ಆಸ್ಟ್ರೇಲಿಯಾದಲ್ಲಿ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿದ ನೊಬೆಲ್ ಪ್ರಶಸ್ತಿ ವಿಜೇತ ಬ್ರಿಯಾನ್ ಪಿ ಸ್ಮಿತ್ ಯಾರು?

ಬ್ರಹ್ಮಾಂಡದ ವೇಗವರ್ಧಿತ ವಿಸ್ತರಣೆಯ ಅನ್ವೇಷಣೆಗಾಗಿ ಬ್ರಿಯಾನ್ ಪಿ ಸ್ಮಿತ್ ಅವರು 2011 ರ ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿಯನ್ನು ಗೆದ್ದರು

ಆಸ್ಟ್ರೇಲಿಯಾದಲ್ಲಿ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿದ ನೊಬೆಲ್ ಪ್ರಶಸ್ತಿ ವಿಜೇತ ಬ್ರಿಯಾನ್ ಪಿ ಸ್ಮಿತ್ ಯಾರು?
ಬ್ರಿಯಾನ್ ಪಿ ಸ್ಮಿತ್, ಪ್ರಧಾನಿ ನರೇಂದ್ರ ಮೋದಿ
Follow us
ನಯನಾ ಎಸ್​ಪಿ
|

Updated on: May 23, 2023 | 3:11 PM

ಪ್ರಧಾನಮಂತ್ರಿ ನರೇಂದ್ರ ಮೋದಿ (PM Narendra Modi) ಅವರು ಪ್ರಸ್ತುತ ಮೂರು ದಿನಗಳ ಆಸ್ಟ್ರೇಲಿಯಾ ಪ್ರವಾಸದಲ್ಲಿದ್ದು (Australian Tour), ಅಲ್ಲಿ ಅವರು ನೊಬೆಲ್ ಪ್ರಶಸ್ತಿ ವಿಜೇತ ಪ್ರೊಫೆಸರ್ ಬ್ರಿಯಾನ್ ಪಿ ಸ್ಮಿತ್ (Professor P Smith) ಸೇರಿದಂತೆ ದೇಶದ ಗಣ್ಯ ವ್ಯಕ್ತಿಗಳನ್ನು ಭೇಟಿ ಮಾಡಿದರು. ಬ್ರಹ್ಮಾಂಡದ ವೇಗವರ್ಧಿತ ವಿಸ್ತರಣೆಯ ಅನ್ವೇಷಣೆಗಾಗಿ ಬ್ರಿಯಾನ್ ಪಿ ಸ್ಮಿತ್ ಅವರು 2011 ರ ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿಯನ್ನು ಪಡೆದರು.

ಮೋದಿ ಅವರು ಟ್ವಿಟರ್‌ನಲ್ಲಿ ಸಭೆಯ ಚಿತ್ರವನ್ನು ಹಂಚಿಕೊಂಡಿದ್ದಾರೆ ಮತ್ತು ಸ್ಮಿತ್ ಅವರೊಂದಿಗೆ “ವಿಜ್ಞಾನ ಮತ್ತು ನಾವೀನ್ಯತೆಗಳ ಕುರಿತು ಅತ್ಯುತ್ತಮ ಸಂಭಾಷಣೆಯನ್ನು ನಡೆಸಿದರು” ಎಂದು ಬರೆದಿದ್ದಾರೆ. ಸಂಶೋಧನೆ ಮತ್ತು ವಿಜ್ಞಾನದಲ್ಲಿ ಭಾರತದ ಪ್ರಗತಿಯನ್ನು ಶ್ಮಿತ್ ಶ್ಲಾಘಿಸಿದ್ದಾರೆ ಎಂದು ಅಧಿಕೃತ @PMOIndia ಖಾತೆ ತಿಳಿಸಿದೆ. “ವಿಶ್ವ ದರ್ಜೆಯ ವಿಜ್ಞಾನವನ್ನು ಮಾಡುವ ಭಾರತದ ಸಾಮರ್ಥ್ಯವು ಆಧುನಿಕ ಸಂಶೋಧನೆಗೆ ಪೂರಕವಾಗಿದೆ” ಎಂದು ಸ್ಮಿತ್ ತಿಳಿಸಿದರು.

