ಭಾರತದ ಪ್ರಮುಖ ದೇವಾಲಯಗಳಿಗೆ ಭೇಟಿ ನೀಡಬೇಕು ಅಂದುಕೊಂಡಿದ್ದೀರಾ? ನಿಮಗಿಷ್ಟವಾಗುವ ಸ್ಥಳಗಳ ಚಿತ್ರಣ ಇಲ್ಲಿವೆ

Edited By:

Updated on: Aug 31, 2021 | 9:07 AM

ಭಾರತವು ಇಲ್ಲಿನ ಸಂಸ್ಕೃತಿಯ ನೆಲೆಗಟ್ಟಿನಲ್ಲಿ ಅತಿ ಹೆಚ್ಚು ಶ್ರೀಮಂತವಾಗಿದೆ. ಇಲ್ಲಿರುವ ಪ್ರವಾಸಿತಾಣಗಳಷ್ಟೇ ಅಲ್ಲ. ದೇವಾಲಯಗಳು ಕೂಡ ಸದಾ ಕಾಲ ಜನರನ್ನು ತನ್ನತ್ತ ಸೇಳೆಯುತ್ತದೆ.

1 / 6
ರಾಜಸ್ಥಾನದ ಸದ್ರಿ ಪಟ್ಟಣದ ಬಳಿ (ಉದಯಪುರ ಮತ್ತು ರಾಜಸ್ಥಾನದ ನಡುವೆ) ರಣಕಪುರ ಹಳ್ಳಿಯಲ್ಲಿ ರಣಕಪುರ ದೇವಸ್ಥಾನ ಇದೆ. ಈ ದೇವಾಲಯವು ಅತ್ಯಂತ ಪ್ರಮುಖವಾದ ಜೈನ ದೇವಾಲಯಗಳಲ್ಲಿ ಒಂದಾಗಿದೆ. ಇದು 29 ಸಭಾಂಗಣಗಳನ್ನು ಮತ್ತು 80 ಸೊಗಸಾಗಿ ರಚಿಸಲಾದ ಗುಮ್ಮಟಗಳನ್ನು ಹೊಂದಿದೆ.

ರಾಜಸ್ಥಾನದ ಸದ್ರಿ ಪಟ್ಟಣದ ಬಳಿ (ಉದಯಪುರ ಮತ್ತು ರಾಜಸ್ಥಾನದ ನಡುವೆ) ರಣಕಪುರ ಹಳ್ಳಿಯಲ್ಲಿ ರಣಕಪುರ ದೇವಸ್ಥಾನ ಇದೆ. ಈ ದೇವಾಲಯವು ಅತ್ಯಂತ ಪ್ರಮುಖವಾದ ಜೈನ ದೇವಾಲಯಗಳಲ್ಲಿ ಒಂದಾಗಿದೆ. ಇದು 29 ಸಭಾಂಗಣಗಳನ್ನು ಮತ್ತು 80 ಸೊಗಸಾಗಿ ರಚಿಸಲಾದ ಗುಮ್ಮಟಗಳನ್ನು ಹೊಂದಿದೆ.

2 / 6

ಅಕ್ಷರಧಾಮ ದೇವಾಲಯವನ್ನು 2005 ರಲ್ಲಿ ನಿರ್ಮಿಸಲಾಯಿತು. ಸ್ವಾಮಿನಾರಾಯಣ ಅವರ ಮಾರ್ಗದರ್ಶನದಲ್ಲಿ ಈ ದೇವಾಲಯವನ್ನು ನಿರ್ಮಿಸಲಾಗಿದೆ. ನೋಯ್ಡಾದ ಗಡಿಯ ಪೂರ್ವ ದೆಹಲಿಯಲ್ಲಿರುವ ಈ ದೇವಸ್ಥಾನವು ಪ್ರಮುಖ ಪ್ರವಾಸಿ ತಾಣವಾಗಿದೆ. ಇದು ಭಾರತದ ಅತಿದೊಡ್ಡ ಹಿಂದೂ ದೇವಾಲಯಗಳಲ್ಲಿ ಒಂದಾಗಿದೆ.

