NIF-ಇಂಡಿಯಾ ಅಭಿವೃದ್ಧಿಪಡಿಸಿರುವ ನಾವಿನ್ಯತೆಯ ಪೋರ್ಟಲ್ ಲೋಕಾರ್ಪಣೆ
ಸಾಂಪ್ರದಾಯಿಕ ಜ್ಞಾನದ ಮಹತ್ವ ಹೆಚ್ಚಾಗುತ್ತಿದ್ದು, ಅದರಲ್ಲೂ ನಿರ್ದಿಷ್ಟವಾಗಿ ಬುಡಕಟ್ಟು ಪ್ರದೇಶದಲ್ಲಿ ಗಿಡಮೂಲಿಕೆಗಳ ಕುರಿತಾದ ಮಾಹಿತಿ ಪೋರ್ಟಲ್ ನಲ್ಲಿನ ಪ್ರಮುಖ ಅಂಶವಾಗಿದೆ. ಸಾಮಾನ್ಯ ಜನರ ಸ್ಥಳೀಯ ಸಮಸ್ಯೆಗಳಿಗೆ ಸಾಂಸ್ಥಿಕ ಪರಿಹಾರ ದೊರಕಿಸಿಕೊಡಲು ಈ ನಾವಿನ್ಯತೆಯ ಪೋರ್ಟಲ್ ಸಹಕಾರಿಯಾಗಲಿದೆ ಎಂದು ಡಾ. ಹರ್ಷ ವರ್ಧನ್ ಹೇಳಿದರು
ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ [ಡಿ.ಎಸ್.ಟಿ] ಇಲಾಖೆಯ ಸ್ವಾಯತ್ತ ಸಂಸ್ಥೆಯಾದ ನ್ಯಾಷನಲ್ ಇನೋವೇಷನ್ ಫೌಂಡೇಷನ್ ಆಫ್ [ಎನ್.ಐ.ಎಫ್] ಇಂಡಿಯಾ ನಾವಿನ್ಯತೆಯ ಪೋರ್ಟಲ್ ಅನ್ನು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ, ಭೂ ವಿಜ್ಞಾನ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಹರ್ಷವರ್ಧನ್ ಇಂದು ದೇಶಕ್ಕೆ ಸಮರ್ಪಿಸಿದರು.
ನ್ಯಾಷನಲ್ ಇನೋವೇಷನ್ ಪೋರ್ಟಲ್[ಎನ್.ಐ.ಪಿ] ಪ್ರಸ್ತುತ ದೇಶದ ಸಾಮಾನ್ಯ ವಲಯಗಳಾದ ತಾಂತ್ರಿಕ, ಕೃಷಿ, ಪಶು ಸಂಗೋಪನೆ ಮತ್ತು ಮಾನವ ಆರೋಗ್ಯ ಸೇರಿ ವಿವಿಧ ವಲಯಗಳ 1.15 ಲಕ್ಷ ನಾವೀನ್ಯತೆಯ ಜನರನ್ನು ಒಳಗೊಂಡಿದೆ. ಇಂಧನ, ಮೆಕಾನಿಕಲ್, ಆಟೋಮೊಬೈಲ್, ಎಲೆಕ್ಟ್ರಿಕಲ್, ವಿದ್ಯುನ್ಮಾನ, ಗೃಹ, ರಾಸಾಯನಿಕ, ನಾಗರಿಕ, ಜವಳಿ, ಕೃಷಿ, ಕಟಾವು ಚಟುವಟಿಕೆ, ಸಂಗ್ರಹ ವಿಧಾನ, ಗಿಡಗಳ ಪ್ರಬೇಧಗಳು, ಗಿಡಗಳ ರಕ್ಷಣೆ, ಕುಕ್ಕುಟೋದ್ಯಮ, ಜಾನುವಾರು ನಿರ್ವಹಣೆ ಮತ್ತಿತರ ವಲಯಗಳನ್ನು ಈ ಪೋರ್ಟಲ್ ಹೊಂದಿದೆ.
