ಚಂಡೀಗಢ: ಪ್ರತಿಭಟನಾ ನಿರತ ರೈತರು ಭದ್ರತಾವಲಯ ಭೇದಿಸಿದರೆ ಮೇಲೆ ಲಾಠಿ ಪ್ರಹಾರ ಮಾಡುವಂತೆ ಆದೇಶ ನೀಡಿದ ಐಎಎಸ್ ಅಧಿಕಾರಿ ಆಯುಷ್ ಸಿನ್ಹಾ ಬಗ್ಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್, “ಅಧಿಕಾರಿ ಬಳಸಿದ ಪದ ಸರಿಯಲ್ಲವಾದರೂ, ಕಾನೂನು ಮತ್ತು ಸುವ್ಯವಸ್ಥೆಯ ಸ್ಥಿತಿಯನ್ನು ಖಚಿತಪಡಿಸಿಕೊಳ್ಳಲು ಕಟ್ಟುನಿಟ್ಟಿನ ಕ್ರಮ ಪಾಲಿಸಲೇಬೇಕು ಎಂದು ಹೇಳಿದ್ದಾರೆ.
ರೈತರ ಮೇಲೆ ಪೊಲೀಸರು ಲಾಠಿ ಪ್ರಹಾರ ಮಾಡಿದ್ದ ಹೊತ್ತಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೊವೊಂದು ವೈರಲ್ ಆಗಿದ್ದು ಅದರಲ್ಲಿ ಸಿನ್ಹಾ ಅವರು ಪೊಲೀಸರಿಗೆ ನೀಡುವ ಆದೇಶ ಹೀಗಿದೆ ‘ ಎಲ್ಲರಿಗೂ ಬಲವಾಗಿ ಹೊಡಿಯಿರಿ. ಈ ಭದ್ರತಾ ವಲಯವನ್ನು ಅವರು ಭೇದಿಸಬಾರದು. ನಮ್ಮಲ್ಲಿ ಸಾಕಷ್ಟು ಪಡೆಗಳಿವೆ ಕಳೆದ ಎರಡು ದಿನಗಳಿಂದ ನಾವು ಮಲಗಿಲ್ಲ. ಆದರೆ ಸ್ವಲ್ಪ ನಿದ್ರೆ ಮಾಡಿದ ನಂತರ ನೀವು ಇಲ್ಲಿಗೆ ಬಂದಿದ್ದೀರಿ … ಮೇರೆ ಪಾಸ್ ಏಕ್ ಭೀ ಬಂದ ನಿಕಲ್ ಕೆ ನಹಿ ಆನ ಚಾಹಿಯೇ. ಅಗರ್ ಆಯೇ ತೋ ಸರ್ ಫೂಟಾ ಹುವಾ ಹೋನಾ ಚಾಹಿಯೇ ಉಸ್ಕಾ. ಕ್ಲಿಯರ್ ಹೈ ಆಪ್ಕೋ (ಯಾರೂ ತಡೆಗೋಡೆ ಮುರಿದು ನನ್ನನ್ನು ತಲುಪಬಾರದು. ಯಾರಾದರೂ ಹಾಗೆ ಮಾಡಿದರೆ, ಅವನ ತಲೆ ಮುರಿಯಬೇಕು. ಇದು ಸ್ಪಷ್ಟವಾಗಿದೆ ಎಂದು ಭಾವಿಸುತ್ತೇನೆ)’.
ಸೋಮವಾರ ಚಂಡೀಗಢದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಖಟ್ಟರ್, “[ಅಧಿಕಾರಿ ವಿರುದ್ಧ] ಯಾವುದೇ ಕ್ರಮ ಕೈಗೊಳ್ಳಬೇಕಾದರೆ, ಅದನ್ನು ಮೊದಲು ಜಿಲ್ಲಾಡಳಿತವು ಮೌಲ್ಯಮಾಪನ ಮಾಡಬೇಕಾಗುತ್ತದೆ. ಡಿಜಿಪಿ ಕೂಡ ಇದನ್ನು ಪರಿಶೀಲಿಸುತ್ತಿದ್ದಾರೆ. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು, ಕಟ್ಟುನಿಟ್ಟಿನ ಕ್ರಮ ಖಾತ್ರಿಪಡಿಸಿಕೊಳ್ಳಲೇಬೇಕು ಎಂದು ಹೇಳಿದ್ದಾರೆ.
