ಲವರ್ ಜತೆ ಸಿಕ್ಕಿಬಿದ್ದ ಪತ್ನಿ, ನಿನ್ನನ್ನು ಮರ್ಡರ್ ಮಾಡಿ ಡ್ರಮ್​ನೊಳಗೆ ಹಾಕ್ತೀನೆಂದು ಗಂಡನಿಗೆ ಧಮ್ಕಿ

ಮಹಿಳೆಯೊಬ್ಬಳು ಪ್ರಿಕರನೊಂದಿಗೆ ಇರುವಾಗ ಪತಿ ಕಣ್ಣಿಗೆ ಬಿದ್ದಿದ್ದಾಳೆ. ಪತಿ ಆಕೆಯನ್ನು ಪ್ರಶ್ನಿಸಿದ್ದಕ್ಕೆ, ಸುಮ್ಮನಿದ್ದರೆ ಸರಿ ಇಲ್ಲವಾದರೆ ನಿನ್ನನ್ನು ಕೂಡ ಕೊಂದು ಡ್ರಮ್​ನೊಳಗೆ ಹಾಕುತ್ತೇನೆ ಎಂದು ಬೆದರಿಕೆ ಹಾಕಿದ್ದಾಳೆ. ಎಫ್‌ಐಆರ್ ದಾಖಲಿಸಿದ ನಂತರ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಆರೋಪಿಗಳನ್ನು ಬಂಧಿಸಲು ಶೋಧ ನಡೆಯುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಲವರ್ ಜತೆ ಸಿಕ್ಕಿಬಿದ್ದ ಪತ್ನಿ, ನಿನ್ನನ್ನು ಮರ್ಡರ್ ಮಾಡಿ ಡ್ರಮ್​ನೊಳಗೆ ಹಾಕ್ತೀನೆಂದು ಗಂಡನಿಗೆ ಧಮ್ಕಿ
ಪೊಲೀಸ್​
Image Credit source: Bar and bench

Updated on: Apr 09, 2025 | 10:50 AM

ಗುರುಗ್ರಾಮ, ಏಪ್ರಿಲ್ 9: ಪ್ರಿಯಕರನ ಜತೆ ಇರುವಾಗ ಪತ್ನಿ ಪತಿಯ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದು, ಹೆಚ್ಚಿಗೆ ಮಾತಾಡಿದ್ರೆ ಮೀರತ್​ನಲ್ಲಿ ಆದ ರೀತಿ ಕೊಲೆ(Murder) ಆಗೋಗ್ತಿಯಾ ಎಂದು ಧಮ್ಕಿ ಹಾಕಿರುವ ಘಟನೆ ಗುರುಗ್ರಾಮದಲ್ಲಿ ನಡೆದಿದೆ. ಗುರುಗ್ರಾಮದ ಬಸಾಯಿ ಎನ್​ಕ್ಲೇವ್​ನಲ್ಲಿ ಘಟನೆ ನಡೆದಿದ್ದು, ಮಹಿಳೆಯ ಪ್ರಯಕರ ಆಕೆಯ ಪತಿಯ ತಲೆಗೆ ಪಿಸ್ತೂಲಿನ ಹಿಂಭಾಗದಿಂದ ಹೊಡೆದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಳೆದ ತಿಂಗಳು ಮೀರತ್​ನಲ್ಲಿ ಮಹಿಳೆಯೊಬ್ಬಳು ಪ್ರಿಯಕರನ ಜತೆ ಸೇರಿ ಗಂಡನನ್ನು ಕೊಲೆ ಮಾಡಿ, ದೇಹವನ್ನು 15 ತುಂಡುಗಳಾಗಿ ಕತ್ತರಿಸಿ ಡ್ರಮ್​ನಲ್ಲಿ ಸಿಮೆಂಟ್​ ಆಗಿ ಸೀಲ್​ ಮಾಡಿದ್ದರು. ಅದೇ ರೀತಿ ಘಟನೆ ಇಲ್ಲೂ ಮರುಕಳಿಸಬಹುದು ಎಂದು ಗಂಡನಿಗೆ ಮಹಿಳೆ ಎಚ್ಚರಿಕೆ ಕೊಟ್ಟಿದ್ದಳು ಎನ್ನುವ ವಿಚಾರ ಬಹಿರಂಗಗೊಂಡಿದೆ.

