ಆ ಮನೆಯಲ್ಲಿ ನನ್ನ ಮಾನಭಂಗವಾಗಿದೆ, ಚಾರಿತ್ರ್ಯವಧೆ ನಡೆಸಿದ್ದಾರೆ, ನಾನು ಪಾಲಿಗ್ರಾಫ್​ ಪರೀಕ್ಷೆಗೆ ಸಿದ್ಧ : ಸ್ವಾತಿ ಮಲಿವಾಲ್

ಅರವಿಂದ್ ಕೇಜ್ರಿವಾಲ್​ ಮನೆಯಲ್ಲಿ ನನ್ನ ಚಾರಿತ್ರ್ಯ ವಧೆ ನಡೆದಿದೆ, ನಾನು ಎಫ್​ಐಆರ್​ನಲ್ಲಿ ಹೇಳಿರುವುದೆಲ್ಲವೂ ನಿಜ, ನಾನು ಪಾಲಿಗ್ರಾಫ್​ ಹಾಗೂ ನಾರ್ಕೊ ಪರೀಕ್ಷೆಗೆ ಸಿದ್ಧನಿದ್ದೇನೆ ಎಂದು ಎಎಪಿ ರಾಜ್ಯಸಭಾ ಸಂಸದೆ ಸ್ವಾತಿ ಮಲಿವಾಲ್ ಹೇಳಿದ್ದಾರೆ.

ಆ ಮನೆಯಲ್ಲಿ ನನ್ನ ಮಾನಭಂಗವಾಗಿದೆ, ಚಾರಿತ್ರ್ಯವಧೆ ನಡೆಸಿದ್ದಾರೆ, ನಾನು ಪಾಲಿಗ್ರಾಫ್​ ಪರೀಕ್ಷೆಗೆ ಸಿದ್ಧ : ಸ್ವಾತಿ ಮಲಿವಾಲ್
ಸ್ವಾತಿ ಮಲಿವಾಲ್
Follow us
ನಯನಾ ರಾಜೀವ್
|

Updated on: May 24, 2024 | 8:31 AM

ಆಮ್​ ಆದ್ಮಿ ಪಕ್ಷದ ರಾಜ್ಯಸಭಾ ಸಂಸದೆ ಸ್ವಾತಿ ಮಲಿವಾಲ್(Swati Maliwal) ಅವರು ಅರವಿಂದ್ ಕೇಜ್ರಿವಾಲ್(Arvind Kejriwal)​ ಅವರ ನಿವಾಸದಲ್ಲಿ ಅವರ ಆಪ್ತ ಕಾಯದರ್ಶಿ ವಿಭವ್ ಕುಮಾರ್ ತಮ್ಮ ಮೇಲೆ ನಡೆಸಿದ ಹಲ್ಲೆ ಕುರಿತು ಮಾಧ್ಯಮದ ಮುಂದೆ ಮಾತನಾಡಿದ್ದಾರೆ. ಆ ಮನೆಯಲ್ಲಿ ನನ್ನ ಮಾನಭಂಗ ನಡೆದಿದೆ, ಚಾರಿತ್ರ್ಯ ವಧೆಯಾಗಿದೆ, ಎಫ್‌ಐಆರ್‌ನಲ್ಲಿ ತಾನು ಹೇಳಿರುವುದು ನಿಜ ಎಂದು ಸ್ವಾತಿ ಮಲಿವಾಲ್ ಹೇಳಿದ್ದಾರೆ. ನಾರ್ಕೋ ಪರೀಕ್ಷೆ ಮತ್ತು ಪಾಲಿಗ್ರಾಫ್‌ಗೆ ಒಳಗಾಗಲು ಸಿದ್ಧ ಎಂದು ಅವರು ಹೇಳಿದ್ದಾರೆ.

