ಗುದನಾಳದಲ್ಲಿ 1 ಕೆಜಿ ಚಿನ್ನ ಸ್ಮಗ್ಲಿಂಗ್; ಕೇರಳದಲ್ಲಿ ಏರ್ ಇಂಡಿಯಾ ಗಗನಸಖಿ ಬಂಧನ
ಕೇರಳದ ಕಣ್ಣೂರಿನಲ್ಲಿ ಅಕ್ರಮವಾಗಿ ಚಿನ್ನ ಸಾಗಿಸುತ್ತಿದ್ದ ಏರ್ ಇಂಡಿಯಾ ಗಗನಸಖಿಯನ್ನು ಪೊಲೀಸರು ಬಂಧಿಸಿದ್ದಾರೆ. ಸುರಭಿ ಖಾತೂನ್ ಎಂಬ ಗಗನಸಖಿ ತನ್ನ ಗುದನಾಳದಲ್ಲಿ ಸುಮಾರು 1 ಕೆಜಿ ಚಿನ್ನವನ್ನು ಬಚ್ಚಿಟ್ಟುಕೊಂಡು ಭಾರತಕ್ಕೆ ಬರುತ್ತಿದ್ದಳು ಎಂದು ಆರೋಪಿಸಲಾಗಿದೆ.
ಕೊಚ್ಚಿ: ಏರ್ ಇಂಡಿಯಾ ಎಕ್ಸ್‌ಪ್ರೆಸ್‌ನಲ್ಲಿ (Air India Express) ಕೆಲಸ ಮಾಡುತ್ತಿದ್ದ ಕೊಲ್ಕತ್ತಾದ ಗಗನಸಖಿಯನ್ನು ಕಣ್ಣೂರು ವಿಮಾನ ನಿಲ್ದಾಣದಲ್ಲಿ (Kannur Airport) ಬಂಧಿಸಲಾಗಿದೆ. ತನ್ನ ಗುದನಾಳದಲ್ಲಿ 1 ಕೆಜಿ ಚಿನ್ನವನ್ನು ಸ್ಮಗ್ಲಿಂಗ್ (Gold Smuggling) ಮಾಡುತ್ತಿದ್ದ ಆರೋಪದಲ್ಲಿ ಸುರಭಿ ಖಾತೂನ್ ಎಂಬ ಗಗನಸಖಿಯನ್ನು (Air hostess) ಬಂಧಿಸಲಾಗಿದೆ ಎಂದು ಕಂದಾಯ ಗುಪ್ತಚರ ನಿರ್ದೇಶನಾಲಯದ ಮೂಲಗಳು ತಿಳಿಸಿವೆ.
ಕೇರಳದ ಕಣ್ಣೂರು ವಿಮಾನ ನಿಲ್ದಾಣದಲ್ಲಿ ಗಗನಸಖಿಯೊಬ್ಬರು ಚಿನ್ನವನ್ನು ಕಳ್ಳಸಾಗಣೆ ಮಾಡಿ ಗುದನಾಳದಲ್ಲಿ ಬಚ್ಚಿಟ್ಟ ಆರೋಪದ ಮೇಲೆ ಬಂಧಿಸಲಾಗಿದೆ ಎಂದು ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಇಂದು ತಿಳಿಸಿದೆ.
ಗಗನಸಖಿಯನ್ನು ಸುರಭಿ ಖಾತೂನ್ ಎಂದು ಗುರುತಿಸಲಾಗಿದ್ದು, ಆಕೆಯ ಗುದನಾಳದಲ್ಲಿ ಸುಮಾರು 1 ಕೆಜಿ ಚಿನ್ನವನ್ನು ಬಚ್ಚಿಟ್ಟುಕೊಂಡಿರುವುದು ಪತ್ತೆಯಾಗಿದೆ. ಆಕೆ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದಲ್ಲಿ ಕೆಲಸ ಮಾಡುತ್ತಿದ್ದಾರೆ. ಮೇ 28ರಂದು ಮಸ್ಕತ್‌ನಿಂದ ಕಣ್ಣೂರಿಗೆ ಬಂದಿಳಿದ ಏರ್ ಇಂಡಿಯಾ ವಿಮಾನದ ಕ್ಯಾಬಿನ್ ಸಿಬ್ಬಂದಿಯಾಗಿದ್ದರು.
