AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತನ್ನ ವೈಫಲ್ಯಕ್ಕೆ ಬೇರೆಯವರನ್ನು ದೂಷಿಸುವುದು ದೆಹಲಿ ಸರ್ಕಾರದ ಅಭ್ಯಾಸ; ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ

ದೆಹಲಿಯ ನಿವಾಸಿಗಳು ಈ ಬೇಸಿಗೆಯಲ್ಲಿ ತೀವ್ರವಾದ ನೀರಿನ ಬಿಕ್ಕಟ್ಟನ್ನು ಎದುರಿಸುತ್ತಿದ್ದಾರೆ. ಉದ್ದನೆಯ ಸಾಲುಗಳಲ್ಲಿ ನಿಂತಿರುವ ದೃಶ್ಯಗಳು ಕಂಡುಬರುತ್ತಿವೆ. ಹಲವಾರು ಪ್ರದೇಶಗಳಲ್ಲಿ ಮೂಲಭೂತ ಪೂರೈಕೆಯನ್ನು ಸಹ ಪಡೆಯಲು ಜನರು ಹೆಣಗಾಡುತ್ತಿದ್ದಾರೆ. ತಾಪಮಾನವು ಸುಮಾರು 50 ಡಿಗ್ರಿ ಸೆಲ್ಸಿಯಸ್‌ಗೆ ಏರುತ್ತಿದ್ದಂತೆ ನೀರಿನ ಬೇಡಿಕೆ ಗಣನೀಯವಾಗಿ ಏರಿಕೆಯಾಗುತ್ತಿದೆ.

ತನ್ನ ವೈಫಲ್ಯಕ್ಕೆ ಬೇರೆಯವರನ್ನು ದೂಷಿಸುವುದು ದೆಹಲಿ ಸರ್ಕಾರದ ಅಭ್ಯಾಸ; ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ
ಲೆಫ್ಟಿನೆಂಟ್ ಗವರ್ನರ್ ವಿ.ಕೆ ಸಕ್ಸೇನಾ
ಸುಷ್ಮಾ ಚಕ್ರೆ
|

Updated on: May 31, 2024 | 7:43 PM

Share

ನವದೆಹಲಿ: ದೆಹಲಿಯಲ್ಲಿ ನಡೆಯುತ್ತಿರುವ ನೀರಿನ ಬಿಕ್ಕಟ್ಟಿನ (Water Crisis) ಬಗ್ಗೆ ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿ.ಕೆ ಸಕ್ಸೇನಾ (VK Saxena) ಇಂದು (ಶುಕ್ರವಾರ) ಆಮ್ ಆದ್ಮಿ ಪಕ್ಷದ (AAP) ನೇತೃತ್ವದ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕಳೆದ 10 ವರ್ಷಗಳಲ್ಲಿ ದೆಹಲಿ ಸರ್ಕಾರಕ್ಕೆ (Delhi Government) ಅಸಮರ್ಥತೆಯನ್ನು ಮತ್ತು ವೈಫಲ್ಯವನ್ನು ಮರೆಮಾಚುವುದು ಮತ್ತು ಇತರರನ್ನು ದೂಷಿಸುವುದು ಅಭ್ಯಾಸವಾಗಿದೆ ಎಂದು ಹೇಳಿದ್ದಾರೆ.

ಲೆಫ್ಟಿನೆಂಟ್ ಗವರ್ನರ್ ವಿ.ಕೆ ಸಕ್ಸೇನಾ ನೀಡಿರುವ ಹೇಳಿಕೆಯಲ್ಲಿ “ಕಳೆದ 10 ವರ್ಷಗಳಲ್ಲಿ ತನ್ನ ವೈಫಲ್ಯ ಮತ್ತು ಅಸಮರ್ಥತೆಯನ್ನು ಮರೆಮಾಚುವುದು ದೆಹಲಿ ಸರ್ಕಾರದ ಅಭ್ಯಾಸವಾಗಿದೆ. ದೆಹಲಿ ಸಿಎಂ ಕೇಜ್ರಿವಾಲ್ ತಮ್ಮ ಪ್ರತಿಯೊಂದು ವೈಫಲ್ಯಕ್ಕೂ ಇತರರನ್ನು ದೂಷಿಸುತ್ತಾರೆ. ಸಮಾವೇಶಗಳನ್ನು ಮಾಡುವ ಮೂಲಕ ತಮ್ಮ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳುತ್ತಾರೆ. ನ್ಯಾಯಾಲಯದ ಮೊಕದ್ದಮೆಗಳು ಮತ್ತು ಸಾರ್ವಜನಿಕರನ್ನು ದಾರಿ ತಪ್ಪಿಸುವುದು ಸರ್ಕಾರದ ನಿರ್ವಹಣೆಯಿಂದ ಮಾತ್ರ ದೆಹಲಿಯಲ್ಲಿ ನೀರಿನ ಕೊರತೆ ಕಡಿಮೆ ಮಾಡಬಹುದು” ಎಂದು ಹೇಳಿದ್ದಾರೆ.

