ಚಂಡೀಗಢ ಮಾರ್ಚ್ 13: ಹರ್ಯಾಣದ (Haryana) ನೂತನ ಸಿಎಂ ನಯಾಬ್ ಸಿಂಗ್ ಸೈನಿ (Nayab Singh Saini) ನೇತೃತ್ವದ ಬಿಜೆಪಿ ಸರ್ಕಾರ ರಾಜ್ಯ ವಿಧಾನಸಭೆಯಲ್ಲಿ ಬಹುಮತ ಸಾಬೀತು (floor test) ಪಡಿಸಿದೆ. ಶಾಸಕರು ಧ್ವನಿ ಮತ ಚಲಾಯಿಸುವ ಮೂಲಕ ಮತದಾನದಲ್ಲಿ ಪಾಲ್ಗೊಂಡರು. ಸೈನಿ ಅವರಿಗೆ 48 ಶಾಸಕರ ಬೆಂಬಲ ಸಿಕ್ಕಿದೆ. ವಿಶ್ವಾಸಮತದ ಮತದಾನದ ಸಮಯದಲ್ಲಿ ಹರ್ಯಾಣ ವಿಧಾನಸಭಾ ಅಧಿವೇಶನಕ್ಕೆ “ಗೈರಾಗಲು” ಜನನಾಯಕ್ ಜನತಾ ಪಾರ್ಟಿ (JJP) ತನ್ನ ಶಾಸಕರಿಗೆ ವಿಪ್ ಜಾರಿಗೊಳಿಸಿದೆ.
ವಿಧಾನಸಭೆ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ ಸಿಎಂ ನಯಾಬ್ ಸಿಂಗ್ ಸೈನಿ, ನಾನು ವಿನಮ್ರ ಕುಟುಂಬದ ಹಿನ್ನೆಲೆಯಿಂದ ಬಂದಿದ್ದೇನೆ, ನನ್ನ ಕುಟುಂಬದಲ್ಲಿ ಯಾರೂ ರಾಜಕೀಯದಲ್ಲಿಲ್ಲ. ನಾನು ಕೇವಲ ಬಿಜೆಪಿಯ ಪಕ್ಷದ ಕಾರ್ಯಕರ್ತ. ಇಂದು ನನಗೆ ಅಂತಹ ದೊಡ್ಡ ಅವಕಾಶವನ್ನು ನೀಡಲಾಗಿದೆ. ಇದು ಬಿಜೆಪಿಯಂತಹ ಪಕ್ಷದಲ್ಲಿ ಮಾತ್ರ ಸಾಧ್ಯ ಎಂದು ನಾನು ಹೇಳಲೇಬೇಕು ಎಂದಿದ್ದಾರೆ.
#WATCH | CM Nayab Singh Saini-led Haryana Government wins the Floor Test in the State Assembly. pic.twitter.com/0D78XmtbqQ
— ANI (@ANI) March 13, 2024
ಪ್ರಮಾಣ ವಚನ ಸ್ವೀಕರಿಸಿದ ಒಂದು ದಿನದ ನಂತರ, ಹರ್ಯಾಣ ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ ಇಂದು ವಿಧಾನಸಭೆಯಲ್ಲಿ ಬಹುಮತ ಯಾಚಿಸುವ ಪ್ರಸ್ತಾಪವನ್ನು ಮಂಡಿಸಿದರು. ಸಭಾಧ್ಯಕ್ಷರು ಮಂಡನೆಗೆ ಎರಡು ಗಂಟೆ ಕಾಲಾವಕಾಶ ನೀಡಿದರು.
