ದೇಶದಲ್ಲಿ H3N2 ವೈರಸ್ ಆತಂಕ: ರೋಗಿಗಳಿಗೆ ಫ್ಲೂ ಜತೆಗೆ ಕಿವಿ ತುಂಬಿದಂಥಾ ಅನುಭವ; ಇದು ರೋಗ ಲಕ್ಷಣ ಎಂದ ವೈದ್ಯರು

ಮೇಯೊ ಕ್ಲಿನಿಕ್ ಪ್ರಕಾರ, ವ್ಯಕ್ತಿಯ ಕಿವಿಗಳು ಬಂದ್ ಆಗಿ ಕಿವಿ ತುಂಬಿರುವಂತೆ ಅನುಭವವಾಗುತ್ತದೆ. ಮಧ್ಯದ ಕಿವಿಗಳನ್ನು ಮೂಗು ಮತ್ತು ಗಂಟಲಿನ ಹಿಂಭಾಗಕ್ಕೆ ಸಂಪರ್ಕಿಸುವ ವ್ಯಕ್ತಿಯ ಯುಸ್ಟಾಚಿಯನ್ ಟ್ಯೂಬ್ಗಳು ಅಡಚಣೆಯನ್ನು ಎದುರಿಸಿದಾಗ ಇದು ಸಂಭವಿಸಬಹುದು

ದೇಶದಲ್ಲಿ H3N2 ವೈರಸ್ ಆತಂಕ: ರೋಗಿಗಳಿಗೆ ಫ್ಲೂ ಜತೆಗೆ ಕಿವಿ ತುಂಬಿದಂಥಾ ಅನುಭವ; ಇದು ರೋಗ ಲಕ್ಷಣ ಎಂದ ವೈದ್ಯರು
ಪ್ರಾತಿನಿಧಿಕ ಚಿತ್ರ
Follow us
ರಶ್ಮಿ ಕಲ್ಲಕಟ್ಟ
|

Updated on:Mar 14, 2023 | 5:21 PM

ದೇಶದಾದ್ಯಂತ ಫ್ಲೂನಿಂದ (flu) ಬಳಲಿ ಆಸ್ಪತ್ರೆ ಸೇರುವ ರೋಗಿಗಳ ಸಂಖ್ಯೆ ಏರಿಕೆಯಾಗಿದ್ದು, H3N2 ಇನ್ಫ್ಲುಯೆನ್ಸ ವೈರಸ್ (H3N2 influenza Virus) ಬಗ್ಗೆ ಆತಂಕ ಹೆಚ್ಚಿದೆ. ನ್ಯುಮೋನಿಯಾ ರೀತಿಯ ಪ್ರಕರಣಗಳು ಹೆಚ್ಚಿದೆ ಅಂತಾರೆ ವೈದ್ಯರು. ಆದಾಗ್ಯೂ, ರೋಗಿಗಳು ಈ ಹಿಂದೆ ವರದಿ ಮಾಡದ ಮತ್ತೊಂದು ರೋಗಲಕ್ಷಣದ ಬಗ್ಗೆ ದೂರು ನೀಡುತ್ತಿದ್ದಾರೆ. ಅದೇನೆಂದರೆ ಕಿವಿ ತುಂಬಿದಂತಿರುವ (ear fullness) ಸ್ಥಿತಿ. ವೈದ್ಯರು ಇದನ್ನು “ಹೆಚ್ಚುವರಿ ರೋಗಲಕ್ಷಣ” ಎಂದಿದ್ದಾರೆ. ಅನಾರೋಗ್ಯದ ಐದು ದಿನ ಅಥವಾ ಆರನೇ ದಿನದಲ್ಲಿ ರೋಗಿಗಳಿಗೆ ಕಿವಿಯಲ್ಲಿ ತುಂಬಿಕೊಂಡಂತೆ ಅನಿಸುತ್ತದೆ, ಈ ರೋಗಲಕ್ಷಣವು ಯುವಕರಲ್ಲಿ ಹೆಚ್ಚು ವರದಿ ಆಗಿದೆ.