3 / 6

ಪ್ರೇಮ್ ಮಂದಿರ. ಮಥುರಾದ ಬೃಂದಾವನದಲ್ಲಿರುವ ರಾಧಾಕೃಷ್ಣ ದೇವಸ್ಥಾನವು ನೋಡಲು ಆಕರ್ಷಕವಾಗಿದೆ. ಜಗದ್ಗುರು ಕೃಪಾಲು ಪರಿಷತ್, ಅಂತರಾಷ್ಟ್ರೀಯ ಲಾಭರಹಿತ ಟ್ರಸ್ಟ್‌ನಿಂದ ನಿರ್ವಹಿಸಲ್ಪಟ್ಟಿರುವ ಈ ದೇವಸ್ಥಾನವು ರಾಧಾ-ಕೃಷ್ಣ ಮತ್ತು ರಾಮನ ಮೂರ್ತಿಯನ್ನು ಒಳಗೊಂಡಿದೆ. ಈ ದೇವಾಲಯವು ಸೂರ್ಯಾಸ್ತದ ಸಮಯದಲ್ಲಿ ಪ್ರಕಾಶಮಾನವಾದ ವರ್ಣಗಳಲ್ಲಿ ಬೆಳಗುತ್ತದೆ.

4 / 6

ಭಾರತದ ಅತ್ಯಂತ ಜನಪ್ರಿಯ ದೇವಾಲಯಗಳಲ್ಲಿ ಒಂದಾದ ಮತ್ತು ಅತ್ಯಂತ ಪವಿತ್ರವಾದ ಸಿಖ್ ದೇಗುಲಗಳಲ್ಲಿ ಸುಮರ್ಣ ದೇವಸ್ಥಾನ ಕೂಡ ಒಂದು. ಅಮೃಸಾರಾದಲ್ಲಿರುವ ಸುವರ್ಣ ದೇವಾಲಯವು ಹೊರಭಾಗದಲ್ಲಿ ಚಿನ್ನದ ಕವಚದಿಂದ ಕೂಡಿದೆ. ಬುದ್ಧ ದೇವಾಲಯದಲ್ಲಿ ವಾಸವಾಗಿದ್ದರು ಎಂಬ ನಂಬಿಕೆ ಇದೆ.

5 / 6

ಮಹಾರಾಷ್ಟ್ರದ ಔರಂಗಾಬಾದ್‌ನಲ್ಲಿರುವ ಕೈಲಾಸ ದೇವಸ್ಥಾನವು ಭಾರತದ ಅತ್ಯಂತ ಹಳೆಯ ದೇವಾಲಯಗಳಲ್ಲಿ ಒಂದಾಗಿದೆ. ಕೈಲಾಸನಾಥ ಮಂದಿರವನ್ನು ಒಂದೇ ಕಲ್ಲಿನಿಂದ ಕೆತ್ತಲಾಗಿದೆ. ವಾಸ್ತುಶಿಲ್ಪ ಮತ್ತು ಶಿಲ್ಪಕಲಾಕೃತಿಗಳ ಕಾರಣದಿಂದ ಈ ಗುಹಾ ದೇವಾಲಯ ಹೆಚ್ಚು ಮನ್ನಣೆ ಪಡೆದಿದೆ.

6 / 6

ಮಹಾಬೋಧಿ ದೇವಸ್ಥಾನ ಅಥವಾ ಮಹಾಬೋಧಿ ಮಹಾವಿಹಾರ್ ದೇವಾಲಯ ಯುನೆಸ್ಕೋ ವಿಶ್ವ ಪರಂಪರೆಯ ತಾಣವಾಗಿದೆ. ಇದನ್ನು ಬುದ್ಧನು ಜ್ಞಾನೋದಯವನ್ನು ಪಡೆದ ಸ್ಥಳವೆಂದು ಹೇಳಲಾಗುತ್ತದೆ. ನಿರಂಜನ ನದಿಯ ದಡದಲ್ಲಿರುವ ಈ ದೇವಸ್ಥಾನವು ಏಕಾಂತ ಮತ್ತು ಶಾಂತತೆಯ ಪ್ರತಿಬಿಂಬದ ಸ್ಥಳವಾಗಿದೆ.

Loading...
Unable to load recommendations.
Follow Us