ಪೊಲೀಸರ ಕ್ರಮವನ್ನು ವಿವರಿಸಿದ ಖಟ್ಟರ್, “ಇಂದು, ನೀವು ನನ್ನನ್ನು ಇಲ್ಲಿಗೆ ಕರೆದಿದ್ದೀರಿ. ಆದರೆ, ಸಿಎಂಗೆ ನಿರ್ದಿಷ್ಟ ಸ್ಥಳವನ್ನು ತಲುಪಲು ಬಿಡುವುದಿಲ್ಲ ಎಂದು ಯಾರಾದರೂ ಹೇಳಿದರೆ ಅದು ಸರಿಯೇ? ಇಂತಹ ಪ್ರತಿಭಟನೆಗಳಿಂದ ತಾವು ಏನನ್ನೂ ಗಳಿಸುತ್ತಿಲ್ಲ ಎಂಬುದನ್ನು ಅವರು [ರೈತರು] ಅರ್ಥಮಾಡಿಕೊಳ್ಳಬೇಕು. ಜನರು ಇನ್ನು ಮುಂದೆ ಅವರ ಬಗ್ಗೆ ಸಹಾನುಭೂತಿ ಹೊಂದಿಲ್ಲ. ರೈತರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಸ್ವೀಕರಿಸಬೇಕು ಎ ಎಂದು ನನಗೆ ಫೋನ್ ಕರೆಗಳು ಬರುತ್ತಿವೆ. ಆದರೆ ಅವರು ನಮ್ಮ ಜನರು ಎಂದು ನಾವು ಸಂಯಮ ಪಾಲಿಸುತ್ತಿದ್ದೇವೆ ಎಂದಿದ್ದಾರೆ.
“ವಾಕ್ ಸ್ವಾತಂತ್ರ್ಯವಿದೆ, ಆದರೆ ಪ್ರತಿ ಸ್ವಾತಂತ್ರ್ಯಕ್ಕೂ ಮಿತಿಗಳಿವೆ. ನಾನು ನನ್ನ ಸ್ನಾಯುವನ್ನು ಬಗ್ಗಿಸಿದರೆ ಮತ್ತು ನನ್ನ ಮುಷ್ಟಿಯನ್ನು ಗಾಳಿಯಲ್ಲಿ ಚಲಿಸಿದರೆ ಮತ್ತು ನನ್ನ ಮುಷ್ಟಿಯು ನಿಮ್ಮ ಮೂಗಿಗೆ ಬಡಿದರೆ, ಅದು ನನ್ನ ಸ್ವಾತಂತ್ರ್ಯ ಎಂದು ಅರ್ಥೈಸಲು ಸಾಧ್ಯವಿಲ್ಲ.
ಹರ್ಯಾಣದಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಗಳ ಬಗ್ಗೆ ಮಾತನಾಡಿದ ಖಟ್ಟರ್, ಪಂಜಾಬ್ ಸರ್ಕಾರವು ತಮ್ಮನ್ನು ದಾರಿ ತಪ್ಪಿಸುತ್ತಿದೆ ಎಂದು ದೂಷಿಸಿದರು.
