ಕೇರಳದ ಕಣ್ಣೂರು ಏರ್ಪೋರ್ಟ್ನಲ್ಲಿ ಪ್ರಯಾಣಿಕನಿಂದ 302 ಗ್ರಾಂ ಚಿನ್ನವನ್ನು ಅಧಿಕಾರಿಗಳು ಸೋಮವಾರ ವಶಪಡಿಸಿಕೊಂಡಿದ್ದಾರೆ. ಏರ್ ಇಂಟೆಲಿಜೆನ್ಸ್ ಯುನಿಟ್ ಮತ್ತು ಕಸ್ಟಮ್ ಅಧಿಕಾರಿಗಳು ಪ್ರಯಾಣಿಕನಿಂದ ಸುಮಾರು 14 ಲಕ್ಷ ರೂಪಾಯಿ ಬೆಲೆ ಬಾಳುವ ಚಿನ್ನ ಪ್ರಯಾಣಿಕನಿಂದ ವಶವಡಿಸಿಕೊಂಡಿದ್ದಾರೆ. ಎಎನ್ಐ ಸುದ್ದಿ ಸಂಸ್ಥೆಯ ವರದಿ ಪ್ರಕಾರ, ಚಿನ್ನವನ್ನು ಪೇಸ್ಟ್ ರೂಪದಲ್ಲಿ ಜೀನ್ಸ್ ಪ್ಯಾಂಟ್ಗೆ ಹಚ್ಚಲಾಗಿತ್ತು. ನೋಡಲು ಹಳದಿ ಬಣ್ಣದ ಪೇಂಟ್ನಂತೆ ಗೋಚರವಾಗುತ್ತಿತ್ತು. ಎರಡು ಲೇಯರ್ ಹೊಂದಿರುವ ಜೀನ್ಸ್ ಪ್ಯಾಂಟ್ ಧರಿಸಿದ ಪ್ರಯಾಣಿಕ ಚಿನ್ನದ ಪೇಸ್ಟ್ಅನ್ನು ಹಚ್ಚಿಕೊಂಡಿದ್ದರು ಎಂಬುದು ತಿಳಿದು ಬಂದಿದೆ.
ಜೀನ್ಸ್ ಪ್ಯಾಂಟ್ನ ಫೋಟೋ ಇದೀಗ ಫುಲ್ ವೈರಲ್ ಆಗಿದೆ. ಜೀನ್ಸ್ ಪ್ಯಾಂಟ್ ಎರಡನೇ ಲೇಯರ್ನಲ್ಲಿ ಹಳದಿ ಬಣ್ಣದಲ್ಲಿ ಗೋಚರವಾಗುತ್ತಿರುವ ಚಿನ್ನದ ಪೇಸ್ಟ್ಅನ್ನು ನೋಡಬಹುದು. ಜೀನ್ಸ್ ಪ್ಯಾಂಟ್ ಉದ್ದಕ್ಕೂ ಚಿನ್ನದ ಪೇಸ್ಟ್ಅನ್ನು ಹಚ್ಚಲಾಗಿದೆ.
Air Intelligence Unit at Kannur airport has seized 302 grams of gold in the form of a very thin paste, concealed within the double-layered pants worn by a passenger: Customs Preventive Unit, Kochi in Kerala pic.twitter.com/XYf3V6TJMz
— ANI (@ANI) August 30, 2021
ಡಬಲ್ ಲೇಯರ್ ಪ್ಯಾಂಟ್ನಲ್ಲಿ ಚಿನ್ನದ ಪೇಸ್ಟ್ಅನ್ನು ತೆಳುವಾಗಿ ಹಚ್ಚಲಾಗಿದೆ ಎಂದು ಏರ್ ಇಂಟಲಿಜೆನ್ಸ್ ಯೂನಿಟ್ಸ್ ಅಧಿಕಾರಿಯೋರ್ವರು ಮಾಹಿತಿ ಹಂಚಿಕೊಂಡಿದ್ದಾರೆ. ಇದು 302 ಗ್ರಾಂ ಗೋಲ್ಡ್. ತೆಳುವಾದ ಪೇಸ್ಟ್ ತಯಾರಿಸಿ ಪೇಂಟ್ನಂತೆ ಹಚ್ಚಲಾಗಿದೆ ಎಂದು ಹೇಳಿದ್ದಾರೆ.
ಈ ಸುದ್ದಿ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಆಶ್ಚರ್ಯಗೊಂಡಿದ್ದಾರೆ. ಕಳ್ಳಸಾಗಾಟನೆಗೆ ಏನೆಲ್ಲಾ ಪ್ಲಾನ್ ಮಾಡುತ್ತಾರೆ .. ಎಂತಾ ತಂತ್ರವಿದು! ಎಂದು ಓರ್ವರು ಹೇಳಿದ್ದಾರೆ. ಇಂತಹ ವಿಲಕ್ಷಣ ಚಿನ್ನದ ಕಳ್ಳಸಾಗಣೆ ತಂತ್ರಗಳು ಹೊಸದೇನಲ್ಲ. ಇತ್ತೀಚೆಗೆ ಅಮೃತಸರದ ವ್ಯಕ್ತಿಯು ತನ್ನ ಒಳ ಉಡುಪಿನಲ್ಲಿ 1,894 ಗ್ರಾಂ ಚಿನ್ನದ ಪೇಸ್ಟ್ ಕಳ್ಳಸಾಗಣೆ ಮಾಡಲು ಪ್ರಯತ್ನಿಸಿರುವುದು ಬೆಳಕಿಗೆ ಬಂದಿತ್ತು. ಈ ಆರೋಪದ ಮೇಲೆ ವ್ಯಕ್ತಿಯನ್ನು ಬಂಧಿಸಲಾಗಿತ್ತು.
What a technique…!!! OMG https://t.co/RZiTgib2Qx
— Ahanthem Surmala (@ASurmala) August 30, 2021
ಇದನ್ನೂ ಓದಿ:
ಕಳ್ಳತನ, ಕೊರೊನಾ ನಿಯಮ ಉಲ್ಲಂಘನೆಗೆ ಬ್ರೇಕ್ ಹಾಕಲು ವಿನೂತನ ಪ್ರಯತ್ನ; ಅಶರೀರ ವಾಣಿಯಿಂದ ಬರುತ್ತೆ ಎಚ್ಚರಿಕೆ
ಕೆಲಸ ಮಾಡುತ್ತಿದ್ದ ಮನೆಯಲ್ಲೇ ಕಳ್ಳತನ ಮಾಡಿದ ಆರೋಪದಡಿ ಮಹಿಳೆ ಬಂಧನ; 18 ಲಕ್ಷ ಮೌಲ್ಯದ ಚಿನ್ನಾಭರಣ ವಶ
(Air intelligence seized 302 gram gold by passengers in Kannur airport kerala)
Published On - 2:31 pm, Mon, 30 August 21