ರಾಜ್ಯಸಭಾ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡುವುದಿಲ್ಲ ಎಂದು ಸ್ವಾತಿ ಮಲಿವಾಲ್ ಸ್ಪಷ್ಟಪಡಿಸಿದ್ದಾರೆ. ಅವರಿಗೆ ನನ್ನ ರಾಜ್ಯಸಭಾ ಸ್ಥಾನ ಬೇಕಿದ್ದರೆ ಪ್ರೀತಿಯಿಂದ ಕೇಳಿದ್ದರೆ ನನ್ನ ಪ್ರಾಣವನ್ನು ಬೇಕಿದ್ದರೂ ಬಿಡುತ್ತಿದ್ದೆ, ಸಂಸದೆ ಎಂಬುದು ಸಣ್ಣ ವಿಷಯ, ಆದರೆ ಈಗ ನನ್ನ ಮೇಲೆ ಹಲ್ಲೆ ನಡೆದಿದೆ, ಪ್ರಪಂಚದ ಯಾವೊಂದು ಶಕ್ತಿ ಬಂದು ಹೇಳಿದರೂ ನಾನು ರಾಜೀನಾಮೆ ನೀಡುವ ಮಾತೇ ಇಲ್ಲ ಎಂದಿದ್ದಾರೆ.

ನನ್ನನ್ನು ಟ್ರೋಲ್ ಮಾಡಲಾಗುತ್ತಿದೆ, ನಾನು ಒತ್ತಡಕ್ಕೆ ಮಣಿದು ಈ ಪ್ರಕರಣವನ್ನು ಇಲ್ಲಿಗೆ ಬಿಡುತ್ತೇನೆ ಎಂದುಕೊಂಡಿದ್ದಾರೆ, ಆದರೆ ನಾನು ಎಫ್​ಐಆರ್​ನಲ್ಲಿ ಹೇಳಿರುವುದೆಲ್ಲವೂ ನಿಜ, ನಾನು ಪಾಲಿಗ್ರಾಫ್ ಹಾಗೂ ನಾರ್ಕೊ ಪರೀಕ್ಷೆ ಸಿದ್ಧನಿದ್ದೇನೆ, ನಾನು ಹೋರಾಡುತ್ತೇನೆ ಎಂದರು.

ಮತ್ತಷ್ಟು ಓದಿ: ಮೇ 13ರಂದು ನಡೆದ ಘಟನೆ ಬಗ್ಗೆ ಆಮ್ ಆದ್ಮಿ ಪಕ್ಷದ ರಾಜ್ಯಸಭಾ ಸಂಸದೆ ಸ್ವಾತಿ ಮಲಿವಾಲ್ ಹೇಳಿದ್ದೇನು?

ಇಷ್ಟೆಲ್ಲ ಆದರೂ, ಇಲ್ಲಿಯವರೆಗೆ ನಾನು ಅರವಿಂದ್ ಜಿಯಿಂದ ಯಾವುದೇ ಕರೆ ಸ್ವೀಕರಿಸಿಲ್ಲ ಅಥವಾ ಅವರು ನನ್ನನ್ನು ಭೇಟಿ ಮಾಡಿಲ್ಲ ಎಂಬುದು ಸಹ ನಿಜ. ಅರವಿಂದ್ ಜಿ ಆರೋಪಿಯನ್ನು ರಕ್ಷಿಸುತ್ತಿದ್ದಾರೆ.

ನಾನು ಎಫ್‌ಐಆರ್‌ನಲ್ಲಿ ನನ್ನ ಬಟ್ಟೆ ಹರಿದಿದೆ ಎಂದು ಯಾವಾಗ ಹೇಳಿದ್ದೇನೆ, ನನ್ನ ತಲೆಗೆ ಗಾಯವಾಗಿದೆ ಎಂದು ನಾನು ಎಫ್‌ಐಆರ್‌ನಲ್ಲಿ ಹೇಳಿದ್ದೇನೆ. ನನಗೆ ಏನಾಯಿತು ಎಂದು ನಾನು ನಿಖರವಾಗಿ ಬರೆದಿದ್ದೇನೆ, ನಾನು ಅದಕ್ಕಿಂತ ಹೆಚ್ಚಿನದನ್ನು ಬರೆದಿಲ್ಲ ಎಂದರು.

ತಾನು ಸತ್ಯವನ್ನೇ ಹೇಳುತ್ತಿದ್ದೇನೆ ಎಂದು ಸಾಬೀತುಪಡಿಸಲು ಏನು ಬೇಕಾದರೂ ಮಾಡಲು ಸಿದ್ಧ ಎಂದು ಸ್ವಾತಿ ಮಲಿವಾಲ್ ಹೇಳಿದ್ದಾರೆ.

Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು