ಅಪ್ಪನ ಅಧಿಕಾರದಿಂದ ಅಲ್ಲ, ಕಠಿಣ ಪರಿಶ್ರಮದಿಂದಾಗಿ ನಾನಿಲ್ಲಿದ್ದೇನೆ: ಕಾರ್ತಿ ಚಿದಂಬರಂಗೆ ಟಾಂಗ್ ನೀಡಿದ ಕಾಂಗ್ರೆಸ್ ನಾಯಕ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Jan 03, 2021 | 5:10 PM

ತಮಿಳುನಾಡು ರಾಜ್ಯ ಕಾಂಗ್ರೆಸ್ ಘಟಕದ ನೂತನ ಪದಾಧಿಕಾರಿಗಳ ಬಗ್ಗೆ ಯಾರಿಗೂ ಯಾವುದೇ ಅಧಿಕಾರವಿಲ್ಲ, ಅಂದರೆ ಹೊಣೆಗಾರಿಕೆ ಇಲ್ಲ ಎಂದು ಟ್ವೀಟ್ ಮಾಡಿದ್ದ ಸಂಸದ ಕಾರ್ತಿ ಚಿದಂಬರಂಗೆ ಖಡಕ್ ಉತ್ತರ ನೀಡಿದ ತಮಿಳುನಾಡಿನ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮಹೇಂದ್ರನ್

ಅಪ್ಪನ ಅಧಿಕಾರದಿಂದ ಅಲ್ಲ, ಕಠಿಣ ಪರಿಶ್ರಮದಿಂದಾಗಿ ನಾನಿಲ್ಲಿದ್ದೇನೆ: ಕಾರ್ತಿ ಚಿದಂಬರಂಗೆ ಟಾಂಗ್ ನೀಡಿದ ಕಾಂಗ್ರೆಸ್ ನಾಯಕ
ಮಹೇಂದ್ರನ್ ಮತ್ತು ಕಾರ್ತಿ ಚಿದಂಬರಂ
Follow us on

ಚೆನ್ನೈ: ಅಪ್ಪನ ಅಧಿಕಾರದಿಂದ ಸಂಸದನಾಗಿರುವ ವ್ಯಕ್ತಿಗೆ ರಾಜ್ಯಮಟ್ಟದಲ್ಲಿ ಪಕ್ಷದ ಹುದ್ದೆಗೇರುವ ಬಗ್ಗೆ ಏನು ಗೊತ್ತು ಎಂದು ಸಂಸದ ಕಾರ್ತಿ ಚಿದಂಬರಂಗೆ ತಮಿಳುನಾಡು ಕಾಂಗ್ರೆಸ್ ಪಕ್ಷದ ನೂತನ ಪ್ರಧಾನ ಕಾರ್ಯದರ್ಶಿ ಕೆ. ಮಹೇಂದ್ರನ್ ಟಾಂಗ್ ನೀಡಿದ್ದಾರೆ.

ತಮಿಳುನಾಡಿನಲ್ಲಿ ಕಾಂಗ್ರೆಸ್ ಪಕ್ಷವು ರಾಜ್ಯಮಟ್ಟದಲ್ಲಿ 57 ಪದಾಧಿಕಾರಿಗಳು ಮತ್ತು ರಾಜ್ಯದ ಪ್ರಧಾನ ಕಾರ್ಯದರ್ಶಿಯನ್ನು ಶನಿವಾರ ಆಯ್ಕೆ ಮಾಡಿತ್ತು. ಈ ಬಗ್ಗೆ ರಾಜ್ಯ ಮತ್ತು ರಾಷ್ಟ್ರೀಯ ಘಟಕದ ನಡುವೆ ಅಸಮಾಧಾನ ಉಂಟಾಗಿತ್ತು.

ಪದಾಧಿಕಾರಿಗಳ ಆಯ್ಕೆ ಬಗ್ಗೆ ಪ್ರತಿಕ್ರಿಯಿಸಿದ ಕಾರ್ತಿ ಚಿದಂಬರಂ, ಈ ಜಂಬೂ ಸಮಿತಿಗಳು ಯಾವುದೇ ಉದ್ದೇಶವನ್ನು ಪೂರೈಸುವುದಿಲ್ಲ. ಯಾರಿಗೂ ಯಾವುದೇ ಅಧಿಕಾರ, ಅಂದರೆ ಹೊಣೆಗಾರಿಕೆ ಇಲ್ಲ ಎಂದಿದ್ದರು.

ಕಾರ್ತಿ ಅವರ ಟ್ವೀಟ್​ಗೆ ಉತ್ತರಿಸಿದ್ದ ಕೆ.ಮಹೇಂದ್ರನ್ ಕಠಿಣ ಪರಿಶ್ರಮಿಗಳಾದ ಯೂತ್ ಕಾಂಗ್ರೆಸ್, ಎನ್ಎಸ್​ಯುಐ, ಮಹಿಳಾ ಕಾಂಗ್ರೆಸ್ ಹಾಗೂ ಕಾಂಗ್ರೆಸ್​ ಎಸ್​ಸಿ ಘಟಕಗಳ ಕಾರ್ಯಕರ್ತರು ಅಪ್ಪನ ಅಧಿಕಾರಿದ ಬಲದಿಂದ ಪದಾಧಿಕಾರಿಗಳಾದವರಲ್ಲ. ಎನ್ಎಸ್​ಯುಐ ಇಂಡಿಯನ್ ಯೂತ್ ಕಾಂಗ್ರೆಸ್ ಮೊದಲ ಬಾರಿಗೆ ರಾಜ್ಯ ತಂಡದಲ್ಲಿದೆ. ಕೆಲವರು ಅಪ್ಪನಿಂದಾಗಿ ಸಂಸದರಾಗಿದ್ದಾರೆ. ಅವರಿಗಿದು ಅರ್ಥವಾಗುವುದಿಲ್ಲ ಎಂದು ಹೇಳಿದ್ದಾರೆ.

 

ಕಾರ್ತಿ ಚಿದಂಬರಂಗೆ ರಿಲೀಫ್​; IT ಕಾನೂನು ಕ್ರಮಕ್ಕೆ ಹೈಕೋರ್ಟ್​ ತಡೆ