Wastage Norms for Gold: ಚಿನ್ನಕ್ಕೆ ಹೊಸ ವೇಸ್ಟೇಜ್ ನಿಯಮ ಜಾರಿ ಜುಲೈ 31ರವರೆಗೆ ಇಲ್ಲ; ಆಭರಣಕಾರರ ಒತ್ತಡಕ್ಕೆ ಮಣಿದ ಸರ್ಕಾರ

Gold Jewelleries New Wastage Norms: ಚಿನ್ನ, ಬೆಳ್ಳಿ ಮತ್ತು ಪ್ಲಾಟಿನಂ ಒಡವೆಗಳಲ್ಲಿನ ವೇಸ್ಟೇಜ್​ನ ಮಿತಿಯನ್ನು ಸರ್ಕಾರ ಮೊನ್ನೆ ಇಳಿಸಿದೆ. ಆದರೆ, ಆಭರಣ ಉದ್ಯಮದವರು ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಪರಿಷ್ಕೃತ ನಿಯಮ ಜಾರಿಯನ್ನು ಜುಲೈ 31ರವರೆಗೆ ತಡೆ ಹಿಡಿಯಲಾಗಿದೆ. ಅಷ್ಟರೊಳಗೆ ಉದ್ಯಮದವರು ತಮ್ಮ ಆಕ್ಷೇಪಗಳು ಹಾಗೂ ಅದಕ್ಕೆ ಸಮರ್ಥನೆಗಳನ್ನು ಸಲ್ಲಿಸಬೇಕಾಗುತ್ತದೆ.

Wastage Norms for Gold: ಚಿನ್ನಕ್ಕೆ ಹೊಸ ವೇಸ್ಟೇಜ್ ನಿಯಮ ಜಾರಿ ಜುಲೈ 31ರವರೆಗೆ ಇಲ್ಲ; ಆಭರಣಕಾರರ ಒತ್ತಡಕ್ಕೆ ಮಣಿದ ಸರ್ಕಾರ
ಆಭರಣ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 29, 2024 | 3:58 PM

ನವದೆಹಲಿ, ಮೇ 29: ಆಭರಣಗಳಿಗೆ ರೂಪಿಸಿದ ಹೊಸ ಗುಣಮಟ್ಟ ನಿಯಮಗಳನ್ನು (standard jewelleries) ಸರ್ಕಾರ ಸದ್ಯಕ್ಕೆ ತಡೆಹಿಡಿದಿದೆ. ರಫ್ತು ಮಾಡುವ ಚಿನ್ನ, ಬೆಳ್ಳಿ ಮತ್ತು ಪ್ಲಾಟಿನಂ ಆಭರಣಗಳಲ್ಲಿ ವೇಸ್ಟೇಜ್ ಮಿತಿ (wastage limit) ಎಷ್ಟು ಇರಬೇಕು ಎಂಬುದು ಸರ್ಕಾರ ಮೇ 28ರಂದು ನಿಗದಿ ಮಾಡಿತ್ತು. ಆಭರಣ ಉದ್ಯಮದವರಿಂದ ಆಕ್ಷೇಪ ಬಂದ ಹಿನ್ನೆಲೆಯಲ್ಲಿ ಈ ಹೊಸ ನಿಯಮಗಳ ಜಾರಿಯನ್ನು ಸರ್ಕಾರ ಸದ್ಯಕ್ಕೆ ಸ್ಥಗಿತಗೊಳಿಸಿದೆ. ಜುಲೈ 31ರವರೆಗೂ ಹಳೆಯ ಗುಣಮಟ್ಟ ನಿಯಮಗಳೇ ಚಾಲನೆಯಲ್ಲಿ ಇರಲಿವೆ.

ಪರಿಷ್ಕೃತ ನಿಯಮಗಳಿಂದ ತೊಂದರೆ ಆಗುತ್ತದೆ ಎಂದು ಹರಳು ಮತ್ತು ಆಭರಣ ರಫ್ತು ಉತ್ತೇಜಕ ಮಂಡಳಿ (ಜೆಪಿಇಪಿಸಿ) ಸಂಸ್ಥೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಅವರ ವಾದ ಮತ್ತು ವಿಚಾರವನ್ನು ವ್ಯಕ್ತಪಡಿಸಿಲು ಮತ್ತೊಂದು ಅವಕಾಶ ಕೊಡಲಾಗುವುದು ಎಂದು ವಿದೇಶ ವ್ಯಾಪಾರ ಮಹಾನಿರ್ದೇಶನಾಲಯ (ಡಿಜಿಎಫ್​ಟಿ) ಹೇಳಿದೆ. ಒಂದು ತಿಂಗಳ ಒಳಗಾಗಿ ಆಭರಣ ಸಂಘಟನೆಯು ತಮ್ಮ ತಗಾದೆಗಳನ್ನು ವ್ಯಕ್ತಪಡಿಸ ತಕ್ಕದ್ದು ಎಂದು ಡಿಜಿಎಫ್​ಟಿ ಷರತ್ತು ಹಾಕಿದೆ.