ಇದನ್ನೂ ಓದಿ: Water Crisis: ಇನ್ಮುಂದೆ ನೀರು ಪೋಲು ಮಾಡಿದ್ರೆ 2 ಸಾವಿರ ರೂ. ದಂಡ

ಕಳೆದ ಕೆಲವು ದಿನಗಳಿಂದ ದೆಹಲಿಯ ನೀರಿನ ಸಮಸ್ಯೆಯ ಬಗ್ಗೆ ದೆಹಲಿ ಸರ್ಕಾರದ ಬೇಜವಾಬ್ದಾರಿ ವರ್ತನೆಯನ್ನು ನಾವು ನೋಡುತ್ತಿದ್ದೇವೆ. ಇಂದು ದೆಹಲಿಯಲ್ಲಿ ಜನರು ತಮ್ಮ ಪ್ರಾಣವನ್ನು ಪಣಕ್ಕಿಟ್ಟು ನೀರು ಪಡೆಯಲು ಟ್ಯಾಂಕರ್‌ಗಳ ಹಿಂದೆ ಓಡುತ್ತಿರುವುದು ಕಂಡು ಬರುತ್ತಿದೆ. ಆದರೆ, ದೆಹಲಿ ಸರ್ಕಾರ ತನ್ನ ವೈಫಲ್ಯಗಳಿಗೆ ಇತರ ರಾಜ್ಯಗಳನ್ನು ದೂಷಿಸುತ್ತಿದೆ. ದೆಹಲಿಯಲ್ಲಿ 24 ಗಂಟೆ ನೀರು ಪೂರೈಸುವ ಮುಖ್ಯಮಂತ್ರಿಯವರ ಭರವಸೆ ಕುತಂತ್ರವಾಗಿದೆ. ಹರಿಯಾಣ ಮತ್ತು ಉತ್ತರ ಪ್ರದೇಶಗಳು ತಮ್ಮ ನಿಗದಿತ ಪ್ರಮಾಣದ ನೀರನ್ನು ದೆಹಲಿಗೆ ನಿರಂತರವಾಗಿ ಪೂರೈಸುತ್ತಿವೆ. ಇದರ ಹೊರತಾಗಿಯೂ, ಇಂದು ದೆಹಲಿಯಲ್ಲಿ ನೀರಿನ ತೀವ್ರ ಕೊರತೆಗೆ ಬಹುದೊಡ್ಡ ಕಾರಣವೆಂದರೆ ಉತ್ಪಾದನೆಯಾಗುವ ನೀರಿನ ಶೇ. 54ರಷ್ಟು ಭಾಗಕ್ಕೆ ಲೆಕ್ಕವಿಲ್ಲ. ಹಳೆಯ ಮತ್ತು ಶಿಥಿಲಗೊಂಡ ಪೈಪ್‌ಲೈನ್‌ಗಳಿಂದ ಪೂರೈಕೆಯ ಸಮಯದಲ್ಲಿ ಶೇ. 40ರಷ್ಟು ನೀರು ವ್ಯರ್ಥವಾಗುತ್ತಿದೆ. ಕಳೆದ 10 ವರ್ಷಗಳಲ್ಲಿ ದೆಹಲಿ ಸರ್ಕಾರವು ಸಾವಿರಾರು ಕೋಟಿ ರೂ.ಗಳನ್ನು ಖರ್ಚು ಮಾಡಿದೆ, ಆದರೆ ಹಳೆಯ ಪೈಪ್‌ಲೈನ್‌ಗಳನ್ನು ಸರಿಪಡಿಸಲು ಅಥವಾ ಬದಲಾಯಿಸಲು ಸಾಧ್ಯವಾಗಲಿಲ್ಲ ಎಂದು ಸಕ್ಸೇನಾ ಆರೋಪಿಸಿದ್ದಾರೆ.

ಇದನ್ನೂ ಓದಿ: Health Tips: ಅತಿಯಾಗಿ ನೀರು ಕುಡಿಯೋದು ಡೇಂಜರ್​! ಜೀವಕ್ಕೆ ಅಪಾಯ ತರಬಹುದು ಎಚ್ಚರಿಕೆ ನೀಡಿದ ತಜ್ಞರು