ಸ್ಮಿತ್ ಅವರು ಕ್ಯಾನ್‌ಬೆರಾದಲ್ಲಿನ ಆಸ್ಟ್ರೇಲಿಯನ್ ನ್ಯಾಷನಲ್ ಯೂನಿವರ್ಸಿಟಿ (ANU) ನ ಉಪ-ಕುಲಪತಿ ಮತ್ತು ಅಧ್ಯಕ್ಷರಾಗಿದ್ದಾರೆ. ನೀವು ಅವರ ಬಗ್ಗೆ ತಿಳಿದುಕೊಳ್ಳಬೇಕಾದ ವಿಷಯ ಇನ್ನು ಸಾಕಷ್ಟಿದೆ.

ಪ್ರೊಫೆಸರ್ ಬ್ರಿಯಾನ್ ಪಾಲ್ ಸ್ಮಿತ್ ಯಾರು?

ಪ್ರೊಫೆಸರ್ ಬ್ರಿಯಾನ್ ಪಾಲ್ ಸ್ಮಿತ್ ಖಗೋಳ ಭೌತಶಾಸ್ತ್ರಜ್ಞ ಮತ್ತು ಆಸ್ಟ್ರೇಲಿಯಾದ ಅತ್ಯಂತ ಪ್ರಸಿದ್ಧ ವಿಜ್ಞಾನಿಗಳಲ್ಲಿ ಒಬ್ಬರು. ಅವರು ಹೊರಗಿನ ಸೌರವ್ಯೂಹ, ಎಕ್ಸೋಪ್ಲಾನೆಟ್‌ಗಳು ಮತ್ತು ಗ್ಯಾಲಕ್ಟಿಕ್ ಪುರಾತತ್ತ್ವ ಶಾಸ್ತ್ರವನ್ನು ಒಳಗೊಂಡಂತೆ ವ್ಯಾಪಕ ಶ್ರೇಣಿಯ ವಿಷಯ ಕ್ಷೇತ್ರಗಳಲ್ಲಿ ಕೆಲಸ ಮಾಡಿದ್ದಾರೆ, ಆದರೆ ಅವರು ಸೂಪರ್ನೋವಾ, ಗಾಮಾ-ರೇ ಸ್ಫೋಟಗಳು, ವಿಶ್ವವಿಜ್ಞಾನ ಮತ್ತು ಕಾಸ್ಮಿಕ್ ವೇಗವರ್ಧನೆಯ ಆವಿಷ್ಕಾರದ ಕೆಲಸಕ್ಕಾಗಿ ವ್ಯಾಪಕವಾಗಿ ಹೆಸರುವಾಸಿಯಾಗಿದ್ದಾರೆ.

“ದೂರದ ಸೂಪರ್ನೋವಾಗಳ ಅವಲೋಕನಗಳ ಮೂಲಕ ಬ್ರಹ್ಮಾಂಡದ ವೇಗವರ್ಧಿತ ವಿಸ್ತರಣೆಯ ಅನ್ವೇಷಣೆಗಾಗಿ” ಅವರು 2011 ರ ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿಯನ್ನು ಗೆದ್ದರು. ಬ್ರಿಯಾನ್ ಸ್ಮಿತ್, ಸೌಲ್ ಪರ್ಲ್‌ಮುಟರ್ ಮತ್ತು ಆಡಮ್ ರೈಸ್ ಜೊತೆಗೆ, ಸೂಪರ್‌ನೋವಾ ಎಂದು ಕರೆಯಲ್ಪಡುವ ಸ್ಫೋಟಗೊಳ್ಳುವ ನಕ್ಷತ್ರಗಳನ್ನು ಅಧ್ಯಯನ ಮಾಡಿದರು, 1998 ರಲ್ಲಿ ಬ್ರಹ್ಮಾಂಡವು ನಿರಂತರವಾಗಿ ಹೆಚ್ಚುತ್ತಿರುವ ದರದಲ್ಲಿ ವಿಸ್ತರಿಸುತ್ತಿದೆ ಎಂದು ತೀರ್ಮಾನಿಸಿದರು.

