ಲಕ್ನೋ: ಪ್ರಧಾನಿ ಮೋದಿ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ದ್ವೇಷ ಭಾಷಣ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮಾಜವಾದಿ ಪಕ್ಷದ ನಾಯಕ ಅಜಂ ಖಾನ್ ಅವರ ಶಾಸಕ ಸ್ಥಾನದಿಂದ ಅನರ್ಹಗೊಳಿಸಲಾಗಿತ್ತು ಮತ್ತು ಶಿಕ್ಷೆಯನ್ನು ವಿಧಿಸಿತ್ತು, ಈ ಹಿನ್ನಲೆಯ ಅವರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೇಲ್ಮನವಿಯನ್ನು ಸಲ್ಲಿಸಿದ್ದರು, ಆದರೆ ಇದೀಗ ಈ ಮನವಿಯನ್ನು ಉತ್ತರ ಪ್ರದೇಶದ ಸ್ಥಳೀಯ ನ್ಯಾಯಾಲಯವು ತಿರಸ್ಕರಿಸಿದೆ.
ಮೇಲ್ಮನವಿಯನ್ನು ಗುರುವಾರದೊಳಗೆ ಆಲಿಸಿ ತೀರ್ಮಾನಿಸುವಂತೆ ಸುಪ್ರೀಂ ಕೋರ್ಟ್ ಸ್ಥಳೀಯ ನ್ಯಾಯಾಲಯಕ್ಕೆ ಸೂಚಿಸಿತ್ತು, ಖಾನ್ ಒಂದು ದಿನದ ಹಿಂದೆ ರಾಮ್‌ಪುರ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದ್ದರು, ಅವರು ಶಾಸಕ ಸ್ಥಾನದಿಂದ ಅನರ್ಹಗೊಳಿಸುವುದನ್ನು ಮತ್ತು ಶಿಕ್ಷೆಯನ್ನು ತಡೆಹಿಡಿಯಲು ಮನವಿ ಮಾಡಲಾಗಿತ್ತು.
2019 ರ ದ್ವೇಷ ಭಾಷಣ ಪ್ರಕರಣದಲ್ಲಿ ರಾಂಪುರ ನ್ಯಾಯಾಲಯವು ಅಕ್ಟೋಬರ್ 27ರಂದು ಖಾನ್‌ಗೆ ಮೂರು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿತ್ತು. ನಂತರ, ಪ್ರಜಾಪ್ರತಿನಿಧಿ ಕಾಯಿದೆಯ ನಿಬಂಧನೆಗಳ ಅಡಿಯಲ್ಲಿ ಅವರನ್ನು ಉತ್ತರ ಪ್ರದೇಶ ವಿಧಾನಸಭೆಯ ಸದಸ್ಯತ್ವದಿಂದ ಅನರ್ಹಗೊಳಿಸಲಾಯಿತು.
ಇದನ್ನು ಓದಿ: ಸಮಾಜವಾದಿ ಪಕ್ಷದ ನಾಯಕ ಅಜಂ ಖಾನ್‌ಗೆ ಮಧ್ಯಂತರ ಜಾಮೀನು ನೀಡಿದ ಸುಪ್ರೀಂಕೋರ್ಟ್
ಈ ಪ್ರಕರಣದ ನಂತರ ರಾಮ್‌ಪುರ ಸದರ್ನಿಂದ ಅವರ ಸ್ಥಾನ ತೆರವುಗೊಂಡಿದೆ ಎಂದು ಅಸೆಂಬ್ಲಿ ಸೆಕ್ರೆಟರಿಯೇಟ್ ಘೋಷಿಸಿತ್ತು. ಚುನಾವಣಾ ಆಯೋಗವು ಈಗಾಗಲೇ ಡಿಸೆಂಬರ್ 5 ರಂದು ರಾಮ್‌ಪುರ ಸದರ್ ಕ್ಷೇತ್ರದೊಂದಿಗೆ ಕೆಲವು ಇತರ ವಿಧಾನಸಭಾ ಸ್ಥಾನಗಳು ಮತ್ತು ಮೈನ್‌ಪುರಿ ಲೋಕಸಭಾ ಕ್ಷೇತ್ರಕ್ಕೆ ಉಪಚುನಾವಣೆ ಘೋಷಿಸಿದೆ.
ರಾಮ್‌ಪುರ ಸದರ್ ಸ್ಥಾನಕ್ಕೆ ಚುನಾವಣೆಗೆ ನವೆಂಬರ್ 10 ರವರೆಗೆ ಅಧಿಸೂಚನೆಯನ್ನು ಹೊರಡಿಸದಂತೆ ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ಸೂಚಿಸಿದೆ. ಖಾನ್ ಅವರ ಮನವಿಯ ಮೇಲೆ ಸೆಷನ್ಸ್ ಕೋರ್ಟ್ ತೀರ್ಪು ನೀಡಿದ ನಂತರ ಚುನಾವಣಾ ಆಯೋಗವು ನವೆಂಬರ್ 11 ಅಥವಾ ನಂತರ ಚುನಾವಣೆಗೆ ಅಧಿಸೂಚನೆಯನ್ನು ಹೊರಡಿಸಬಹುದು ಎಂದು ಸುಪ್ರೀಂ ಕೋರ್ಟ್ ಹೇಳಿದೆ.ರಾಮ್‌ಪುರ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಖಾನ್ ಅವರ ಮೇಲ್ಮನವಿಯನ್ನು ಸ್ವೀಕರಿಸಿ, ಪ್ರಕರಣದಲ್ಲಿ ನವೆಂಬರ್ 16 ರವರೆಗೆ ಅವರಿಗೆ ಮಧ್ಯಂತರ ಜಾಮೀನು ನೀಡಿದೆ ಎಂದು ಸಮಾಜವಾದಿ ಪಕ್ಷದ ನಾಯಕನ ವಕೀಲ ವಿನೋದ್ ಶರ್ಮಾ ಹೇಳಿದ್ದಾರೆ.
Published On - 5:29 pm, Thu, 10 November 22