ಕಾರ್ಯಕ್ರಮದಲ್ಲಿ ಮಾತನಾಡಿದ ಡಾ. ಹರ್ಷ ವರ್ಧನ್, ಕಳೆದ ಆರು ವರ್ಷಗಳಲ್ಲಿ ನಾವೀನ್ಯತೆ ಚಳವಳಿಗೆ ಆದ್ಯತೆ ನೀಡಲಾಗಿದೆ ಮತ್ತು ಪರಿಸರ ನಾವೀನ್ಯತೆಯನ್ನು ಸೃಷ್ಟಿಸಲಾಗಿದೆ. ತಮ್ಮ ಸೃಜನಶೀಲ ಸಾಮರ್ಥ್ಯ ಮತ್ತು ವಿಜ್ಞಾನ, ತಂತ್ರಜ್ಞಾನ ಆಧರಿತ ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಕೊಳ್ಳಲು, ಸಮಸ್ಯೆಗಳನ್ನು ಹಿಂದಿಕ್ಕಿ ಆತ್ಮ ನಿರ್ಭರ್ ಭಾರತ್ ನಡೆಗೆ ಸಾಗುತ್ತಿರುವ ಜನತೆಯನ್ನು ಸಚಿವರು ಅಭಿನಂದಿಸಿದರು.
ಸಾಂಪ್ರದಾಯಿಕ ಜ್ಞಾನದ ಮಹತ್ವ ಹೆಚ್ಚಾಗುತ್ತಿದ್ದು, ಅದರಲ್ಲೂ ನಿರ್ದಿಷ್ಟವಾಗಿ ಬುಡಕಟ್ಟು ಪ್ರದೇಶದಲ್ಲಿ ಗಿಡಮೂಲಿಕೆಗಳ ಕುರಿತಾದ ಮಾಹಿತಿ ಪೋರ್ಟಲ್ ನಲ್ಲಿನ ಪ್ರಮುಖ ಅಂಶವಾಗಿದೆ. ಸಾಮಾನ್ಯ ಜನರ ಸ್ಥಳೀಯ ಸಮಸ್ಯೆಗಳಿಗೆ ಸಾಂಸ್ಥಿಕ ಪರಿಹಾರ ದೊರಕಿಸಿಕೊಡಲು ಈ ನಾವಿನ್ಯತೆಯ ಪೋರ್ಟಲ್ ಸಹಕಾರಿಯಾಗಲಿದೆ ಎಂದ ಸಚಿವರು ‘ಅತ್ಯುತ್ತಮ ಆರ್ಥಿಕತೆ ಒಳ್ಳೆಯ ಆರ್ಥವ್ಯವಸ್ಥೆಯ ಕಲ್ಪನೆಯಾಗಿದೆ ಮತ್ತು ದೇಶವೊಂದರ ಪ್ರಗತಿಗೆ ನಾವಿನ್ಯತೆ ಅತ್ಯಂತ ಪ್ರಮುಖ ಅಂಶ’, ಎಂದರು.
‘ಈ ನಾವಿನ್ಯತೆಯ ಪೋರ್ಟಲ್ ಸೂಕ್ತ ಪರಿಸರ ವ್ಯವಸ್ಥೆಯನ್ನು ಸೃಷ್ಟಿಸಲಿದ್ದು, ತಮ್ಮ ಆಲೋಚನೆಗಳು ಮತ್ತು ಆವಿಷ್ಕಾರಗಳನ್ನು ಉದ್ಯಮಶೀಲತೆಗೆ ಪರಿವರ್ತಿಸಬಲ್ಲವರ ಹಿಂದೆ ನಿಲ್ಲುತ್ತದೆ. ದೇಶದಲ್ಲಿ ನಾವಿನ್ಯತೆ ಹೊಂದಿರುವ ಯಾರೊಬ್ಬರು, ಅಂದರೆ ಅದು ಗ್ರಾಮೀಣ, ಬುಡಕಟ್ಟು ಅಥವಾ ಔಪಚಾರಿಕ ವಿಜ್ಞಾನ ಹಿನ್ನೆಲೆ ಹೊಂದಿರುವವರೇ ಆಗಿರಲಿ ಇವರ ನಾವಿನ್ಯತೆಗೆ ದೇಶದ ಸ್ಟ್ಯಾಂಡ್ ಅಪ್ ಮತ್ತು ಸ್ಟಾರ್ಟ್ ಅಪ್ ವ್ಯವಸ್ಥೆ ಸೂಕ್ತ ರೀತಿಯಲ್ಲಿ ಪ್ರೋತ್ಸಾಹಿಸಬೇಕು ಎಂದು ಸಚಿವರು ಆಗ್ರಹಿಸಿದರು.
