AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತದ ಗೋಲ್ಡ್ ರಿಸರ್ವ್ಸ್ 4 ತಿಂಗಳಲ್ಲಿ ಸಖತ್ ಹೆಚ್ಚಳ; ಆರ್​ಬಿಐ ಈ ಪರಿ ಚಿನ್ನ ಖರೀದಿ ಯಾಕೆ? ಯಾವ ದೇಶಗಳಲ್ಲಿ ಹೆಚ್ಚು ಚಿನ್ನ ಸಂಗ್ರಹವಿದೆ?

Gold buying by RBI: ಭಾರತೀಯ ರಿಸರ್ವ್ ಬ್ಯಾಂಕ್​ನ ಫಾರೆಕ್ಸ್ ರಿಸರ್ವ್ಸ್​ನಲ್ಲಿ 2023 ಡಿಸೆಂಬರ್ ಅಂತ್ಯದಲ್ಲಿ 803 ಟನ್ ಚಿನ್ನ ಸಂಗ್ರಹ ಇತ್ತು. ಎಪ್ರಿಲ್ 26ಕ್ಕೆ ಅದು 827 ಟನ್​ಗೆ ಏರಿದೆ. 2023ರ ಇಡೀ ವರ್ಷದಲ್ಲಿ ಆರ್​ಬಿಐ 16 ಟನ್ ಚಿನ್ನ ಖರೀದಿಸಿದೆ. 2024ರ ಮೊದಲ ನಾಲ್ಕು ತಿಂಗಳಲ್ಲೇ 24 ಟನ್ ಚಿನ್ನವನ್ನು ಖರೀದಿಸಿದೆ. ಆರ್​ಬಿಐ ಮಾತ್ರವಲ್ಲ ಹೆಚ್ಚಿನ ದೇಶಗಳ ಸೆಂಟ್ರಲ್ ಬ್ಯಾಂಕುಗಳು ಆರ್ಥಿಕ ತುಮುಲಗಳಿಗೆ ಭದ್ರತೆಯಾಗಿ ಚಿನ್ನದ ಸಂಗ್ರಹ ಇಟ್ಟುಕೊಳ್ಳುತ್ತವೆ. ಅಮೆರಿಕದ ಬಳಿ ಅತಿಹೆಚ್ಚು ಚಿನ್ನದ ಸಂಗ್ರಹ ಇದೆ.

ಭಾರತದ ಗೋಲ್ಡ್ ರಿಸರ್ವ್ಸ್ 4 ತಿಂಗಳಲ್ಲಿ ಸಖತ್ ಹೆಚ್ಚಳ; ಆರ್​ಬಿಐ ಈ ಪರಿ ಚಿನ್ನ ಖರೀದಿ ಯಾಕೆ? ಯಾವ ದೇಶಗಳಲ್ಲಿ ಹೆಚ್ಚು ಚಿನ್ನ ಸಂಗ್ರಹವಿದೆ?
ಗೋಲ್ಡ್ ರಿಸರ್ವ್ಸ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 28, 2024 | 12:38 PM

Share

ನವದೆಹಲಿ, ಮೇ 28: ಈ ಭೂಮಿಯಲ್ಲಿ ಇರುವ ಅತ್ಯಮೂಲ್ಯ ವಸ್ತುಗಳಲ್ಲಿ ಚಿನ್ನವೂ ಒಂದು. ಇದರ ನೈಸರ್ಗಿಕ ಲಭ್ಯತೆ ಸೀಮಿತವಾಗಿರುವುದರಿಂದ ಚಿನ್ನಕ್ಕೆ ಬೇಡಿಕೆ ಬಹಳ ಹೆಚ್ಚು. ಕಷ್ಟಕಾಲಕ್ಕೆ ಚಿನ್ನ ಉಪಯೋಗಕ್ಕೆ ಬರುತ್ತದೆ ಎನ್ನುವ ಭಾವನೆ ಇದೆ. ಇದು ಜನರ ಭಾವನೆ ಮಾತ್ರವಲ್ಲ, ದೇಶಗಳ ಭಾವನೆಯೂ ಹೌದು. ಆರ್ಥಿಕ ತುಮುಲಗಳ (hedge against economic uncertainty) ಸಂದರ್ಭದಲ್ಲಿ ಚಿನ್ನ ರಕ್ಷಾ ಕವಚ ಆಗಬಹುದು ಎನ್ನುವ ನಂಬಿಕೆ ಇದೆ. ಅಂತೆಯೇ, ಹೆಚ್ಚಿನ ದೇಶಗಳ ಫಾರೆಕ್ಸ್ ಮೀಸಲು ನಿಧಿಯಲ್ಲಿ ಚಿನ್ನದ ಸಂಗ್ರಹವೂ ಪ್ರಮುಖವಾಗಿರುತ್ತದೆ. ಭಾರತದ ಸೆಂಟ್ರಲ್ ಬ್ಯಾಂಕ್ ಆದ ಆರ್​ಬಿಐ ತನ್ನ ಫಾರೆಕ್ಸ್ ರಿಸರ್ವ್ಸ್ ಬುಟ್ಟಿಗೆ ಚಿನ್ನವನ್ನೂ ಸೇರಿಸುತ್ತದೆ. ಇತ್ತೀಚೆಗೆ ಚಿನ್ನದ ಸಂಗ್ರಹ ಹೆಚ್ಚಿದೆ. ವರದಿಗಳ ಪ್ರಕಾರ 2023ರಲ್ಲಿ ಆರ್​ಬಿಐ ಖರೀದಿಸಿರುವದಕ್ಕಿಂತ ಹೆಚ್ಚು ಚಿನ್ನವನ್ನು ಕಳೆದ ನಾಲ್ಕು ತಿಂಗಳಲ್ಲಿ ಖರೀದಿಸಿದೆ.

2023ರ ಇಡೀ ಕ್ಯಾಲಂಡರ್ ವರ್ಷದಲ್ಲಿ ಆರ್​ಬಿಐ 16 ಟನ್ ಚಿನ್ನವನ್ನು ಖರೀದಿಸಿತ್ತು. ಈ ವರ್ಷದ ಮೊದಲ ನಾಲ್ಕು ತಿಂಗಳಲ್ಲಿ, ಅಂದರೆ ಜನವರಿಯಿಂದ ಏಪ್ರಿಲ್​ವರೆಗೆ 24 ಟನ್ ಚಿನ್ನವನ್ನು ಅಂತಾರಾಷ್ಟ್ರೀಯ ಮಾರುಕಟ್ಟೆಯಿಂದ ಕೊಂಡುಕೊಂಡಿದೆ. ಕಳೆದ ವರ್ಷಾಂತ್ಯದಲ್ಲಿ ಆರ್​ಬಿಐನ ಗೋಲ್ಡ್ ರಿಸರ್ವ್ಸ್ ಮೊತ್ತ 803.6 ಟನ್ ಇತ್ತು. ಎಪ್ರಿಲ್ 26ರ ದತ್ತಾಂಶದ ಪ್ರಕಾರ ಅದು 827.69 ಟನ್​ ಚಿನ್ನ ಇದೆ.

ಇದನ್ನೂ ಓದಿ: ಗೋಲ್ಡ್ ಇಟಿಎಫ್​ಗಳಿಂದ ವರ್ಷದಲ್ಲಿ ಶೇ. 20ರಷ್ಟು ರಿಟರ್ನ್; ಗೋಲ್ಡ್ ಬಾಂಡ್​ಗೂ ಇದಕ್ಕೂ ಏನು ವ್ಯತ್ಯಾಸ

ಐದು ವರ್ಷಗಳಿಂದ ಭಾರತದ ಫಾರೆಕ್ಸ್ ರಿಸರ್ವ್ಸ್ ಬುಟ್ಟಿಯಲ್ಲಿ ಚಿನ್ನ ಸೇರ್ಪಡೆ

2017ರ ಡಿಸೆಂಬರ್​ನಿಂದ ಆರ್​ಬಿಐ ಅಂತಾರಾಷ್ಟ್ರೀಯ ಮಾರುಕಟ್ಟೆಯಿಂದ ಚಿನ್ನವನ್ನು ಖರೀದಿಸಲು ಆರಂಭಿಸಿದೆ. 2022ರಲ್ಲಿ ಹೆಚ್ಚು ತೀವ್ರತೆಯಲ್ಲಿ ಖರೀದಿ ನಡೆದಿದೆ. ಈಗ ಜನವರಿಂದ ಹೊಸ ಉತ್ಸಾಹದಲ್ಲಿ ಹಳದಿ ಲೋಹವನ್ನು ಆರ್​ಬಿಐ ಸಂಗ್ರಹಿಸುತ್ತಿದೆ.

ಆರ್​ಬಿಐ ಮಾತ್ರವಲ್ಲ, ವಿಶ್ವದ ಹೆಚ್ಚಿನ ದೇಶಗಳ ಸೆಂಟ್ರಲ್ ಬ್ಯಾಂಕುಗಳು ಚಿನ್ನವನ್ನು ಖರೀದಿಸಿ ತಮ್ಮ ಫಾರೆಕ್ಸ್ ಮೀಸಲು ಸಂಪತ್ತಿನ ಬುಟ್ಟಿಗೆ ಸೇರಿಸುತ್ತವೆ. ಅಮೆರಿಕದ ಬಳಿ ಅತಿಹೆಚ್ಚು ಗೋಲ್ಡ್ ರಿಸರ್ವ್ಸ್ ಇದೆ. ಕೆಳ ಮಧ್ಯಮ ಆದಾಯದ ದೇಶಗಳ ಪೈಕಿ ಅತಿಹೆಚ್ಚು ಚಿನ್ನವನ್ನು ಹಿಡಿದಿಟ್ಟುಕೊಂಡಿರುವುದು ಭಾರತವೇ. ಒಟ್ಟಾರೆ ಪಟ್ಟಿಯಲ್ಲಿ ಭಾರತ 9ನೇ ಸ್ಥಾನದಲ್ಲಿದೆ.

ಇದನ್ನೂ ಓದಿ: ಚಿನ್ನದ ಬೆಲೆ ಹೆಚ್ಚಾದರೂ ಆಭರಣಗಳಿಗೆ ಕಡಿಮೆ ಆಗಿಲ್ಲ ಬೇಡಿಕೆ; 10ರಿಂದ 20 ಗ್ರಾಂ ಚಿನ್ನದ ಒಡವೆಗಳು ಹೆಚ್ಚು ಸೇಲ್; ಐದು ಗ್ರಾಮ್​ವೊಳಗಿನ ಜ್ಯೂವೆಲರಿ ಕೇಳೋರಿಲ್ಲ

ಅತಿಹೆಚ್ಚು ಗೋಲ್ಡ್ ರಿಸರ್ವ್ಸ್ ಹೊಂದಿರುವ ದೇಶಗಳು

  1. ಅಮೆರಿಕ: 8,133 ಟನ್ ಚಿನ್ನ
  2. ಜರ್ಮನಿ: 3,352 ಟನ್ ಚಿನ್ನ
  3. ಇಟಲಿ: 2,251 ಟನ್ ಚಿನ್ನ
  4. ಫ್ರಾನ್ಸ್: 2,436 ಟನ್ ಚಿನ್ನ
  5. ರಷ್ಯಾ: 2,332 ಟನ್ ಚಿನ್ನ
  6. ಚೀನಾ: 2,262 ಟನ್
  7. ಸ್ವಿಟ್ಜರ್ಲ್ಯಾಂಡ್: 1,040 ಟನ್
  8. ಜಪಾನ್: 845 ಟನ್
  9. ಭಾರತ: 827 ಟನ್
  10. ನೆದರ್ಲ್ಯಾಂಡ್ಸ್: 612 ಟನ್

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ಕಣ್ಣು ಆಪರೇಷನ್​​ಗೆ ಕರೆದು ಕೇವಲ ಅನಸ್ತೇಷಿಯಾ ಕೊಟ್ಟು ಕಳುಹಿಸಿದ್ರು!
ಕಣ್ಣು ಆಪರೇಷನ್​​ಗೆ ಕರೆದು ಕೇವಲ ಅನಸ್ತೇಷಿಯಾ ಕೊಟ್ಟು ಕಳುಹಿಸಿದ್ರು!
ತಾಂಡವ್ ಕ್ಯಾಪ್ಟನ್ ಆದ್ರೆ ಪ್ರಶಾಂತ್​​ಗೆ ಸಂಕಷ್ಟ: ವಿಡಿಯೋ ನೋಡಿ
ತಾಂಡವ್ ಕ್ಯಾಪ್ಟನ್ ಆದ್ರೆ ಪ್ರಶಾಂತ್​​ಗೆ ಸಂಕಷ್ಟ: ವಿಡಿಯೋ ನೋಡಿ
ದಸರಾದಲ್ಲಿ ಸಚಿವರನ್ನ ತಡೆದ ಮಹತ್ವದ ಬೆಳವಣಿಗೆ: ಸಿಎಂ ಭೇಟಿಯಾದ ಐಪಿಎಸ್
ದಸರಾದಲ್ಲಿ ಸಚಿವರನ್ನ ತಡೆದ ಮಹತ್ವದ ಬೆಳವಣಿಗೆ: ಸಿಎಂ ಭೇಟಿಯಾದ ಐಪಿಎಸ್
ಮತದಾನ ಕೇಂದ್ರದ ಬಳಿಯೇ ಸಚಿವರ ಕಾಲಿಗೆ ನಮಸ್ಕರಿಸಿದ ಬಿಜೆಪಿ ಆಭ್ಯರ್ಥಿ
ಮತದಾನ ಕೇಂದ್ರದ ಬಳಿಯೇ ಸಚಿವರ ಕಾಲಿಗೆ ನಮಸ್ಕರಿಸಿದ ಬಿಜೆಪಿ ಆಭ್ಯರ್ಥಿ
ದೊಡ್ಡಬಳ್ಳಾಪುರದ ತೂಬಗೆರೆಯಲ್ಲಿ ಕಂಪಿಸಿದ ಭೂಮಿ
ದೊಡ್ಡಬಳ್ಳಾಪುರದ ತೂಬಗೆರೆಯಲ್ಲಿ ಕಂಪಿಸಿದ ಭೂಮಿ
ಬಹಳ ದಿನಗಳ ಬಳಿಕ ಸುತ್ತೂರು ಶಕ್ತಿಪೀಠಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ
ಬಹಳ ದಿನಗಳ ಬಳಿಕ ಸುತ್ತೂರು ಶಕ್ತಿಪೀಠಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ
ಮೆಕ್ಕಾದಲ್ಲಿ ಸಿಲುಕಿದ 4,000 ಕನ್ನಡಿಗರು: ನೆರವಿಗೆ ಧಾವಿಸುವಂತೆ CMಗೆ ಮನವಿ
ಮೆಕ್ಕಾದಲ್ಲಿ ಸಿಲುಕಿದ 4,000 ಕನ್ನಡಿಗರು: ನೆರವಿಗೆ ಧಾವಿಸುವಂತೆ CMಗೆ ಮನವಿ
ತಾಂಡವ್ ರಾಮ್, ಗಗನ್ ಚಿನ್ನಪ್ಪ ಸ್ನೇಹದ ನಡುವೆ ಬಂದ ಸೌಂದರ್ಯಾ ಶೆಟ್ಟಿ
ತಾಂಡವ್ ರಾಮ್, ಗಗನ್ ಚಿನ್ನಪ್ಪ ಸ್ನೇಹದ ನಡುವೆ ಬಂದ ಸೌಂದರ್ಯಾ ಶೆಟ್ಟಿ
ನಿರುದ್ಯೋಗಿ ತರ ವರ್ತಿಸಬೇಡಿ: ಪ್ರಿಯಾಂಕ್ ಖರ್ಗೆಗೆ ಜೋಶಿ ಟಾಂಗ್
ನಿರುದ್ಯೋಗಿ ತರ ವರ್ತಿಸಬೇಡಿ: ಪ್ರಿಯಾಂಕ್ ಖರ್ಗೆಗೆ ಜೋಶಿ ಟಾಂಗ್
ಶಿಕ್ಷಕರ ಕ್ಷೇತ್ರದ ಚುನಾವಣೆ ವೇಳೆ ಗಲಾಟೆ :ಮುನಿರತ್ನ ಮೇಲೆ ಹಲ್ಲೆಗೆ ಯತ್ನ!
ಶಿಕ್ಷಕರ ಕ್ಷೇತ್ರದ ಚುನಾವಣೆ ವೇಳೆ ಗಲಾಟೆ :ಮುನಿರತ್ನ ಮೇಲೆ ಹಲ್ಲೆಗೆ ಯತ್ನ!