ದುಷ್ಕರ್ಮಿಗಳು ವಕೀಲೊಬ್ಬರಿಗೆ ಚಾಕು ತೋರಿಸಿ ಮರ್ಸಿಡಿಸ್ ಬೆನ್ಜ್ (Mercedes Benz)ಕಾರು ಕದ್ದು ಪರಾರಿಯಾಗಿರುವ ಘಟನೆ ಗುರುಗ್ರಾಮದಲ್ಲಿ ನಡೆದಿದೆ. ಸೆಕ್ಟರ್ 29ರಲ್ಲಿ ಈ ಘಟನೆ ನಡೆದಿದ್ದು, ವಕೀಲರೊಬ್ಬರು ಮೂತ್ರ ಮಾಡಲೆಂದು ಕಾರಿಳಿದಿದ್ದಾರೆ, ಅದೇ ಸಮಯದಲ್ಲಿ ಬಂದ ದುಷ್ಕರ್ಮಿಗಳು ಚಾಕು ತೋರಿಸಿ ಮರ್ಸಿಡಿಸ್ ಬೆಂಜ್ ಕಾರನ್ನು ಕದ್ದು ಪರಾರಿಯಾಗಿದ್ದಾರೆ.
ಸೆಕ್ಟರ್ 66ರಲ್ಲಿ ವಾಸಿಸುತ್ತಿರುವ ವಕೀಲ ಅನುಜ್ ಬೇಡಿ ಅವರು ನೀಡಿರುವ ದೂರಿನ ಪ್ರಕಾರ, ಗುರುವಾರ ರಾತ್ರಿ 8.50ರ ಸುಮಾರಿಗೆ ಸೆಕ್ಟರ್ 29ರ ಪ್ರದೇಶದ ಅಗ್ನಿಶಾಮಕ ಠಾಣೆ ಹಾಗೂ ಆಡಿ ಶೋ ರೂಂ ಚೌಕ್ ನಡುವೆ ಈ ಘಟನೆ ನಡೆದಿದೆ.
‘‘ನಾನು ನನ್ನ ಬಿಳಿ ಮರ್ಸಿಡಿಸ್-ಸಿ 220(2014ರ ಮಾದರಿ)ಕಾರಿನಲ್ಲಿ ಸೆಕ್ಟರ್ 29ರಲ್ಲಿ ರಸ್ತೆ ಬದಿಯಲ್ಲಿ ನನ್ನ ಕಾರು ನಿಲ್ಲಿಸಿ ಮೂತ್ರ ವಿಸರ್ಜನೆಗೆ ಹೋಗಿದ್ದೆ. ಬಳಿಕ ಬಂದು ಕಾರು ಹತ್ತುವಾಗ ಮತ್ತೊಂದು ಕಾರು ಬಂದು ನಿಂತಿತು, ಅದರಿಂದ ಮೂರು ಜನ ಹೊರಬಂದು ಚಾಕು ತೋರಿಸಿ ನನ್ನ ಕಾರು ಕದ್ದು ಓಡಿ ಹೋಗಿದ್ದಾರೆ’’ ಎಂದು ಕಾರಿನ ಮಾಲೀಕ ಹೇಳಿಕೊಂಡಿದ್ದಾರೆ.
ದೂರಿನ ಬಳಿಕ ಸೆಕ್ಟರ್ 26 ಪೊಲೀಸ್ ಠಾಣೆಯಲ್ಲಿ ಐಪಿಸಿಯ ಸೆಕ್ಟನ್ 382 ಮತ್ತು 34 ಅಡಿಯಲ್ಲಿ ಎಫ್ಐಆರ್ ದಾಖಲಾಗಿದೆ.
ನಾವು ಸಮೀಪದ ಪ್ರದೇಶಗಳ ಸಿಸಿಟಿವಿ ದೃಶ್ಯಗಳ ಸಹಾಯದಿಂದ ಆರೋಪಿಗಳನ್ನು ಗುರಿತಿಸಲು ಪ್ರಯತ್ನಿಸುತ್ತಿದ್ದೇವೆ. ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ತನಿಖಾಧಿಕಾರಿ ಎಎಸ್ಐ ಸಂದೀಪ್ ಕುಮಾರ್ ತಿಳಿಸಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