“ಈ ಫ್ಲೂನೊಂದಿಗೆ ಕಿವಿ ತುಂಬಿರುವುದು ಹೆಚ್ಚುವರಿ ಲಕ್ಷಣವಾಗಿದೆ” ಎಂದು ಸಿಕೆ ಬಿರ್ಲಾ ಆಸ್ಪತ್ರೆಯ ಆಂತರಿಕ ವೈದ್ಯಕೀಯ ಸಲಹೆಗಾರ ರಾಜೀವ್ ಗುಪ್ತಾ ಹೇಳಿದ್ದಾರೆ ಎಂದು ಐಎಎನ್‌ಎಸ್ ಉಲ್ಲೇಖಿಸಿದೆ. ಅನಾರೋಗ್ಯದ ಐದು ಅಥವಾ ಆರನೇ ದಿನದಲ್ಲಿ ಅನೇಕ ರೋಗಿಗಳು ಕಿವಿ ತುಂಬಿರುವ ಬಗ್ಗೆ ದೂರು ನೀಡಲು ಪ್ರಾರಂಭಿಸುತ್ತಾರೆ ಅಥವಾ ಕಿವಿಯೊಳಗೆ ಏನೋ ಸಿಕ್ಕಿಹಾಕಿಕೊಂಡಿದೆ ಎಂದು ಭಾವಿಸುತ್ತಾರೆ. ಇದು ಯುವಕರಲ್ಲಿ ಹೆಚ್ಚು ಸಾಮಾನ್ಯವಾಗಿದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಸಂಧಾನ ಯಶಸ್ವಿ: ಅಂತಿಮವಾಗಿ ತಮ್ಮ ರಾಜಕೀಯ ನಿಲುವು ಪ್ರಕಟಿಸಿದ ಸೋಮಣ್ಣ, ಬಿಜೆಪಿ ನಾಯಕರಿಗಿದ್ದ ಆತಂಕ ದೂರ

ಮೇಯೊ ಕ್ಲಿನಿಕ್ ಪ್ರಕಾರ, ವ್ಯಕ್ತಿಯ ಕಿವಿಗಳು ಬಂದ್ ಆಗಿ ಕಿವಿ ತುಂಬಿರುವಂತೆ ಅನುಭವವಾಗುತ್ತದೆ. ಮಧ್ಯದ ಕಿವಿಗಳನ್ನು ಮೂಗು ಮತ್ತು ಗಂಟಲಿನ ಹಿಂಭಾಗಕ್ಕೆ ಸಂಪರ್ಕಿಸುವ ವ್ಯಕ್ತಿಯ ಯುಸ್ಟಾಚಿಯನ್ ಟ್ಯೂಬ್ಗಳು ಅಡಚಣೆಯನ್ನು ಎದುರಿಸಿದಾಗ ಇದು ಸಂಭವಿಸಬಹುದು. ಇದು ಒಬ್ಬ ವ್ಯಕ್ತಿಯು ತನ್ನ ಕಿವಿಗಳಲ್ಲಿ ಒತ್ತಡವನ್ನು ಅನುಭವಿಸಿ ಮತ್ತು ತುಂಬಿದಂತೆ ಮಾಡಬಹುದು. ಕಿವಿ ತುಂಬಿದಂತಾದಾಗ ಕಮ್ಮಿ ಕೇಳಿಸುವಿಕೆ ತಲೆತಿರುಗುವಿಕೆ ಮತ್ತು ಕಿವಿಗಳಲ್ಲಿ ನೋವಿನಂತಹ ರೋಗಲಕ್ಷಣಗಳನ್ನು ಸಹ ಕಾಣಿಸಿಕೊಳ್ಳಬಹುದು.

ಏತನ್ಮಧ್ಯೆ, ರಾಜ್ಯಗಳು ಮತ್ತು ಕೇಂದ್ರವು ಜಾಗರೂಕವಾಗಿದ್ದು ಈ ಸಮಯದಲ್ಲಿ ಕಾಣಿಸಿಕೊಳ್ಳುವ ಜ್ವರ ಪ್ರಕರಣಗಳ ಪರಿಸ್ಥಿತಿಯನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡುತ್ತಿದೆ. ಈಗಿರುವ ಫ್ಲೂ ಜತೆಗೇ ಇನ್ಫ್ಲುಯೆನ್ಸಾ ಉಪವಿಭಾಗವಾದ H3N2 ನಿಂದಾಗಿ ಭಾರತವು ತನ್ನ ಮೊದಲ ಎರಡು ಸಾವುಗಳನ್ನು ವರದಿ ಮಾಡಿದ ನಂತರ ಆರೋಗ್ಯ ಸಚಿವಾಲಯವು ಕಳೆದ ವಾರ ಎಲ್ಲಾ ರಾಜ್ಯಗಳಿಗೆ ಎಚ್ಚರಿರೆ ಕಳುಹಿಸಿದೆ. ಜನರು ವೈಯಕ್ತಿಕ ನೈರ್ಮಲ್ಯವನ್ನು ಕಾಪಾಡಿಕೊಳ್ಳಲು, ನಿಯಮಿತವಾಗಿ ಕೈಗಳನ್ನು ತೊಳೆದುಕೊಳ್ಳಲು, ಮಾಸ್ಕ್ ಧರಿಸಲು ಮತ್ತು H3N2 ಪ್ರಕರಣಗಳು ಕ್ಷೀಣಿಸುವವರೆಗೆ ಜನಸಂದಣಿಯನ್ನು ತಪ್ಪಿಸಲು ಸಲಹೆ ನೀಡಲಾಗಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:15 pm, Tue, 14 March 23