ಅಕ್ಕಪಕ್ಕದ ಮನೆಯವರು ಸ್ಥಳಕ್ಕೆ ತಲುಪಿದ ನಂತರ ಆರೋಪಿಗಳಿಬ್ಬರು ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಹರಿಯಾಣದ ಝಜ್ಜರ್‌ನ ಖರ್ಮನ್ ಗ್ರಾಮದ ಕ್ಯಾಬ್ ಚಾಲಕ ಮೌಸಮ್ ನೀಡಿದ ದೂರಿನ ಪ್ರಕಾರ, ಎರಡು ವರ್ಷಗಳ ಹಿಂದೆ ಪಂಜಾಬ್‌ನ ಮೋಗಾದ ಮಹಿಳೆಯೊಂದಿಗೆ ಸಂಬಂಧ ಹೊಂದಿದ್ದನು.

ಇದನ್ನೂ ಓದಿ
ಮೀರತ್​ ಕೊಲೆ ಪ್ರಕರಣ: ಮುಸ್ಕಾನ್​ ಸೌರಭ್​ನನ್ನು ತುಂಡು ತುಂಡಾಗಿ ಕತ್ತರಿಸಿದ
ಮೀರತ್ ಕೊಲೆ; ಗಂಡನ ಜೊತೆ ಮುಸ್ಕಾನ್ ಡ್ಯಾನ್ಸ್ ಮಾಡಿದ ಹಳೇ ವಿಡಿಯೋ ವೈರಲ್
ಮಗಳನ್ನು ಗಲ್ಲಿಗೇರಿಸಿ ಎಂದು ಕಣ್ಣೀರಿಟ್ಟ ಆರೋಪಿ ಮಹಿಳೆಯ ಪೋಷಕರು
ಪತಿಯನ್ನು ಕೊಲೆ ಮಾಡಿ, ಕತ್ತರಿಸಿ ಡ್ರಮ್​ನಲ್ಲಿ ತುಂಬಿಟ್ಟಿದ್ದ ಮಹಿಳೆ

ಮತ್ತಷ್ಟು ಓದಿ: ಮೀರತ್​​ನಲ್ಲಿ ಗಂಡನನ್ನು ಕೊಂದು ಡ್ರಮ್​ನಲ್ಲಿ ತುಂಬಿಸಿದ್ದ ಹೆಂಡತಿ ಗರ್ಭಿಣಿ; ಶಾಕಿಂಗ್ ವಿಷಯ ಬಯಲು

ಅವರ ಕುಟುಂಬವು ಮದುವೆಗೆ ಒಪ್ಪದ ಕಾರಣ, ದಂಪತಿಗಳು ಗುರುಗ್ರಾಮ್‌ನ ಬಸಾಯಿ ಎನ್‌ಕ್ಲೇವ್‌ನಲ್ಲಿ ವಾಸಿಸುತ್ತಿದ್ದರು ಎಂದು ಮೌಸಮ್ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ. ಸೋಮವಾರ ರಾತ್ರಿ ಕರ್ತವ್ಯ ಮುಗಿಸಿ ಬೆಳಗ್ಗೆ 6 ಗಂಟೆ ಸುಮಾರಿಗೆ ಮನೆಗೆ ತಲುಪಿದಾಗ, ನನ್ನ ಹೆಂಡತಿ ಕೋಣೆಯಲ್ಲಿ ಕಾಣಲಿಲ್ಲ. ನಾನು ಟೆರೇಸ್‌ಗೆ ಹೋದಾಗ, ನನ್ನ ಹೆಂಡತಿ ನವೀನ್ ಜೊತೆ ನಿಂತಿರುವುದನ್ನು ನೋಡಿದೆ.

ನಾನು ಅವರನ್ನು ಅಡ್ಡಿಪಡಿಸುತ್ತಿದ್ದಂತೆ, ನವೀನ್ ಒಂದು ಪಿಸ್ತೂಲನ್ನು ತೆಗೆದುಕೊಂಡು ನನ್ನ ತಲೆಯ ಮೇಲೆ ಗುರಿಯಿಟ್ಟನು. ಅವನು ಪಿಸ್ತೂಲಿನ ಹಿಂಭಾಗದಿಂದ ನನ್ನ ತಲೆಗೆ ಹೊಡೆದನು. ನಮ್ಮ ನೆರೆಹೊರೆಯವರು ಸ್ಥಳಕ್ಕೆ ತಲುಪಿದ ನಂತರ ಅವರು ಓಡಿಹೋದರು ಎಂದು ಮೌಸಮ್ ತನ್ನ ದೂರಿನಲ್ಲಿ ಆರೋಪಿಸಿದ್ದಾರೆ.
ಎಫ್‌ಐಆರ್ ದಾಖಲಿಸಿದ ನಂತರ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಆರೋಪಿಗಳನ್ನು ಬಂಧಿಸಲು ಶೋಧ ನಡೆಯುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