ಹೈದರಾಬಾದ್: ಕೊರೊನಾ ಮಾರಿಯಿಂದಾಗಿ ದೇಶಾದ್ಯಂತ ಲಾಕ್‌ಡೌನ್ ವಿಧಿಸಿದಾಗ ಎಲ್ಲಾ ಜಿಮ್‌ಗಳು ಬಂದ್ ಕ್ಲೋಸ್ ಆಗಿದ್ದವು. ಆದ್ರೆ ಈಗ ತೆಲಂಗಾಣ ಸರ್ಕಾರ ಅನ್ ಲಾಕ್ 3 ಭಾಗವಾಗಿ ರಾಜ್ಯದಲ್ಲಿರುವ ಜಿಮ್ ಓಪನ್ ಮಾಡಲು ಅವಕಾಶ ನೀಡಿದೆ.
ಸರ್ಕಾರದಿಂದ ಗ್ರೀನ್ ಸಿಗ್ನಲ್ ಸಿಗುತ್ತಿದ್ದಂತೆ ತೆಲಂಗಾಣದ ಜಿಮ್ಗಳು ಈಗ ಓಪನ್ ಆಗಿವೆ. ಕೇಂದ್ರದ ಮಾರ್ಗಸೂಚಿಯಲ್ಲಿ ಸ್ಯಾನಿಟೈಸ್ ಮಾಡಲಾಗುತ್ತಿದೆ. ಜಿಮ್ಗೆ ಬರುವ ಪ್ರತಿಯೊಬ್ಬರಿಗೂ ಸಾಮಾಜಿಕ ಅಂತರ ಕಾಯ್ದೊಕೊಳ್ಳುವಂತೆ ನೋಡಿಕೊಳ್ಳಲಾಗುತ್ತಿದೆ.
ಹೈದರಾಬಾದ್ನಲ್ಲಿ ಬಹಳ ದಿನಗಳ ನಂತರ ಜಿಮ್‌ಗೆ ಬಂದ ಕೆಲವರು ತಮ್ಮ ಕುಡಿಯುವ ನೀರಿನ ಬಾಟಲ್‌ಗಳನ್ನು ಮತ್ತು ಟಾವೆಲ್‌ಗಳನ್ನು ಮನೆಯಿಂದಲೇ ತರುತ್ತಿದ್ದಾರೆ. ಜೊತೆಗೆ ಕೋವಿಡ್ ಸೋಂಕು ತಗುಲದಂತೆ ಬೇಕಾದ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸುತ್ತಿದ್ದಾರೆ.
Telangana: Gyms reopen in Hyderabad as part of #Unlock3. A customer says, "We bring our own water bottles and towels. Only some people are allowed at a time and we are taking precautions against #COVID19." pic.twitter.com/EIMANDhH86
— ANI (@ANI) August 10, 2020