ಪಾಕಿಸ್ತಾನದ ಐಎಸ್‌ಐ ಜೊತೆ ಮಿಲಿಟರಿ ಮಾಹಿತಿ ಹಂಚಿಕೊಂಡ ಹರಿಯಾಣದ ಕಾಲೇಜು ವಿದ್ಯಾರ್ಥಿ ಬಂಧನ

ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನತೆ ಹೆಚ್ಚಾಗಿರುವುದು ಎಲ್ಲರಿಗೂ ಗೊತ್ತೇ ಇದೆ. ಈ ನಡುವೆ ಭಾರತೀಯ ಮಿಲಿಟರಿಗೆ ಸಂಬಂಧಿಸಿದ ಕೆಲವು ರಹಸ್ಯ ವಿಷಯಗಳನ್ನು ಭಾರತದ ವಿದ್ಯಾರ್ಥಿಯೊಬ್ಬರು ಭಯೋತ್ಪಾದನಾ ಸಂಘಟನೆಯ ಜೊತೆ ಹಂಚಿಕೊಂಡಿದ್ದಾರೆ. ಪಾಕಿಸ್ತಾನದ ಐಎಸ್‌ಐ ಪರವಾಗಿ ಬೇಹುಗಾರಿಕೆ ನಡೆಸುತ್ತಿದ್ದ ಆರೋಪದ ಮೇಲೆ ಹರಿಯಾಣದ ಕೈಥಾಲ್‌ನಲ್ಲಿ 25 ವರ್ಷದ ರಾಜಕೀಯ ವಿಜ್ಞಾನ ವಿದ್ಯಾರ್ಥಿಯನ್ನು ಬಂಧಿಸಲಾಗಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಕಳೆದ ಒಂದು ವಾರದಲ್ಲಿ ಇದು ಎರಡನೇ ಬಂಧನವಾಗಿದೆ.

ಪಾಕಿಸ್ತಾನದ ಐಎಸ್‌ಐ ಜೊತೆ ಮಿಲಿಟರಿ ಮಾಹಿತಿ ಹಂಚಿಕೊಂಡ ಹರಿಯಾಣದ ಕಾಲೇಜು ವಿದ್ಯಾರ್ಥಿ ಬಂಧನ
India Pakistan

Updated on: May 17, 2025 | 3:44 PM

ನವದೆಹಲಿ, ಮೇ 17: ಪಾಕಿಸ್ತಾನದ (Pakistan) ಐಎಸ್‌ಐ ಜೊತೆ ಸೂಕ್ಷ್ಮ ಮಾಹಿತಿಯನ್ನು ಹಂಚಿಕೊಂಡ ಆರೋಪದ ಮೇಲೆ ಹರಿಯಾಣದ (Haryana) ಕೈಥಾಲ್ ಜಿಲ್ಲೆಯಿಂದ 25 ವರ್ಷದ ಕಾಲೇಜು ವಿದ್ಯಾರ್ಥಿಯನ್ನು ಬಂಧಿಸಲಾಗಿದೆ. ಪಟಿಯಾಲ ಕಾಲೇಜಿನಲ್ಲಿ ರಾಜಕೀಯ ವಿಜ್ಞಾನ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಯನ್ನು ಮೇ 12ರಂದು ವಶಕ್ಕೆ ಪಡೆಯಲಾಯಿತು. ಅವನು ತನ್ನ ಫೇಸ್‌ಬುಕ್ ಪ್ರೊಫೈಲ್‌ಗೆ ಭಾರತೀಯ ಮಿಲಿಟರಿಯ ಬಂದೂಕುಗಳು ಮತ್ತು ಪಿಸ್ತೂಲ್‌ಗಳ ಫೋಟೋಗಳನ್ನು ಅಪ್‌ಲೋಡ್ ಮಾಡಿದ್ದನು.

ಈ ಬಗ್ಗೆ ವಿಚಾರಣೆಯ ಸಮಯದಲ್ಲಿ ಆ ವಿದ್ಯಾರ್ಥಿ ಕಳೆದ ವರ್ಷ ನವೆಂಬರ್‌ನಲ್ಲಿ ಕರ್ತಾರ್‌ಪುರ ಕಾರಿಡಾರ್ ಮೂಲಕ ಪಾಕಿಸ್ತಾನಕ್ಕೆ ಪ್ರಯಾಣಿಸಿದ್ದ ಎಂದು ತಿಳಿದುಬಂದಿದೆ. ನಂತರ ಅವನು ಐಎಸ್‌ಐ ಕಾರ್ಯಕರ್ತರೊಂದಿಗೆ ಸಂವಹನ ನಡೆಸಲು ಪ್ರಾರಂಭಿಸಿದ್ದನು. ಅವರು ಆತ ನೀಡುವ ಮಾಹಿತಿಗೆ ಬದಲಾಗಿ ಅವನಿಗೆ ಹಣವನ್ನು ನೀಡುತ್ತಿದ್ದರು ಎಂಬುದು ಗೊತ್ತಾಗಿದೆ.

 

ಇದನ್ನೂ ಓದಿ: ಪಾಕಿಸ್ತಾನದ ಶೇ.82ರಷ್ಟು ಅತ್ಯಾಚಾರಗಳು ತಂದೆ, ಅಜ್ಜ, ಅಣ್ಣಂದಿರಿಂದಲೇ ನಡೆಯುತ್ತಿವೆ; ಶಾಕಿಂಗ್ ವಿಷಯ ಬಿಚ್ಚಿಟ್ಟ ಮಾಜಿ ಸಂಸದೆ

ಪೊಲೀಸರ ಪ್ರಕಾರ, ಆ ವಿದ್ಯಾರ್ಥಿ ಪಟಿಯಾಲ ಮಿಲಿಟರಿ ಕಂಟೋನ್ಮೆಂಟ್‌ನ ಫೋಟೋಗಳನ್ನು ಹಂಚಿಕೊಂಡಿದ್ದನು. ಅವನ ಫೋನ್ ಅನ್ನು ವಶಪಡಿಸಿಕೊಳ್ಳಲಾಗಿದೆ ಮತ್ತು ಅದನ್ನು ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಲಾಗಿದೆ. ಅವನ ಬ್ಯಾಂಕ್ ವಹಿವಾಟುಗಳನ್ನು ಸಹ ಪರಿಶೀಲನೆಗೆ ಒಳಪಡಿಸಲಾಗಿದೆ. ಒಂದು ವಾರದೊಳಗೆ ಹರಿಯಾಣ ರಾಜ್ಯದಲ್ಲಿ ಇದು ಎರಡನೇ ಬಂಧನವಾಗಿದೆ. ಮೇ 10ರಂದು ಕದನ ವಿರಾಮದೊಂದಿಗೆ ಕೊನೆಗೊಂಡ ಭಾರತ-ಪಾಕಿಸ್ತಾನ ಸಂಘರ್ಷದ ನಂತರ ಈ ಬಂಧನಗಳು ನಡೆದಿವೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