ಇದನ್ನೂ ಓದಿ: Vistara Flight: 177 ಪ್ರಯಾಣಿಕರಿದ್ದ ವಿಸ್ತಾರ ವಿಮಾನಕ್ಕೆ ಬಾಂಬ್ ಬೆದರಿಕೆ
ಕಣ್ಣೂರು ವಿಮಾನ ನಿಲ್ದಾಣದಲ್ಲಿ ಡಿಆರ್‌ಐ ಅಧಿಕಾರಿಗಳು ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ. ನಂತರ ಸುರಭಿ ಖಾತೂನ್ ಅವರನ್ನು ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಯಿತು ಮತ್ತು 14 ದಿನಗಳ ಕಸ್ಟಡಿಗೆ ನೀಡಲಾಗಿದೆ.
Meet Surbhi Khatoon from Kolkata who is an Air Hostess with Air India Express and who get arrested at Kannur International Airport after 1 Kg of Gold was found concealed inside her rectum. She confessed that she smuggled gold from Muscat in similar way earlier also. pic.twitter.com/KiNJoo3TyJ
— NCMIndia Council For Men Affairs (@NCMIndiaa) May 31, 2024
ವರದಿಗಳ ಪ್ರಕಾರ, ಸುರಭಿ ಖಾತೂನ್ ಈ ಹಿಂದೆ ಕೂಡ ಹಲವು ಬಾರಿ ಚಿನ್ನವನ್ನು ಕಳ್ಳಸಾಗಣೆ ಮಾಡಿದ್ದರು ಎಂಬ ಆರೋಪವಿದೆ. ಈ ಬಾರಿ ಮಸ್ಕತ್‌ನಿಂದ ಆಕೆ ಭಾರತಕ್ಕೆ ವಿಮಾನದಲ್ಲಿ ಬರುತ್ತಿದ್ದಾಗ ಯಾರೋ ಈ ಬಗ್ಗೆ ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಸುರಭಿ ಖಾತೂನ್ ಅವರನ್ನು ಬಂಧಿಸಲಾಗಿದೆ.
ಇದನ್ನೂ ಓದಿ: Wastage Norms for Gold: ಚಿನ್ನಕ್ಕೆ ಹೊಸ ವೇಸ್ಟೇಜ್ ನಿಯಮ ಜಾರಿ ಜುಲೈ 31ರವರೆಗೆ ಇಲ್ಲ; ಆಭರಣಕಾರರ ಒತ್ತಡಕ್ಕೆ ಮಣಿದ ಸರ್ಕಾರ
ಸುರಭಿ ಖಾತೂನ್ ಈ ಹಿಂದೆ ಹಲವು ಚಿನ್ನ ಕಳ್ಳಸಾಗಣೆ ಪ್ರಕರಣಗಳಲ್ಲಿ ಭಾಗಿಯಾಗಿರುವುದು ತನಿಖೆಯಿಂದ ತಿಳಿದುಬಂದಿದೆ. ಇದಾದ ಬಳಿಕ ತನಿಖಾಧಿಕಾರಿಗಳು ಈ ಪ್ರಕರಣದಲ್ಲಿ ಇತರರ ಕೈವಾಡದ ಬಗ್ಗೆ ವಿಚಾರಣೆ ನಡೆಸಿದ್ದಾರೆ. ಕ್ಯಾಬಿನ್ ಸಿಬ್ಬಂದಿಯ ಇತರ ಸದಸ್ಯರು ಸಹ ಚಿನ್ನ ಕಳ್ಳಸಾಗಣೆ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆ ಎಂಬುದು ಖಚಿತವಾಗಿದೆ. ಆ ಹೆಸರುಗಳನ್ನು ಸ್ವತಃ ಸುರಭಿಯೇ ಅಧಿಕಾರಿಗಳಿಗೆ ನೀಡಿದ್ದಾರೆ ಎನ್ನಲಾಗುತ್ತಿದೆ. ಕಳ್ಳಸಾಗಣೆ ಚಟುವಟಿಕೆಗಳಿಗೆ ತನ್ನನ್ನು ನೇಮಿಸಿಕೊಳ್ಳಲಾಗಿತ್ತು ಮತ್ತು ಪ್ರತಿ ಬಾರಿ ಸ್ಮಗ್ಲಿಂಗ್ ಮಾಡುವಾಗಲೂ ಕಮಿಷನ್ ಸಿಗುತ್ತಿತ್ತು ಎಂದು ಆಕೆ ಹೇಳಿದ್ದಾಳೆ.
ತನಿಖೆಯ ಬಳಿಕ ಆ ಗಗನಸಖಿಯ ದೇಹದಿಂದ ಸುಮಾರು 1 ಕೆಜಿ ಚಿನ್ನ ಪತ್ತೆಯಾಗಿದೆ. ವಿಚಾರಣೆಯ ನಂತರ, ಅಧಿಕಾರಿಗಳು ಆಕೆಯನ್ನು ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿದರು. ನಂತರ ಆಕೆಯನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಯಿತು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:54 pm, Fri, 31 May 24