ಮುಖ್ಯಮಂತ್ರಿಯವರು ಪ್ರಸ್ತಾವನೆಯನ್ನು ಮಂಡಿಸುವ ಮೊದಲು, ಕಾಂಗ್ರೆಸ್ ಶಾಸಕರು ವಿಧಾನಸಭಾ ಅಧಿವೇಶನವನ್ನು ಕರೆಯುವ ತುರ್ತು ಕುರಿತು ಸ್ಪೀಕರ್ ಜಿಯಾನ್ ಚಂದ್ ಗುಪ್ತಾ ಅವರನ್ನು ಕೇಳಿದರು. “ಯಾವುದೇ ತುರ್ತು ಪರಿಸ್ಥಿತಿ ಇರಲಿಲ್ಲ” ಎಂದು ಹಿರಿಯ ಕಾಂಗ್ರೆಸ್ ನಾಯಕ ಭೂಪಿಂದರ್ ಸಿಂಗ್ ಹೂಡಾ ಹೇಳಿದ್ದು ಶಾಸಕರಿಗೆ ಸರಿಯಾದ ಸಮಯವನ್ನು ನೀಡಲಾಗಿಲ್ಲ ಎಂದಿದ್ದಾರೆ. ಪಕ್ಷದ ಶಾಸಕ ಬಿ ಬಿ ಬಾತ್ರಾ ಕೂಡ ಅಧಿವೇಶನ ಕರೆಯುವ ತುರ್ತು ಏನಿತ್ತು? ಎಂದು ಪ್ರಶ್ನಿಸಿದ್ದಾರೆ.
ಬಹುಮತ ಸಾಬೀತು ಮಾಡುವ ಮುನ್ನ ರಾಜ್ಯ ಸಚಿವ ಜೆಪಿ ದಲಾಲ್ ಅವರು, ತಮ್ಮ ಪಕ್ಷ ತಳಮಟ್ಟದಿಂದ ಕೆಲಸ ಮಾಡುತ್ತಿರುವುದರಿಂದ ವಿಶ್ವಾಸ ಮತ ಗೆಲ್ಲುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು. “ಲೋಕಸಭಾ ಚುನಾವಣೆಯಲ್ಲಿ ಜೆಜೆಪಿ ಏಕಾಂಗಿಯಾಗಿ ಹೋರಾಡಲು ಬಯಸುತ್ತದೆ. ಜೆಜೆಪಿ ಬೆಂಬಲವಿಲ್ಲದಿದ್ದರೂ ನಮ್ಮದು ಬಹುಮತದ ಸರ್ಕಾರ” ಎಂದು ಅವರು ಹೇಳಿರುವುದಾಗಿ ಎಎನ್‌ಐ ವರದಿ ಮಾಡಿದೆ.
ಇದನ್ನೂ ಓದಿ: ಬಾಂಗ್ಲಾದಿಂದ ವಲಸೆ ಬಂದ 1,551 ಹಿಂದೂಗಳಿಗೆ ಭರವಸೆ ಮೂಡಿಸಿದ ಸಿಎಎ, ನಿಟ್ಟುಸಿರು ಬಿಟ್ಟ ಮಹಿಳೆ
90 ಸದಸ್ಯರ ರಾಜ್ಯ ವಿಧಾನಸಭೆಯಲ್ಲಿ, ಬಿಜೆಪಿ 41 ಸದಸ್ಯರನ್ನು ಹೊಂದಿದೆ. ಇದು ಏಳರಲ್ಲಿ ಆರು ಪಕ್ಷೇತರರು, ಹರ್ಯಾಣದ ಲೋಖಿತ್ ಪಕ್ಷದ ಏಕೈಕ ಶಾಸಕ ಗೋಪಾಲ್ ಕಾಂಡ ಅವರ ಬೆಂಬಲವನ್ನು ಸಹ ಹೊಂದಿದೆ. ಸದನದಲ್ಲಿ ಜೆಜೆಪಿ 10 ಶಾಸಕರನ್ನು ಹೊಂದಿದೆ. ಪ್ರಮುಖ ಪ್ರತಿಪಕ್ಷ ಕಾಂಗ್ರೆಸ್ 30 ಶಾಸಕರನ್ನು ಹೊಂದಿದ್ದರೆ ಭಾರತೀಯ ರಾಷ್ಟ್ರೀಯ ಲೋಕದಳ ಒಬ್ಬರನ್ನು ಹೊಂದಿದೆ. ಹರ್ಯಾಣದಲ್ಲಿ ಜೆಜೆಪಿ ಬೆಂಬಲ ಇಲ್ಲದಿದ್ದರೂ ಬಿಜೆಪಿ ಬಹುಮತ ಸಾಬೀತುಪಡಿಸಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:33 pm, Wed, 13 March 24