2020 ಹಿಂದೆಂದೂ ಕಂಡರಿಯದ ಪ್ರಕ್ಷುಬ್ದತೆಯಿಂದ ವರ್ಷವಾಗಿತ್ತು. ಇದೇ ಸಮಯದಲ್ಲಿ ಡಿಜಿಟಲ್ ಮೂಲ ಸೌಕರ್ಯ ಅಪಾರವಾಗಿ ಬೆಳೆದಿದೆ. ಇದರಿಂದ ನಮಗೆಲ್ಲರಿಗೂ ಅನುಕೂಲವಾಗಿದೆ ಎಂಬ ಸಂಗತಿ ಬಗ್ಗೆ ಸಚಿವರು ಬೆಳಕು ಚೆಲ್ಲಿದರು.
‘ಈ ನಾವಿನ್ಯತೆಯ ಪೋರ್ಟಲ್ ಮುಂಬರುವ ದಿನಗಳಲ್ಲಿ ನಮ್ಮೆಲ್ಲರ ಡಿಜಿಟಲ್ ಪ್ರಗತಿಗೆ ನಿರ್ಣಾಯಕ ಕೊಡುಗೆ ನೀಡಲಿದೆ. ನಾವೀನ್ಯತೆಯ ಪರಿಹಾರಗಳನ್ನು ಎದುರುನೋಡುತ್ತಿರುವ ಜನತೆ ಮತ್ತು ಇವರ ವಿಕಾಸಕ್ಕಾಗಿ ಆಡಳಿತ ಚುಕ್ಕಾಣಿ ಹಿಡಿದಿರುವವರ ನಡುವೆ ಸೇತುವೆಯಾಗಿ ಕೆಲಸ ಮಾಡಲಿದೆ,’ ಎಂದು ಡಾ. ಹರ್ಷವರ್ಧನ್ ಹೇಳಿದರು.
ವಿದ್ಯಾರ್ಥಿಗಳು, ಉದ್ಯಮಿಗಳು, ಎಂ.ಎಸ್.ಎಂ.ಇಗಳು, ಇನ್ ಕ್ಯೂಬೇಟರ್ ನ ತಾಂತ್ರಿಕ ಉದ್ದಿಮೆದಾರರು [ಟಿಬಿಐ], ವಿವಿಧ ಉದ್ಯೋಗದಲ್ಲಿ ತೊಡಗಿರುವ ಸಾಮಾನ್ಯ ಜನರಿಗೆ ಈ ನಾವಿನ್ಯತೆ ಪೋರ್ಟಲ್ ಅತ್ಯುತ್ತಮ ಅವಕಾಶವಾಗಿದ್ದು, ನಾವೀನ್ಯತೆಯ ಆಸಕ್ತಿಯನ್ನು ಪರಿಶೋಧಿಸುವಂತೆ ಸಚಿವರು ಸಂಬಂಧಪಟ್ಟವರನ್ನು ಒತ್ತಾಯಿಸಿದರು.
ಸಾಮಾನ್ಯ ಜನರಲ್ಲಿರುವ ನಾವೀನ್ಯತೆಯ ಆಸಕ್ತಿ, ಅಸಾಧಾರಣ ಬದ್ಧತೆಯಿಂದಾಗಿ ದೇಶ ತಂತ್ರಜ್ಞಾನದ ನಾಯಕತ್ವದಲ್ಲಿ ಮುಂಚೂಣಿಗೆ ಕೊಂಡೊಯ್ಯುತ್ತದೆ ಮತ್ತು ಬರುವ ವರ್ಷಗಳಲ್ಲಿ ಉನ್ನತ ಎತ್ತರಕ್ಕೆ ಮುಟ್ಟುತ್ತದೆ ಎಂದು ಮಂತ್ರಿಗಳು ಹೇಳಿದರು.