ಬ್ರಿಯಾನ್ ಅನೇಕ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ವೈಜ್ಞಾನಿಕ, ಸಂಶೋಧನೆ ಮತ್ತು ಶಿಕ್ಷಣ ಸಮಿತಿಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಅವರು ಪ್ರಸ್ತುತ ANU ನ 12 ನೇ ಉಪ-ಕುಲಪತಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ, ಅಲ್ಲಿ ಅವರನ್ನು ಜನವರಿ 2016 ರಲ್ಲಿ ನೇಮಿಸಲಾಯಿತು. VC ಆಗುವ ಮೊದಲು, ಸ್ಮಿತ್ ತಮ್ಮ ಶೈಕ್ಷಣಿಕ ವೃತ್ತಿಜೀವನದ ಹೆಚ್ಚಿನ ಸಮಯವನ್ನು ANU ಮೌಂಟ್ ಸ್ಟ್ರೋಮ್ಲೋ ಅಬ್ಸರ್ವೇಟರಿ ಮತ್ತು ಖಗೋಳವಿಜ್ಞಾನ ಮತ್ತು ಖಗೋಳ ಭೌತಶಾಸ್ತ್ರದ ಸಂಶೋಧನಾ ಶಾಲೆಯಲ್ಲಿ ಖಗೋಳ ಭೌತಶಾಸ್ತ್ರಜ್ಞರಾಗಿ ಕಳೆದರು.

ಇದನ್ನೂ ಓದಿ: ನರೇಂದ್ರ ಮೋದಿ ಆಸ್ಟ್ರೇಲಿಯಾ ಭೇಟಿ: ಭಾರತದ ಪ್ರಧಾನಿಯನ್ನು ಹಾಡಿಹೊಗಳಿದ ಸಿಇಒಗಳು

ನೊಬೆಲ್ ಪ್ರಶಸ್ತಿ ವೆಬ್‌ಸೈಟ್‌ನಲ್ಲಿನ ಸ್ಮಿತ್ ಅವರ ಬಯೋ ಪ್ರಕಾರ, ಅವರು ಮೊಂಟಾನಾದ ಮಿಸ್ಸೌಲಾದಲ್ಲಿ ಬೆಳೆದರು, ಅಲ್ಲಿ ಅವರ ತಂದೆ ಮೀನುಗಾರಿಕಾ ಜೀವಶಾಸ್ತ್ರಜ್ಞರಾಗಿ ಕೆಲಸ ಮಾಡಿದರು. “ಸ್ಮಿತ್ 1993 ರಲ್ಲಿ ಹಾರ್ವರ್ಡ್ ವಿಶ್ವವಿದ್ಯಾನಿಲಯದಿಂದ ಪಿಎಚ್‌ಡಿ ಪಡೆದರು ಮತ್ತು ಮುಂದಿನ ವರ್ಷ ಅಂದರೆ 1994 ರಲ್ಲಿ ಆಸ್ಟ್ರೇಲಿಯಾಕ್ಕೆ ತೆರಳಿದರು, ಅಲ್ಲಿ ಅವರು ಹೈ-ಝಡ್ ಸೂಪರ್ನೋವಾ ಹುಡುಕಾಟ ತಂಡವನ್ನು ನಿರ್ಮಿಸುವಲ್ಲಿ ತೊಡಗಿಸಿಕೊಂಡರು, ಅದರ ಭಾಗವಾಗಿ ಅವರು ತಮ್ಮ ನೊಬೆಲ್ ಪ್ರಶಸ್ತಿ-ಪುರಸ್ಕೃತ ಕೆಲಸವನ್ನು ನಡೆಸಿದರು” ಎಂದು ವೆಬ್‌ಸೈಟ್‌ ಹೇಳಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್