ಇದನ್ನೂ ಓದಿ: ಭಾರತದ ಗೋಲ್ಡ್ ರಿಸರ್ವ್ಸ್ 4 ತಿಂಗಳಲ್ಲಿ ಸಖತ್ ಹೆಚ್ಚಳ; ಆರ್​ಬಿಐ ಈ ಪರಿ ಚಿನ್ನ ಖರೀದಿ ಯಾಕೆ? ಯಾವ ದೇಶಗಳಲ್ಲಿ ಹೆಚ್ಚು ಚಿನ್ನ ಸಂಗ್ರಹವಿದೆ?

ಚಿನ್ನ, ಬೆಳ್ಳಿ ಆಭರಣ ರಫ್ತಿಗೆ ಸರ್ಕಾರದ ಹೊಸ ಗುಣಮಟ್ಟ ನಿಯಮ

ಮೊನ್ನೆ ಸೋಮವಾರ (ಮೇ 27) ಸರ್ಕಾರ ಹೊಸ ಮಾರ್ಗಸೂಚಿ ಹೊರಡಿಸಿತ್ತು. ಅದರ ಪ್ರಕಾರ ಸಾಧಾ ಚಿನ್ನ ಮತ್ತು ಪ್ಲಾಟಿನಿಮ್ ಆಭರಣಗಳಲ್ಲಿ ವೇಸ್ಟೇಜ್ ಪ್ರಮಾಣದ ಮಿತಿ ಶೇ. 0.5ರಷ್ಟು ಇರಬೇಕು. ಈ ಮೊದಲು ಅದರ ಮಿತಿ ಶೇ. 2.5ರಷ್ಟಿತ್ತು. ಇನ್ನು, ಸ್ಟಡ್ಡೆಡ್ ಜ್ಯುವೆಲರಿ, ಅಂದರೆ, ಹೆಚ್ಚು ವಿನ್ಯಾಸದ ಒಡವೆಗಳಲ್ಲಿನ ವೇಸ್ಟೇಜ್ ಮಿತಿಯನ್ನು ಶೇ 5ರಿಂದ ಶೇ. 0.75ಕ್ಕೆ ಇಳಿಸಲಾಗಿತ್ತು. ನಾಣ್ಯ, ಮೆಡಲ್ ಇತ್ಯಾದಿ ಪರಿಶುದ್ಧ ಚಿನ್ನದಲ್ಲಿನ ವೇಸ್ಟೇಜ್ ಮಿತಿಯನ್ನು ಶೇ. 0.2ರಿಂದ ಶೇ. 0.1ಕ್ಕೆ ತಗ್ಗಿಸಲಾಗಿದೆ. ಇದರಿಂದ ರಫ್ತಾಗುವ ಚಿನ್ನಾಭರಣಗಳ ಗುಣಮಟ್ಟ ಬಹಳಷ್ಟು ಸುಧಾರಿಸುತ್ತದೆ ಎಂಬುದು ಪ್ರಾಧಿಕಾರದ ಅನಿಸಿಕೆ.

ಆಭರಣಕಾರರ ಆಕ್ಷೇಪವೇನು?

ವೇಸ್ಟೇಜ್ ಮಿತಿಯನ್ನು ಇಳಿಸುವುದರಿಂದ ಆಭರಣ ತಯಾರಕರು ಮತ್ತು ಈ ಉದ್ಯಮದವರಿಗೆ ಕಷ್ಟವಾಗುತ್ತದೆ. ಜ್ಯುವೆಲರಿ ರಫ್ತಿಗೆ ಹೊಡೆತ ಬೀಳುತ್ತದೆ. ಲಾಭ ಕಡಿಮೆ ಆಗುತ್ತದೆ ಎಂಬ ಅಭಿಪ್ರಾಯ ಏಳಿಬರುತ್ತಿದೆ.

ಇದನ್ನೂ ಓದಿ: ಚಿನ್ನದ ಬೆಲೆ ಹೆಚ್ಚಾದರೂ ಆಭರಣಗಳಿಗೆ ಕಡಿಮೆ ಆಗಿಲ್ಲ ಬೇಡಿಕೆ; 10ರಿಂದ 20 ಗ್ರಾಂ ಚಿನ್ನದ ಒಡವೆಗಳು ಹೆಚ್ಚು ಸೇಲ್; ಐದು ಗ್ರಾಮ್​ವೊಳಗಿನ ಜ್ಯೂವೆಲರಿ ಕೇಳೋರಿಲ್ಲ

ಈಗ ಆಭರಣ ಉದ್ಯಮದವರು ಜುಲೈ 31ರೊಳಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಅವಕಾಶ ಹೊಂದಿದ್ದಾರೆ. ರಫ್ತು ಮಾಡಲಾಗುವ ಆಭರಣಗಳ ತಯಾರಿಕೆ ಹೇಗೆ ಆಗುತ್ತದೆ ಎನ್ನುವ ವರ್ಕ್​ಫ್ಲೋ ಅಥವಾ ಪ್ರಕ್ರಿಯೆಯ ವಿವರವನ್ನು ನೀಡಬೇಕು. ವೇಸ್ಟೇಜ್ ಮಿತಿ ಕಡಿಮೆ ಮಾಡುವುದರಿಂದ ಯಾವ ಸಮಸ್ಯೆ ಆಗುತ್ತದೆ ಎನ್ನುವ ಅಂಶವನ್ನು ವಿವರಿಸಬೇಕು ಎಂದು ಸೂಚಿಸಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