ಗುಜರಾತ್ (Gujarat)ನಲ್ಲಿ ಮದುವೆಯಾಗಿ ಯುವಕರನ್ನು ವಂಚಿಸುತ್ತಿದ್ದ ವಧುವೊಬ್ಬಳನ್ನು (robber bride) ಪೊಲೀಸರು ಸೆರೆ ಹಿಡಿದಿದ್ದಾರೆ. ಒಂದು ವರ್ಷದಿಂದ ಈ ಯುವತಿಗಾಗಿ ಹುಡುಕಾಟ ನಡೆಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ. ವಡೋದರಾದ ಪಾಣಿಗೇಟ್ ಪೊಲೀಸರು ಒಂದು ವರ್ಷ ಹಿಂದೆ ಪರಾರಿಯಾಗಿದ್ದ (absconding) ಖತರನಾಕ್ ಕಳ್ಳಿ ವಧು ಶೀತಲ್ ರಾಥೋಡ್ ಳನ್ನು ಕೊನೆಗೂ ಬಂಧಿಸಿದ್ದಾರೆ. ಆಕೆಯನ್ನು ಸೂರತ್‌ನ ಕಟರ್ಗಾಂ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ. ಯುವತಿಯೊಬ್ಬಳು ಸುಲಭವಾಗಿ ಹಣ ಸಂಪಾದಿಸಲು ಯಾಮಾರಿಸಿ ಮದುವೆಯಾಗುವ ವಿಧಾನ ಆಯ್ಕೆ ಮಾಡಿಕೊಂಡಿದ್ದಾಳೆ. ಮದುವೆಯ ಹೆಸರಿನಲ್ಲಿ ಯುವಕರಿಂದ ಹಣ ಕದ್ದು ಸದರಿ ಯುವತಿ ಓಡಿ ಹೋಗುತ್ತಿದ್ದಳು.
ಕಳೆದ ವರ್ಷ ಸೂರತ್ ನ ವಜ್ರ ಲಾಲಕ ಸನಪೇಟೆಯ ಯುವಕನೊಂದಿಗೆ ಇದೇ ವಧು ವಿವಾಹ ನಡೆದಿತ್ತು. ವಿವಾಹದ ನಂತರ ಆರೋಪಿ ಶೀತಲ್ ತನ್ನ ಅತ್ತೆಯೊಂದಿಗೆ ಸ್ವಲ್ಪ ಸಮಯ ಕಳೆದಿದ್ದಾಳೆ. ಶೀತಲ್ ರಾಥೋಡ್ ಮಧ್ಯವರ್ತಿಗಳ ಮೂಲಕ ಪತಿಯಿಂದ 1.30 ಲಕ್ಷ ರೂ. ಪಡೆದ ಬಳಿಕ ಮನೆಯಿಂದ ಓಡಿ ಹೋಗಿದ್ದಾಳೆ. ಯುವಕ ತನ್ನ ಹೆಂಡತಿಗೆ ಕರೆ ಮಾಡಿದಾಗ, ಯಾವಾಗಲೂ ಸ್ವಿಚ್ ಆಫ್ ಆಗಿರುತ್ತಿತ್ತು. ಇದರಿಂದ ಯುವಕನಿಗೆ ಪತ್ನಿಯ ಮೇಲೆ ಅನುಮಾನ ಬಂದಿತ್ತು. ಮೋಸ ಹೋಗಿರುವುದು ಅರಿವಿಗೆ ಬರುತ್ತಿದ್ದಂತೆ ಸಂತ್ರಸ್ತ ಯುವಕ ಕಟರಗಾಂ ಪೊಲೀಸ್ ಠಾಣೆಯಲ್ಲಿ ವಧುವಿನ ವಿರುದ್ಧ ದೂರು ದಾಖಲಿಸಿದ್ದಾರೆ.
ಅದಾದ ಮೇಲೆ ಒಂದು ವರ್ಷದಿಂದ ಯುವತಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದರು. ಆದರೆ ವಡೋದರಾದ ಪಾನಿಗೇಟ್ ಪೊಲೀಸ್ ಠಾಣೆಯಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಗೆ ಕಳ್ಳ ವಧು ವಡೋದರಾದಲ್ಲಿ ಇರುವ ಮಾಹಿತಿ ಸಿಕ್ಕಿತು. ಈ ಮಾಹಿತಿ ಆಧರಿಸಿ ವಡೋದರಾ ಪೊಲೀಸರು ಕಳ್ಳ ವಧುವನ್ನು ಗುರುತಿಸಿದ್ದಾರೆ. ನಂತರ ವಡೋದರಾ ಪೊಲೀಸರು ಕಳ್ಳ ವಧುವನ್ನು ವಶಕ್ಕೆ ಪಡೆದು ಸೂರತ್ ಪೊಲೀಸರಿಗೆ ಒಪ್ಪಿಸಿದ್ದಾರೆ.
ಕಳ್ಳ ವಧು ಶೀತಲ್ ರಾಥೋಡ್ ಬೇರೆ ಬೇರೆ ವ್ಯಕ್ತಿಗಳನ್ನು ಮದುವೆಯಾಗಿ ಹಣ, ಚಿನ್ನಾಭರಣದೊಂದಿಗೆ ನಾಪತ್ತೆಯಾಗುತ್ತಿದ್ದಳು. ಬೇರೆ ಬೇರೆ ಹೆಸರಿನಲ್ಲಿ ಯುವಕರನ್ನು ಮದುವೆಯಾಗಿ ಹಣ ವಸೂಲಿ ಮಾಡಿ ವಂಚಿಸುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ಈ ಪ್ರಕರಣ ಬೆಳಕಿಗೆ ಬಂದ ನಂತರ ಪೊಲೀಸರು ಉಳಿದ ಪ್ರಕರಣಗಳ ಬಗ್ಗೆ ಮುಂದಿನ ಕ್ರಮ ಕೈಗೊಂಡಿದ್ದಾರೆ.
ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:50 pm, Tue, 23 May 23