ಪ್ರಜಾಪ್ರಭುತ್ವದ ನಿಯಮಗಳ ಪ್ರಕಾರ ಯಾರು ಏನು ಬೇಕಾದರೂ ಮಾಡಬಹುದು. ಅವರು ಕಪ್ಪು ಬಾವುಟಗಳನ್ನು ತೋರಿಸಬಹುದು, ಅವರು ಏನು ಬೇಕಾದರೂ ಹೇಳಬಹುದು, ಆದರೆ ಅವರು ಹಿಂಸೆಯಲ್ಲಿ ಪಾಲ್ಗೊಳ್ಳಬಾರದು. ಅವರು ಮೊದಲು ನನ್ನ ಹೆಲಿಕಾಪ್ಟರ್ ಅನ್ನು ಕರ್ನಾಲ್‌ನಲ್ಲಿ ಇಳಿಯಲು ಅನುಮತಿಸಿರಲಿಲ್ಲ. ಹೆಲಿಕಾಪ್ಟರ್ ಅದೇ ಸ್ಥಳದಲ್ಲಿ ಇಳಿಯುತ್ತದೆ ಎಂದು ನಾನು ಒತ್ತಾಯಿಸಿದ್ದರೆ, ಪೊಲೀಸರು ಬಲವನ್ನು ಬಳಸುತ್ತಿದ್ದರು. ಆಗ ಏನಾಗುತ್ತಿತ್ತು? ಹರಿಯಾಣದಲ್ಲಿ ನಡೆಯುತ್ತಿರುವ ಪ್ರತಿಭಟನೆಗಳಲ್ಲಿ ಪಂಜಾಬ್ ಸರ್ಕಾರದ ಕೈವಾಡವಿದೆ. ಇದು ಕಹಿ ಸತ್ಯ. ”
ಲಾಠಿಚಾರ್ಜ್ ಘಟನೆಯ ಕುರಿತು ಮಾತನಾಡಿದ ಖಟ್ಟರ್, ರೈತರು ತಮ್ಮ ಸಭೆ ನಡೆಸಲು ಅವಕಾಶ ನೀಡದಿರಲು ಯೋಜಿಸಿದ್ದಾರೆ ಮತ್ತು ಅಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಜಿಲ್ಲಾಡಳಿತ ಮತ್ತು ಪೊಲೀಸರು ಏನು ಮಾಡಬೇಕು? . “ಅವರು ಕಪ್ಪು ಬಾವುಟಗಳನ್ನು ತೋರಿಸಬಹುದಿತ್ತು ಅಥವಾ ಘೋಷಣೆಗಳನ್ನು ಮಾಡಬಹುದಿತ್ತು. ಅದು ಅನುಮತಿಸಲಾಗಿದೆ. ನಮ್ಮ ರಾಜ್ಯಾಧ್ಯಕ್ಷ ಒ.ಪಿ.ಧನ್ಖರ್ ಅವರನ್ನು ಸಭೆಯ ಸ್ಥಳಕ್ಕೆ ತಲುಪದಂತೆ ತಡೆದರು. ಈ ಹಿಂದೆ, ವಿಧಾನಸೌಧದ ಉಪಸಭಾಪತಿಯವರ ವಾಹನವನ್ನು ಸಿರ್ಸಾದಲ್ಲಿ ಧ್ವಂಸಗೊಳಿಸಲಾಯಿತು. ಇಂತಹ ಅಡ್ಡಿಗಳನ್ನು ಪ್ರಜಾಪ್ರಭುತ್ವ ನಿಯಮಗಳ ಅಡಿಯಲ್ಲಿ ಅನುಮತಿಸಲಾಗುವುದಿಲ್ಲ.
ಉಪಮುಖ್ಯಮಂತ್ರಿ ದುಷ್ಯಂತ್ ಚೌಟಾಲಾ ಅವರ ವಿರುದ್ಧ ಸರ್ಕಾರ ಖಂಡಿತವಾಗಿಯೂ ಕ್ರಮ ಕೈಗೊಳ್ಳುತ್ತದೆ ಎಂದು ಹೇಳಿದ ಒಂದು ದಿನದ ನಂತರ ಖಟ್ಟರ್ ಈ ರೀತಿ ಹೇಳಿದ್ದಾರೆ. “ನಿನ್ನೆಯ ಘಟನೆಯಿಂದ ನನಗೆ ನೋವಾಗಿದೆ, ಐಎಎಸ್ ಅಧಿಕಾರಿಯ ನೈತಿಕ ಮಾನದಂಡಗಳನ್ನು ಪೂರೈಸದ ಹೇಳಿಕೆಗಳನ್ನು ಐಎಎಸ್ ಅಧಿಕಾರಿ ನೀಡಿದ್ದಾರೆ. ಸಮಯದ ಚೌಕಟ್ಟಿನ ಪ್ರಕಾರ ಆತನ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದಿದ್ದರು ಚೌಟಾಲಾ.
ಇದನ್ನೂ ಓದಿ: Haryana ಹರ್ಯಾಣದಲ್ಲಿ ರೈತರ ಮೇಲೆ ಪೊಲೀಸ್ ಲಾಠಿ ಪ್ರಹಾರ: ವಿಪಕ್ಷ ನಾಯಕರಿಂದ ಖಂಡನೆ
(Haryana Chief Minister Manohar Lal Khattar on protesting farmers in Karnal lathicharge)