ಲಾರಿಯೊಂದು ಮಿನಿ ಬಸ್‌ಗೆ ಡಿಕ್ಕಿ ಹೊಡೆದ ಪರಿಣಾಮ 7 ಮಂದಿ ಮೃತಪಟ್ಟು, 25 ಜನರು ಗಾಯಗೊಂಡಿರುವ ಘಟನೆ ಹರ್ಯಾಣದಲ್ಲಿ ನಡೆದಿದೆ. ಗುರುವಾರ ತಡರಾತ್ರಿ ಹರ್ಯಾಣದ ಅಂಬಾಲಾದಲ್ಲಿ ಮಿನಿ ಬಸ್‌ಗೆ ಟ್ರಕ್ ಡಿಕ್ಕಿ ಹೊಡೆದ ಪರಿಣಾಮ ಕನಿಷ್ಠ ಏಳು ಜನರು ಸಾವನ್ನಪ್ಪಿದ್ದಾರೆ ಮತ್ತು ಸುಮಾರು 25 ಮಂದಿ ಗಾಯಗೊಂಡಿದ್ದಾರೆ.
ಕಳೆದ ವಾರವಷ್ಟೇ, ರಾಜ್ಯದ ನುಹ್ ಪ್ರದೇಶದಲ್ಲಿ ಟೂರಿಸ್ಟ್ ಬಸ್‌ಗೆ ಬೆಂಕಿ ಹೊತ್ತಿಕೊಂಡ ಒಂಬತ್ತು ಜನರು ಸಜೀವ ದಹನವಾಗಿದ್ದರು ಮತ್ತು 15 ಮಂದಿ ಗಾಯಗೊಂಡಿದ್ದರು.
ಕುಂಡ್ಲಿ-ಮನೇಸರ್-ಪಲ್ವಾಲ್ (ಕೆಎಂಪಿ) ಎಕ್ಸ್‌ಪ್ರೆಸ್‌ವೇಯಲ್ಲಿ ಸುಮಾರು 2 ಮೀ ದೂರದಲ್ಲಿ ಈ ಘಟನೆ ನಡೆದಿದೆ. ಬಸ್‌ನಲ್ಲಿ ಸುಮಾರು 60 ಜನರು ಇದ್ದರು, ಎಲ್ಲರೂ ಪಂಜಾಬ್‌ನ ಹೋಶಿಯಾರ್‌ಪುರ ಮತ್ತು ಲುಧಿಯಾನ ನಿವಾಸಿಗಳು.
ಮತ್ತಷ್ಟು ಓದಿ: ರಾಜಸ್ಥಾನದಲ್ಲಿ ಭೀಕರ ಅಪಘಾತ; ಟ್ರಕ್ಗೆ ಬಸ್ ಡಿಕ್ಕಿ ಹೊಡೆದು ಐವರು ಸಾವು, 12 ಜನರ ಸ್ಥಿತಿ ಗಂಭೀರ
ಇವರೆಲ್ಲರೂ ಮಥುರಾ ಮತ್ತು ವೃಂದಾವನದಿಂದ ಧಾರ್ಮಿಕ ತೀರ್ಥಯಾತ್ರೆಗಳನ್ನು ಮುಗಿಸಿ ಹಿಂತಿರುಗುತ್ತಿದ್ದರು. ಗಾಯಗೊಂಡವರೆಲ್ಲರೂ ಚೇತರಿಸಿಕೊಂಡಿದ್ದಾರೆ ಎಂದು ಸದರ್ ತೌರು ಠಾಣಾಧಿಕಾರಿ, ಇನ್ಸ್‌ಪೆಕ್ಟರ್ ಜಿತೇಂದ್ರ ಕುಮಾರ್ ತಿಳಿಸಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