆಸರು ಪುನ್ಸಾರಿ (Punsari). ಭಾರತದ ಹೈಟೆಕ್ ವಿಲೇಜ್ (high tech village) ಎಂದು ಕರೆಯಲ್ಪಡುವ ಪುನ್ಸಾರಿ ಗ್ರಾಮವನ್ನು ನೋಡಲು ಜನರು ಮತ್ತು ಪ್ರವಾಸಿಗರು ದೇಶಾದ್ಯಂತ ಸೇರುತ್ತಾರೆ. ಸಾರ್ವಜನಿಕ ವೈ-ಫೈ, ಆಸ್ಪತ್ರೆಯಿಂದ ಇತರ ಎಲ್ಲಾ ಸೌಲಭ್ಯಗಳು ಇಲ್ಲಿ ಲಭ್ಯವಿದೆ.

ಪುನ್ಸಾರಿ ಗ್ರಾಮದಲ್ಲಿ ಇದೆಲ್ಲಾ ಸಾಕಾರಗೊಂಡಿದ್ದು 7 ವರ್ಷಗಳಲ್ಲಿ! ವೆಚ್ಚ ತಗುಲಿದ್ದೆಷ್ಟು?

ದೇಶದಲ್ಲೇ ಅತ್ಯಂತ ಹೈಟೆಕ್ ಗ್ರಾಮ ಎಂದು ಹೆಸರಾಗಿರುವ ಪುನ್ಸಾರಿ ಗ್ರಾಮವು ವೈ-ಫೈ ಆಸ್ಪತ್ರೆ, ಎಸಿ ಶಾಲೆಯಂತಹ ನಗರದ ಸೌಲಭ್ಯಗಳಿಗಿಂತ ಉತ್ತಮ ಸೌಲಭ್ಯಗಳನ್ನು ಹೊಂದಿದೆ. ಆದ್ದರಿಂದ ದೇಶ-ವಿದೇಶಗಳ ಪ್ರವಾಸಿಗರು ಈ ಬೆಳವಣಿಗೆಯನ್ನು ಕಂಡು ಬೆರಗಾಗಿದ್ದಾರೆ. ಸರ್ಕಾರಿ ಶಾಲೆಯ ಕೊಠಡಿಗಳು ಹವಾನಿಯಂತ್ರಿತವಾಗಿವೆ. ಆ ಊರಿನವರಷ್ಟೇ ಅಲ್ಲ; ಸುತ್ತಮುತ್ತಲಿನ ಹಳ್ಳಿಗಳಿಂದಲೂ ಬಂದವರು ವಿದ್ಯಾರ್ಥಿಗಳು ಇಲ್ಲಿ ಓದಲು ಬರುತ್ತಾರೆ. ಈ ಗ್ರಾಮದಲ್ಲಿ ಒಟ್ಟು ಐದು ಶಾಲೆಗಳಿವೆ. ಅಲ್ಲೆಲ್ಲಾ ಎರ್​ ಕಂಡೀಷನ್​​ ಸೌಲಭ್ಯವಿದೆ. ಜನರು ಚಿಕಿತ್ಸೆಗಾಗಿ ನಗರಕ್ಕೆ ಹೋಗುವ ಅಗತ್ಯವಿಲ್ಲ; ಎಲ್ಲ ಸೌಲಭ್ಯಗಳಿರುವ ಆಸ್ಪತ್ರೆ ಇಲ್ಲೇ ಲಭ್ಯವಿದೆ.

Also Read: ಬರ ಪೀಡಿತ ಜಿಲ್ಲೆಯಲ್ಲಿ ಮಲೆನಾಡಿನಂತಿದ್ದ ಜಮಾಪುರ! ಗ್ರಾಮಸ್ಥರ ನೆಮ್ಮದಿಗೆ ಈಗ ಭಂಗ ಬಂದಿದೆ! ಏನಿದರ ಒಳಸುಳಿ?

ಗುಜರಾತ್‌ನ ಈ ಗ್ರಾಮದಲ್ಲಿ ಸಂಚಾರಿ ಗ್ರಂಥಾಲಯವೂ ಇದೆ. ಈ ಗ್ರಂಥಾಲಯವನ್ನು ಆಟೋದಲ್ಲಿ ಸ್ಥಾಪಿಸಲಾಗಿದೆ. ಓದಲು ಇಷ್ಟಪಡುವ ಯಾರಾದರೂ ಈ ಗ್ರಂಥಾಲಯವನ್ನು ಬಳಸಬಹುದು. ಒಂದು ನಿರ್ದಿಷ್ಟ ಸಮಯಕ್ಕೆ ಈ ಗ್ರಂಥಾಲಯವು ನಿಗದಿತ ಸ್ಥಳವನ್ನು ತಲುಪುತ್ತದೆ. ಅಲ್ಲಿ ಜನರು ತಮ್ಮ ನೆಚ್ಚಿನ ಪುಸ್ತಕಗಳನ್ನು ಓದುತ್ತಾರೆ. ಮೇಲಾಗಿ.. ಈ ಪುನ್ಸಾರಿ ಗ್ರಾಮ ಎಷ್ಟು ಮುಂದುವರಿದಿದೆ ಎಂದರೆ ಗ್ರಾಮ ಪಂಚಾಯಿತಿಯಲ್ಲಿ ಬಯೋಮೆಟ್ರಿಕ್ ಬಳಸುತ್ತಾರೆ. ಸಾರಿಗೆ ವ್ಯವಸ್ಥೆ, ಸ್ವಚ್ಛ ರಸ್ತೆಗಳು, ಶುದ್ಧ ನೀರು, ಜೈವಿಕ ಅನಿಲ ಸ್ಥಾವರ ಇತ್ಯಾದಿಗಳೂ ಇವೆ.

2006ರಲ್ಲಿ ಹಿಮಾನ್ಶು ಪಟೇಲ್ ಈ ಗ್ರಾಮದ ಸರಪಂಚ್ ಆಗಿದ್ದಾಗ ಇಲ್ಲಿ ಹಲವು ಸಮಸ್ಯೆಗಳಿದ್ದವು. ಹಿಮಾನ್ಶು ಕೇವಲ ಎಂಟು ವರ್ಷಗಳಲ್ಲಿ ಈ ಗ್ರಾಮದ ಮುಖವನ್ನೇ ಬದಲಿಸಿಬಿಟ್ಟಿದ್ದಾರೆ. ಗ್ರಾಮವನ್ನು ಹೀಗೆ ಪರಿವರ್ತಿಸಲು ಸುಮಾರು 16 ಕೋಟಿ ರೂ ವೆಚ್ಚ ಮಾಡಲಾಗಿದೆ. ಈಗ ಈ ಗ್ರಾಮದ ಮಾದರಿಯನ್ನು ನೋಡಲು ದೇಶ ವಿದೇಶಗಳಿಂದ ಜನ ಬರುತ್ತಾರೆ. ಸರ್ಕಾರದ ಯೋಜನೆಗಳನ್ನು ಸದುಪಯೋಗಪಡಿಸಿಕೊಂಡರೆ ಪ್ರತಿಯೊಂದು ಗ್ರಾಮವೂ ಅಭಿವೃದ್ಧಿ ಹೊಂದುತ್ತದೆ ಎಂಬುದಕ್ಕೆ ಈ ಗ್ರಾಮ ಅತ್ಯುತ್ತಮ ಉದಾಹರಣೆಯಾಗಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:40 pm, Mon, 26 June 23

Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್