ಡಿ.ಎಸ್.ಟಿ. ಕಾರ್ಯದರ್ಶಿ ಪ್ರೊಫೆಸರ್ ಅಶುತೋಷ್ ಶರ್ಮಾ ಮಾತನಾಡಿ, ನಾವಿನ್ಯತೆ ಪೋರ್ಟಲ್ ಸೂಕ್ತ ಸಮಯದಲ್ಲಿ ಚಾಲನೆಗೊಂಡಿದ್ದು, ನಾವೀನ್ಯತೆಯ ಪರಿಸರ ವ್ಯವಸ್ಥೆ ರೂಪಿಸಲು ಇದು ಸಹಕಾರಿಯಾಗಲಿದೆ. ದೇಶದ 5 ನೇ ರಾಷ್ಟ್ರೀಯ ಎಸ್.ಐ.ಟಿ ನೀತಿಯ ವಿಕಾಸಕ್ಕೆ ಹೊಂದಿಕೆಯಾಗಲಿದೆ. ನಾವೀನ್ಯತೆಯ ಪೋರ್ಟಲ್ ಗೆ ಭವಿಷ್ಯದ ಕೊಡುಗೆದಾರರು, ನೀತಿಯನ್ನು ಕೇಂದ್ರೀಕರಿಸಿರುವ ಜನಸಮೂಹ ಹುಟ್ಟಿಕೊಳ್ಳುತ್ತದೆ. ವಿಶೇಷವಾಗಿ ಗ್ರಾಮೀಣ ಮತ್ತು ದೂರದ ಪ್ರದೇಶಗಳು, ಈಶಾನ್ಯ ಭಾಗ. ದ್ವೀಪ ಪ್ರದೇಶಗಳು ಮತ್ತು ಬುಡಕಟ್ಟು ಭಾಗಗಳಲ್ಲಿ ಪರಿಸರ ವ್ಯವಸ್ಥೆಯ ಸಂಶೋಧನೆ ಮತ್ತು ಅಭಿವೃದ್ದಿಗೆ ಒತ್ತುನೀಡಬೇಕು ಎಂದು ಹೇಳಿದರು.
‘ಎನ್.ಐ.ಎಫ‍್ ಕೇವಲ ಆಲೋಚನೆಗಳಲ್ಲಷ್ಟೇ ತೊಡಗಿಕೊಳ‍್ಳುವುದಿಲ್ಲ ಬದಲಿಗೆ ಇದನ್ನು ಅನುಷ್ಠಾನಗೊಳಿಸಲು ಮುಂದಕ್ಕೆ ಕೊಂಡೊಯ್ಯಲಿದೆ. ತಳಮಟ್ಟದ ಆಲೋಚನೆಗಳ ಮೂಲಕ ಸ್ಥಳೀಯ ಉದ್ಯಮಿಗಳನ್ನು ಸೃಷ್ಟಿಸಲು ಈ ನಾವಿನ್ಯತೆಯ ಪೋರ್ಟಲ್ ಸಹಾಯ ಮಾಡಲಿದ್ದು, ಆಲೋಚನೆಗಳನ್ನು ಮಾರುಕಟ್ಟೆಗೆ ತರಲು ಸಹಕಾರಿಯಾಗಲಿದೆ,’ ಎಂದು ಪ್ರೊಫೆಸರ್ ಶರ್ಮಾ ಹೇಳಿದರು
ಎನ್.ಐ.ಎಫ‍್ ಅಧ್ಯಕ್ಷ ಡಾ. ಪಿ.ಎಸ್. ಗೋಯಲ್ ಮಾತನಾಡಿ, ನಾವಿನ್ಯತೆಯ ಪೋರ್ಟಲ್ ಅಗತ್ಯತೆಗಳಿಗೆ ಸರಿಹೊಂದುವಂತೆ ದೃಢ ನಿಶ‍್ಚಯದಿಂದ ತನ್ನದೇ ಆದ ಪರಿಹಾರಗಳನ್ನು ವಿಕಾಸಗೊಳಿಸುವ ಬಗ್ಗೆ ನಂಬಿಕೆ ಇಟ್ಟಿರುವವರಿಗೆ ಸೂಕ್ತ ರೀತಿಯಲ್ಲಿ ಹೊಂದಕೆಯಾಗಲಿದೆ. ಕೈಗಾರಿಕಾ ವಲಯ ಕೂಡ ಈ ಪೋರ್ಟಲ್ ಗೆ ಭೇಟಿ ನೀಡಬೇಕು. ತನ್ನ ಉತ್ಪನ್ನಗಳನ್ನು ವಾಣಿಜ್ಯೀಕರಣಗೊಳಿಸುವ ದಿಸೆಯಲ್ಲಿ ತನ್ನ ದೃಷ್ಟಿ ಹರಿಸಬೇಕು ಎಂದು ಹೇಳಿದರು.
ಎನ್.ಐ.ಎಫ್ನ ನಿರ್ದೇಶಕ ಡಾ. ವಿಪಿನ್ ಕುಮಾರ್ ಅವರು ನಾವಿನ್ಯತೆಯ ಪೋರ್ಟಲ್ ಲೋಕಾರ್ಪಣೆ ಸಮಾರಂಭದಲ್ಲಿ ವಂದನಾರ್ಪಣೆ ಮಾಡಿದರು.
Published On - 10:33 pm, Thu, 14 January 21