ಟ್ಯಾಂಕರ್ ಮಾಫಿಯಾ ಈ ನೀರನ್ನು ಕದ್ದು ಬಡವರಿಗೆ ಮಾರಾಟ ಮಾಡುತ್ತಿದೆ. ಒಂದೆಡೆ, ದೆಹಲಿಯ ಶ್ರೀಮಂತ ಪ್ರದೇಶಗಳಲ್ಲಿ ಒಬ್ಬ ವ್ಯಕ್ತಿಗೆ ದಿನಕ್ಕೆ ಸರಾಸರಿ 550 ಲೀಟರ್ ನೀರು ಸರಬರಾಜು ಆಗುತ್ತಿದೆ. ಮತ್ತೊಂದೆಡೆ, ಹಳ್ಳಿಗಳು ಮತ್ತು ಕೊಳೆಗೇರಿಗಳಲ್ಲಿ ಪ್ರತಿ ವ್ಯಕ್ತಿಗೆ ಸರಾಸರಿ 15 ಲೀಟರ್ ನೀರು ಮಾತ್ರ ಸರಬರಾಜಾಗುತ್ತಿದೆ ಎಂದು ವಿಕೆ ಸಕ್ಸೇನಾ ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಬಿಗ್ ಬಾಸ್ ಮನೆಯಲ್ಲಿ ಮೊಟ್ಟೆ ಕಳ್ಳತನ: ಗಿಲ್ಲಿಯನ್ನೇ ಯಾಮಾರಿಸಿದ ಕಳ್ಳ ಯಾರು
ಬಿಗ್ ಬಾಸ್ ಮನೆಯಲ್ಲಿ ಮೊಟ್ಟೆ ಕಳ್ಳತನ: ಗಿಲ್ಲಿಯನ್ನೇ ಯಾಮಾರಿಸಿದ ಕಳ್ಳ ಯಾರು
ಮೋದಿಯನ್ನು ಕಾರಲ್ಲಿ ಕೂರಿಸಿಕೊಂಡು ತಾವೇ ಡ್ರೈವ್ ಮಾಡಿದ ಜೋರ್ಡಾನ್ ಪ್ರಿನ್ಸ್
ಮೋದಿಯನ್ನು ಕಾರಲ್ಲಿ ಕೂರಿಸಿಕೊಂಡು ತಾವೇ ಡ್ರೈವ್ ಮಾಡಿದ ಜೋರ್ಡಾನ್ ಪ್ರಿನ್ಸ್
‘ಸುಳ್ಳಿ-ಯೋಗ್ಯತೆ ಇಲ್ಲದವಳು’: ಚೈತ್ರಾ-ರಜತ್ ಮಾರಾಮಾರಿ
‘ಸುಳ್ಳಿ-ಯೋಗ್ಯತೆ ಇಲ್ಲದವಳು’: ಚೈತ್ರಾ-ರಜತ್ ಮಾರಾಮಾರಿ
ಬೆಳಗಾವಿ ಅಧಿವೇಶನದಲ್ಲೂ ಸದ್ದು ಮಾಡಿದ ಮೊಟ್ಟೆ ಕ್ಯಾನ್ಸರ್ ಸುದ್ದಿ
ಬೆಳಗಾವಿ ಅಧಿವೇಶನದಲ್ಲೂ ಸದ್ದು ಮಾಡಿದ ಮೊಟ್ಟೆ ಕ್ಯಾನ್ಸರ್ ಸುದ್ದಿ
ಕ್ಯಾಮರೂನ್ ಗ್ರೀನ್‌ ವೇತನದಿಂದ 7.20 ಕೋಟಿ ರೂ. ಕಡಿತ
ಕ್ಯಾಮರೂನ್ ಗ್ರೀನ್‌ ವೇತನದಿಂದ 7.20 ಕೋಟಿ ರೂ. ಕಡಿತ
ಪೊಲೀಸಪ್ಪನ ಜತೆ ಓಡಿಹೋಗಿದ್ದ ಮೋನಿಕಾಳ ಅಸಲಿಯತ್ತು ಬಯಲು
ಪೊಲೀಸಪ್ಪನ ಜತೆ ಓಡಿಹೋಗಿದ್ದ ಮೋನಿಕಾಳ ಅಸಲಿಯತ್ತು ಬಯಲು
ಬಿಜೆಪಿಗೆ ಹೊಸ ಸಾರಥಿ ಬೆನ್ನಲ್ಲೇ ದಿಲ್ಲಿಗೆ ಹಾರಿದ ವಿಜಯೇಂದ್ರ
ಬಿಜೆಪಿಗೆ ಹೊಸ ಸಾರಥಿ ಬೆನ್ನಲ್ಲೇ ದಿಲ್ಲಿಗೆ ಹಾರಿದ ವಿಜಯೇಂದ್ರ
ಬನ್ನೇರುಘಟ್ಟ ಝೂಗೆ ದಕ್ಷಿಣ ಆಫ್ರಿಕಾದ ಕ್ಯಾಪುಚಿನ್ ಕೋತಿಗಳ ಎಂಟ್ರಿ
ಬನ್ನೇರುಘಟ್ಟ ಝೂಗೆ ದಕ್ಷಿಣ ಆಫ್ರಿಕಾದ ಕ್ಯಾಪುಚಿನ್ ಕೋತಿಗಳ ಎಂಟ್ರಿ
ಮನೆ ಭೋಗ್ಯ ಸಂಬಂಧ ಇಬ್ಬರ ಗಲಾಟೆ,  ಮೂರನೆಯವರಿಗೆ ಬಿತ್ತು ಗೂಸಾ!
ಮನೆ ಭೋಗ್ಯ ಸಂಬಂಧ ಇಬ್ಬರ ಗಲಾಟೆ,  ಮೂರನೆಯವರಿಗೆ ಬಿತ್ತು ಗೂಸಾ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!